ಕನ್ನಡತಿ ಸೀರಿಯಲ್ ಹೀರೋ ಕಿರಣ್ ರಾಜ್. ಅವರ ಬಳಿ ಇರುವ ಫೋನ್ ಯಾವುದಿರಬಹುದು, ಅದರೊಳಗೆ ಏನೇನೆಲ್ಲ ಇವೆ. ಯಾಕೆ ಒಂದೇ ಒಂದು ಸೆಲ್ಫಿನೂ ಇಲ್ಲ ಅನ್ನೋ ಗುಟ್ಟು ಇಲ್ಲಿದೆ. ಕುತೂಹಲ ಇದ್ರೆ ಈ ಸ್ಟೋರಿಯೊಳಗೆ ನೀವೂ ಇಣುಕಿ.
ಕನ್ನಡತಿ ಸೀರಿಯಲ್ ಕನ್ನಡ ಕಿರುತೆರೆ ಮೇಲೆ ಮಾಡಿರೋ ಇಂಪ್ಯಾಕ್ಟ್ (Impact) ಸಣ್ಣದಲ್ಲ. ಈ ಸೀರಿಯಲ್ (Serial) ಹೀರೋ ಹರ್ಷ ಅಂದರೆ ಕನ್ನಡ ಹುಡುಗೀರ ಅಚ್ಚುಮೆಚ್ಚು. ಈ ಪಾತ್ರ ಮಾಡುತ್ತಿರುವವರು ಕಿರಣ್ ರಾಜ್ (Kiran Raj)ಅಂತ ಬೇಸಿಕ್ ಡೀಟೇಲ್ ಕೊಟ್ಟರೆ ಹೆಚ್ಚಿನವರಿಗೆ ಸಿಟ್ಟು ಬರಬಹುದೇನೋ.. ಏಕೆಂದರೆ ಈ ಕಿರಣ್ ರಾಜ್ ಬಗ್ಗೆ ಪುಟ್ಟ ಮಗು ಕೇಳಿದರೂ ಹೇಳುತ್ತೆ. ನಟನೆಯಲ್ಲಿ ಸೈ ಅನಿಸಿಕೊಂಡಿರೋ ಕಿರಣ್ ಸೀರಿಯಲ್ ಮಾತ್ರ ಅಲ್ಲ ಅನೇಕ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಅವರಿಗೆ ದೊಡ್ಡ ಫ್ಯಾನ್ ಫಾಲೋವಿಂಗ್ (Fan following) ಇದೆ. ಅದರಲ್ಲಿ ಹುಡುಗೀರ ಸಂಖ್ಯೆ ಜಾಸ್ತಿ ಅನ್ನೋದೂ ಎಲ್ರಿಗೂ ಗೊತ್ತಿರೋ ಸಮಾಚಾರ. ಈಗ ಎಲ್ರಿಗೂ ಗೊತ್ತಿಲ್ಲದೇ ಇರುವ ಒಂದು ಸಮಾಚಾರ ಹೇಳ್ತೀವಿ. ಅದು ಕಿರಣ್ ರಾಜ್ ಅವರ ಫೋನ್‌ನೊಳಗೆ ಏನೆಲ್ಲ ಫೋಟೋಸ್ ಇವೆ, ಅವರ ಬಳಿ ಇರುವ ಫೋನ್ ಯಾವುದು, ಅವರ ಗ್ಯಾಜೆಟ್ (Gadgets)ಪ್ರೀತಿ ಎಂಥಾದ್ದು ಅನ್ನೋ ಡೀಟೇಲ್.
ಜೀ ಕನ್ನಡ ಡ್ಯಾನ್ಸ್ ಕರ್ನಾಟಕಕ್ಕೆ ಶಿವಣ್ಣ ಸಾರಥ್ಯ...ಬುಟ್ ಬುಡ್ತೀವಾ!
