ಕಾವೇರಿ ಕನ್ನಡ ಮೀಡಿಯಂನಲ್ಲಿ ಕನ್ನಡಿಗಾಗಿ ಗಂಡ ಹೆಂಡ್ತಿ ನಡುವೆ ಕಿತ್ತಾಟ, ನಿಮ್ಮನೇಲೂ ಹಿಂಗೇನಾ?

By Bhavani Bhat  |  First Published Sep 8, 2024, 10:57 AM IST

ಕಾವೇರಿ ಕನ್ನಡ ಮೀಡಿಯಂ ಸೀರಿಯಲ್‌ನಲ್ಲಿ ಅಗಸ್ತ್ಯ, ಕಾವೇರಿ ಜೋಡಿ ಅಂದ್ರೆ ಬಹಳ ಜನಕ್ಕಿಷ್ಟ. ಸದ್ಯ ಈ ಜೋಡಿ ಕನ್ನಡಿಗಾಗಿ ಕಿತ್ತಾಡ್ಕೊಳ್ತಿದೆ. ನಿಮ್ಮನೇಲೂ ಹಿಂಗೇನಾ?


ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಸೀರಿಯಲ್ 'ಕಾವೇರಿ ಕನ್ನಡ ಮೀಡಿಯಂ'. ಕನ್ನಡ ಟೀಚರ್ ಕಾವೇರಿ ಮತ್ತು ಎಜುಕೇಶನ್ ಇನ್ಸ್ಟಿಟ್ಯೂಟ್ ಮಾಲಿಕ ಅಗಸ್ತ್ಯ ಬ್ರಹ್ಮಾವರ್ ನಡುವಿನ ಪ್ರೀತಿಯ ಕಥೆಯೇ ಈ ಸೀರಿಯಲ್. ಧಾರಾವಾಹಿಗಳಲ್ಲಿಯೇ ಆಗಲಿ, ಸಿನಿಮಾಗಳಲ್ಲಿಯೇ ಆಗಲಿ ಮನರಂಜನೆ ತುಂಬಾ ಮುಖ್ಯ. ಸಂದೇಶದ ಜೊತೆಗೆ ನಕ್ಕು ನಲಿದರೆ ಆ ಧಾರಾವಾಹಿಗೆ ನೋಡುಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತದೆ. ಸದ್ಯಕ್ಕೆ ಈ ರೀತಿಯ ಸಬ್ಜೆಕ್ಟ್ ಇಟ್ಟುಕೊಂಡು ನೋಡಿಗರಿಗೆ ಥ್ರಿಲ್ ಎನಿಸುವಂತೆ ಮಾಡುತ್ತಿರುವುದು 'ಕಾವೇರಿ ಕನ್ನಡ ಮೀಡಿಯಂ' ಸೀರಿಯಲ್.

