'ಅಣ್ಣಯ್ಯ' ಧಾರಾವಾಹಿ ನೋಡುಗರಿಗೆ ಶಿವು-ಪಾರು ಪ್ರೀತಿಯ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಇವರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಮೆಚ್ಚದವರಿಲ್ಲ. ಇತ್ತೀಚಿನ ಸಂಚಿಕೆಗಳಲ್ಲಿ ಪಾರು ಒಂದೊಂದೇ ರಹಸ್ಯಗಳನ್ನು ಕಂಡುಹಿಡಿಯುತ್ತಾ ಬಂದಿರುವುದನ್ನ ನೀವು ನೋಡಿರಬಹುದು. ಸದ್ಯಕ್ಕೆ ಶಿವುನ ತಾಯಿಯನ್ನ ಮಾದಪ್ಪಣ್ಣನ ಮನೆಗೆ ಹುಷಾರಾಗಿ ಕಳುಹಿಸಿಕೊಟ್ಟರೂ ಆಕೆಯೇ ತನ್ನ ಅತ್ತೆ ಎಂಬುದು ಪಾರುವಿಗೆ ಸದ್ಯಕ್ಕೆ ಗೊತ್ತಿಲ್ಲ. ಆದರೆ ಇದರ ಹಿಂದೆ ತನ್ನ ಅಪ್ಪ ವೀರಭದ್ರನ ಕೈವಾಡವಿದೆ ಎಂಬುದಂತೂ ಸ್ಪಷ್ಟವಾಗಿದೆ ಪಾರುಗೆ.
ಹಾಗೆಯೇ ಧಾರಾವಾಹಿಯಲ್ಲಿ ಈ ಹಿಂದೆ ಶಿವು ಸಾಮಾನ್ಯ ಹಳ್ಳಿ ಹೈದನಾಗಿರಲಿಲ್ಲ. ಹಿಂದಿನ ಇತಿಹಾಸ ಕೆದಕಿದರೆ ಆತ ರುದ್ರ ಎಂಬ ಹೆಸರಿನ ದೊಡ್ಡ ರೌಡಿಯಾಗಿದ್ದ ಎಂಬುದನ್ನ ತೋರಿಸಲಾಗಿದೆ. ಕೆಲವು ದಿನಗಳ ಹಿಂದೆ ತನ್ನ ಮೊದಲನೇಯ ತಂಗಿ ಸ್ನೇಹಿತೆ ಸಂಕಷ್ಟದಲ್ಲಿದ್ದಾಗ ಖುದ್ದಾಗಿ ಶಿವುನೇ ಹೋಗಿ ಆಕೆಗೆ ಸಹಾಯ ಮಾಡಿದ್ದ. ಆ ಸಮಯದಲ್ಲಿ ಶಿವುನನ್ನ ನೋಡಿದ ಇತರ ಪುಡಿ ರೌಡಿಗಳು ಅವನ ಮುಂದೆ ಮಂಡಿಯೂರಿ ಕುಳಿತಿದ್ದರು. ಹೀಗೆ ಆಗಾಗ ಶಿವುನ ಇನ್ನೊಂದು ಅವತಾರವನ್ನು ತೋರಿಸುತ್ತಲೇ ಬಂದಿದ್ದಾರೆ ನಿರ್ದೇಶಕರು.
ಆದರೆ ಇಲ್ಲಿ ಸಮಸ್ಯೆಯೆಂದರೆ ಶಿವುನ ಹಿಂದಿನ ಇತಿಹಾಸ ಪಾರುಗೆ ಗೊತ್ತಿಲ್ಲ. ತನ್ನ ಮಾವ ಅರ್ಥಾತ್ ಗಂಡ ಶಿವು ಹಳ್ಳಿ ಮುಗ್ಧ ಅಂತಲೇ ನಂಬಿದ್ದಾಳೆ. ಕೆಲವೊಂದು ಘಟನೆಗಳನ್ನ ನೋಡಿದಾಗ ಶಿವು ಮೇಲೆ ಅನುಮಾನ ಬಂದರೂ ಅದು ಹಾಗೆಯೇ ಮರೆಯಾಗಿ ಹೋಗುತ್ತಿದೆ. ಆದರೆ ಈ ಬಾರಿ ಶಿವು ಪಾರುನ ಕೈಲೀ ಸರಿಯಾಗಿಯೇ ಸಿಕ್ಕಿ ಹಾಕಿಕೊಂಡಿದ್ದಾನೆ. ಪಾರುವಿನ ಬಳಿ ಈ ವಿಷಯವನ್ನ ಮುಚ್ಚಿಡಬೇಕೆಂದು ಶಿವುಗೆ ಯಾವುದೇ ಇರಾದೆ ಇರದಿದ್ದರೂ, ಆಕೆ ಎಲ್ಲಿ ತನ್ನ ಕೈ ಬಿಟ್ಟು ಹೋಗುತ್ತಾಳೋ ಎಂಬ ಭಯದಿಂದ ಎಲ್ಲವನ್ನೂ ಮುಚ್ಚಿಟ್ಟಿದ್ದಾನೆ ಶಿವು.
