
ಕನ್ನಡತಿ, ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಅವರು ಮದುವೆಯ ಸುದ್ದಿ ಕೊಡುತ್ತಿದ್ದಂತೆಯೇ ಹಲವು ಯುವಕರ ಹಾರ್ಟ್ ಬ್ರೇಕ್ ಆಗಿ ಹೋಗಿದೆ. ಅಷ್ಟಕ್ಕೂ ಸೆಲೆಬ್ರಿಟಿಗಳು ಎಂದರೆ ಹಾಗೇ ಅಲ್ವಾ? ಅವರಿಗೆ ಅಭಿಮಾನಿಗಳು ಲಕ್ಷಾಂತರ ಮಂದಿ. ರಂಜನಿ ವಿಷಯದಲ್ಲಿಯೂ ಹಾಗೆಯೇ ಆಗಿದೆ. ತಾವು ಮದುವೆಯಾಗಲಿರುವ ಹುಡುಗ ಸಾಗರ್ ಭಾರಧ್ವಜ್ ಎಂಬ ಮಾಹಿತಿ ಇರುವ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿದ್ದಂತೆಯೇ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗಿದ್ದು, ನಮಗೆ ನೀವು ಮೋಸ ಮಾಡಿದ್ರಿ ಎಂದು ಹಲವರು ಕಣ್ಣೀರು ಹಾಕುತ್ತಿದ್ದಾರೆ. ನೀವು ನಮ್ಮ ಕ್ರಷ್, ನೀವು ಹೀಗೆಲ್ಲಾ ಮಾಡಬಾರದಿತ್ತು ಎಂದು ಕೆಲವರು ಕಮೆಂಟ್ ಮೂಲಕ ತಿಳಿಸಿದ್ದಾರೆ. ಇನ್ನೋರ್ವ ಅಭಿಮಾನಿ, ನೀವು ಮದುವೆಯಾಗುವುದಾದರೆ ಯಾರಿಗೂ ಹೇಳದೇ ಆಗಬೇಕಿತ್ತು. ಮದುವೆಯಾದ ಮೇಲೆ ಹೇಳಬೇಕಿತ್ತು. ಅದನ್ನು ಬಿಟ್ಟು ಮೊದಲೇ ಅನೌನ್ಸ್ ಮಾಡಿ ನಮ್ಮ ಹೃದಯ ಬ್ರೇಕ್ ಮಾಡಿದ್ರಿ ಎಂದು ಅಕ್ಷರಶಃ ಕಣ್ಣೀರಾಗಿ ಬಿಟ್ಟಿದ್ದಾನೆ.
ಇವೆಲ್ಲರ ನಡುವೆ, ಅಪಾಷಿನೇಟ್ ಹಾರ್ಟ್ ಎನ್ನುವ ಇನ್ಸ್ಸ್ಟಾಗ್ರಾಮ್ ಖಾತೆಯಿಂದ ಮಾಡಿರುವ ಕಮೆಂಟ್ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ಬರೆದಿರುವುದನ್ನು ನೋಡಿದರೆ ರಂಜನಿ ಅವರ ಅಪ್ಪಟ ಅಭಿಮಾನಿ ಮಾತ್ರವಲ್ಲದೇ ನಟಿ ಇವರ ಕ್ರಷ್ ಆಗಿದ್ದರು ಎನ್ನುವುದು ಕೂಡ ತಿಳಿದುಬರುತ್ತದೆ. ಅದಕ್ಕೆ ಈ ಯುವಕ, ಈ ಜಗತ್ತಿನಲ್ಲಿ ಯಾವುದೂ ಶಾಶ್ವತ ಅಲ್ಲ ಎನ್ನುವುದು ನನಗೆ ಗೊತ್ತು. ಅದೇ ರೀತಿ ನಿಮ್ಮ ಬಗ್ಗೆ ನನಗಿದ್ದ ಕನಸು ಮತ್ತು ನಂಬಿಕೆಯೂ ಶಾಶ್ವತವಲ್ಲ ಎನ್ನುವ ಅರಿವು ನನಗೆ ಇದೆ. ಪ್ರತಿದಿನ ನಾನು ನಿಮಗಾಗಿ ಪ್ರಾರ್ಥಿಸುತ್ತಿದ್ದೆ. ನನ್ನ ಹೃದಯವು ನಿಮಗಾಗಿ ಪ್ರೀತಿಯಿಂದ ತುಂಬಿ ಹೋಗಿತ್ತು. ಈಗ ಅದು ಬುಡಮೇಲಾಗಿ ಹೋಗಿದೆ. ನನ್ನ ಕನಸು ಕುಸಿದುಬಿದ್ದಿದೆ. ನೀವು ನಿಮ್ಮ ಜೀವನ ಸಂಗಾತಿ ಕುರಿತು ಹೇಳುವ ಮೊದಲೇ ಮದುವೆಯಾಗಬೇಕಿತ್ತು. ಏಕೆಂದರೆ, ಇದರಿಂದ ನೀವು ನನ್ನ ಸಮಯ, ಶಕ್ತಿ, ಭರವಸೆ ಮತ್ತು ಭಾವನೆಗಳನ್ನು ಕೊನೆಯ ಪಕ್ಷ ನೋಯಿಸದೇ ಇರುತ್ತಿದ್ದೀರಿ. ಆದರೆ ಈಗ ಎಲ್ಲವೂ ವ್ಯರ್ಥವಾಗಿದೆ. ನಾನು ನಿಮ್ಮನ್ನು ಅನ್ ಫಾಲೋ ಮಾಡುತ್ತಿದ್ದೇನೆ. ನಿಮಗೆ ಶುಭವಾಗಲಿ ಎಂದಿದ್ದಾರೆ.