'ಕಾವೇರಿ ಕನ್ನಡ ಮೀಡಿಯಂ' ಸೀರಿಯಲ್ ಶುರುವಾದಾಗಿನಿಂದ ಎಲ್ಲರ ಫೇವರಿಟ್ ಆಗಿದೆ. ಶುರುವಲ್ಲಿ ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮೀಡಿಯಂ ನಡುವಿನ ಸ್ಪರ್ಧೆಯ ಬಗ್ಗೆ ಕಥೆ ಮೂಡಿ ಬರುತ್ತಿತ್ತು. ಜೊತೆಗೆ ಅಗಸ್ತ್ಯ ಹಾಗೂ ಕಾವೇರಿಯ ಕೋಳಿ ಜಗಳ ಎಲ್ಲರನ್ನು ಮನರಂಜಿಸುತ್ತಿದೆ. ಅಗಸ್ತ್ಯ ಹಾಗೂ ಕಾವೇರಿ ನಡುವೆ ಪ್ರೀತಿ ತುಂಬ ಇದೆ. ಆದರೆ ಇವರಿಬ್ಬರ ನಡುವಿನ ಹುಸಿಮುನಿಸು, ರೊಮ್ಯಾನ್ಸ್ ಎಲ್ಲರಿಗೂ ಇಷ್ಟ. ಮೊದಲಿಂದಲೂ ಇಬ್ಬರೂ ಜೊತೆಗೆ ಸಿಕ್ಕಿದರೆ ಜಗಳ ಶುರು ಮಾಡದೆ ಇರುವುದಿಲ್ಲ. ಆದರೆ, ಆ ಜಗಳ ಏರು ಧ್ವನಿಯಲ್ಲಿ ಇರುವುದಿಲ್ಲ. ಒಬ್ಬರಿಗೊಬ್ಬರು ವಾದದ ಮೂಲಕ ಜಗಳ ಶುರು ಮಾಡುತ್ತಾರೆ. ಯಾರೂ ಸೋಲುವುದಿಲ್ಲ. ಅದರಲ್ಲೂ ಕಾವೇರಿ ಜಗಳ ಆಡುವುದರಲ್ಲೂ ತಾಳ್ಮೆ ತೋರುತ್ತಾಳೆ. ಆ ತಾಳ್ಮೆಯೇ ಎಲ್ಲರಲ್ಲೂ ಖುಷಿ ಮೂಡಿಸುವುದು. ಅಗಸ್ತ್ಯ ಹಾಗೂ ಕಾವೇರಿಯ ಜಗಳ ಪ್ರಮೋದಾ ದೇವಿಗೆ ಹೇಗೆ ನಗು ತರಿಸುತ್ತದೆಯೋ ಅದೇ ರೀತಿ ನೋಡುಗರಿಗೂ ನಗು ತರಿಸುತ್ತದೆ‌.

Tap to resize

Latest Videos

undefined

ಗಂಡನ ಮನಸು ಗೆಲ್ಲೋದಕ್ಕೆ ಅಡುಗೆಗಿಂತ ಬೆಸ್ಟ್ ದಾರಿ ಇನ್ನೊಂದಿಲ್ಲ ಅಂತಿದ್ದಾಳೆ ಭೂಮಿಕಾ, ನೀವಿದನ್ನ ಒಪ್ತೀರ?

ಸದ್ಯ ಇವರಿಬ್ಬರ ನಡುವೆ ಕನ್ನಡಿಗಾಗಿ ಜಗಳ ಶುರುವಾಗಿದೆ. ಇಬ್ಬರೂ ಸ್ಕೂಲಿನಲ್ಲಿ ಕೆಲಸ ಮಾಡುವ ಕಾರಣ ಒಂದೇ ಟೈಮಿಗೆ ಹೊರಡಬೇಕು. ಕಾವೇರಿ ನೀಟಾಗಿ ಸೀರೆಯುಟ್ಟ, ಜಡೆ ಹಾಕಿ ಬರಲು ಟೈಮ್ ಹಿಡಿಯುತ್ತೆ. ಆದರೆ ಅಗಸ್ತ್ಯ ಅವಳ ಹಿಂದೆ ಕನ್ನಡಿ ನೋಡೋಕೆ ಸರ್ಕಸ್ಸು ಮಾಡ್ತಿದ್ದಾನೆ. 'ರೀ ಹೆಂಡ್ತಿ, ನಂಗೂ ಒಂದು ಸ್ವಲ್ಪ ಮಿರರ್ ಕೊಡಿ' ಅಂತ ಜಗಳಕ್ಕೆ ಮುಂದಾಗ್ತಾನೆ. 'ಸ್ವಲ್ಪ ಏನು ಸಾರ್.. ಪೂರ್ತಿನೇ ಕೊಡ್ತೀನಿ. ಸ್ವಲ್ಪ ಹೊತ್ತು ಕಾಯಿರಿ' ಅಂತಾಳೆ. ಹೆಂಡ್ತಿ ಜೊತೆ ಟೈಮ್ ಸಿಕ್ತಾಗೆಲ್ಲ ಕೋಳಿ ಜಗಳಕ್ಕೆ ಕಾಯೋ ಅಗಸ್ತ್ಯ, 'ಏನ್ ಕಾಯೋದು ಮೇಡಂ.. ಅವಾಗಿಂದ ವೈಟ್ ಮಾಡ್ತಿದ್ದೀನಿ ನಾನು. ನೀವು ಹೆಣ್ಮಕ್ಕಳು ಒಂದು ಸಲ ರೆಡಿಯಾಗೋ ಹೊತ್ತಿಗೆ ಗಂಡು ಮಕ್ಕಳು ಹತ್ತು ಸಲ ರೆಡಿ ಆಗಬಹುದಪ್ಪಾ..' ಅಂತ ಡೈಲಾಗ್ ಹೊಡ್ದು ತಗಲಾಕ್ಕೊಳ್ತಾನೆ.

