ರಂಗಿತರಂಗ ಬೆಡಗಿ ಜೊತೆ ಸಖತ್ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ಕಿಶನ್ ಬಿಳಗಲಿ… ವಿಡೀಯೋ ವೈರಲ್

By Pavna Das  |  First Published Dec 15, 2024, 3:56 PM IST

ರಂಗಿತರಂಗ ಸಿನಿಮಾ ನಟಿ ರಾಧಿಕಾ ನಾರಾಯಣ್ ಹಾಗೂ ಡ್ಯಾನ್ಸರ್ ಕಿಶನ್ ಬಿಳಗಲಿ ಹಿಂದಿ ಹಾಡೊಂದಕ್ಕೆ ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.


ಕನ್ನಡ ಹಾಗೂ ಹಿಂದಿ ಕಿರುತೆರೆಯಲ್ಲಿ ಡ್ಯಾನ್ಸ್ ಶೋಗಳ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಡ್ಯಾನ್ಸರ್ ಕಿಶನ್ ಬಿಳಗಲಿ (Kishen BIlagali). ಬಿಗ್ ಬಾಸ್ ಸೀಸನ್ 7 ರ ಮೂಲಕ ಕನ್ನಡಿಗರ ಮನ ಗೆದ್ದ ಕಿಶನ್ ತಮ್ಮ ವಿಭಿನ್ನ ಡ್ಯಾನ್ಸ್ ಮೂವ್ಸ್ ಗೆ ಹೆಸರುವಾಸಿಯಾಗಿದ್ದಾರೆ. ಸದ್ಯಕ್ಕಂತೂ ಜನಪ್ರಿಯತೆ ಗಳಿಸುತ್ತಿರೋದು ತಮ್ಮ ಸೋಶಿಯಲ್ ಮೀಡೀಯಾದಿಂದ ಅಂತಾನೆ ಹೇಳಬಹುದು. ಯಾಕಂದ್ರೆ ಸೋಶಿಯಲ್ ಮೀಡೀಯಾದಲ್ಲಿ  (social media)ಆಕ್ಟೀವ್ ಆಗಿರುವ ಕಿಶನ್ ಹೆಚ್ಚಾಗಿ ಡ್ಯಾನ್ಸ್ ವಿಡಿಯೋ, ರೀಲ್ಸ್ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಒಂದೊಂದು ಬಾರಿ ಒಬ್ಬೊಬ್ಬ ನಟಿಯರ ಜೊತೆ ತುಂಬಾನೆ ರೊಮ್ಯಾಂಟಿಕ್ ಹಾಗೂ ಬೋಲ್ಡ್ ಆಗಿರುವ ಹಾಡುಗಳಿಗೆ ಕಿಶನ್ ಹೆಜ್ಜೆ ಹಾಕುತ್ತಿರುತ್ತಾರೆ. 

ಆಡು ಮುಟ್ಟದ ಸೊಪ್ಪಿಲ್ಲ, ಕಿಶನ್ ಜೊತೆ ಡ್ಯಾನ್ಸ್ ಆಡದ ಹುಡುಗಿ ಇಲ್ಲ; ರೊಮ್ಯಾನ್ಸ್‌ ನೋಡಿ ಕಾಲೆಳೆದ ನೆಟ್ಟಿಗರು!

Tap to resize

Latest Videos

ಈ ಹಿಂದೆ ನಮೃತಾ ಗೌಡ ಜೊತೆ ಮಾಡಿರುವ ಹಲವು ವಿಡಿಯೋಗಳು ವೈರಲ್ ಆಗಿದ್ದವು. ಅಷ್ಟೇ ಯಾಕೆ, ಚಂದನವನದ ಭರವಸೆಯ ನಟಿ ಚೈತ್ರಾ ಆಚಾರ್ (Chaithra Achar) ಜೊತೆಗೂ ಕಿಶನ್ ಬೋಲ್ಡ್ ಮೂವ್ಸ್ ಮಾಡಿ, ಜನ ಹುಬ್ಬೇರಿಸುವಂತೆ ಮಾಡಿದ್ದರು. ಇದೀಗ ರಂಗಿತರಂಗ ಬೆಡಗಿ ಜೊತೆ ಹೆಜ್ಜೆ ಹಾಕಿದ್ದಾರೆ. ಹೌದು ಕಿಶನ್ ತಮ್ಮ ಇನ್’ಸ್ಟಾಗ್ರಾಂನಲ್ಲಿ ರಾಧಿಕಾ ನಾರಾಯಣ್ ಜೊತೆಗೆ ಮಾಡಿದಂತಹ ಡ್ಯಾನ್ಸ್ ವಿಡೀಯೋ ಒಂದನ್ನು ಶೇರ್ ಮಾಡಿದ್ದು, ಈ ವೀಡಿಯೋ ಇದೀಗ ಸಖತ್ ಆಗಿ ವೈರಲ್ ಆಗ್ತಿದೆ. ಅಷ್ಟಕ್ಕೂ ಆ ವೀಡಿಯೋದಲ್ಲಿ ಏನಿದೆ? 

'ಸಿದ್ದರಾಮಯ್ಯ ಕೊಟ್ಟಿರೋದು ಭಾಗ್ಯ ಅಲ್ಲ ಕಣಯ್ಯ, ನಿಂದು ನಿಜವಾದ ಭಾಗ್ಯ..' ಕಿಶನ್‌ ಅದೃಷ್ಟಕ್ಕೆ ಬೆರಗಾದ ನೆಟ್ಟಿಗರು!

undefined

ರಾಧಿಕಾ (Radhika Narayan) ಹಾಗೂ ಕಿಶನ್ ಹಿಂದಿಯ ರಫ್ತಾ ಜೋಗಿ ಹಾಡಿಗೆ ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ. ಇಬ್ಬರ ಜೋಡಿ, ಆ ರೊಮ್ಯಾಂಟಿಕ್ ಮೂವ್ಸ್, ಇಬ್ಬರ ಡ್ರೆಸ್ಸಿಂಗ್ ಎಲ್ಲವೂ ಕಣ್ಮನ ಸೆಳೆಯುತ್ತಿದೆ. ರಾಧಿಕಾ ಬಿಳಿ ಬಣ್ಣದ ಲಾಂಗ್ ಸ್ಕರ್ಟ್, ಟ್ಯೂಬ್ ಟಾಪ್ ಹಾಗೂ ಓವರ್ ಕೋಟ್ ಧರಿಸಿದ್ರೆ, ಕಿಶನ್ ಕಪ್ಪು ಬಣ್ಣದ ಕಚ್ಚೆ ಕಟ್ಟಿದ್ದಾರೆ. ಇಬ್ಬರ ಈ ಬೋಲ್ಡ್ ಪರ್ಫಾರ್ಮೆನ್ಸ್ ನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. ವಿಡೀಯೋಗೆ ಕಾಮೆಂಟ್ ಹಾಗೂ ಲೈಕ್ಸ್ ಗಳ ಸುರಿಮಳೆಯೇ ಸುರಿದಿದೆ. ಅಷ್ಟೇ ಅಲ್ಲ ಈ ವಿಡೀಯೋವನ್ನು ಈಗಾಗಲೇ 1.6 ಮಿಲಿಯನ್ ಜನ ವೀಕ್ಷಿಸಿದ್ದೂ ಆಗಿದೆ. ಹೇಗಿದೆ ಡ್ಯಾನ್ಸ್ ವಿಡೀಯೋ ನೀವೂ ಕೂಡ ನೋಡಿ ಹೇಳಿ…
 

click me!