ಅಮ್ಮನಿಲ್ಲವೆಂಬ ಸತ್ಯ ಗೊತ್ತಿದ್ದರೂ ಅಪ್ಪ ವಿಜಯ್ ರಾಘವೇಂದ್ರಗೆ ಆನಿವರ್ಸರಿ ಕೇಕ್ ತಂದುಕೊಟ್ಟ ಪುತ್ರ!

By Sathish Kumar KH  |  First Published Aug 28, 2024, 8:50 PM IST

ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರ ವಿವಾಹ ವಾರ್ಷಿಕೋತ್ಸವದಂದು, ಅವರ ಪುತ್ರ ಶೌರ್ಯ ಅವರನ್ನು ಕೇಕ್ ಕತ್ತರಿಸುವಂತೆ ಕೇಳಿಕೊಂಡರು. ಈ ಭಾವನಾತ್ಮಕ ಕ್ಷಣವು ಎಲ್ಲರನ್ನೂ ಮುಟ್ಟಿತು.


ಬೆಂಗಳೂರು (ಆ.28): ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ಹೆಂಡತಿ ಸ್ಪಂದನಾಳನ್ನು ಕಳೆದುಕೊಂಡು ಒಂದು ವರ್ಷವಾಗಿದೆ. ಆದರೆ, ಅವರ ಪುತ್ರ ಶೌರ್ಯ ಅಮ್ಮನಿಲ್ಲದಿದ್ದರೂ ಅಪ್ಪನಿಗೆ ಮದುವೆ ವಾರ್ಷಿಕೋತ್ಸವದ ಕೇಕ್ ತಂದುಕೊಟ್ಟು ಕತ್ತರಿಸುವಂತೆ ಹೇಳಿದ್ದು ಮಾತ್ರ ಎಂಥಹ ಕಲ್ಲು ಹೃದಯವದರಿಗೂ ಕಣ್ಣೀರು ಬರುವಂತೆ ಮಾಡುತ್ತದೆ.

ಕನ್ನಡ ಚಿತ್ರರಂಗದ ಕ್ಯೂಟ್ ದಂಪತಿಗಳಲ್ಲಿ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಜೋಡಿ ಕೂಡ ಒಂದಾಗಿತ್ತು. ಅದರಲ್ಲಿಯೂ ಗಂಡ ಹೆಂಡತಿಯ ನಡುವೆ ಎಂದಿಗೂ ಜಗಳ ಎಂಬ ಪದಕ್ಕೆ ಅವಕಾಶವನ್ನೇ ನೀಡದೇ ಸಂಸಾರ ನಡೆಸಿಕೊಂಡು ಹೋಗುತ್ತಿದ್ದ ಸ್ಪಂದನಾ ವಿದೇಶಕ್ಕೆ ತೆರಳಿದ್ದಾಗ ಅಲ್ಲಿಯೇ ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಅವರ ಮದುವೆ ವಾರ್ಷಿಕೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಆಕೆ ಸಾವನ್ನಪ್ಪಿದ್ದು, ಕುಟುಂಬದಲ್ಲಿ ಭಾರಿ ದುಃಖಕ್ಕೆ ಕಾರಣವಾಗಿತ್ತು. ಸ್ಪಂದನಾ ಸಾವಿನ ನಂತರ ಸುಮಾರು ಮೂರ್ನಾಲ್ಕು ತಿಂಗಳು ವಿಜಯ್ ರಾಘವೇಂದ್ರ ನೋವಿನಿಂದ ಹೊರಗೆ ಬಂದಿರಲಿಲ್ಲ. ಆದರೆ, ಮಗನ ಶೌರ್ಯನ ಮುಖವನ್ನು ನೋಡಿ ಅವನ ಮುಂದೆ ಧೈರ್ಯವಾಗಿರಬೇಕು ಎಂದು ನೋವನ್ನು ಹತ್ತಿಟ್ಟುಕೊಂಡಿದ್ದರು.

Tap to resize

Latest Videos

undefined

Vijay Raghavendra: ನನ್ನ ಬೆಳಕಾಗು ಎನ್ನುತ್ತಲೇ ಪ್ರೀತಿಯ ಮಡದಿಗೆ ವೆಡ್ಡಿಂಗ್ ಆನಿವರ್ಸರಿ ವಿಶ್ ಮಾಡಿದ ವಿಜಯ್ ರಾಘವೇಂದ್ರ

