4ನೇ ಕ್ಲಾಸ್​ನಲ್ಲಿದ್ದಾಗಲೇ ಯಾರ್ದೋ ಜೊತೆ ಓಡಿ ಹೋಗಿದ್ರಂತೆ ಮೇಘನಾ: ಸೀತಾರಾಮ ಪ್ರಿಯಾಳ ಕಥೆ ಕೇಳಿ!

Published : Sep 10, 2024, 03:46 PM IST
4ನೇ ಕ್ಲಾಸ್​ನಲ್ಲಿದ್ದಾಗಲೇ ಯಾರ್ದೋ ಜೊತೆ ಓಡಿ ಹೋಗಿದ್ರಂತೆ ಮೇಘನಾ: ಸೀತಾರಾಮ ಪ್ರಿಯಾಳ ಕಥೆ ಕೇಳಿ!

ಸಾರಾಂಶ

4ನೇ ಕ್ಲಾಸ್​ನಲ್ಲಿದ್ದಾಗಲೇ ಯಾರ್ದೋ ಜೊತೆ ಓಡಿ ಹೋಗಿದ್ರಂತೆ ಮೇಘನಾ ಶಂಕರಪ್ಪ! ಸೀತಾರಾಮ ಪ್ರಿಯಾಳ ಕಥೆ ಕೇಳಿ!  

ಮೇಘನಾ ಶಂಕರಪ್ಪ ಎಂದರೆ ಹೆಚ್ಚಿನವರಿಗೆ ತಿಳಿಯಲಿಕ್ಕಿಲ್ಲ. ಆದರೆ, ಸೀತಾರಾಮ ಸೀರಿಯಲ್‌ ಪ್ರಿಯಾ ಎಂದರೆ ಎಲ್ಲರ ಕಣ್ಣಮುಂದೆ ಬರುವುದು ಚಿನಕುರುಳಿ ನಟಿ. ಸೀರಿಯಲ್‌ನಲ್ಲಿ ಮಾತ್ರವಲ್ಲದೇ, ನಿಜ ಜೀವನದಲ್ಲಿಯೂ ಪಟಪಟ ಎಂದು ಮಾತನಾಡುವ ಪ್ರಿಯಾಳನ್ನು ಸದ್ಯ ಸೀತಾರಾಮ ಮತ್ತು ಡಾನ್ಸ್‌ ಕರ್ನಾಟಕ ಡಾನ್ಸ್‌ ಷೋ ವೀಕ್ಷಕರು ಮಿಸ್‌ ಮಾಡಿಕೊಳ್ಳಲಿದ್ದಾರೆ. ಸೀತಾರಾಮ ಸೀರಿಯಲ್‌ನಲ್ಲಿ ಸದ್ಯ ನಟಿಗೆ ಕ್ಯಾನ್ಸರ್‌ ಇರುವಂತೆ ತೋರಿಸಲಾಗಿದೆ. ಇದು ಸೀರಿಯಲ್‌ ಪ್ರೇಮಿಗಳಿಗೆ ನೋವು ಉಂಟು ಮಾಡಿದ್ದಂತೂ ನಿಜ. ಅಮ್ಮನಾಗಲು ಬಯಸಿರುವ ಪ್ರಿಯಾಳಿಗೆ  ಬ್ರೆಸ್ಟ್‌ ಕ್ಯಾನ್ಸರ್‌ ಇರುವಂತೆ ತೋರಿಸಲಾಗಿದೆ. ಈ ಸತ್ಯ ಸದ್ಯ ಗೊತ್ತಿರುವುದು ಪ್ರಿಯಾ ಗಂಡ ಅಶೋಕ್‌ಗೆ ಮಾತ್ರ. ಈ ಸತ್ಯವನ್ನು ಹೇಳಲೂ ಅಗದೇ, ಮುಚ್ಚಿಡಲೂ ಆಗದೇ ಒದ್ದಾಡುತ್ತಿದ್ದಾನೆ ಅಶೋಕ್‌. ಅದೇ ಇನ್ನೊಂದೆಡೆ, ತನ್ನ ಮಗಳು ಗರ್ಭಿಣಿ ಆಗದೇ ಇರಲು ಅಶೋಕೇ ಕಾರಣ ಎಂದುಕೊಂಡಿದ್ದಾಳೆ ಪ್ರಿಯಾ ಅಮ್ಮ.

 ಒಟ್ಟಿನಲ್ಲಿ ಸೀರಿಯಲ್‌ನಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರೋ ಪ್ರಿಯಾ, ಈಗ ನಿಜ ಜೀವನದಲ್ಲಿಯೂ ಅನಾರೋಗ್ಯಪೀಡಿತರಾಗಿದ್ದಾರೆ. ಕಣ್ಣಿನ ಮೇಲೆ ಗಾಯ ಆಗಿರುವ ಫೋಟೋ ಪೋಸ್ಟ್‌ ಮಾಡಿಕೊಂಡಿರುವ ನಟಿ ಮೇಘನಾ ಶಂಕಪ್ಪ,  ಅನಾರೋಗ್ಯದ ಕಾರಣಕ್ಕೆ ನಾನು ಕೆಲ ದಿನಗಳ ಕಾಲ ‘ಸೀತಾರಾಮ’ ಹಾಗೂ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಷೋನಲ್ಲಿ ಭಾಗಿಯಾಗೋದಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಕಣ್ಣಿಗೆ ಮೇಲ್ಭಾಗದಲ್ಲಿ ಗಾಯ ಆಗಿರುವ ಕಾರಣ ಸದ್ಯ ಶೂಟಿಂಗ್​ನಿಂದ ದೂರ ಇದ್ದಾರೆ. ಆದರೂ ಯೂಟ್ಯೂಬ್​ ಚಾನೆಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿನಕುರುಳಿಯಂತೆ ಪಟಪಟ ಎಂದು ಮಾತನಾಡುವ ಮೇಘನಾ ಈ ವಿಡಿಯೋದಲ್ಲಿ ತಮ್ಮ ಇಡೀ ಕುಟುಂಬದವರನ್ನು ಪರಿಚಯಿಸಿದ್ದಾರೆ. 

