
ಬೆಂಗಳೂರಿನ ಕಾಲೇಜೊಂದರಲ್ಲಿ ಓದುತ್ತಿದ್ದ ಹುಡುಗಿಯನ್ನು ಕರೆದು ಆಕೆಯ ಟ್ಯಾಲೆಂಟ್ ಹೊರ ಜಗತ್ತಿಗೆ ಗೊತ್ತಾಗುವಂತೆ ಮಾಡಿದ ಸಿನಿಮಾ ರಿಷಬ್ ನಿರ್ದೇಶನ, ರಕ್ಷಿತ್ ಹೀರೋ ಆಗಿದ್ದ 'ಕಿರಿಕ್ ಪಾರ್ಟಿ'. ಈ ಸಿನಿಮಾ ಮೂಲಕ ಆಕೆ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಫೇಮಸ್ ಆದ್ರು. ಕಿರಿಕ್ ಪಾರ್ಟಿಯಲ್ಲಿನ ಆಕೆಯ ಸ್ಟೈಲ್, ಸ್ಮೈಲು ಎಲ್ಲವನ್ನೂ ಜನ ಮೆಚ್ಚಿಕೊಂಡರು. ಆ ಬಳಿಕ ಸಾಲು ಸಾಲು ಸಿನಿಮಾಗಳು ರಶ್ಮಿಕಾ ಅವರನ್ನು ಕೈ ಬೀಸಿ ಕರೆದವು. ಬೇರೆ ಭಾಷೆಗಳಿಂದಲೂ ಆಫರ್‌ಗಳು ಬಂದವು. ವಿಜಯ ದೇವರಕೊಂಡ ಜೊತೆಗಿನ 'ಗೀತ ಗೋವಿದಂ' ಹಿಟ್ ಆಗಿದ್ದೇ ಈಕೆ ಸೌತ್ ಇಂಡಿಯನ್ ಸ್ಟಾರ್ ನಟಿಯಾಗಿ ಮಿಂಚಿದರು. ಮುಂದೆ ಬಾಲಿವುಡ್ ಸಿನಿಮಾಗಳಲ್ಲೂ ಆಫರ್ ಮೇಲೆ ಆಫರ್ ಬರಲಾರಂಭಿಸಿತು. ಆದರೆ ಇದಕ್ಕೂ ಮೊದಲೇ ಕಿರಿಕ್ ಪಾರ್ಟಿ ಹೀರೋ ಕಂ ಪ್ರೊಡ್ಯೂಸರ್ ರಕ್ಷಿತ್ ಶೆಟ್ಟಿ ಜೊತೆ ಪ್ರೇಮ ಮೊಳೆತು ಎಂಗೇಜ್‌ಮೆಂಟೂ ಆಯ್ತು. ಆಮೇಲೆ ಅದು ಮುರಿದುಬಿತ್ತು.