ಆದರೆ ಮೊನ್ನೆ ಪಾರು ಕಾಪಾಡಿದ ಆ ಪುಟ್ಟ ಹುಡುಗನ ತಾಯಿಯಿಂದ ಅರ್ಧ ಸತ್ಯ ಪಾರುಗೆ ಗೊತ್ತಾಗಿದೆ. ಹೌದು. ಆ ಪುಟ್ಟ ಹುಡುಗನ ತಾಯಿಯ ಹೆಸರು ಕ್ಯಾತರಿನ್. ಆದರೆ ಹುಡುಗನ ಹೆಸರು ಶಿವು. ಅದು ಮಾರಿಗುಡಿ ಶಿವು ಎಂದು ಹೆಸರಿಡಲಾಗಿದೆ. ಅಷ್ಟೇ ಅಲ್ಲ, ಕ್ಯಾತರಿನ್ ಪ್ರತಿ ವರ್ಷ ಮಾರಿಗುಡಿಗೆ ಬಂದ ಪೂಜೆ ಮಾಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದಾಗ ಪಾರುಗೆ ಅನುಮಾನ ಬಂದು ಕ್ಯಾತರಿನ್‌ಗೆ ಏನಿದು ನಿಮ್ಮ ಹೆಸರು ಹೀಗಿದೆ. ದೇವಸ್ಥಾನಕ್ಕೆ ಬೇರೆ ಬಂದು ಹೋಗುತ್ತೀರಿ. ನಿಮ್ಮ ಮಗನಿಗೆ ಶಿವು ಎಂದು ಹೆಸರಿಟ್ಟೀದ್ದೀರಿ ಅಂದಾಗ. ಈ ಮಗು ಹುಟ್ಟಿಗೆ ಅವರೇ ಕಾರಣ ಎಂದು ಹೇಳಿದ್ದಾಳೆ. ಇದನ್ನು ಕೇಳಿ ಪಾರುಗೆ ಶಾಕ್ ಆಗಿ ಶಿವುನ ಬಾಯಿಯಿಂದ ಈ ಸತ್ಯವನ್ನ ಆಚೆ ತರಬೇಕು ಎಂದು ತೀರ್ಮಾನಿಸುತ್ತಾಳೆ. ಹೀಗೆ ಪತ್ರಿಕೆ ಓದುತ್ತಾ ಕ್ಯಾತರಿನ್ ಹೆಸರು ಹೇಳಿದಾಗ ಶಿವು ಗಾಬರಿಯಾಗುತ್ತಾನೆ. ಆಗ ಪಾರುಗೆ ಅನುಮಾನ ದಟ್ಟವಾಗುತ್ತದೆ.
ಇದೇ ಸಮಯಕ್ಕೆ ಪಾರುವಿನ ಅಪ್ಪ ವೀರಭದ್ರನಿಗೋಸ್ಕರ ಶಿವು ಹರಕೆ ಸಲ್ಲಿಸಲು ರೆಡಿಯಾಗಿದ್ದರಿಂದ ಪಾರು ಆ ವಿಚಾರವನ್ನ ಅಲ್ಲಿಗೆ ಸ್ಟಾಪ್ ಮಾಡಿ, ತನ್ನಪ್ಪನ ಕುತಂತ್ರದಿಂದ ಶಿವುನನ್ನು ಬಚಾವ್ ಮಾಡಲು ಮುಂದಾಗುತ್ತಾಳೆ. ಅಂದುಕೊಂಡಂತೆ ಪಾರು ಅಪ್ಪ ಸ್ಟ್ರೋಕ್ ಆಡುವ ಆಟಕ್ಕೆ ಫುಲ್ ಸ್ಟಾಪ್ ಹಾಕಿ, ಈಗ ಮತ್ತೆ ಶಿವುನ ಬಳಿ ಕ್ಯಾತರಿನ್ ಬಗ್ಗೆ ಬಾಯಿಬಿಡಿಸಲು ಹೊರಟ್ಟಿದ್ದಾಳೆ. ಶಿವು ಹೆದರುತ್ತಲೇ ಎಲ್ಲಾ ಸತ್ಯವನ್ನ ಹೇಳಲು ಹೊರಟ್ಟಿದ್ದಾನೆ. ಹಾಗಾಗಿ ಬುಧವಾರದ ಸಂಚಿಕೆಯಲ್ಲಿ ಕ್ಯಾತರಿನ್ ಜೊತೆಗಿರುವ ಮಗುಗೂ ತನಗೂ ಇರುವ ಸಂಬಂಧವೇನು ಎಂದು ಶಿವು ಹೇಳುವುದನ್ನ ನೀವು ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.