ಮುಗುತಿಯಾಗಿದ್ರೆ ಮೇಘನಾ ಮೂಗಲ್ಲೇ ಇರ್ತಿದ್ದೆ ಎಂದ ಗಾಯಕ! ಹುಷಾರಪ್ಪಾ, ಬಾಯ್​ಫ್ರೆಂಡ್ ಇದ್ದಾನೆ ಅಂತಿದ್ದಾರೆ ಫ್ಯಾನ್ಸ್​

ಈ ಸಮಯದಲ್ಲಿ ಕುಟುಂಬದವರು ಮೇಘನಾರ ಕೆಲವೊಂದು ಸೀಕ್ರೇಟ್​ಗಳನ್ನು ಬಯಲು ಮಾಡಿದ್ದಾರೆ. ದಪ್ಪಗಿದ್ದ ಮೇಘನಾ ಅವರನ್ನು ಡಬ್ಬ ಎಂದು ಕರೆಯುತ್ತಿದ್ದರಂತೆ. ಪುಟಾಣಿ ಮೇಘನಾರ ಫೋಟೋ ತೋರಿಸಿ ಅಪ್ಪ ಇದರ ಮಾಹಿತಿ ನೀಡಿದ್ದಾರೆ. ಇವೆಲ್ಲವುಗಳ ನಡುವೆ ನಾಲ್ಕನೇ ಕ್ಲಾಸ್​ನಲ್ಲಿ ಇದ್ದಾಗಲೇ ಯಾರದ್ದೋ ಜೊತೆ ಓಡಿ ಹೋಗಿದ್ರಂತೆ, ಈ ವಿಷಯವನ್ನೂ ಮೇಘನಾ ಅಕ್ಕ ರಿವೀಲ್​ ಮಾಡಿದ್ದಾರೆ. ಅಷ್ಟಕ್ಕೂ ಆಗ ಡಾನ್ಸ್​ ಕ್ಲಾಸ್​ಗೆ ಹೋಗ್ತಿದ್ದ ಮೇಘನಾ ಯಾರದ್ದೋ ಜೊತೆ ಓಡಿ ಹೋಗಿರುವುದಾಗಿ ಹೇಳಿದ್ದಾರೆ.

ಹಾಗಂತ ಯಾರದ್ದೋ ಹುಡುಗನ ಜೊತೆ ಮೇಘನಾ ಓಡಿಹೋದದ್ದಲ್ಲ. ಇದನ್ನೇ ಹೇಳಿದ ನಟಿ, ನೀವು ಹೀಗೆಲ್ಲಾ ಹೇಳಿಬಿಟ್ರೆ ಎಲ್ಲಾ ತಪ್ಪಾಗಿ ತಿಳಿದುಕೊಳ್ತಾರೆ. ಮ್ಯೂಸಿಕ್​ ಕ್ಲಾಸ್​ ತೋರಿಸು ಅಂತ ಫ್ರೆಂಡ್ಸ್​ ಹೇಳಿದ್ರು. ಅದಕ್ಕಾಗಿ ಅವರ ಜೊತೆ ಮನೆಯಲ್ಲಿ ಹೇಳದೇ ಕ್ಲಾಸ್​ ತೋರಿಸಲು ಕರ್ಕೊಂಡು ಹೋಗಿದ್ಲು ಅಂತ ಕ್ಲಾರಿಫಿಕೇಷನ್​ ಕೊಟ್ಟಿದ್ದಾರೆ. ಡಾನ್ಸ್​ ಕ್ಲಾಸ್​ಗೆ ಹೋಗಿದ್ದೆ. ಅಲ್ಲಿ ಇಬ್ಬರು ಮಕ್ಕಳ ಪೇರೆಂಟ್ಸ್​ ಬಂದು ನೀನು ಹೋಗೋ ಮ್ಯೂಸಿಕ್​ ಕ್ಲಾಸ್​ ತೋರಿಸು ಎಂದ್ರು. ನಾನು ಅವರ ಜೊತೆನೇ ಹೋಗಿ ಬಿಟ್ಟೆ. ಎಷ್ಟೊತ್ತಾದರೂ ಮನೆಗೆ ಬರಲಿಲ್ಲ ಎಂದು ಎಲ್ಲರೂ ಫುಲ್​ ಅತ್ತು ರೋಡ್​ನಲ್ಲೆಲ್ಲಾ ಹುಡುಕಿ ಬಂದ್ರು. ಆಮೇಲೆ ನಾನು ರೋಡ್​ನಲ್ಲಿ ಸಿಕ್ಕೆ ಅಷ್ಟೇ ಕಥೆ ಎಂದಿದ್ದಾರೆ. 

ಸೀತಾರಾಮ ಸೀರಿಯಲ್‌- ಡಾನ್ಸ್‌ ಕರ್ನಾಟಕ ಡಾನ್ಸ್‌ ಷೋನಿಂದ ಮೇಘನಾ ತುರ್ತು ಔಟ್‌! ಫ್ಯಾನ್ಸ್‌ ಶಾಕ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!