ಅಷ್ಟಕ್ಕೂ ನಟಿ, ಈ ಪೋಸ್ಟ್ ಗಮನಿಸಿದ್ದಾರೆ. ಮಾತ್ರವಲ್ಲದೇ ಅದಕ್ಕೆ ಪ್ರತಿಕ್ರಿಯೆಯನ್ನೂ ಬರೆದಿದ್ದಾರೆ. "ನಿಮ್ಮ ಎಲ್ಲಾ ಪ್ರಯತ್ನಗಳು ಮತ್ತು ಪ್ರೀತಿಯನ್ನು ನಾನು ಗೌರವಿಸುವೆ. ನಿಮ್ಮ ಬಗ್ಗೆ ಲೋಡ್‌ನಷ್ಟು ಪ್ರೀತಿ ಮತ್ತು ಗೌರವ ನನಗೆ ಇದೆ" ಎಂದಿದ್ದಾರೆ. ಜೊತೆಗೆ ಕಪ್ಪು ಬಣ್ಣದ ಲವ್ ಇಮೋಜಿ ಹಾಕಿದ್ದಾರೆ. ಅಷ್ಟಕ್ಕೂ ಇದು ಆ ವ್ಯಕ್ತಿಯ ಫ್ಯಾನ್ ಪೇಜ್. ಇದನ್ನು ಬರೆದವರು ಯಾರು ಎಂದು ಗೊತ್ತಿಲ್ಲ. ಒಟ್ಟಿನಲ್ಲಿ ಹಲವು ಯುವಕರ ಕ್ರಷ್ ಆಗಿದ್ದರು ರಂಜನಿ ಎನ್ನುವುದು ಅವರಿಗೆ ಬಂದಿರುವ ಕಮೆಂಟ್ಸ್ಗಳಿಂದ ತಿಳಿದು ಬರುತ್ತದೆ.
ಕ್ಲೋಸ್ ಫ್ರೆಂಡನ್ನೇ ಮದ್ವೆಯಾಗ್ಬೇಕೆಂದ ರಂಜಿನಿ ರಾಘವನ್‌ಗೆ ನೆಟ್ಟಿಗರ ಕ್ಲಾಸ್, ತಕ್ಷಣ ಭಾವೀ ಪತಿ ಪರಿಚಯಿಸಿದ ನಟಿ!
ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು ಮಾತ್ರವಲ್ಲದೇ ಬರಹಗಾರ್ತಿ, ನಿರ್ದೇಶಕಿಯಾಗಿಯೂ ಇವರದ್ದು ಎತ್ತಿದ ಕೈ. ಬಳಿಕ ಪೌರ್ಣಮಿ ಎಂಬ ಮಲಯಾಳಂ ಸೀರಿಯಲ್‌ನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. 2019ರಲ್ಲಿ ಪ್ರಸಾರಗೊಂಡ 'ಇಷ್ಟದೇವತೆ' ಎಂಬ ಧಾರಾವಾಹಿಯಲ್ಲಿ ನಟಿಸಿರುವುದು ಮಾತ್ರವಲ್ಲದೇ ತಾವೇ ಕಥೆ ಬರೆದು ಕ್ರಿಯೇಟಿವ್ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರು. ಆ ಬಳಿಕ ಎಲ್ಲರ ಮನಸ್ಸನ್ನು ಗೆದ್ದದ್ದು ಇವರು ನಟಿಸಿದ ಕನ್ನಡತಿ ಎಂಬ ಸೀರಿಯಲ್. ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಿದ ಈ ಸೀರಿಯಲ್ ಬಹಳ ಹಿಟ್ ಆಗಿ ರಂಜಿನಿ ಮನೆಮಾತಾದರು. 2017ರಲ್ಲಿ 'ರಾಜಹಂಸ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ನಂತರ ಪುಣ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಉತ್ತಮ ಬರಹಗಾರ್ತಿಯೂ ಹೌದು. ಕಥೆ ಡಬ್ಬಿ ಎಂಬ ಪುಸ್ತಕ ಬರೆದು ಸಾಹಿತ್ಯಾಸಕ್ತರ ಗಮನ ಸೆಳೆದರು 2022ರಲ್ಲಿ ಸ್ವೈಪ್ ಅಪ್ ಎಂಬ ಇನ್ನೊಂದು ಪುಸ್ತಕವನ್ನು ಬಿಡುಗಡೆ ಕೂಡ ಮಾಡಿದ್ದಾರೆ.
ಒಳ್ಳೇ ಕಾಲ ಬಂದೈತೆ ಕಣ್ಲಾ! ಎನ್ನುತ್ತಲೇ ಕಾರಣ ಕೊಟ್ಟ 'ಪುಟ್ಟಗೌರಿ'.. ವೆರಿ ಟ್ರೂ ಎಂದ ಅಮೃತಧಾರೆ ಮಹಿಮಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.