ಹಿಟ್ಲರ್ ಕಲ್ಯಾಣದ ಅಂತರಾ ಪಾತ್ರಧಾರಿ ರಜನಿ WANTED ಎಂಬ ಬೋರ್ಡ್ ಹಾಕಲಾಗಿದೆ. ಏನಿದು ಜಾಹೀರಾತು? ಇದರ ಹಿಂದಿರೋ ಅಸಲಿಯತ್ತೇನು?
ಜಿ ಟಿವಿಯಲ್ಲಿ ಪ್ರಸಾರ ಆಗ್ತಿದ್ದ ಹಿಟ್ಲರ್ ಕಲ್ಯಾಣ ಸೀರಿಯಲ್ ಮುಗಿದು ತಿಂಗಳುಗಳೇ ಆಗಿವೆ. ಆದರೆ ಅದರಲ್ಲಿ ನಟಿಸಿರುವ ನಟ-ನಟಿಯರನ್ನು ಇನ್ನೂ ಅಭಿಮಾನಿಗಳು ಮರೆತಿಲ್ಲ. ಅದರಲ್ಲಿಯೂ ಡಬಲ್ ಷೇಡ್ನಲ್ಲಿ ಕಾಣಿಸಿಕೊಂಡವರು ನಟಿ ರಜನಿ. ಎಜೆ ಮೊದಲ ಪತ್ನಿ ಅಂತರಾ ಆಗಿ ಕೊನೆಗೆ ವಿಲನ್ ಪ್ರಾರ್ಥನಾ ಆಗಿ ಕಾಣಿಸಿಕೊಂಡ ರಜನಿ ನೆಗೆಟಿವ್ ಷೇಡ್ನಿಂದಲೇ ಎಲ್ಲರ ಮನ ಗೆದ್ದವರು. ಒಬ್ಬರೇ ವ್ಯಕ್ತಿ ಒಮ್ಮೆ ಅತಿ ಒಳ್ಳೆಯವರಂತೆ, ಇನ್ನೊಮ್ಮೆ ಅತಿ ಕೆಟ್ಟವರಂತೆ ಆ್ಯಕ್ಟಿಂಗ್ ಮಾಡುವುದು ತುಸು ಕಷ್ಟವೇ. ಇಂಥ ಕಲೆ ಕೆಲವರಿಗೆ ಮಾತ್ರ ಕರಗತವಾಗಿರುತ್ತದೆ. ಅಂಥವರಲ್ಲಿ ಒಬ್ಬರು ರಜನಿ. ಮೊದಲಿಗೆ ಸೌಮ್ಯ ರೂಪದ ಅಂತರಾಳ ರೂಪವನ್ನೇ ಪಡೆದಿರುವ ವಿಲನ್ ಪ್ರಾರ್ಥನಾ ತಾನೇ ಅಂತರಾ ಎಂದುಕೊಂಡು ಮನೆಯವರನ್ನು ನಂಬಿಸಿದ್ದಳು. ಕೊನೆಗೂ ಸಿಕ್ಕಿಬಿದ್ದಳೆನ್ನಿ. ಅದೇನೆ ಇದ್ದರೂ ಅಂತರಾ ಹಾಗೂ ಪ್ರಾರ್ಥನಾ ಪಾತ್ರಕ್ಕೆ ಜೀವ ತುಂಬಿರುವ ನಟಿ ರಜನಿ.
ಇದೀಗ ಅವರ ಫೋಟೋ ಬೇಕಾಗಿದ್ದಾರೆ (Wanted) ಎಂಬ ಫಲಕದೊಂದಿಗೆ ರೋಡ್ನಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋ ಅನ್ನು ಖುದ್ದು ರಜನಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಹೀಗೆ ಪೋಸ್ಟ್ ಮಾಡಿದವರು ಅವರ ಜಿಮ್ ಟ್ರೇನರ್. ಈ ವಿಡಿಯೋದಲ್ಲಿ ರಜನಿ ಅವರು ಸಕತ್ ವರ್ಕ್ಔಟ್ ಮಾಡುವುದನ್ನು ನೋಡಬಹುದು. ಆಗ ಅವರ ಜಿಮ್ ಟ್ರೇನರ್ ಜೊತೆ ಒಂದು ಮಾತು... ನನಗೆ ಗೊತ್ತು... ಅದಲ್ಲ... ಇನ್ನೇನು... ಹಾಡಿಗೆ ರೀಲ್ಸ್ ಮಾಡಿದಾರೆ. ಕೊನೆಗೆ ಬಳಿಯಲಿ ಬಂದರೆ ಹೇಳುವೆ ಎಂದು ಜಿಮ್ ಟ್ರೇನರ್ ಹೇಳಿದಾಗ ರಜನಿ ಬಳಿಗೆ ಹೋಗಿದ್ದಾರೆ. ಆಗ ಟ್ರೇನರ್ ಅವರಿಗೆ ಸಕತ್ ವರ್ಕ್ಔಟ್ ಮಾಡಲು ಕೊಟ್ಟಿದ್ದಾರೆ. ಇರೋ ಬರೋ ಎಲ್ಲಾ ವರ್ಕ್ಔಟ್ ಮಾಡಿದ ಬಳಿಕ ರಜನಿ ಅವರು, ನಾನೇನಾದ್ರೂ ಪಾನಿಪುರಿ ತಿಂದದ್ದು ಇವ್ರಿಗೆ ಗೊತ್ತಾಗಿ ಹೋಯ್ತಾ ಎಂದು ಪ್ರಶ್ನಿಸಿಕೊಂಡಿದ್ದಾರೆ... ಹೀಗೆ ಸಾಗುವ ರಜನಿ ಅವರ ರೀಲ್ಸ್ ಪಾನಿಪುರಿ ಅಂಗಡಿಯವರೆಗೆ ಮುಂದುವರೆಯುತ್ತದೆ.
