ನಟಿ ನಿವೇದಿತಾ ಗೌಡಗೆ ಮದ್ವೆ ಆದ್ಮೇಲೆ ಹೋಗ್ಲಿ, ಡಿವೋರ್ಸ್ ಆದ್ಮೇಲಾದ್ರು ಬುದ್ಧಿ ಕಲಿರಿ.. ಎಂದ ಅಭಿಮಾನಿ!

By Sathish Kumar KH  |  First Published Jul 28, 2024, 8:05 PM IST

ನಟಿ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ತುಂಡುಡುಗೆ ತೊಟ್ಟು ರೀಲ್ಸ್ ಮಾಡಿ ಫೋಟೋ ಹಂಚಿಕೊಂಡರೆ, ನಿಮಗೆ ಮದ್ವೆ ಆದಮೇಲೆ ಹೋಗ್ಲಿ, ಡಿವೋರ್ಸ್ ಆದಮೇಲಾದ್ರೂ ಬುದ್ಧಿ ಕಲೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.


ಬೆಂಗಳೂರು (ಜು.28): ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಾಗೂ ನಟಿ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ತುಂಡುಡುಗೆ ತೊಟ್ಟು ರೀಲ್ಸ್ ಮಾಡಿ ಫೋಟೋ ಹಂಚಿಕೊಂಡರೆ, ನಿಮಗೆ ಮದ್ವೆ ಆದಮೇಲೆ ಹೋಗ್ಲಿ, ಡಿವೋರ್ಸ್ ಆದಮೇಲಾದ್ರೂ ಬುದ್ಧಿ ಕಲೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ನಟಿ ನಿವೇದಿತಾ ಗೌಡ ಅವರು ರ್ಯಾಪರ್ ಚಂದನ್‌ಶೆಟ್ಟಿ ಅವರೊಂದಿಗೆ ಡಿವೋರ್ಸ್ ಪಡೆದ ನಂತರ ವಾರಕ್ಕೆ ಮೂರ್ನಾಲ್ಕು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಅಂದರೆ, ತಮ್ಮ ಅಭಿಮಾನಿಗಳ ನಾಡಿಮಿಡಿತದ ಬಗ್ಗೆ ಅರಿತಿರುವ ನಿವೇದಿತಾ ಗೌಡ ಆಗಿಂದಾಗ್ಗೆ ತಮ್ಮ ರೀಲ್ಸ್ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳನ್ನು ಕಾಪಿಟ್ಟುಕೊಳ್ಳುತ್ತಿದ್ದಾರೆ. ಆದರೆ, ರ್ಯಾಪರ್ ಚಂದನ್ ಶೆಟ್ಟಿಯನ್ನು ಮದುವೆ ಮಾಡಿಕೊಂಡ ನಂತರ  ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಎಂದು ಖ್ಯಾತಿ ಪಡೆದಿದ್ದ ಇವರು ಡಿವೋರ್ಸ್ ಆದ ನಂತರ ಕೆಲವು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

Tap to resize

Latest Videos

ನಿವೇದಿತಾ ಗೌಡ ನಿನ್ನ ವೈಯಾರ, ನಿನ್ನ ಸ್ವಭಾವ ನೋಡಿದ್ರೆ ವಾಕರಿಕೆ ಬರುತ್ತೆ.. ಎಂದ ನೆಟ್ಟಿಗರು!

ಹೀಗಾಗಿ, ನಿವೇದಿತಾ ಗೌಡ ಅವರ ಪ್ರತಿ ರೀಲ್ಸ್ ಹಾಗೂ ಪೋಸ್ಟ್‌ಗೂ ಕೆಲವು ಕೆಟ್ಟದಾಗಿ ಕಾಮೆಂಟ್‌ಗಳು ಬರುತ್ತಿವೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿವೇದಿತಾ ಗೌಡ ತಮ್ಮಷ್ಟಕ್ಕೆ ತಾವು ಖುಷಿ ಖುಷಿಯಿಂದ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ತಮ್ಮ ಸಾಮಾಜಿಕ ಜಾಲತಾಣದಿಂದಲೂ ನಟಿ ನಿವೇದಿತಾ ಗೌಡ ಆದಾಯ ಗಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜರನು ಕೆಟ್ಟದ್ದೋ ಅಥವಾ ಒಳ್ಳೆಯದ್ದೋ ಕಾಮೆಂಟ್ ಮಾಡುತ್ತಾ ತಮ್ಮ ಪೋಸ್ಟ್ ಅನ್ನು ವೀಕ್ಷಣೆ ಮಾಡಿ ಲೈಕ್ ಮಾಡಿದರೆ ಸಾಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ.

