ದರ್ಶನ್‌ಗೆ ಸಿಕ್ತಂತೆ ಲಕ್ಕಿ ನಂಬರ್, ಬೇಲ್ ಫಿಕ್ಸ್? ಅದು ಬೇಡ- ಇದೇ ಕೊಡಿ ಎಂದು ಫ್ಯಾನ್ಸ್ ಒತ್ತಾಯ!
ಬಳ್ಳಾರಿ ಜೈಲಿಗೆ ನಟ ದರ್ಶನ್ ಅವರನ್ನು ಶಿಫ್ಟ್ ಮಾಡಿರುವ ಬೆನ್ನಲ್ಲೇ ಅವರ ಹೊಸ ಕೈದಿ ಸಂಖ್ಯೆಯ ಬಗ್ಗೆ ಅಭಿಮಾನಿಗಳಲ್ಲಿ ಇನ್ನಿಲ್ಲದ ಚರ್ಚೆ ಹುಟ್ಟುಹಾಕಿದೆ. ಏನಿದು ವಿಷ್ಯ?
ಕೊಲೆ ಆಪಾದನೆ ಮೇರೆಗೆ ಜೈಲುಪಾಲಾಗಿರುವ ನಟ ದರ್ಶನ್ರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಮೊದಲು ಬೆಂಗಳೂರಿನ ಜೈಲಿನಲ್ಲಿ ನಟನ ಕೈದಿ ಸಂಖ್ಯೆ 6106 ಆಗಿತ್ತು. ಆದರೆ ಬಳ್ಳಾರಿಯಲ್ಲಿ ಈಗ 511 ಆಗಿದೆ. ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆಗಿ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ ಕೊಡುತ್ತಿದ್ದಂತೆಯೇ ಅವರ ಅಭಿಮಾನಿಗಳು, ಅದರಲ್ಲಿಯೂ ಅಭಿಮಾನ ಮೆರೆದಿದ್ದರು. ಕೆಲವು ಫ್ಯಾನ್ಸ್ ಇದೇ ನಂಬರಿಗೆ ಟ್ಯಾಟೂ ಹಾಕಿಸಿಕೊಂಡಿದ್ದರು. ಅವರಲ್ಲಿ ಕೆಲವರು ಪರ್ಮನೆಂಟ್ ಟ್ಯಾಟೂ ಕೂಡ ಹಾಕಿಸಿಕೊಂಡು ಬಿಟ್ಟಿದ್ದಾರೆ. ಮತ್ತೆ ಕೆಲವರು ತಮ್ಮ ವಾಹನಗಳಿಗೆ ಸ್ಟಿಕರ್ ಅಂಟಿಸಿಕೊಂಡರು ಖುಷಿ ಪಟ್ಟರು. ಹೀಗೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ಕೊಟ್ಟರೂ ಡೋಂಟ್ ಕೇರ್ ಎಂದರು. ಮತ್ತೆ ಕೆಲವರು ತಮ್ಮ ಬಟ್ಟೆಗಳ ಮೇಲೆ ಕೈದಿ ಸಂಖ್ಯೆ 6106 ಎಂದು ಬರೆದುಕೊಂಡು ಸಂಭ್ರಮಿಸಿದರು.
ಈಗ ವಾಹನಗಳ ಮೇಲೆ ಸ್ಟಿಕರ್ ಹಾಕಿಸಿಕೊಂಡವರು ಅಥವಾ ಬಟ್ಟೆಯ ಮೇಲೆ ಬರೆಸಿಕೊಂಡವರು ಏನೋ ಹೊಸ ಕೈದಿ ಸಂಖ್ಯೆಯನ್ನು ಬದಲಿಸಬಹುದು. ಆದರೆ ಪರ್ಮನೆಂಟ್ ಟ್ಯಾಟೂ ಹಾಕಿಸಿಕೊಂಡವರ ಕಥೆ ಕೇಳುವುದೇ ಬೇಡವಾಗಿದೆ. ಒಮ್ಮೆ ಟ್ಯಾಟೂ ಹಾಕಿಸಿಕೊಂಡ ಮೇಲೆ ಅದನ್ನು ಅಳಸಬೇಕು. ಅಳಸಿದರೆ ಸಾಕೆ? ಅಭಿಮಾನ ಮೆರೆಯುವುದು ಬೇಡವೆ? 511 ಎಂದು ಹೊಸ ಟ್ಯಾಟೂ ಬೇರೆ ಹಾಕಿಸಿಕೊಳ್ಳಬೇಕಲ್ಲ. ಅದೀಗ ತಲೆನೋವಾಗಿ ಬಿಟ್ಟಿದೆ. ವಾಹನಗಳಿಗೆ ಸಾಮಾನ್ಯವಾಗಿ ಲಕ್ಕಿ ನಂಬರ್ ಪಡೆಯುವುದಕ್ಕಾಗಿ ಕೆಲವರು ಬೇಕಾದಷ್ಟು ದುಡ್ಡು ಸುರಿಯುತ್ತಾರೆ. ಸಾರಿಗೆ ಇಲಾಖೆಗೆ ಇಂತಿಷ್ಟು ಹಣ ಕೊಟ್ಟು ಲಕ್ಕಿ ನಂಬರ್ ಪಡೆಯುವ ಅವಕಾಶ ಇದೆ. ಇದನ್ನೇ ಈಗ ದರ್ಶನ್ಗೂ ಮಾಡಿ ಎಂದು ಕೆಲವು ಅಭಿಮಾನಿಗಳು ದುಂಬಾಲು ಬಿದ್ದಿದ್ದಾರೆ. ಎಷ್ಟು ಖರ್ಚಾದರೂ ಪರವಾಗಿಲ್ಲ, ದರ್ಶನ್‌ಗೆ 6010 ನಂಬರ್ ಕೊಡಿ ಎಂದು ಹೇಳುತ್ತಿದ್ದಾರೆ.
