ಜೀ ಕನ್ನಡದ ಫಸ್ಟ್ ಸೀರಿಯಲ್ ಕರ್ಣ ಬಗ್ಗೆ ಭವ್ಯಾ ಗೌಡ ಹೇಳಿದ್ದೇನು?

Published : May 05, 2025, 11:29 AM ISTUpdated : May 05, 2025, 11:33 AM IST
ಜೀ ಕನ್ನಡದ ಫಸ್ಟ್ ಸೀರಿಯಲ್ ಕರ್ಣ ಬಗ್ಗೆ ಭವ್ಯಾ ಗೌಡ ಹೇಳಿದ್ದೇನು?

ಸಾರಾಂಶ

ಜೀ ಕನ್ನಡದಲ್ಲಿ "ಕರ್ಣ" ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಕಿರಣ್ ರಾಜ್ ಮತ್ತು ಭವ್ಯ ಗೌಡ ಜೋಡಿಯಾಗಿ ನಟಿಸಿರುವ ಈ ಸೀರಿಯಲ್‌ನ ಪ್ರೋಮೋಗಳು ಮತ್ತು ಹಾಡಿನ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಭವ್ಯಗೆ ಇದು ಜೀ ಕನ್ನಡದ ಮೊದಲ ಧಾರಾವಾಹಿ. "ಕನವರಿಸೋ ಹೆಸರೊಂದು" ಹಾಡು ಪ್ರೇಕ್ಷಕರ ಮನಗೆದ್ದಿದೆ. ಸೀರಿಯಲ್ ಒನ್ ಸೈಡ್ ಲವ್ ಸ್ಟೋರಿ ಎಂದು ಊಹಿಸಲಾಗಿದೆ.

ಸದ್ಯ ಸೀರಿಯಲ್ ಪ್ರೇಮಿಗಳು ನಿರೀಕ್ಷೆ ಮಾಡ್ತಿರುವ ಧಾರಾವಾಹಿ ಕರ್ಣ (Karna.) ಜೀ ಕನ್ನಡದಲ್ಲಿ ಬರಲಿರುವ ಕರ್ಣ ಸೀರಿಯಲ್ ಯಾವಾಗ ಪ್ರಸಾರವಾಗುತ್ತೆ ಎನ್ನುವ ಕಾತುರದಲ್ಲಿ ಫ್ಯಾನ್ಸ್ ಇದ್ದಾರೆ. ಕಿರಣ್ ರಾಜ್ (Kiran Raj) ಫ್ಯಾನ್ಸ್ ಹಾಗೂ ಭವ್ಯ ಗೌಡ ಅಭಿಮಾನಿಗಳು, ಕಿರು ತೆರೆಯಲ್ಲಿ ಈ ಕ್ಯೂಟ್ ಜೋಡಿ ಕಣ್ತುಂಬಿಕೊಳ್ಳಲು ಆಸಕ್ತರಾಗಿದ್ದಾರೆ. ಈಗಾಗಲೇ ಕರ್ಣ ಸೀರಿಯಲ್ ನ ಮೂರು ಪ್ರೋಮೋ ಬಿಡುಗಡೆಯಾಗಿದೆ. ಈಗ ಸೀರಿಯಲ್ ತಂಡ ಸಾಂಗ್ ಮೇಕಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದ್ರಲ್ಲಿ ಸೀರಿಯಲ್ ಬಗ್ಗೆ ಕಿರಣ್ ರಾಜ್ ಹಾಗೂ ಭವ್ಯ ಗೌಡ (bhavya gowda) ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಕನವರಿಸೋ ಹೆಸರೊಂದು ಎನ್ನುವ ಹಾಡಿನ ಪ್ರೋಮೋವನ್ನು ಎರಡು ದಿನಗಳ ಹಿಂದೆ ಜೀ ಕನ್ನಡ ಬಿಡುಗಡೆ ಮಾಡಿತ್ತು. ಸಾಂಗ್ ಪ್ರೋಮೋ (Song promo) ಸಿಕ್ಕಾಪಟ್ಟೆ ವೈರಲ್ ಆಗಿದೆ. ಫ್ಯಾನ್ಸ್ ಒಂದೇ ಪ್ರೋಮೋವನ್ನು ಹತ್ತಾರು ಬಾರಿ ವೀಕ್ಷಣೆ ಮಾಡಿದ್ದಾರೆ. ಇಬ್ಬರ ಜೋಡಿ ಸೂಪರ್, ನೋಡೋಕೆ ಕಾತುರರಾಗಿದ್ದೆವೆ ಎಂಬ ಕಮೆಂಟ್ ಸುರಿಮಳೆಯಾಗಿದೆ. ಪ್ರೋಮೋದಲ್ಲಿ ಇಬ್ಬರೂ ಸೂಪರ್ ಕ್ಯೂಟ್ ಆಗಿ ಕಾಣ್ತಾರೆ. ಈಗ ಆ ಸಾಂಗ್ ಮೇಕಿಂಗ್ ವಿಡಿಯೋವನ್ನು ಜೀ ಕನ್ನಡ ಪೋಸ್ಟ್ ಮಾಡಿದೆ. ಹೊಸತನದಲ್ಲಿ ಮೋಡಿ ಮಾಡೋಕೆ ಬರ್ತಿರೋ 'ಕರ್ಣ'ನ ಜರ್ನಿಯ ಸಾಂಗ್ ಮೇಕಿಂಗ್ ಸ್ಪೆಷಲ್. ಕರ್ಣ.ಅತೀ ಶೀಘ್ರದಲ್ಲಿ ಎಂದು ಶೀರ್ಷಿಕೆ ಹಾಕಲಾಗಿದೆ.ಹಾಡಿನ ಶೂಟಿಂಗ್ ಮುನ್ನ ತಂಡ ಹೇಗೆಲ್ಲ ತಯಾರಿ ನಡೆಸಿತ್ತು ಎಂಬುದನ್ನು ಈ ವಿಡಿಯೋದಲ್ಲಿ ನೋಡ್ಬಹುದು.  

