ಭೂತ ಅಪ್ಪ-ಅಮ್ಮನನ್ನು ಏನಂತ ಕರೀತಾರೆ? ವೈಷ್ಣವಿ ಪ್ರಶ್ನೆಗೆ ಸೀತಾರಾಮ ತಂಡ ಫುಲ್​ ಸುಸ್ತು!

Published : Jul 29, 2024, 01:45 PM IST
ಭೂತ ಅಪ್ಪ-ಅಮ್ಮನನ್ನು ಏನಂತ ಕರೀತಾರೆ? ವೈಷ್ಣವಿ ಪ್ರಶ್ನೆಗೆ ಸೀತಾರಾಮ ತಂಡ ಫುಲ್​ ಸುಸ್ತು!

ಸಾರಾಂಶ

ಸೀತಾರಾಮ ಸೀರಿಯಲ್‌ ಸೀತಾ ಅಂದ್ರೆ ವೈಷ್ಣವಿ ಗೌಡ ಅವರು ಸೀತಾರಾಮ ಟೀಂಗೆ ಪ್ರಶ್ನೆ ಕೇಳಿದ್ದಾರೆ. ಅವರು ಕೇಳಿದ ಪ್ರಶ್ನೆಗೆ ನಿಮ್ಗೆ ಉತ್ತರ ಗೊತ್ತಾ?  

ಸೀತಾ ರಾಮ ಕಲ್ಯಾಣ ನಿರ್ವಿಘ್ನವಾಗಿ ನೆರವೇರಿದ್ದು, ಸೀತಾ ಮತ್ತು ರಾಮ ಇಬ್ಬರೂ ಮದುವೆಯನ್ನು ಎಂಜಾಯ್​ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಹಲವಾರು ವಿಡಿಯೋ ಶೇರ್​ ಮಾಡುತ್ತಾರೆ.  ಟೈಂ ಸಿಕ್ಕಾಗಲೆಲ್ಲಾ  ಸೀತಾರಾಮ ಟೀಂನ ಪಾತ್ರಧಾರಿಗಳ ಜೊತೆ ಎಂಜಾಯ್​ ಮಾಡುತ್ತಾರೆ. ಬಿಜಿ ಷೆಡ್ಯೂಲ್​ ನಡುವೆ ಒಂದಿಷ್ಟು ರಿಲ್ಯಾಕ್ಸ್​  ಮೂಡಿಗೆ ಬರುತ್ತದೆ ಟೀಂ. 

ಇದೀಗ ವೈಷ್ಣವಿ ಅವರು  ರಾಮ್​  ಪಾತ್ರಧಾರಿ ಗಗನ್​ ಹಾಗೂ ಸಿಹಿ ಪಾತ್ರಧಾರಿ ರಿತು ಸಿಂಗ್‌ ಸೇರಿದಂತೆ ಚಿಕ್ಕಿ ಎಲ್ಲರೂ ಇರುವ ಸೀತಾರಾಮ ಟೀಂಗೆ ಒಂದು ಪ್ರಶ್ನೆ ಕೇಳಿದ್ದಾರೆ. ಅದೇನೆಂದರೆ,  ಭೂತ ಅಪ್ಪ-ಅಮ್ಮನನ್ನು ಏನಂತ ಕರೀತಾರೆ ಎಂದು. ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ಕೊಟ್ಟಿದ್ದಾರೆ. ಆದರೆ ಯಾವುದಕ್ಕೂ ವೈಷ್ಣವಿ ಅಲ್ಲ ಎಂದು ಹೇಳಿದ್ದಾರೆ. ಕೊನೆಗೆ ಅವರು ಹೇಳಿದ್ದ ಉತ್ತರ ಏನು ಗೊತ್ತಾ? ಟ್ರಾನ್ಸ್​ಪರೆಂಟ್ಸ್​ (transparent), ದೆವ್ವ ಸುಲಭದಲ್ಲಿ ಯಾರ ಕಣ್ಣಿಗೂ ಕಾಣಿಸುವುದಿಲ್ಲ, ಅದಕ್ಕಾಗಿ ಅದು ಪಾರದರ್ಶಕವಾಗಿರುತ್ತದೆ, ಮತ್ತು ಈ ಶಬ್ದದಲ್ಲಿ ಪೇರೆಂಟ್ಸ್​ ಎಂದೂ ಇದೆ. ಇದೇ ಕಾರಣಕ್ಕೆ ನಟಿ ಈ ಉತ್ತರ ಹೇಳಿದ್ದಾರೆ. ಇದನ್ನು ಕೇಳಿ ಒಬ್ಬೊಬ್ಬರು ಒಂದೊಂದು ರೀತಿ ರಿಯಾಕ್ಷನ್​ ಕೊಟ್ಟಿದ್ದಾರೆ!

ದುಬಾರಿ ಡ್ರೆಸ್​ ಮೇಲೆ ಜ್ಯೂಸ್​: ಸಾರಾ ಅಲಿಗೆ ವಿಮಾನ ಮಾರಲು ಮುಂದಾದ ಪೈಲೆಟ್​! ಚಿನ್ನ ಕೊಟ್ಟ ಗಗನಸಖಿ- ಏನಿದು?

