ಎರಡು ಮಕ್ಕಳ ತಂದೆಯನ್ನು ಶ್ರೇಷ್ಠಾ ಇಷ್ಟಪಡ್ತಿರೋದ್ಯಾಕೆ? ಈ ಪ್ರಶ್ನೆಗೆ ಶ್ರೇಷ್ಠಾ ಮತ್ತು ತಾಂಡವ್ ಏನು ಹೇಳಿದ್ರು ನೋಡಿ...
ಶ್ರೇಷ್ಠಾ ಇನ್ನೂ ಮದುವೆಯಾಗದ ಯುವತಿ. ಯಂಗ್ ಆಂಡ್ ಎನರ್ಜೆಟಿಕ್ ಆಗಿದ್ದಾಳೆ. ತಾಂಡವ್‌ನೋ ಇಬ್ಬರು ಬೆಳೆದು ನಿಂತ ಮಕ್ಕಳ ಅಪ್ಪ. ಮದುವೆಯಾಗಿ ಹದಿನಾರು ವರ್ಷವಾಗಿದೆ. ಈಗ ಪತ್ನಿ ಬಿಟ್ಟು ಬೇರೆ ಹೆಣ್ಣಿನ ಮೋಹಕ್ಕೆ ಒಳಗಾಗಿದ್ದಾನೆ. ಆತನೋ ಗಂಡಸು, ಪತ್ನಿಗೆ ವಯಸ್ಸಾಗುತ್ತಿದ್ದಂತೆಯೇ ಬೇರೆ ಹೆಣ್ಣಿನ ಕಡೆ ಕೆಲವು ಗಂಡಸರು ಆಕರ್ಷಿತರಾಗೋದು ಪ್ರಕೃತಿ ಸಹಜ ನಿಯಮ ಎನ್ನುವವರೇ ಹೆಚ್ಚು ಮಂದಿ. ಆದರೆ, ಶ್ರೇಷ್ಠಾಳಂಥ ಹೆಣ್ಣು ಎರಡು ಮಕ್ಕಳ ತಂದೆ ಅಂದ್ರೆ ಆಕೆಗೆ ಅಂಕಲ್ ರೀತಿ. ಹಾಗಿದ್ದ ಮೇಲೆ ಇಂಥವರನ್ನು ಯಾಕೆ ಪ್ರೀತಿ ಮಾಡ್ತಿಯಾ ಎಂದು ಶ್ರೇಷ್ಠಾಳಿಗೆ ಭಾಗ್ಯಲಕ್ಷ್ಮಿ ಸೀರಿಯಲ್ ಪ್ರೇಮಿಗಳು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಅವನಿಗೆ ಬುದ್ಧಿ ಇಲ್ಲ, ನಿನಗೂ ಇದೆಲ್ಲಾ ಬೇಕಿತ್ತಾ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಇದೇ ಪ್ರಶ್ನೆಯನ್ನು ಈಗ ಶ್ರೇಷ್ಠಾಳಿಗೂ ಕೇಳಲಾಗಿದೆ.
ಕಲರ್ಸ್ ಕನ್ನಡದ ವತಿಯಿಂದಲೇ ಶ್ರೇಷ್ಠಾ ಮತ್ತು ತಾಂಡವ್‌ನ ಸಂದರ್ಶನ ಮಾಡಲಾಗಿದೆ. ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ ಮತ್ತು ತಾಂಡವ್ ಪಾತ್ರಧಾರಿ ಸುದರ್ಶನ್ ರಂಗನಾಥ್ ಅವರು ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇಲ್ಲಿ ಈ ಜೋಡಿ ಭಾಗ್ಯಲಕ್ಷ್ಮಿ ಸೀರಿಯಲ್ ಪಾತ್ರಧಾರಿಯಾಗಿ ಉತ್ತರ ಕೊಟ್ಟಿದ್ದಾರೆ. ಅಂಕಲ್ ಮೇಲೆ ಯಂಗ್ ಶ್ರೇಷ್ಠಾಳಿಗೆ ಯಾಕೆ ಅಷ್ಟು ಲವ್ ಎಂದು ಕೇಳಿದಾಗ, ಶ್ರೇಷ್ಠಾ ಏನೋ ಹೇಳುವ ಮುನ್ನವೇ ಬಾಯಿ ಹಾಕಿದ ತಾಂಡವ್, ಅಂಕಲ್‌ಗಳಿಗೆ ಎಕ್ಸ್‌ಪೀರಿಯೆನ್ಸ್ ಜಾಸ್ತಿ ಇರತ್ತಲ್ಲ ಅದಕ್ಕೇ ಎಂದು ತಮಾಷೆ ಮಾಡಿದ್ದಾರೆ. ಈಗ ಎಲ್ಲಿಯೇ ಸಂದರ್ಶನಕ್ಕೆ ಹೋದರೂ ಅನುಭವ ಕೇಳ್ತಾರೆ. ಹಾಗೆನೇ ಅಂಕಲ್‌ಗಳಿಗೆ ಅನುಭವ ಜಾಸ್ತಿ, ಅದಕ್ಕೇ ಶ್ರೇಷ್ಠಾಳಿಗೆ ಅಂಕಲ್ ಮೇಲೆ ಪ್ರೀತಿ ಹುಟ್ಟಿದೆ ಎಂದು ತಮಾಷೆ ಉತ್ತರ ಕೊಟ್ಟಿದ್ದಾರೆ.