ಇದರ ಬಗೆಗಿನ ಚರ್ಚೆ ಇಲ್ಲಿ ಅನವಶ್ಯಕ. ಅವರ ಖಾಸಗಿ ವಿಚಾರದಲ್ಲಿ ನಾವು ಇಣುಕೋದು ಬೇಡ. ಆದರೆ ಎಂಥದ್ದೇ ಕಹಿ ಮನಸ್ಸಲ್ಲಿದ್ದರೂ ತನ್ನ ಮೊದಲ ಸಿನಿಮಾ ಬಗ್ಗೆ ಎಲ್ಲರೂ ಕೃತಜ್ಞತೆಯಿಂದಲೇ ನೆನೆಯುತ್ತಾರೆ. ಆದರೆ ಇತ್ತೀಚೆಗೆ ರಶ್ಮಿಕಾ ಮಾತ್ರ 'ಕರ್ಲಿ ಟೇಲ್ಸ್' ಯೂಟ್ಯೂಬ್ ಚಾನೆಲ್‌ಗೆ (YouTube Channel) ನೀಡಿದ ಸಂದರ್ಶನದಲ್ಲಿ ತನ್ನ ಮೊದಲ ಸಿನಿಮಾದ ಹೆಸರು ಹೇಳಲೂ ಮನಸ್ಸು ಮಾಡಲಿಲ್ಲ. ಕೋಟ್ ಅನ್ನುವ ಸನ್ನೆಯ ಮೂಲಕ ಸಿನಿಮಾ ಹೆಸರು ಹೇಳದೇ ವ್ಯಂಗ್ಯ ಮಾಡಿದರು. ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ಆ ಸಮಯದಲ್ಲಿ 'ಕಿರಿಕ್ ಪಾರ್ಟಿ' ತಂಡ ನನ್ನ ಹಿಂದೆ ದುಂಬಾಲು ಬಿದ್ದು, ನಟಿಸುವಂತೆ ಕೇಳಿಕೊಂಡಿದ್ದರು ಎಂದು ಮನಸ್ಸು ನೋಯುವಂಥಾ ಕಮೆಂಟ್ ಮಾಡಿದರು. ಆ ಬಳಿಕ ವಿಪರೀತ ವಿರೋಧ ವ್ಯಕ್ತವಾದಾಗ ತನ್ನ ಮಾತನ್ನು ತಿರುಚಲಾಗಿದೆ ಎಂದು ಫೀಲಿಂಗ್‌ನಲ್ಲಿ ಲೆಟರ್ ಬರೆದು ಸೋಷಿಯಲ್ ಮೀಡಿಯಾದಲ್ಲಿ (Social Media) ರಶ್ಮಿಕಾ ಪ್ರಕಟಿಸಿದ್ರು.
ರಣ್ವೀರ್ ಗುರುತು ಮರೆತ ಫಾರ್ಮುಲಾ ಒನ್ ರೇಸರ್.. ಡಿಪ್ಸ್ ಪತಿ ರಿಯಾಕ್ಷನ್ ಹೇಗಿದೆ ನೋಡಿ
ಇನ್ನೊಂದೆಡೆ ರಿಷಬ್ ಶೆಟ್ಟಿ ಅವರ 'ಕಾಂತಾರ' ಸೂಪರ್ ಡೂಪರ್ ಹಿಟ್ ಆಯ್ತು. ಬಾಲಿವುಡ್, ಸೌತ್ ಇಂಡಿಯನ್ ಇಂಡಸ್ಟ್ರಿಯ ಮಂದಿಯೆಲ್ಲ (South Cine Industry) ಸಿನಿಮಾವನ್ನು ಹಾಡಿ ಹೊಗಳಿದರು. ಆದರೆ ತನಗೆ ಮೊದಲನೇ ಸಿನಿಮಾದಲ್ಲಿ ಅವಕಾಶ ನೀಡಿದ ನಿರ್ದೇಶಕನ ಸಿನಿಮಾದ ಬಗ್ಗೆ ರಶ್ಮಿಕಾ ಕಮಕ್ ಕಿಮಕ್ ಅಂದಿಲ್ಲ. ಈ ಬಗ್ಗೆ ರಿಷಬ್ ಬಳಿ ಕೇಳಿದಾಗ ಅವರು ನಾರ್ಮಲ್(Normal) ಆಗಿಯೇ ಪ್ರತಿಕ್ರಿಯೆ ನೀಡಿದ್ದರು. ಅಪ್ಪಿತಪ್ಪಿ ರಶ್ಮಿಕಾ ಬಗ್ಗೆ ನೆಗೆಟಿವ್ ಮಾತಾಡಿಲ್ಲ.
