Super Queen ಬೇಕರಿ- ಪ್ರಿಂಟಿಂಗ್‌ ಪ್ರೆಸಲ್ಲಿ ಕೆಲ್ಸ ಮಾಡಿದ ನಿರೂಪಕಿ ಹೇಮಲತಾ; ಭಾವುಕ ಮಾತು!

Published : Nov 22, 2022, 12:09 PM IST
Super Queen ಬೇಕರಿ- ಪ್ರಿಂಟಿಂಗ್‌ ಪ್ರೆಸಲ್ಲಿ ಕೆಲ್ಸ ಮಾಡಿದ ನಿರೂಪಕಿ ಹೇಮಲತಾ; ಭಾವುಕ ಮಾತು!

ಸಾರಾಂಶ

ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಕನ್ನಡ ಜನಪ್ರಿಯ ನಿರೂಪಕಿ ಹೇಮಲತಾ...ಕಷ್ಟ ದಿನಗಳನ್ನು ನೆನಪಿಸಿಕೊಂಡು ಕಣ್ಣೀರಿಟ್ಟ ಕ್ಷಣ....

ಜೀ ಕನ್ನಡ ವಾಹಿನಿಯಲ್ಲಿ ಸೂಪರ್ ಕ್ವೀನ್ ರಿಯಾಲಿಟಿ ಶೋ ಆರಂಭವಾಗುತ್ತಿದೆ. ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮಕ್ಕೆ ರಚಿತಾ ರಾಮ್‌ ಮತ್ತು ವಿಜಯ್ ರಾಘವೇಂದ್ರ ತೀರ್ಪುಗಾರರು. ಬಣ್ಣದ ಪ್ರಪಂಚದಲ್ಲಿ ಹೆಸರು ಮಾಡಿರುವ 10 ಸೂಪರ್ ಕ್ವೀನ್‌ಗಳನ್ನು ಒಟ್ಟು ಸೇರಿಸಿಕೊಂಡು ನಡೆಯಲಿರುವ ವಿಭಿನ್ನ ಶೋ ಇದಾಗಲಿದೆ. ಕನ್ನಡ ಜನಪ್ರಿಯ ನಿರೂಪಕಿ ಹೇಮಲತಾ ಸ್ಪರ್ಧಿಸಲಿದ್ದು ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಹೇಮಲತಾ ಮಾತು:

'ಹುಟ್ಟಿದಾಗಿನಿಂದಲ್ಲೂ ಜೀವನದಲ್ಲಿ ಕಷ್ಟ ಇತ್ತು ನಗು ನಗುತ್ತಾ ಆಟ ಆಡಿಕೊಂಡು ಬೀದಿಯಲ್ಲಿ ಬೆಳೆದವಳು ನಾನು. ಒಂದು ದಿನ ಏನಾಗುತ್ತೆ ಅಂದ್ರೆ...ಒಂದು ವಾರಗಳ ಕಾಲ ಮನೆಯಲ್ಲಿ ಊಟ ಇರುವುದಿಲ್ಲ ಅಮ್ಮ ಬರ್ತಾರೆ ಒಂದು ಬನ್ ತರ್ತಾರೆ  ಅಕ್ಕಗೆ ನನಗೆ ಅರ್ಧ ಅರ್ಧ ಬನ್ ಕೊಡ್ತಾರೆ ಅವ್ರು ನೀರು ಕುಡಿದು ಮಲಗುತ್ತಾರೆ. ಒಂದು ವಾರ ನೋಡಿ ನನಗೆ ಹೊಟ್ಟೆ ಹಸಿವು ಏನಾದರೂ ಮಾಡಬೇಕು ಅಲ್ವಾ? ನಾನು ಮಾಡಿದ ಮೊದಲ ಕೆಲಸದ ಬಗ್ಗೆ ಯಾರಿಗೂ ಹೇಳಿಲ್ಲ...ಒಂದು ಬೇಕರಿಯಲ್ಲಿ ಬನ್ ಟೀ- ಕಾಫಿ ಮಾರುವ ಕೆಲಸಕ್ಕೆ ಸೇರಿದ್ದೆ . ಸ್ಕೂಲ್ ಮುಗಿಸಿಕೊಂಡು ಬೇಕರಿಗೆ ಹೋಗಿ ನಾನು ಟೀ-ಕಾಫಿ ಮಾರಾಟ ಮಾಡುತ್ತಿದ್ದೆ ರಾತ್ರಿ 9.30 ಸಾಕು ಹೋಗು ಎಂದು ಹೇಳುವರು ಆ ಕೆಲಸ ಮುಗಿಸಿಕೊಂಡು ರಾತ್ರಿ 9.30ಯಿಂದ 11 ಗಂಟೆವರೆಗೂ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಪೇಪರ್‌ ಮೇಲೆ ನಂಬರ್ ಪ್ರಿಂಟ್ ಮಾಡುತ್ತಾರೆ ಆ ಕೆಲಸ ಮಾಡುತ್ತಿದ್ದೆ. ಯಾಕೆ ಲೇಟ್ ಎಂದು ಮನೆಯಲ್ಲಿ ಪ್ರಶ್ನೆ ಮಾಡುತ್ತಿದ್ದರು ಆಗ ಕಂಬೈನ್‌ ಸ್ಟಡಿ ಮಾಡುತ್ತಿದ್ದೀವಿ ಹೇಗಿದ್ದರೂ ಸ್ಕೂಲ್‌ಗೆ ಹೋಗಲು ಆಗುವುದಿಲ್ಲ. ಒಂದು ದಿನ ಈ ವಿಚಾರ ಅಪ್ಪನಿಗೆ ತಿಳಿಯುತ್ತದೆ. ಅದೇ ಟೀ ಅಂಗಡಿಗೆ ಅಪ್ಪ ಬರುತ್ತಾರೆ ಕರೆದು ಏನು ಮಾಡುತ್ತಿರುವ ಇಲ್ಲಿ ಕುಳಿತುಕೊಳ್ಳಬಾರದು ಚೆನ್ನಾಗಿ ಇರುವುದಿಲ್ಲ ಎಂದರು. ಸುಮ್ಮನೆ ಕೂತ್ಕೊಂಡಿಲ್ಲ ಅಪ್ಪ ನಾನು ದುಡಿಯುತ್ತಿರುವೆ ಎಂದು ಸತ್ಯ ಒಪ್ಪಿಕೊಂಡೆ. ಆ ಕ್ಷಣ ಅಪ್ಪ ತುಂಬಾನೇ ಎಮೋಷನಲ್ ಆಗುತ್ತಾರೆ ತಬ್ಬಿಕೊಂಡು ಈ ವಯಸ್ಸಿಗೆ ನಿನಗೆ ಬುದ್ಧಿ ಬಂದಿದೆ ಅಂದ್ರೆ ಖುಷಿ ಪಡಬೇಕು ಇಲ್ಲ ಈ ಕೆಲಸ ಮಾಡುತ್ತಿರುವುದಕ್ಕೆ ದುಖಃ ಪಡಬೇಕಾ ಗೊತ್ತಿಲ್ಲ ಏನಾದರೂ ಮಾಡು ನಿನಗೆ ಏನು ಖುಷಿ ಕೊಡುತ್ತದೆ ಅದನ್ನು ಮಾಡು ಅಂತಾರೆ. ಅದೇ ನನಗೆ ಶಕ್ತಿ ಕೊಟ್ಟಿತ್ತು ಅಲ್ಲಿಂದ ಜೀವನದಲ್ಲಿ ಮುಂದೆ ನಡೆದುಕೊಂಡು ಬಂದೆ. ಅವತ್ತು ತಂದೆ ತಾಯಿ ನನಗೆ ಸಪೋರ್ಟ್ ಮಾಡಿದ್ದಕ್ಕೆ ಇವತ್ತು ನಾನು ಈ ಸ್ಥಾನದಲ್ಲಿ ನಿಂತಿರುವೆ' ಎಂದು ಹೇಮಲತಾ ಮಾತನಾಡಿದ್ದಾರೆ.