ಎರಡು ಮಕ್ಕಳಾಗೋ ತನಕ ಸುಮ್ಮನಿದ್ದಿ ಯಾಕೆ? ಲೈವ್‌ನಲ್ಲಿ ಬೆವರಿಳಿಸಿದ ವೀಕ್ಷಕರಿಗೆ ತಾಂಡವ್ ಉತ್ತರ ಕೇಳಿ...
ಭಾಗ್ಯ ಅಷ್ಟೊಂದು ಚೆನ್ನಾಗಿ ನೋಡಿಕೊಳ್ಳುವಾಗ ಶ್ರೇಷ್ಠಾ ಯಾಕೆ ಬೇಕು ಎನ್ನೋಪ್ರಶ್ನೆಗೆ, ನರ್ಸು ಕೂಡ ಚೆನ್ನಾಗಿ ನೋಡಿಕೊಳ್ತಾರೆ, ಅದಕ್ಕೆ ಅವರೂ ಬೇಕು ಅನ್ನಲು ಆಗತ್ತಾ? ತಾಂಡವ್‌ಗೆ ಚೆನ್ನಾಗಿ ನೋಡಿಕೊಳ್ಳೋರು ಬೇಡ, ನೋಡೋರು ಬೇಕು, ಶ್ರೇಷ್ಠಾ ನನ್ನನ್ನು ತುಂಬಾ ಚೆನ್ನಾಗಿ ನೋಡ್ತಾಳೆ, ನನ್ನ ಆತ್ಮವನ್ನೂ ನೋಡ್ತಾಳೆ ಅದಕ್ಕೇ ನನಗೆ ಇಷ್ಟ ಎಂದಿದ್ದಾರೆ. ಇನ್ನು ಹೋದಲ್ಲಿ, ಬಂದಲ್ಲಿ ನೆಗೆಟಿವ್ ಪಾತ್ರದಿಂದಾಗಿ ಸೀರಿಯಲ್ ಪ್ರೇಮಿಗಳು ಶಾಪ ಹಾಕ್ತಾರಲ್ಲ ಅದಕ್ಕೆ ಏನನ್ನಿಸುತ್ತದೆ ಎನ್ನುವ ಪ್ರಶ್ನೆಗೆ ಇಬ್ಬರೂ, ತುಂಬಾ ಖುಷಿಯಾಗುತ್ತದೆ. ನಾವು ನಮ್ಮ ಪಾತ್ರಗಳಿಗೆನ್ಯಾಯ ಒದಗಿಸ್ತೇವೆ ಎನ್ನುವುದು ಇದರಿಂದ ಗೊತ್ತಾಗತ್ತೆ ಎಂದಿದ್ದಾರೆ. ಜೊತೆಗೆ ಸುದರ್ಶನ್ ಅವರು, ಒಳಗೊಳಗೆ ಬೇರೆನೇ ಆಗ್ತಾ ಇರುತ್ತೆ ಬಿಡಿ ಎಂದು ತಮಾಷೆ ಮಾಡಿದ್ದಾರೆ.
ಅಷ್ಟಕ್ಕೂ, ಬಹುತೇಕ ಮಂದಿ ಸೀರಿಯಲ್‌ಗಳನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗ ಅಂದೇ ಅಂದುಕೊಂಡಿದ್ದಾರೆ. ಅಲ್ಲಿ ಬರುವ ಪಾತ್ರಗಳು ಕೇವಲ ಪಾತ್ರಗಳಾಗಿರದೇ ನಿಜ ಜೀವನ ಅಂದುಕೊಳ್ಳುವವರು ಇದ್ದಾರೆ. ಇದೇ ಕಾರಣಕ್ಕೆ ಎಷ್ಟೋ ಸೀರಿಯಲ್ಗಳು ಇಂದು ಹಲವರಿಗೆ ದಾರಿದೀಪಗಳಾಗಿವೆ. ಅಲ್ಲಿರುವುದನ್ನೇ ಅನುಸರಿಸುತ್ತಾರೆ. ಕೆಲವೊಂದು ನಟ-ನಟಿಯರನ್ನು ತಮ್ಮ ಆದರ್ಶ ಎಂದುಕೊಂಡುಬಿಡುತ್ತಾರೆ. ಸೀರಿಯಲ್ಗಳಲ್ಲಿ ಏನೇ ಎಡವಟ್ಟು ಆದರೂ ಅದು ಕೇವಲ ಧಾರಾವಾಹಿ ಎನ್ನುವುದನ್ನು ಮರೆತು ಬೈಯುವುದು ಉಂಟು. ಅಷ್ಟಕ್ಕೂ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಕುತೂಹಲದ ಘಟ್ಟ ತಲುಪಿದೆ. ಭಾಗ್ಯ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಾಳೆ. ಅತ್ತೆ-ಮಾವ, ತಂಗಿ, ಸುಂದ್ರಿ, ಅಪ್ಪ-ಅಮ್ಮ ಎಲ್ಲರನ್ನೂ ಸಾಕುವ ಜವಾಬ್ದಾರಿ ಹೊತ್ತಿದ್ದಾಳೆ. ಇದೇ ಕಾರಣಕ್ಕೆ ಈಗ ನಾನು ಭಾಗ್ಯಟ್ರೆಂಡ್ ಸೋಷಿಯಲ್ ಮೀಡಿಯಾದಲ್ಲಿಯೂ ಶುರುವಾಗಿದೆ.
undefined
ವಿಷ್ಣು ಸಹಸ್ರನಾಮ ಹೇಳುವ ಗಿಳಿ! ಅಜ್ಜಿಯ ಜೊತೆಗಿನ ಕ್ಯೂಟ್ ವಿಡಿಯೋ ವೈರಲ್