ಒನ್‌ ಸೈಡೆಡ್‌ ಆಯ್ತಾ ಯೂತ್ ಐಕಾನ್ ಪ್ರಶಸ್ತಿ, ಶೃಂಗೇರಿ ನೀವೇ ವಿನ್‌ ರೀ ಅಂತಿದ್ದಾರೆ ಫ್ಯಾನ್ಸ್!

By Gowthami K  |  First Published Aug 30, 2024, 2:49 PM IST

ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್‌ನಲ್ಲಿ ಯೂತ್ ಐಕಾನ್ ಪ್ರಶಸ್ತಿಗೆ ಸಂಗೀತಾ ಶೃಂಗೇರಿ ಸೇರಿ ಒಟ್ಟು 9 ಮಂದಿ ನಾಮಿನೇಟ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಗೀತಾಗೆ ಪ್ರಶಸ್ತಿ ಸಿಗುವುದು ಗ್ಯಾರಂಟಿ ಎಂಬ ಚರ್ಚೆಗಳು ನಡೆಯುತ್ತಿವೆ.


ಬೆಂಗಳೂರು(ಆ.30): ಕಲರ್ಸ್ ಕನ್ನಡದಲ್ಲಿ ಈಗ ಅನುಬಂಧ ಅವಾರ್ಡ್‌ ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಅನುಬಂಧ ಅವಾರ್ಡ್‌  ಮುಗಿದ ನಂತರ ಬಿಗ್ ಬಾಸ್‌ ಕನ್ನಡ ಸೀಸನ್‌ 11 ಬರಲಿದೆ. ಇದಕ್ಕೆಲ್ಲ ತಯಾರಿ ನಡೆಯುತ್ತಿದೆ.

ಈ ನಡುವೆ ಅನುಬಂಧ ಅವಾರ್ಡ್ ಯೂತ್ ಐಕಾನ್ ಗೆ ಹೆಸರು ಬಹಿರಂಗವಾಗಿದೆ. 9 ಮಂದಿ ನಾಮಿನೇಟ್‌ ಆಗಿದ್ದು, ಜಿಯೋ ಸಿನೆಮಾ ಆಪ್ ಡೌನ್‌ಲೋಡ್‌ ಮಾಡಿ ಓಟು ಮಾಡಲು ಅವಕಾಶವಿದೆ.

Tap to resize

Latest Videos

ಭಾಗ್ಯ, ವೈಷ್ಣವ್‌,ರಚನಾ, ಅಪ್ಪು, ರಾಮಚಾರಿ, ಕರ್ಣ,ಆರಾಧನಾ, ತೀರ್ಥ ಮತ್ತು ಸಂಗೀತಾ ಶೃಂಗೇರಿ ನಾಮಿನೇಟ್ ಆದ ಸಾಲಿನಲ್ಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಸಂಗೀತಾ ಶೃಂಗೇರಿ ಹೆಸರು ಕಾಣಿಸಿರುವುದು ಅಭಿಮಾನಿಗಳಿಗೆ ಇನ್ನಿಲ್ಲದ ಸಂಭ್ರಮಕ್ಕೆ ಕಾರಣವಾಗಿದೆ.

ಬಿಕಿನಿ ಹಾಕಿ ಬೀಚ್‌ಗಿಳಿದ ಸ್ತ್ರೀವಾದಿ ಇನ್‌ಫ್ಲುಯೆನ್ಸರ್! ತಡೆದ ಉಡುಪಿ ಪೊಲೀಸರ ವಿರುದ್ಧ ಕಿಡಿ!