Drishyam 2 ಅಯ್ಯಯ್ಯೋ ಏನಿದು ಡಿಮ್ಯಾಂಡ್? ದೃಶ್ಯಂ 2 ಚಿತ್ರಕ್ಕೆ ಮಧ್ಯೆರಾತ್ರಿ ಶೋ ಆರಂಭಿಸಿದ ಥಿಯೇಟರ್‌ಗಳು
ಆದರೆ ಯಾವಾಗ ರಶ್ಮಿಕಾ ಕಿರಿಕ್ ಪಾರ್ಟಿ ಬಗ್ಗೆ ಕೇವಲವಾಗಿ ಮಾತನಾಡಲು ಶುರು ಮಾಡಿದ್ರೋ ರಿಷಬ್ ಕೂಡ ಆಕೆಯ ಸ್ಟೈಲಲ್ಲೇ(Style) ಆಕೆಗೆ ನಾಟುವಂತೆ ತಿರುಗೇಟು ನೀಡಿದ್ದಾರೆ. ಗುಲ್ಟಿ ಡಾಟ್ ಕಾಮ್ ಯೂಟ್ಯೂಬ್ ಸಂದರ್ಶನದಲ್ಲಿ ರಶ್ಮಿಕಾ ಹೆಸರು ಹೇಳದೇ ಆಕೆಯ ಸ್ಟೈಲ್‌ನಲ್ಲೇ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದಾರೆ. ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಈ 4 ಜನರಲ್ಲಿ ಯಾರ ನಟನೆ ಇಷ್ಟ? ಯಾರೊಟ್ಟಿಗೆ ನಟಿಸ್ತೀರಾ? ಎನ್ನುವ ಪ್ರಶ್ನೆಗೆ ರಿಷಬ್ ಉತ್ತರಿಸಿದ ರೀತಿಗೆ ನೆಟ್ಟಿಗರು ಫುಲ್ ಖುಷಿ ಆಗಿದ್ದಾರೆ. 'ಸ್ಕ್ರಿಪ್ಟ್ ಮುಗಿದ ಮೇಲೆ ಕಲಾವಿದರ ಬಗ್ಗೆ ನಾನು ಯೋಚಿಸುತ್ತೇನೆ. ಹೊಸ ಕಲಾವಿದರ ಜೊತೆ ನಟಿಸೋಕೆ ಇಷ್ಟಪಡುತ್ತೀನಿ. ನೀವು ಹೇಳಿದ ಹೆಸರುಗಳಲ್ಲಿ ಈ ತರಹದ (ರಶ್ಮಿಕಾ ಸನ್ನೆ ಮಾಡಿ ತೋರಿಸಿದಂತೆ ಕೋಟ್ ಥರ ಸನ್ನೆ ಮಾಡಿ) ನಟಿಯರು ನನಗೆ ಇಷ್ಟ ಇಲ್ಲ' ಅಂತ ರಿಷಬ್ ಹೇಳಿದ್ದಾರೆ. ಮಾತು ಮುಂದುವರೆಸಿದ ರಿಷಬ್ ಶೆಟ್ಟಿ, 'ಸಮಂತಾ ಹಾಗೂ ಸಾಯಿ ಪಲ್ಲವಿ ಅಭಿನಯ(Acting) ಬಹಳ ಇಷ್ಟ 'ಎಂದು ಹೇಳಿದ್ದಾರೆ. ಸಮಂತಾ ಕಾಯಿಲೆ(Disease)ಯಿಂದ ಬಳಲುತ್ತಿರುವ ವಿಚಾರ ಗೊತ್ತಾದಾಗ ಏನು ಅನ್ನಿಸಿತು ಎನ್ನುವ ಪ್ರಶ್ನೆಗೆ 'ಬಹಳ ಬೇಸರ ಆಯಿತು. ಆದಷ್ಟು ಬೇಗ ಅವರು ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ(God) ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.
ಒಟ್ಟಾರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಶೆಟ್ರ ಹವಾ. ರಶ್ಮಿಕಾಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ಕೊಟ್ರಿ ಅಂತ ಬಹಳ ಮಂದಿ ರಿಷಬ್ ಅವ್ರಿಗೆ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.