ಮೊದಲೇ ವಿಷ್ಯ ಕಿರಣ್ ರಾಜ್ ಅವರ ಬಳಿ ಇರೋ ಮೊಬೈಲ್ ಯಾವ್ದು ಅನ್ನೋ ಪ್ರಶ್ನೆಗೆ ಉತ್ತರ. ಕನ್ನಡತಿ ಹೀರೋ ಹರ್ಷ ಅಂದರೆ ಕಿರಣ್ ರಾಜ್ ಬಳಿ ಇರೋದು ಐಫೋನ್ 12 (iphone 12). 5ಜಿ ಸ್ಪೀಡ್‌ನ ಸ್ಮಾರ್ಟ್ ಫೋನ್ ಇದು. ಎ14 ಬಯೊನಿಕ್ ಅನ್ನೋ ಫಾಸ್ಟೆಸ್ಟ್ ಚಿಪ್ ಈ ಸ್ಮಾರ್ಟ್ ಫೋನ್‌ನಲ್ಲಿದೆ. ಹೀಗಾಗಿ ಬಹಳ ಫಾಸ್ಟಾಗಿ ವರ್ಕ್ ಆಗುತ್ತೆ. 6.1 ಇಂಚಿನ ಸ್ಕ್ರೀನ್ ಇದರಲ್ಲಿದೆ. 512 ಜಿಬಿವರೆಗೆ ಸ್ಟೋರೇಜ್ ಕೆಪ್ಯಾಸಿಟಿ ಇದೆ. ವೈರ್‌ಲೆಸ್ ಚಾರ್ಜಿಂಗ್ ಮೂಲಕ ಬೇಗ ಚಾರ್ಜ್ ಮಾಡಬಹುದು. ಈ ಫೋನ್ ಮಾರ್ಕೆಟ್‌ಗೆ ಬಂದಿದ್ದು ಎರಡು ವರ್ಷಗಳ ಕೆಳಗೆ. ಇವ್ರು ಈ ಫೋನ್ ತಗೊಂಡು ಎಷ್ಟು ಸಮಯ ಆಯ್ತು ಅನ್ನೋ ವಿಚಾರ ನಾವ್ ಕೇಳಲಿಲ್ಲ, ಅವರು ಹೇಳಲಿಲ್ಲ. ಮತ್ತೊಂದು ವಿಷ್ಯ ಅಂದರೆ ಇದು ನಾವ್ ಕೇಳಿದ್ದಲ್ಲ, ಆರ್ ಜೆ ರ್ಯಾಪಿಡ್ ರಶ್ಮಿ ಅವರ ಜೊತೆಗಿನ ಚಿಟ್‌ಚಾಟ್‌ನಲ್ಲಿ ಕಿರಣ್ ಅವರು ಹೇಳಿದ್ದು. ಇವರ ಫೋನ್ 256 ಜಿಬಿ ಸ್ಟೋರೇಜ್ (Storage)ಹೊಂದಿರುವಂಥಾದ್ದು.
ಕಿರಣ್ ಅವರು ಜಾಸ್ತಿ ಬಳಸೋ ಕೆಲವು ಆಪ್‌ಗಳಿವೆ. ಇನ್‌ಸ್ಟಾಗ್ರಾಮ್ (Instagram) ಬಹಳ ಯೂಸ್ ಮಾಡ್ತಾರೆ. ಅದೇ ಇವರ ಫೇವರಿಟ್ ಆಪ್ (App). ದಿನದಲ್ಲಿ ಅತೀ ಹೆಚ್ಚು ಗ್ಲಾನ್ಸ್ ಮಾಡೋದು, ಬಳಕೆ ಮಾಡೋದು ಇನ್‌ಸ್ಟಾಗ್ರಾಮ್‌ಅನ್ನೇ. ಹೆಚ್ಚಿನವರಿಗೆಲ್ಲ ಗೊತ್ತೇ ಇದೆ, ಸೀರಿಯಲ್‌ಗೆ ಬರೋ ಮುಂಚೆ ಕಿರಣ್ ಅವರು ಮಾಡೆಲಿಂಗ್ ಮಾಡ್ತಿದ್ರು. ಇವತ್ತು ಅವರದೇ ಬ್ರ್ಯಾಂಡ್‌ನ ಮೆನ್ಸ್‌ವೇರ್ ಆನ್‌ಲೈನ್ ಖರೀದಿಗೆ ಲಭ್ಯವಿದೆ. ಕೆಆರ್ ಬ್ರಾಂಡ್‌ನಲ್ಲಿ ಅವರ ಉಡುಪುಗಳನ್ನು ಯಾರ್ ಬೇಕಿದ್ರೂ ಖರೀದಿಸಬಹುದು. ಇನ್‌ಸ್ಟಾಗ್ರಾಂನಲ್ಲಿ ಫೋಟೋಸ್ ಅಪ್‌ಲೋಡ್ ಮಾಡೋದು ಇವರ ಫೇವರಿಟ್ ಹಾಬಿ. ಅದು ಬಿಟ್ಟರೆ ವಾಟ್ಸಾಪ್ (Watsapp) ಬಳಸ್ತಾರೆ. ವಾಟ್ಸಾಪ್ ಬಳಸೋದು ಎಷ್ಟು ಬೇಕೋ ಅಷ್ಟೇ. ವಾಟ್ಸ್ ಆಪ್ ನಲ್ಲಿ ಗಂಟೆಗಟ್ಟಲೆ ಚಾಟ್ ಮಾಡೋದೆಲ್ಲ ಇವರಿಗೆ ಇಷ್ಟ ಇಲ್ಲ. ಏನಾದ್ರೂ ಹೇಳ್ಬೇಕು ಅಂದರೆ ಕಾಲ್ ಮಾಡ್ತಾರೆ.
