ಶೂಟಿಂಗ್​ನಲ್ಲಿ ಶ್ರೇಷ್ಠಾಳ ಮುಖಕ್ಕೆ ಬೂದಿ ಎರೆಚಿದಾಗ ಎಲ್ಲೆಲ್ಲೋ ಹೋಗಿ ಏನೇನಾಯ್ತು ನೋಡಿ...!

By Suchethana D  |  First Published Sep 8, 2024, 11:48 AM IST

ಭಾಗ್ಯಲಕ್ಷ್ಮಿ ಸೀರಿಯಲ್​ ಶೂಟಿಂಗ್​ ಸಮಯದಲ್ಲಿ ಶ್ರೇಷ್ಠಾಳ ಮುಖ-ಮೈಗೆ ಬೂದಿ ಎರಚಿದಾಗ ಆದ ಎಡವಟ್ಟುಗಳೇನು? ಭಾಗ್ಯ ಪಾತ್ರಧಾರಿ ಸುಷ್ಮಾ ವಿಡಿಯೋ ಶೇರ್​ ಮಾಡಿದ್ದಾರೆ ನೋಡಿ... 
 


ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಇದೀಗ ಶ್ರೇಷ್ಠಾ ಮತ್ತು ತಾಂಡವ್​ ಮದುವೆಯಾಗುವವರೆಗೆ ಬಂದು ನಿಂತಿದೆ. ಇಷ್ಟಾದರೂ ಪೆದ್ದು ಭಾಗ್ಯಳಿಗಾಗಲೀ, ಬಜಾರಿ ಎನಿಸಿರುವ ಅಮ್ಮ ಕುಸುಮಳಿಗಾಗಲೀ ತಾಂಡವ್​ನೇ ಮದುಮಗ ಎನ್ನುವ ವಿಷಯ ತಿಳಿದಿಲ್ಲ. ಇದಕ್ಕೂ ಮುನ್ನ ಮಂತ್ರವಾದಿ ವೇಷದಲ್ಲಿ ಬಂದಿದ್ದ ಹಿತಾ, ಶ್ರೇಷ್ಠಾಳ ಮದುವೆಯ ಗುಟ್ಟನ್ನು ರಟ್ಟು ಮಾಡುವ ಪ್ಲ್ಯಾನ್​ ಮಾಡಿದ್ದನ್ನು ನೋಡಿರುತ್ತೀರಿ. ತಾಂಡವ್​  ಮತ್ತು ಶ್ರೇಷ್ಠಾಳ ಗುಟ್ಟನ್ನು ರಟ್ಟು ಮಾಡಲು ಪೂಜಾ, ಸುಂದ್ರಿ ಹಾಗೂ ಹಿತಾ ಸೇರಿ ಮಂತ್ರವಾದಿ ಪ್ಲ್ಯಾನ್​ ಮಾಡಿದ್ದರು. ಸುಂದ್ರಿ ಕಷ್ಟಪಟ್ಟು ಈ ಜಾಗಕ್ಕೆ ಶ್ರೇಷ್ಠಾಳನ್ನು ಕರೆದುಕೊಂಡು ಬಂದಿದ್ರೆ ಭಾಗ್ಯಳನ್ನು ಪೂಜಾ ಕರೆಸಿದ್ದಳು. ಅಲ್ಲಿ ಭಾಗ್ಯ ಮತ್ತು ಶ್ರೇಷ್ಠಾಳ ಮುಖಾಮುಖಿಯಾಗಿತ್ತು.  ಈ ವೇಳೆ ಶ್ರೇಷ್ಠಾಳನ್ನು ಭಾಗ್ಯ ಬರುವವರೆಗೆ ಇರಿಸಿಕೊಳ್ಳಲು ಶ್ರೇಷ್ಠಾಳ ಮುಖಕ್ಕೆ ಬೂದಿ ಎರೆಚುವ ದೃಶ್ಯವಿತ್ತು. 

ಈ ದೃಶ್ಯದ  ಶೂಟಿಂಗ್​ ಮಾಡುವಾಗ ಶ್ರೇಷ್ಠಾಳ ಮೈಮೇಲೆ ಬೂದಿ ಎರೆಚಿದಾಗ ಏನೆಲ್ಲಾ ಆಯ್ತು ಎನ್ನುವ ಬಗ್ಗೆ ಭಾಗ್ಯಲಕ್ಷ್ಮಿ ಪಾತ್ರಧಾರಿ ಸುಷ್ಮಾ ಕೆ. ರಾವ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರೋ ಸುಷ್ಮಾ ಆಗಾಗ್ಗೆ ಶೂಟಿಂಗ್​ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಶ್ರೇಷ್ಠಾಳ ಮೇಲೆ ಬೂದಿ ಎರೆಚುವ ಶೂಟಿಂಗ್​ ಸಮಯದ ಮೇಕಿಂಗ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಶ್ರೇಷ್ಠಾ ಪಾತ್ರಧಾರಿ ಕಾವ್ಯ ಗೌಡ ಅವರ ಮೇಲೆ ಬೂದಿ ಎರೆಚಲಾಗಿತ್ತು. ಅದೆಲ್ಲಾ ಕಣ್ಣಿಗೂ ಬಿದ್ದು ಕಾವ್ಯಾ ಪಡಬಾರದ ಕಷ್ಟ ಪಟ್ಟರು. ಅಷ್ಟೇ ಅಲ್ಲದೇ ಡ್ರೆಸ್​ ಒಳಗೆ ಎಲ್ಲಾ ಬೂದಿ ಸೇರಿಕೊಂಡು ಪೇಚಿಗೂ ಸಿಲುಕಿದರು. ಒಂದು ದೃಶ್ಯವನ್ನು ಪ್ರೇಕ್ಷಕರ ಮುಂದೆ ತೋರಿಸುವ ಮುನ್ನ ನಟ-ನಟಿಯರು ಪಡುವ ಕಷ್ಟಗಳ  ಬಗ್ಗೆ ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇದರಲ್ಲಿ ಸುಷ್ಮಾ ಮಾಮೂಲಿನಂತೆ ಜೋಕ್​ ಮಾಡುತ್ತಲೇ ಇದ್ದರೂ, ಬೂದಿ ಮೆತ್ತಿಕೊಂಡ ಕಾವ್ಯಾ ಪರದಾಡಿದರು.

Tap to resize

Latest Videos

ಸೀರಿಯಲ್​ನಲ್ಲಿ ಲವರ್​ ಸಿಗ್ಲಿಲ್ಲ ಎಂದು ಸಾಯಲು ಹೊರಡೋದಾ ಶ್ರೇಷ್ಠಾ? ಶಾಕಿಂಗ್​ ವಿಡಿಯೋ ವೈರಲ್​

ಅಂದಹಾಗೆ ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ  ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ,  ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್​ ರೋಲ್​ ಮೂಲಕ ಮನೆ ಮಾತಾಗಿದ್ದಾರೆ.   3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ.  ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್​ ಬಿಟ್ಟಿದ್ದರು. ಆದರೆ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಯಾವ ರೀತಿ ಟರ್ನ್​ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. 

ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.     

ವೀಳ್ಯದೆಲೆ ವ್ಯಾಪಾರಕ್ಕಿಳಿದುಬಿಟ್ಟಳಾ ಭಾಗ್ಯ? ಕಮೆಂಟ್ಸ್​ಗೆಲ್ಲಾ ಉತ್ತರ ಕೊಡುತ್ತಲೇ ಹೃದಯ ಕದ್ದ ನಟಿ...

click me!