ಸೀರಿಯಲ್ ಶೂಟಿಂಗ್ನಲ್ಲಿ ಹೀಗಿರತ್ತೆ ರೊಮಾನ್ಸ್! ತಬ್ಬಿಕೊಂಡ ನಟ-ನಟಿಯನ್ನು ಎಬ್ಬಿಸಲು ಹರಸಾಹಸ
ಕೊನೆಗೆ ಅವರು ಪಾನಿಪುರಿ ತಿನ್ನುವ ಅಂಗಡಿಯ ಎದುರು wanted ಬೋರ್ಡ್ ಕಾಣಿಸುತ್ತದೆ. ಅದರಲ್ಲಿ ರಜನಿ ಅವರ ಫೋಟೋ ಇದೆ. ಅದರ ಮೇಲೆ ಇವರು ಇಲ್ಲೇನಾದರೂ ತಿಂಡಿ ತಿನ್ನುವುದು ಕಂಡರೆ ಈ ನಂಬರ್ಗೆ ಕರೆ ಮಾಡಿ ಎಂದು ಅಲ್ಲಿ 123456789 ಎಂಬ ನಂಬರ್ ಹಾಕಲಾಗಿದೆ. ತಮಾಷೆಯ ವಿಡಿಯೋ ಶೇರ್ ಮಾಡಿರುವ ರಜನಿ ಅವರು, ದಯವಿಟ್ಟು ಯಾರು ನಾನು ತಿನ್ನೋದನ್ನ video ಮಾಡಿ ಕಳಿಸಬೇಡಿ ಎಂದು ಹೇಳಿದ್ದಾರೆ. ನೆಟ್ಟಿಗರು ರಜನಿ ಮತ್ತು ಟ್ರೇನರ್ ಬಾಂಡಿಂಗ್ಗೆ ಖುಷಿ ಪಟ್ಟುಕೊಂಡಿದ್ದಾರೆ. ನೀವು ಸೂಪರ್ ಮೇಡಂ ಎನ್ನುತ್ತಿದ್ದಾರೆ. ಖಂಡಿತ ನಾವು ಈ ನಂಬರ್ಗೆ ಕಾಲ್ ಮಾಡ್ತೇವೆ ಎಂದು ಕೆಲವರು ನಟಿಯ ಕಾಲೆಳೆದಿದ್ದಾರೆ.
ಅಂದಹಾಗೆ ರಜನಿ ಕುರಿತು ಹೇಳುವುದಾದರೆ, ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ರಜನಿ, ನಂತರ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದರು. ಸೋಶಿಯಲ್ ಮೀಡಿಯಾದಲ್ಲೂ ನಟಿ ಸದಾ ಆಕ್ಟೀವ್ ಆಗಿರುತ್ತಾರೆ. ಯಾವಾಗಲೂ ರೀಲ್ಸ್ ಮಾಡುತ್ತಾ, ಅಥವಾ ಫೋಟೋ ಶೂಟ್ ಮಾಡಿಸಿ ಶೇರ್ ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ನಟಿ ಮೈಚಳಿ ಬಿಟ್ಟು ಇದೀಗ ಸ್ವಾತಿ ಮುತ್ತಿನ ಮಳೆ ಹನಿಯೇಗೆ ಡ್ಯಾನ್ಸ್ ಮಾಡಿದ್ದು, ಅದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಕೊನೆಗೆ ಸ್ಲಿಟ್ ಡ್ರೆಸ್ನಲ್ಲಿ ಸುಂದರ ಕಾಲಿನಪ್ರದರ್ಶನ ಮಾಡುತ್ತಾ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇವರು ವಿಡಿಯೋ ಶೇರ್ ಮಾಡಿದಾಗಲೆಲ್ಲಾ ಇವರ ಕಾಲಿನ ಮೇಲೆ ನೆಟ್ಟಿಗರ ಕಣ್ಣು ಹೋಗಿರುತ್ತದೆ. ಈಗಲೂ ಕಾಲು ಸೂಪರ್ ಎಂದು ಕೆಲವರು ಹೇಳಿದ್ದಾರೆ.
‘ಸೀರೆಯ ಸೆರಗು ಕೆಳಕ್ಕೆ ಬಿದ್ದ ತಕ್ಷಣ ಓಡೋಡಿ ಬರೋ ಸಿಬ್ಬಂದಿ! ಶ್ವೇತಾ ತಿವಾರಿ ವಿಡಿಯೋ ಸಕತ್ ಟ್ರೋಲ್