ಮಾರ್ಕೆಟ್ ಮಾಫಿಯಾ ಬಯಲಿಗೆಳೆಯಲು ಹೊರಟ 'ಕನ್ನಡತಿ' ನಟ ಕಿರಣ್ ರಾಜ್
ಇನ್ನೊಂದು ಮಜಾ ಸಂಗತಿ ಅಂದರೆ ಇವರ ಕಾಂಟ್ಯಾಕ್ಟ್ ಲೀಸ್ಟ್‌ನದು (Contact list). ಎಂಥಾ ಸಾಮಾನ್ಯ ಮನುಷ್ಯ ಆದ್ರೂ ಈ ಕಾಲದಲ್ಲಿ ಅವರ ಕಾಂಟ್ಯಾಕ್ಟ್ಸ್ ನಲ್ಲಿ ಮಿನಿಮಮ್ ನೂರೈವತ್ತು ಕಾಂಟ್ಯಾಕ್ಟ್ ನಂಬರ್‌ಗಳಾದ್ರೂ ಫೀಡ್ ಆಗಿರುತ್ತೆ. ಆದರೆ ನೀನು ನಂಬ್ತೀರೋ ಇಲ್ವೋ ಗೊತ್ತಿಲ್ಲ, ಕಿರಣ್ ಅವರ ಫೋನ್‌ನಲ್ಲಿರೋದು ಕೇವಲ 50 ಚಿಲ್ರೆ ಕಾಂಟ್ಯಾಕ್ಟ್ ನಂಬರ್‌ಗಳು!
ಕಿರಣ್ ಅವರು ಅವರ ಮೊದಲ ಫೋನ್ ಖರೀದಿಸಿದ್ದು ಕಾಲೇಜ್ ದಿನಗಳಲ್ಲಂತೆ. ಅವರ ಮೊದಲ ಮೊಬೈಲ್ ಮೋಟರೋಲಾ (Motorola). ಆಗ ಇವರು ಡಿಜೆ(Disc jockey) ಮಾಡ್ತಿದ್ರು. ಅದರಲ್ಲಿ ಬಂದಿರೋ ಹಣದಿಂದ ಈ ಫೋನ್ ತಗೊಂಡಿದ್ರು.
ದೀಪಿಕಾ ಲವ್ಸ್ ಆನಂದ್: ದೊರೆಸಾನಿ Serialನಲ್ಲಿ ಕಚಗುಳಿ ಇಡೋ ಪ್ರೀತಿ
ಇನ್ನೊಂದು ಹಿಲೇರಿಯಸ್ ಸಂಗತಿ ಇದೆ. ಕಿರಣ್ ಅವರ ವಯಸ್ಸಿನ ಹುಡುಗರು ಕ್ಷಣಕ್ಕೊಂದು ಸೆಲ್ಫಿ (Selfie) ತೆಗಿಯೋದು ಕಾಮನ್. ಕನ್ನಡತಿಯಲ್ಲಿ ಹರ್ಷ ಭುವಿ ಜೊತೆಗಾದ್ರೂ ಕೆಲವೊಮ್ಮೆ ಸೆಲ್ಫಿ ತಗೊಳ್ತಾನೆ. ಆದರೆ ಆ ಪಾತ್ರ ಮಾಡೋ ಕಿರಣ್ ಅವರ ಮೊಬೈಲ್‌ನಲ್ಲಿ ಒಂದೇ ಒಂದು ಸೆಲ್ಫಿನೂ ಇಲ್ಲ. ಎಷ್ಟು ಜಾಲಾಡಿದ್ರೂ ಒಂದೇ ಒಂದು ಸೆಲ್ಫಿ ಸಿಕ್ಕಿಲ್ಲ. ಅವರು ಹೊಡೆದ ಲೇಟೆಸ್ಟ್ ಫೋಟೋ ಅವರ ಒಂದು ವರ್ಷದ ನಾಯಿಯದ್ದು. ಪ್ರಿನ್ಸ್ (Prince) ಅನ್ನೋ ಹೆಸರಿನ ಅವರ ನಾಯಿ ಫೋಟೋಗೆ ಚಂದ ಫೋಸ್ ಕೊಡುತ್ತಂತೆ.