ಭವ್ಯ ಗೌಡಗೆ ಝೀ ಕನ್ನಡದ ಮೊದಲ ಸೀರಿಯಲ್ ಇದು. ಗೀತಾ ಖ್ಯಾತಿ ನಂತ್ರ ಬಿಗ್ ಬಾಸ್ ಮನೆಗೆ ಹೋಗಿದ್ದ ಭವ್ಯ ಗೌಡರನ್ನು ವೀಕ್ಷಕರು ಇಷ್ಟಪಟ್ಟಿದ್ದರು. ಕಲರ್ಸ್ ಕನ್ನಡದಲ್ಲಿ ಮುದ್ದು ಸೊಸೆ ಸೀರಿಯಲ್ ಬರುತ್ತೆ ಎನ್ನುವ ವಿಷ್ಯ ತಿಳಿದಾಗ, ತ್ರಿವಿಕ್ರಮ್ ಗೆ ಭವ್ಯ ಜೋಡಿಯಾಗ್ಬೇಕು ಎನ್ನುವ ಬೇಡಿಕೆ ಕೇಳಿ ಬಂದಿತ್ತು. ಬಿಗ್ ಬಾಸ್ ನಂತ್ರ ಭವ್ಯ ಗೌಡ ಯಾವುದೇ ರಿಯಾಲಿಟಿ ಶೋ ಆಗ್ಲಿ, ಸೀರಿಯಲ್ ನಲ್ಲಾಗ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಭವ್ಯ ಮುಂದಿನ ಪ್ಲಾನ್ ಏನು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿತ್ತು. ಸೀರಿಯಲ್ ಬಗ್ಗೆ ಮಾತನಾಡಿರುವ  ಭವ್ಯ ಗೌಡ, ಕರ್ಣ ಸೀರಿಯಲ್ ನಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದೇನೆ ಎಂದಿದ್ದಾರೆ.  ಇನ್ಸ್ಟಾ ಕುಟುಂಬ ಕೂಡ, ಕರ್ಣ ಸೀರಿಯಲ್ ಬರ್ತಿದೆ ಎಂದಾಗ ಕಿರಣ್ ರಾಜ್ ಗೆ ಭವ್ಯ ಜೋಡಿಯಾಗ್ಬೇಕು ಎಂದಿದ್ದರು. ಅದನ್ನು ಕೂಡ ಇಲ್ಲಿ ಹೇಳಿರುವ ಭವ್ಯ ಗೌಡ, ಎಲ್ಲರೂ ಬೆಂಬಲ ನೀಡಿ ಅಂತ ವಿನಂತಿ ಮಾಡ್ಕೊಂಡಿದ್ದಾರೆ.  

ಕರ್ಣ ಸೀರಿಯಲ್ ನಲ್ಲೂ ಕಿರಣ್ ರಾಜ್ ಗೆ ಕನ್ನಡತಿ ರಂಜನಿ ರಾಘವನ್ ಜೋಡಿಯಾಗ್ತಾರೆ ಎನ್ನುವ ಮಾತಿತ್ತು. ಈಗ ಭವ್ಯ ಗೌಡ ಹೀರೋಯಿನ್ ಅನ್ನೋದು ಸ್ಪಷ್ಟವಾಗಿದೆ. ಆದ್ರೆ ನಮ್ರತಾ ಕೂಡ ಸೀರಿಯಲ್ ನಲ್ಲಿದ್ದಾರೆ ಎನ್ನುವ ಸುದ್ದಿ ಇದ್ದು, ಈವರೆಗೂ ಅದ್ರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಕರ್ಣ ಸೀರಿಯಲ್ ನ ಮೂರು ಪ್ರೋಮೋ ಈವರೆಗೆ ಪೋಸ್ಟ್ ಆಗಿದೆ. ಕರ್ಣನ ಕುಟುಂಬವನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಸಾಂಗ್ ನೋಡಿದ್ರೆ ಇದು ಒನ್ ಸೈಡ್ ಲವ್ ಸ್ಟೋರಿ ಅನ್ನೋದು ಕೂಡ ಸ್ಪಷ್ಟವಾಗ್ತಿದೆ. ಸೀರಿಯಲ್ ಯಾವ ದಿಕ್ಕಿನಲ್ಲಿ ಸಾಗುತ್ತೆ? ಅಭಿಮಾನಿಗಳು ಹಿಡಿದಿಡಲು ಯಶಸ್ವಿಯಾಗುತ್ತಾ? ಯಾವಾಗಿನಿಂದ ಸೀರಿಯಲ್ ಶುರುವಾಗೋದು ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪತ್ನಿ, ಮಗಳ ಜೊತೆ ಹೋಗಿ ಮನೆಗೆ ಹೊಸ ಕಾರ್‌ ತಂದ Amruthadhaare Serial ನಟ ರಾಜೇಶ್‌ ನಟರಂಗ!
BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