ಇದಕ್ಕೂ ಮುನ್ನ ವೈಷ್ಣವಿ ಅವರು,  ಕೋಳಿಯ ಅಪ್ಪ ಯಾರು ಎಂದು ಪ್ರಶ್ನೆ ಕೇಳಿದ್ದರು.  ಇದನ್ನು ಕೇಳಿದ ರಾಮ್‌, ಇವೆಲ್ಲಾ ನಿಮಗೆ ಎಲ್ಲಿ ಸಿಗುತ್ತೆ ಎಂದು ಪ್ರಶ್ನಿಸಿದ್ದರು.  ಇವೆಲ್ಲಾ ಜೋಕ್‌ ಎನ್ನುತ್ತಲೇ ವೈಷ್ಣವಿ ಉತ್ತರ ಹೇಳಿ ಅಂದಿದ್ದಾರೆ. ತನಗೆ ಗೊತ್ತಿಲ್ಲ ಎಂದು ರಾಮ್‌ ಹೇಳಿದರೆ, ನಿಮಗೆ ಕೋಳಿಯ ಅಮ್ಮ ಬೇಕೋ, ಅಪ್ಪ ಬೇಕೋ ಎಂದು ಸಿಹಿ ಕೇಳಿದ್ದಾಳೆ. ಒಟ್ಟಿನಲ್ಲಿ ಈ ಪ್ರಶ್ನೆ ಎಲ್ಲರ ತಲೆ ಕೆಡಿಸಿತ್ತು. ಕೊನೆಗೆ  ಅದ್ಯಾವುದೂ ಸರಿಯಲ್ಲ ಎಂದು ವೈಷ್ಣವಿ ಹೇಳಿದ್ದರು.  ಕೊನೆಯಲ್ಲಿ ಉತ್ತರಿಸಿದ್ದ ಅವರು, ವೈಷ್ಣವಿ,  ಕೋಳಿಯ ಅಪ್ಪ ಚಿಕನ್‌ ಕಾ ಬಾಪ್‌ ಎಂದಿದ್ದರು! ಇದನ್ನು ಕೇಳಿ ನೆಟ್ಟಿಗರು,  ಇದೇನು ಉತ್ತರನಾ? ಅರ್ಥವೇ ಇಲ್ಲ ಎಂದು ಕೆಲವರು ಹೇಳಿದರೆ, ಚೆನ್ನಾಗಿದೆ ಉತ್ತರ ಎಂದು ಮತ್ತೆ ಕೆಲವರು ಹೇಳಿದ್ದರು.  


ಈ ಹಿಂದೆಯೇ ವೈಷ್ಣವಿ ಪ್ರಶ್ನೆ ಕೇಳಿ ಟ್ರೋಲ್​ಗೆ ಒಳಗಾಗಿದ್ದರು.  ಇದಕ್ಕೆ ಕಾರಣ, ಪ್ರಶ್ನೆಗೂ ಉತ್ತರಕ್ಕೂ ತಾಳಮೇಳ ಇಲ್ಲ ಎನ್ನುವುದು.  ಅಷ್ಟಕ್ಕೂ ಸೀತಾ ಅರ್ಥಾತ್‌ ವೈಷ್ಣವಿ ಅವರು ರಾಮ್‌ ಅಂದರೆ ಗಗನ್‌ ಅವರಿಗೆ ಕೇಳಿದ ಪ್ರಶ್ನೆ ಏನೆಂದರೆ, ಗಿಡ ಬೆಳೆಯದ ಕಾಡು ಯಾವುದು ಎನ್ನುವುದು. ಇದಕ್ಕೆ ತಲೆ ಕೆಡಿಸಿಕೊಂಡ ರಾಮ್‌ ಬಾಲ್ಕನಿ ಸೇರಿದಂತೆ ಕೆಲವು ಉತ್ತರ ಕೊಟ್ಟಿದ್ದರು. ಅಲ್ಲಿದ್ದ ಸೀತಾರಾಮ ಸಿಬ್ಬಂದಿ ಕೂಡ ಇದಕ್ಕೆ ಉತ್ತರ ಹೇಳುವಲ್ಲಿ ವಿಫಲರಾಗಿದ್ದರು. ಕೊನೆಗೆ ಇದಕ್ಕೆ ಉತ್ತರ ಹೇಳಿದ ಸೀತಾ, ಅದು ಸಿಮ್‌ ಕಾರ್ಡ್‌ ಎಂದಿದ್ದರು. ಇದಕ್ಕೇ ಸಕತ್‌ ಟ್ರೋಲ್‌ ಆದರು. ಉತ್ತರ ಏನೆಂದು ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳು ಉತ್ತರ ಕೇಳಿ ಥೂ ಎಂದಿದ್ದರು. ಕಾಡಿಗೂ ಕಾರ್ಡಿಗೂ ವ್ಯತ್ಯಾಸ ಇಲ್ವಾ ಎನ್ನುವುದು ನೆಟ್ಟಿಗರ ಪ್ರಶ್ನೆಯಾಗಿತ್ತು. ಈಗಲೂ ಈ ಪ್ರಶ್ನೆಗೆ ಅರ್ಥವಿಲ್ಲದ ಉತ್ತರ ಎಂದು ಹೇಳುತ್ತಿದ್ದಾರೆ. 

ಸೆಕ್ಸ್ ಕುರಿತು ಮಾತನಾಡಿದ್ದ 'ಕಿರಾತಕ' ಬೆಡಗಿ ಫುಲ್​ ಟೈಟಾಗಿ ಯುವಕರಿಗೆ ಬಿಟ್ಟಿ ಸಲಹೆ ಕೊಟ್ಟಿದ್ದು ಹೀಗೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?