ಚಂದನ್ ಶೆಟ್ಟಿ - ನಿವೇದಿತಾ ಗೌಡ ದಾಂಪತ್ಯದಿಂದ ದೂರವಾಗಿ ತಿಂಗಳು ಕಳೆದಿದೆ. ಸ್ವತಃ ದಂಪತಿಯೇ ದೂರವಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಇಬ್ಬರ ಮೇಲಿನ ಕೋಪವನ್ನು ಮಾತ್ರ ಮರೆಯುತ್ತಿಲ್ಲ. ಟಿಕ್‌ಟಾಕ್ ಮಾಡತ್ತಿದ್ದಾಗ ಮಾರುದ್ದ ಜಡೆ, ತೆಳ್ಳಗಿನ ಮೈಕಟ್ಟು, ದಂತದ ಗೊಂಬೆಯಂತೆ ತಿದ್ದಿ ತೀಡಿ ಆರ್ಡರ್ ಕೊಟ್ಟು ಮಾಡಿಸಿದಂತಹ ಸುಂದರಿ ಆಗಿದ್ದ ನಿವೇದಿತಾ ಗೌಡ ಅಷ್ಟೇ ಮುಗ್ದೆಯೂ ಆಗಿದ್ದಳು. ನಿವೇದಿತಾ ಗೌಡ ವಿಡಿಯೋ ಮಾಡಿ ಶೇರ್ ಮಾಡಿದರೆ ಲಕ್ಷಾಂತರ ಜನರು ನೋಡಿ ಲೈಕ್ ಮಾಡುತ್ತಿದ್ದರು. ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಾ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು. ತಮ್ಮ ಖ್ಯಾತಿಯಿಂದ ಬಿಗ್‌ಬಾಸ್ ಮನೆಗೆ ಕಾಲಿಟ್ಟರು. ಅಲ್ಲಿಗೆ ನಿವೇದಿತಾ ಗೌಡ ನಸೀಬು ಬದಲಾಗಿತ್ತು.

ಬೆಡ್ ರೂಮ್ ವಿಡಿಯೋ ಹಂಚಿಕೊಂಡ ನಿವೇದಿತಾ ಗೌಡ; ಇದಕ್ಕಂತಲೇ ಡಿವೋರ್ಸ್ ಕೊಟ್ಟಿದ್ದಾ ಎಂದ ಚಂದನ್ ಫ್ಯಾನ್ಸ್

ಬಿಗ್‌ಬಾಸ್ ಮನೆಗೆ ಹೋಗಿದ್ದ ನಿವೇದಿತಾ ಗೌಡ ಮತ್ತು ಕೋ ಪಾರ್ಟಿಸಿಪೇಟ್ ಚಂದನ್‌ ಶೆಟ್ಟಿ ಅವರೊಂದಿಗೆ ಲವ್‌ನಲ್ಲಿ ಬಿದ್ದಿದ್ದಾರೆ. ಇನ್ನು ಬಿಗ್‌ಬಾಸ್ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆಯೇ ಒಟ್ಟಿಗೆ ಕಾಣಿಸಿಕೊಂಡು ಪ್ರೀತಿಯಲ್ಲಿ ಬಿದ್ದಿರುವುದನ್ನು ಹೊರಗೆಡವಿದ್ದಾರೆ. ಇದಾದ ನಂತರ ಮೈಸೂರು ದಸರಾ ಮಹೋತ್ಸವದಲ್ಲಿ ಇಬ್ಬರೂ ಪ್ರೇಮ ನಿವೇದನೆ ಮಾಡಿಕೊಂಡು, ಮನೆಯವರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆಯಾಗಿ ಕೆಲ ವರ್ಷ ಸಂಸಾರವನ್ನೂ ಮಾಡಿದ್ದಾರೆ. ಈ ಜೋಡಿ ಮೇಲೆ ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ, ಈಗ ಇಬ್ಬರೂ ಡಿವೋರ್ಸ್ ಪಡೆದು ಬೇರೆ ಬೇರೆ ಆಗಿದ್ದಾರೆ.

click me!