ಸುಖ ಸಂಸಾರ ನಡೆಸಿಕೊಂಡು ಹೋಗುತ್ತಿದ್ದ ಸ್ಪಂದನಾ, ತನ್ನ ಗಂಡ ವಿಜಯ್ ರಾಘವೇಂದ್ರ ಹಾಗೂ ಪುತ್ರ ಶೌರ್ಯನನ್ನು ಬಿಟ್ಟು ಅಗಲಿ ಆ.9ಕ್ಕೆ ಒಂದು ವರ್ಷವಾಗಿತ್ತು. ಈ ದಿನ ನಟ ವಿಜಯ್ ರಾಘವೇಂದ್ರ ಅವರು 'ಮುದ್ದಾದ ಜೋಡಿಗಳನ್ನು ಕಂಡರೆ ಆ ದೇವರಿಗೂ ಹೊಟ್ಟೆ ಕಿಚ್ಚು' ಎಂದು ಬರೆದುಕೊಂಡು ತಮ್ಮ ಹೆಂಡತಿ ಫೋಟೋವನ್ನು ಹಾಕಿ ಅದರ ಮೇಲೆ 'I Love you ಚಿನ್ನ' ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದರು. ಅಂದರೆ, ಹೆಂಡತಿ ಮೇಲಿನ ಪ್ರೀತಿ ಹಾಗೂ ನೆನಪು ಮಾತ್ರ ಇನ್ನೂ ಅವರ ಹೃದಯದಿಂದ ಮಾಸಿಲ್ಲ ಎಂಬುದು ತಿಳಿಯುತ್ತಿದೆ.

ಇನ್ನು ಕಳೆದೆರಡು ದಿನಗಳ ಹಿಂದೆ ಆ.26ರಂದು ನಟ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಅವರ 18ನೇ ವಿವಾಹ ವಾರ್ಷಿಕೋತ್ಸವ ಇತ್ತು. ನಮ್ಮ ಮದುವೆಯಾಗಿ 'ಇಂದಿಗೆ ಹದಿನೇಳು ವರ್ಷಗಳು… Happy Wedding Anniversary to us ಚಿನ್ನ' ಎಂದು ಭಾವನಾತ್ಮಕವಾಗಿ ಬರೆದುಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ನೋಡಿದ ಹಲವು ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ನಟ, ನಟಿಯರು ವಿಜಯ್ ರಾಘವೇಂದ್ರನಿಗೆ ಧೈರ್ಯ ಹೇಳುವ ಕೆಲಸ ಮಾಡಿದ್ದರು.

ಮಗನೇ ಜೀವನದ ದಾರಿ ತೋರಿಸುತ್ತಿದ್ದಾನೆ; ಆನಿವರ್ಸರಿ ದಿನ ಗುಡ್‌ ನ್ಯೂಸ್ ಕೊಡುತ್ತಿರುವ ವಿಜಯ್ ರಾಘವೇಂದ್ರ?

ಇದೇ ದಿನ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ದಂಪತಿಯ ಏಕೈಕ ಪುತ್ರ ಶೌರ್ಯನಿಗೆ ತನ್ನ ಅಮ್ಮನಿಲ್ಲ ಎಂಬ ಸತ್ಯ ಗೊತ್ತಿದೆ. ಆದರೂ, ಪ್ರತಿ ವರ್ಷ ಅಪ್ಪ-ಅಮ್ಮ ಆ.26ರಂದು ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳುತ್ತಿದ್ದ ದಿನವನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದನು. ಅಮ್ಮ ಜೊತೆಗಿಲ್ಲ ಎಂಬ ಅರುವಿದ್ದರೂ ನನಗೆ ಅಪ್ಪನಿರುವನಲ್ಲ, ಅವರಿಗೆ ವಿವಾಹ ವಾರ್ಷಿಕೋತ್ಸವ ಶುಭಾಶಯ ಕೋರೋಣ ಎಂದು ಒಂದು ಕೇಕ್ ಮಾಡಿಸಿಕೊಂಡು ಬಂದು ಅಪ್ಪ ವಿಜಯ್ ರಾಘವೇಂದ್ರನ ಮುಂದಿಡುತ್ತಾನೆ. ಕೇಕಿನ ಮೇಲೆ ಹ್ಯಾಪಿ ಆನಿವರ್ಸರಿ ಎಂಬ ಸ್ಟಿಕರ್ ಕೂಡ ಇದೆ. ಇದನ್ನು ನೋಡಿದ ವಿಜಯ್ ಒಂದು ಕ್ಷಣ ಭಾವುಕರಾದರೂ ಅದನ್ನು ಮಗನ ಮುಂದೆ ತೋರಿಸಿಕೊಳ್ಳದೇ ಕಣ್ಣಲ್ಲಿಯೇ ಕಣ್ಣೀರನ್ನು ಅದುಮಿಟ್ಟುಕೊಂಡು ಮಗನನ್ನು ತಬ್ಬಿಕೊಳ್ಳುತ್ತಾರೆ.

click me!