ಕನ್ನಡವೇ ಚೆಂದ ಎಂದು ಅಮೃತಧಾರೆ ಅಪೇಕ್ಷಾ ಕ್ಯೂಟ್ ವಿಡಿಯೋ ಮಾಡಿದ್ರೂ ಬಾಯಿಗೆ ಬಂದಂಗೆ ಬೈತಿರೋ ನೆಟ್ಟಿಗರು! ಏನಿದು ವಿಷ್ಯ?
ನೀನೇ ಎಲ್ಲಾ ಎಂದು ಹೇಳಲು ಇಂಗ್ಲಿಷ್ನಲ್ಲಿ You Are My Everything ಅಂತೇವೆ. ಆದ್ರೆ ಕನ್ನಡ ಎಷ್ಟು ಸೊಗಸು ಎನ್ನುತ್ತಲೇ ಅಮೃತವರ್ಷಿಣಿ ಚಿತ್ರ ತುಂತುರು ಅಲ್ಲಿ ನೀರ ಹಾಡು... ಗೀತೆಯ ಚರಣ ತಾಯಿ-ತಂದೆ ಎಲ್ಲಾ ನೀನೆ... ಡಬ್ಮ್ಯಾಷ್ ಮಾಡಿದ್ದಾರೆ ನಟಿ ಅಮೃತಾ ನಾಯಕ್. ಅಂದಹಾಗೆ ಯಾರೀ ಅಮೃತಾ ಎನ್ನುವುದು ಗೊತ್ತಾಯ್ತಲ್ವಾ? ಅಮೃತಧಾರೆ ಸೀರಿಯಲ್ ಅಪೇಕ್ಷಾ ಉರ್ಫ್ ಅಪ್ಪಿ. ಹೌದು. ಅಪ್ಪಿ ಈಗ ನಮ್ಮ ಕನ್ನಡವೇ ಚೆಂದ ಎನ್ನುವ ಟೈಟಲ್ ಕೊಟ್ಟು ಈ ಹಾಡಿನ ರೀಲ್ಸ್ ಮಾಡಿದ್ದಾರೆ. ತುಂಬಾ ಮುದ್ದಾಗಿ ಕಾಣುವ ಅಪೇಕ್ಷಾ ಅಂದ್ರೆ ಅಮೃತಾ ನಾಯಕ್ ಅವರಿಗೆ ಹಾರ್ಟ್ ಇಮೋಜಿ ಮೂಲಕ ಕೆಲವರು ಶ್ಲಾಘನೆ ವ್ಯಕ್ತಪಡಿಸಿದ್ದರೂ, ಹಲವರು ನಟಿಗೆ ಉಗಿಯುತ್ತಿದ್ದಾರೆ. ನಿಮ್ಮಂಥ ಕೆಟ್ಟವರು ನಾನು ನೋಡಿಲ್ಲ, ನೀವು ಹೀಗಾಗಬಾರದಿತ್ತು, ನಿಮ್ಮನ್ನು ಎಷ್ಟು ಪ್ರೀತಿಸ್ತಿದ್ವಿ- ಈಗ ನೋಡಿದ್ರೆ ಹೀಗೆ ಎಂದೆಲ್ಲಾ ಬೈದುಕೊಂಡು ಕಮೆಂಟ್ ಮಾಡಿದ್ದಾರೆ.
