ಶ್ರೇಷ್ಠಾ ಮದುವೆಗೆ ರೆಡಿಯಾಗಿದ್ರೆ, ತಾಂಡವ್ ಕೋಣೆಯಲ್ಲಿ ಲಾಕ್ ಆಗಿದ್ದಾನೆ. ಇದನ್ನು ನೋಡಿ ಸೀರಿಯಲ್ ಪ್ರೇಮಿಗಳು ಹೇಳ್ತಿರೋದೇನು ನೋಡಿ...
ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಕುದಿಯುತ್ತಿರೋ ಶ್ರೇಷ್ಠಾ, ಅವಳ ಗಂಡ ತಾಂಡವ್ ಜೊತೆ ಮದ್ವೆ ಫಿಕ್ಸ್ ಮಾಡಿದ್ದಾಳೆ! ಅತ್ತ ತಾಂಡವ್ ಮನೆಯಲ್ಲಿ ಲಾಕ್ ಆಗಿದ್ದಾನೆ. ಇನ್ನೊಂದೆಡೆ, ಮಗಳ ಈ ಕುತಂತ್ರದ ಅರಿವಾಗಿ ಶ್ರೇಷ್ಠಾಳ ಅಪ್ಪ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ ಯಾವುದನ್ನೂ ಕೇರೇ ಮಾಡದ ಶ್ರೇಷ್ಠಾ ಮದುವೆಗೆ ಒಂದಿಷ್ಟು ಜನರನ್ನು ಕರೆಸಿಯೇ ಬಿಟ್ಟಿದ್ದಾಳೆ. ತಾಂಡವ್ ಲಾಕ್ ಆಗಿರೋ ವಿಷ್ಯ ಅವಳಿಗೆ ಗೊತ್ತಿಲ್ಲ. ಮದುವೆ ವಿಷಯವನ್ನು ಭಾಗ್ಯಳಿಗೂ ಫೋನ್ ಮಾಡಿ ತಿಳಿಸಿದ್ದಾಳೆ. ಅಷ್ಟಕ್ಕೂ ಶ್ರೇಷ್ಠಾ ಅಕ್ಷರಶಃ ನಾಗವಲ್ಲಿಯಾಗಿದ್ದಾಳೆ. ಏನಾದರೂ ಮಾಡಿ ಭಾಗ್ಯಳಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ಭಾಗ್ಯಳಿಗೆ ಈಕೆ ಮದ್ವೆಯಾಗ್ತಿರೋದು ತನ್ನ ಗಂಡನೇ ಎನ್ನೋ ವಿಷ್ಯನೇ ಗೊತ್ತಿಲ್ಲ, ಆದರೂ ಇಬ್ಬರು ಮಕ್ಕಳ ಅಪ್ಪನ ಜೊತೆ ಮದ್ವೆಯಾಗ್ತಿದ್ದಾಳೆ ಅನ್ನೋದು ಮಾತ್ರ ಗೊತ್ತಿದೆ.