ಅಕ್ರಮ ಚಟುವಟಿಕೆ: ನಟ ದರ್ಶನ್ ಇದ್ದ ಜೈಲಿನ ಮೇಲೆ ದಿಢೀರ್ ದಾಳಿ
ಆದರೆ ಮತ್ತೆ ಕೆಲವು ಫ್ಯಾನ್ಸ್ ದರ್ಶನ್‌ಗೆ ಈಗ ಕೊಟ್ಟಿರುವ ನಂಬರ್ 511ರಿಂದ ಬಹಳ ಖುಷಿಯಿಂದ ಇದ್ದಾರೆ. ಇದಕ್ಕೆ ಕಾರಣ 5+1+1 ಎಂದರೆ ಸಂಖ್ಯಾಶಾಸ್ತ್ರದ ಪ್ರಕಾರ 7. ಇದು ದರ್ಶನ್ ಲಕ್ಕಿ ನಂಬರ್ ಅಂತೆ. 7 ಮತ್ತು 9 ಎರಡನ್ನೂ ತಮ್ಮ ಅದೃಷ್ಟ ಸಂಖ್ಯೆಯೆನ್ನುವ ಕಾರಣಕ್ಕೆ ದರ್ಶನ್ ಅವರು, ತಮ್ಮ ವಾಹನಗಳ ಮೇಲೆ ಹಾಗೂ ಎಲ್ಲೆಲ್ಲಿ ಸಂಖ್ಯೆಗಳ ಅಗತ್ಯ ಇವೆಯೋ ಅಲ್ಲೆಲ್ಲಾ ಈ ನಂಬರ್ ಬರುವಂಥ ಸಂಖ್ಯೆ ಬಳಸುತ್ತಿದ್ದಾರೆ ಎನ್ನಲಾಗಿದೆ. ಅವರು ಇತ್ತೀಚೆಗೆ ಖರೀದಿಸಿದ್ದ ದುಬಾರಿ ಕಾರಿನ ಸಂಖ್ಯೆಯೂ 7 ಮತ್ತು 9ರಿಂದ ಕೂಡಿದೆ. ಕಾರಿನ ಸಂಖ್ಯೆ 7999. ಆದ್ದರಿಂದ ಅದೇ ಇರಲಿ ಎನ್ನುತ್ತಿದ್ದಾರೆ ಮತ್ತಷ್ಟು ಫ್ಯಾನ್ಸ್. ಈ ಸಂಖ್ಯೆ ಇದ್ರೆ ಅವರಿಗೆ ಬೇಲ್ ಆಗುತ್ತೆ ಎನ್ನುವುದು ಅವರ ಲೆಕ್ಕಾಚಾರ.
ಒಟ್ಟಿನಲ್ಲಿ ದರ್ಶನ್ ಅವರ ಕೈದಿ ಸಂಖ್ಯೆಯ ಬಗ್ಗೆ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ತಲೆ ಕೆಡಿಸಿಕೊಳ್ತಿದ್ದಾರೆ. ಅದೇ ಇನ್ನೊಂದೆಡೆ, ಬಳ್ಳಾರಿಗೆ ನಟನನ್ನು ಶಿಫ್ಟ್ ಮಾಡಿರುವುದಕ್ಕೂ ಅಪಸ್ವರ ಕೇಳಿ ಬರುತ್ತಿದೆ. ಬಳ್ಳಾರಿ ಶಿಫ್ಟ್ ಮಾಡೋ ಹಿಂದೆ ಪ್ಲ್ಯಾನ್ ಇದ್ಯಾ ಎನ್ನುವ ಅನುಮಾನ ಕಾಡಿದೆ. ಬಳ್ಳಾರಿ ಜೈಲಲ್ಲೂ ಕಿಲ್ಲಿಂಗ್ ಸ್ಟಾರ್‌ಗೆ ರಾಜಾತಿಥ್ಯ ಸಿಗಲಿದ್ಯಾ ಎನ್ನುವ ಅನುಮಾನ ಎದ್ದಿದೆ. ಯಾಕೆಂದರೆ, ದರ್ಶನ್ ಅವರ ಆಪ್ತ ಹಾಗೂ ಕಾಂಗ್ರೆಸ್ ಸರ್ಕಾರದ ವಸತಿ ಸಚಿವ ಬಳ್ಳಾರಿ ಪಕ್ಕದ ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿದ್ದಾರೆ. ವಸತಿ ಸಚಿವ ಜಮೀರ್ ಅಹ್ಮದ್ ಹಾಗೂ ದರ್ಶನ್ ಪರಮಾಪ್ತರು ಅನ್ನೋದು ಗೊತ್ತಿರುವ ವಿಚಾರ. ಹಂಪಿ ಉತ್ಸವಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ದರ್ಶನ್‌ರನ್ನ ಕರೆತಂದಿದ್ದರು. ಹೀಗಾಗಿ ಜಮೀರ್ ಅವರಿಂದಲೇ ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ ಫಿಕ್ಸ್ ಆಗಬಹುದು ಎನ್ನಲಾಗ್ತಿದೆ.
ದರ್ಶನ್ ನೆನೆದು ಕಣ್ಣೀರಾದ ತರುಣ್ ಸುಧೀರ್: ಜೈಲಿಗೆ ಹೋಗ್ತೇವೆ ಎಂದ ಸೋನಲ್ ಹೇಳಿದ್ದೇನು?