ದುಬೈನಲ್ಲಿ ಒಂಟಿಯಾಗಿ ನಿಂತಾಗ ಅಪ್ಪು ಸರ್‌ ಊಟಕ್ಕೆ ಕರೆದುಕೊಂಡು ಹೋಗಿದ್ರು: ಅನುಶ್ರೀ ಭಾವುಕ

'ಸೂಪರ್ ಕ್ವೀನ್ ರಿಯಾಲಿಟಿ ಶೋ ನನಗೆ ಅದ್ಭುತವಾದ ವೇದಿಕೆ. ಇಷ್ಟು ದಿನ ನಿರೂಪಕಿಯಾಗಿ ನನ್ನನ್ನು ನೋಡಿ ಬೆಳಸಿರು ಜನರು ಮುಂದಕ್ಕೆ ಏನು ಎಂದು ಪ್ರಶ್ನೆ ಮಾಡುವವರಿಗೆ ಸೂಪರ್ ಕ್ವೀನ್‌ ರಿಯಾಲಿಟಿ ಶೋ ನೇ ಉತ್ತರ'

ಡೇಟಿಂಗ್ ಆಪ್?

ನಾರ್ಮಲ್ ಆಗಿ ಡೇಟಿಂಗ್ ಮಾಡುವುದಕ್ಕೆ ಯಾರೂ ಸಿಕ್ಕಿಲ್ಲ ಇನ್ನು ಡೇಟಿಂಗ್ ಆಪ್ ಮೂಲಕ ಡೇಟ್ ಮಾಡಲು ಯಾರನ್ನು ಹುಡುಕಲಿ? ಅಲ್ಲಿ ಸಿಗ್ತಾರೆ ಅನ್ನೋ ಭರವಸೆ ಇಲ್ಲ. 

ಖುಷಿಯಾಗಿದ್ದ ಕ್ಷಣ?

ನಾನು ಪ್ರಯಾಣ ಮಾಡುವಾಗ ಸದಾ ಖುಷಿಯಾಗಿರುವೆ. ನನಗೆ ಫ್ಯಾಮಿಲಿ ಮತ್ತು ಫ್ರೆಂಡ್ಸ್‌ ತುಂಬಾನೇ ಕಡಿಮೆ ಹೀಗಾಗಿ ಹೆಚ್ಚಿಗೆ ಪ್ರಯಾಣ ಮಾಡುತ್ತೀನಿ. ಆಗ ಹೇಮಾ ತುಂಬಾ ಖುಷಿಯಾಗಿರುತ್ತಾಳೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?