ಮಗಳ ಈ ಕುತಂತ್ರದ ಅರಿವಾಗಿ ಶ್ರೇಷ್ಠಾಳ ಅಪ್ಪ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅವನಿಗೆ ಊಟ ಕೊಡಲು ಭಾಗ್ಯ ಅಡುಗೆ ರೆಡಿ ಮಾಡಿ ಟಿಫನ್ಗೆ ಹಾಕಿ ಹೋಗುವಷ್ಟರಲ್ಲಿ ಶ್ರೇಷ್ಠಾಳ ಕಾಲ್ ಬಂದಿದೆ. ನಿನಗೊಂದು ಗುಡ್ ನ್ಯೂಸ್. ಇವತ್ತೇ ಮದುವೆ ಎಂದಿದ್ದಾಳೆ. ಈಮದುವೆಯನ್ನು ಹೇಗಾದ್ರೂ ನಿಲ್ಲಿಸೋ ಪ್ಲ್ಯಾನ್ನಲ್ಲಿದ್ದಾರೆ ಭಾಗ್ಯ ಮತ್ತು ಕುಸುಮಾ. ಶ್ರೇಷ್ಠಾ ತಾಂಡವ್ ಜೊತೆ ಮದ್ವೆಯಾಗ್ತಿರೋ ಸತ್ಯ ಗೊತ್ತಿಲ್ಲದಿದ್ದರೂ, ಅವಳ ಹಿಂದೆ ಮುಂದೆ ತಿರುಗಾಡ್ತಿರೋ ತಾಂಡವ್ ಅವಳ ಮದುವೆಗೆ ಹೋಗಿಯೇ ಹೋಗ್ತಾನೆ ಎನ್ನುವಷ್ಟು ತಲೆಯನ್ನು ಉಪಯೋಗಿಸಿದ್ದಾಳೆ ಕುಸುಮಾ. ಇದೇ ಕಾರಣಕ್ಕೆ ತಾಂಡವ್ನನ್ನು ರೂಂ ಒಳಗೆ ಲಾಕ್ ಮಾಡಿದ್ದಾಳೆ. ಇಡೀ ದಿನಕ್ಕಾಗುವಷ್ಟು ಏನು ಬೇಕೋ ಎಲ್ಲವನ್ನೂ ನೀಡುವಂತೆ ಭಾಗ್ಯಳಿಗೆ ಕುಸುಮಾ ಹೇಳಿದ್ದಾರೆ. ಬೆಳಿಗ್ಗೆ ತಿಂಡಿಯಿಂದ ಹಿಡಿದು ರಾತ್ರಿಯ ಊಟದ ವರೆಗೆ ಎಲ್ಲವೂ ತಾಂಡವ್ ರೂಮ್ನಲ್ಲಿಯೇ ತಂದಿಡುವಂತೆ ಹೇಳಿದ್ದಾಳೆ ಕುಸುಮಾ. ಇದನ್ನು ಕೇಳಿ ತಾಂಡವ್ಗೆ ಮೈಯೆಲ್ಲಾ ಉರಿದು ಹೋಗಿದೆ. ಇದೇನಿದು ಚಿಕ್ಕಮಕ್ಕಳಂತೆ ಎಂದು ಬೈದಿದ್ದಾನೆ. ಒಂದು ಕೆಲಸ ಮಾಡು, ಕೈ ಕಾಲು ಕಟ್ಟಿ ಹಾಕು ಎಂದಿದ್ದಾನೆ. ಸಮಯ ಬಂದ್ರೆ ಅದನ್ನೂ ಮಾಡ್ತೇನೆ ಎಂದಿದ್ದಾಳೆ ಕುಸುಮಾ.
ದರ್ಶನ್ಗೆ ಸಿಕ್ತಂತೆ ಲಕ್ಕಿ ನಂಬರ್, ಬೇಲ್ ಫಿಕ್ಸ್? ಅದು ಬೇಡ- ಇದೇ ಕೊಡಿ ಎಂದು ಫ್ಯಾನ್ಸ್ ಒತ್ತಾಯ!
ಶ್ರೇಷ್ಠಾಳ ಹಿಂದೆ ಮುಂದೆ ತಿರುಗೋ ನೀನು ಅವಳ ಮದುವೆಗೆ ಹೋಗುವುದಿಲ್ಲ ಎನ್ನುವುದು ಏನು ಗ್ಯಾರೆಂಟಿ ಕೇಳುತ್ತಲೇ ಅಲ್ಲೇ ಕೂಡಿ ಹಾಕಿದ್ದಾಳೆ. ಅತ್ತ ಭಾಗ್ಯ ಮದ್ವೆಗೆ ರೆಡಿಯಾಗಿದ್ರೆ ಇತ್ತ ತಾಂಡವ್ ಕೋಣೆಯಲ್ಲಿ ವಿಲವಿಲ ಒದ್ದಾಡುತ್ತಿದ್ದಾನೆ. ಅದಕ್ಕೆ ತರ್ಲೆ ನೆಟ್ಟಿಗರು, ನಿನ್ನ ಪ್ರೀತಿ ನಿಜನೇ ಆಗಿದ್ರೆ ಕಿಟಕಿಯಿಂದ ಹಾರಿ ಹೋಗು ಆಗಿದ್ದಾಗಲಿ ಎನ್ನುತ್ತಿದ್ದಾರೆ. ಮತ್ತೆ ಕೆಲವರು ನಿನ್ನ ಜೊತೆ ನಾವಿದ್ದೇವೆ ಎಂದು ಕಾಲೆಳೆಯುತ್ತಿದ್ದಾರೆ. ತಾಂಡವ್ ಮುಂದಿನ ನಡೆ ಏನು ಎನ್ನುವುದನ್ನು ನೋಡಬೇಕಿದೆ.