ಸೋಷಿಯಲ್‌ ಮೀಡಿಯಾ ನೋಡಿದರೆ ಸಂಗೀತಾ ಶೃಂಗೇರಿ ಅವರಿಗೆನೇ ಯೂತ್ ಐಕಾನ್‌ ಅವಾರ್ಡ್ ಸಿಗಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಬಾರಿ ಯೂತ್ ಐಕಾನ್ ಪಟ್ಟ ಸಂಗೀತಾಗೆನೇ ಬರಲಿದೆ ಎಂದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಬಿಗ್‌ಬಾಸ್‌ ಸೀಸನ್‌ 10ರಲ್ಲಿ ಸಂಗೀತಾ ಗೆಲ್ಲದಿದ್ದರೆ ಏನಂತೆ ಈ ಬಾರಿ ಯೂತ್ ಐಕಾನ್ ಮಾತ್ರ ನೀವೆ ನಮ್ಮ ಮತ ನಿಮಗೆ ಎನ್ನುತ್ತಿದ್ದಾರೆ. ಅಭಿಮಾನಿಗಳು. ಬಿಬಿಕೆ 10ರಲ್ಲಿ ಫೈನಲ್‌ ತನಕ ಬಂದಿದ್ದ ಸಂಗೀತಾ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು. ಇನ್ನೇನು ಗೆದ್ದೇ ಗೆಲ್ಲುತ್ತಾರೆ ಎನ್ನುವಾಗ ಸೆಕೆಂಡ್‌ ರನ್ನರ್ ಅಪ್‌ ಆಗಿ ಶೋ ನಿಂದ ಔಟ್‌ ಆಗಿದ್ದರು.

ಭಾರತದ ಬಿಗ್‌ಬಾಸ್ ಶೋಗಳನ್ನು ನುಂಗಿ ಹಾಕಿದ್ದ ಕನ್ನಡದ 10ರ ಸೀಸನ್‌ ನ ಬಳೆ! ಬಿಬಿಕೆ 11ರಲ್ಲಿ ಏನಾಗಲಿದೆಯೋ?

ಕಾರ್ತಿಕ್ ಮಹೇಶ್ ಬಿಬಿಕೆ 10ರ ವಿನ್ನರ್ ಆಗಿದ್ದರೆ ಡ್ರೋಣ್ ಪ್ರತಾಪ್‌ ರನ್ನರ್ ಅಪ್ ಆಗಿದ್ದರು. ಹೀಗಾಗಿ ಸಂಗೀತಾ ಅಪಾರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಮಾತ್ರವಲ್ಲ ಈ ಬಾರಿಯಾದ್ರೂ ಓರ್ವ ಹೆಣ್ಣು ಶೋ ಗೆದ್ದು ಇತಿಹಾಸ ನಿರ್ಮಿಸಲಿದ್ದಾರೆ ಎಂದೇ ಜನ ಅಂದುಕೊಂಡಿದ್ದರು. ಆದರೆ ಅಂದುಕೊಂಡತೆ ಯಾವುದು ಆಗಲಿಲ್ಲ. ಸಂಗೀತಾ ಮೂರನೇ ಸ್ಥಾನಿಯಾಗಿ ಹೊರಬಂದಿದ್ದು, ಅವರ ಅಭಿಮಾನಿಗಳಿಗೆ ನೋವು ತರಿಸಿತ್ತು.

ತನ್ನ ನೇರ ನಡೆ ನುಡಿ ಮತ್ತು ಓರ್ವ ದಿಟ್ಟ ಹೆಣ್ಣಾಗಿ ಸಂಗೀತಾ ಬಿಬಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅವರು ಹೆಚ್ಚು ಸದ್ದು ಮಾಡಿದ್ದು ಬಳೆ ವಿಷ್ಯದಲ್ಲಿ. ಬಳೆ ವಿಷ್ಯದಷ್ಟು ದೊಡ್ಡ ಗಲಾಟೆ ಬಿಬಿಕೆ ಇತಿಹಾಸದಲ್ಲಿ ಇಲ್ಲಿವರೆಗೆ ನಡೆದಿರಲಿಲ್ಲ. ಆಕೆಯನ್ನು ಸಿಂಹಿಣಿ ಎಂದೇ ಅಭಿಮಾನಿಗಳು ಸಂಭೋಧಿಸುತ್ತಿದ್ದರು. ಹೀಗಾಗಿ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು.

ಇದೀಗ ಬಿಬಿಕೆ ಗೆಲ್ಲದ ಸಂಗೀತಾ ಶೃಂಗೇರಿ ಯೂತ್ ಐಕಾನ್ ಆಗಿ ಪ್ರಶಸ್ತಿ ಪಡೆದೇ ಪಡೆಯುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ. ಫಲಿತಾಂಶ ಏನಾಗಲಿದೆ ಎಂಬುದನ್ನು ಅನುಬಂಧ ಅವಾರ್ಡ್ ನಲ್ಲಿ ಕಾದು ನೋಡಬೇಕಿದೆ.

click me!