'ಅಬ್ಬಬ್ಬಾ, ಏನ್ ಕಥೆ ಸಾರ್, ನಿಮ್ಗೆ ಅಂಗಿ ಸಿಕ್ಕಿಸಿಕೊಳ್ಳೋದು ಬಿಟ್ರೆ ಮತ್ತೇನ್ ಕೆಲಸ ಇರುತ್ತೆ ಕನ್ನಡಿ ಮುಂದೆ. ನಮ್ ಹಾಗೆ ಸೀರೆ ಹಾಕ್ಕೊಳ್ಳೋದಕ್ಕೆ ಸಮಯ ಬೇಕಾ, ಇಲ್ಲಾ ಜಡೆ ಹಾಕ್ಕೊಳ್ಳೋದಕ್ಕೆ ಈ ಮೂರು ಕೂದಲಿಗೆ ಸಮಯ ಬೇಕಾ?' ಅಂತ ಕ್ಲಾಸ್ ತಗೊಳ್ತಾಳೆ. ಇವರಿಬ್ಬರ ಕ್ಯೂಟ್ ಜಗಳ ಹೀಗೇ ಮುಂದುವರಿಯುತ್ತೆ. ಒಂದು ಹಂತದಲ್ಲಿ ಹೆಂಡ್ತಿ ಕೈಲಿ ರೊಮ್ಯಾಂಟಿಕ್ ಆಗಿ ತನ್ನ ಬಟ್ಟೆ ಗುಂಡಿ ಹಾಕಿಸ್ಕೊಳ್ಳಬೇಕು ಅಂತ ಬಯಸೋ ಅಗಸ್ತ್ಯ ತನ್ನ ಶರ್ಟಿನ ಗುಂಡಿನ ಕಿತ್ತೆಸೆಯುತ್ತಾನೆ. ಆಮೇಲೆ ಏನೋ ಹೇಳೋದಕ್ಕೆ ಹೋಗಿ ರೆಡ್‌ ಹ್ಯಾಂಡಾಗಿ ಹೆಂಡ್ತಿ ಕೈಲಿ ಸಿಕ್ಕಾಕ್ಕೊಳ್ತಾನೆ.

ಹೆತ್ತಮ್ಮ ಬಾಡಿಗೆ ಆಗ್ತಾಳಾ? ಅವಳಿಗೆ ಹಕ್ಕೇ ಇರಲ್ವಾ? ಸೀತಾ-ಸಿಹಿ ಸಂಬಂಧದ ಬೆನ್ನಲ್ಲೇ 'ಸರೋಗಸಿ' ಚರ್ಚೆ ಶುರು

ಈ ಜೋಡಿಯ ಕ್ಯೂಟ್ ಜಗಳ ಎಲ್ಲ ನೆಟ್ಟಿಗರಿಗೆ ಭಾಳ ಇಷ್ಟ. ಎಂಥಾ ಕಷ್ಟ ಬಂದರೂ ಎದುರಿಸೋ ಈ ಜೋಡಿ ಟೈಮ್ ಸಿಕ್ಕರೆ ಸಾಕು ಇಂಥಾ ಡೈಲಾಗ್ ಹೊಡ್ದು ಮನರಂಜನೆ ನೀಡ್ತಾರೆ. ಕಾವೇರಿಯಾಗಿ ಪ್ರಿಯಾ ಆಚಾರ್, ಅಗಸ್ತ್ಯನಾಗಿ ರಕ್ಷಿತ್ ಅರಸ್ ನಟಿಸುತ್ತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Star Suvarna (@starsuvarna)

click me!