ಅಷ್ಟಕ್ಕೂ ಇದಾಗಲೇ ಶ್ರೇಷ್ಠಾ ಭಾಗ್ಯ ಮಾಡಿದ ಅವಮಾನದಿಂದ ಕೊತಕೊತ ಕುದಿಯುತ್ತಿದ್ದಾರೆ. ಭಾಗ್ಯಳಿಗೆ ತನ್ನ ವಿರುದ್ಧ ವಿಡಿಯೋ ಹರಿಬಿಡುವಂತೆ ಮಾಡಿದ್ದು ಶ್ರೇಷ್ಠಾಳೇ ಎನ್ನುವ ಸತ್ಯ ಭಾಗ್ಯಳಿಗೆ ತಿಳಿಯಿತು. ಭಾಗ್ಯ ಇನ್ನು ತನ್ನ ತಂಟೆಗೆ ಬರುವುದಿಲ್ಲ ಎಂದು ಮದುವೆಗೆ ರೆಡಿ ಮಾಡಿಕೊಂಡಿದ್ದಳು ಶ್ರೇಷ್ಠಾ. ಮದುಮಗಳಂತೆ ಸಿಂಗರಿಸಿಕೊಂಡು ಕೂತಿದ್ದಳು. ಮದುವೆಗೂ ಮನ್ನ ನಡೆಯುವ ಸಂಪ್ರದಾಯಕ್ಕೆ ಶ್ರೇಷ್ಠಾಳ ಅಪ್ಪ-ಅಮ್ಮನೂ ಬಂದಿದ್ದರು. ಆದರೆ ಇದರ ನಡುವೆಯೇ ಭಾಗ್ಯ ಅಲ್ಲಿಗೆ ಬಂದು ತಾನೇ ಕನ್ಯಾಶುದ್ಧಿ ಮಾಡುತ್ತೇನೆ ಎಂದಿದ್ದಳು. ಕೊನೆಗೆ ರೆಡಿಯಾಗಿ ಕುಳಿತಿದ್ದ ಶ್ರೇಷ್ಠಾಳಿಗೆ ಬಿಂದಿಗೆಯಿಂದ ನೀರು ಹೊಯ್ದಿದ್ದಳು. ಇದಾದ ಬಳಿಕವೂ ಎಲ್ಲಾ ಶಾಸ್ತ್ರವನ್ನೂ ನಾನೇ ಮಾಡುತ್ತೇನೆ ಎಂದು ಶ್ರೇಷ್ಠಾಳನ್ನು ಸಿಂಗರಿಸಿದ್ದಳು. ಕೊನೆಗೆ ಅಪ್ಪ-ಅಮ್ಮನ ಎದುರೇ ಎಲ್ಲ ಸತ್ಯ ಹೇಳಿ ಶ್ರೇಷ್ಠಾಳ ಮರ್ಯಾದೆ ತೆಗೆದಳು.
ನನಗೆ ಹೀಗೆ ಮೋಸ ಮಾಡಿ ಮದ್ವೆಯಾಗ್ತಿರೋದು ಸರಿಯಲ್ಲ... ನಟಿ ರಂಜನಿ ಪೋಸ್ಟ್ಗೆ ಯುವಕನ ಕಣ್ಣೀರು!