ಅಷ್ಟಕ್ಕೂ ಏಕೆ ಹೀಗೆಲ್ಲಾ ಕಮೆಂಟ್ಸ್ ಬಂದಿವೆ ಎನ್ನುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್ ನೋಡುವವರಿಗೆ ತಿಳಿದೇ ಇದೆ. ಹೌದು. ಇದ್ದರೆ ನಿಮ್ಮಂಥ ಅಕ್ಕ-ತಂಗಿ ಇರಬೇಕು ಎಂದು ಹಿಂದೊಮ್ಮೆ ಅಮೃತಧಾರೆಯ ಅಪ್ಪಿ ಮತ್ತು ಭೂಮಿಕಾ ಸಹೋದರಿಯನ್ನು ತೋರಿಸಿ ಹೇಳುತ್ತಿದ್ದರು. ಆದರೆ ಈಗ ಈ ಅಕ್ಕ-ತಂಗಿ ವಾರೆಗಿತ್ತಿಯರಾಗಿದ್ದಾರೆ. ಭೂಮಿಕಾ ಈಗಲೂ ಅದೇ ಒಳ್ಳೆಯತನ ಉಳಿಸಿಕೊಂಡಿದ್ದರೆ, ಅಪೇಕ್ಷಾ ಸಂಪೂರ್ಣ ಬದಲಾಗಿದ್ದಾಳೆ. ವಿಲನ್ ಅತ್ತೆ ಜೊತೆ ಸೇರಿಕೊಂಡು ಖುದ್ದು ಅಕ್ಕಳಿಗೇ ವಿಲನ್ ಆಗಿಬಿಟ್ಟಿದ್ದಾಳೆ. ಅಷ್ಟಕ್ಕೂ ಅಪೇಕ್ಷಾ ಹೀಗೆ ಮಾಡಲು ಕಾರಣವೂ ಇದೆ. ಪಾರ್ಥನ ಜೊತೆ ತನ್ನ ಮದುವೆಯಾಗದಂತೆ ಮಾಡಲು ಅಕ್ಕ ಪ್ರಯತ್ನ ಪಟ್ಟಿದ್ದಾಳೆ ಎನ್ನುವ ತಪ್ಪು ತಿಳಿವಳಿಕೆಯಿಂದ ಆಕೆ ಅಕ್ಕನನ್ನು ಕಂಡರೆ ಗುರ್ ಎನ್ನುತ್ತಿದ್ದಾಳೆ.
3 ವರ್ಷದಿಂದ ಸೆಕ್ಸೇ ಮಾಡಿಲ್ಲ ಅಂದ ಉರ್ಫಿ ಎದೆ ಮೇಲೆ ಉಡ ಬಿಟ್ಕೊಳೋದಾ? ಕಮೆಂಟಿಗರು ಸುಮ್ನೆ ಇರ್ತಾರಾ?
ಅಷ್ಟಕ್ಕೂ, ಅಪೇಕ್ಷಾ ಮತ್ತು ಪಾರ್ಥ ಅವರ ಮದುವೆ ಹೇಗಾದರೂ ನಿಲ್ಲಿಸಬೇಕು ಎಂದು ವಿಲನ್ ಅತ್ತೆ ಶಕುಂತಲಾ ದೇವಿಯ ಮಾತಿಗೆ ಕಟ್ಟುಬಿದ್ದ ಭೂಮಿಕಾ, ಈ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಬುದ್ಧಿವಂತೆ ಆಗಿದ್ದ ಭೂಮಿಕಾ, ಈ ಒಂದು ವಿಷಯದಲ್ಲಿ ಅತ್ತೆಯ ಬಲೆಯೊಳಕ್ಕೆ ಸಿಲುಕಿಬಿಟ್ಟಳು. ಈಗ ಇದನ್ನೇ ಮುಂದು ಮಾಡಿಕೊಂಡು ಅತ್ತೆ ಅಪೇಕ್ಷಾಳ ತಲೆಯಲ್ಲಿ ವಿಷ ಬೀಜ ಬಿತ್ತಿದ್ದಾಳೆ. ತನ್ನ ಅಕ್ಕ ಹೇಗೆ ಎಂದು ಹುಟ್ಟಿನಿಂದಲೂ ನೋಡಿಕೊಂಡು ಬಂದಿದ್ದ ಅಪೇಕ್ಷಾಗೆ ಈಗ ಅತ್ತೆಯ ಮಾತೇ ಪ್ರಿಯ ಆಗಿಬಿಟ್ಟಿದೆ. ಅಕ್ಕನ ಮೇಲೆ ತಿರುಗಿ ಬೀಳುತ್ತಿದ್ದಾಳೆ. ಮಾತು ಮಾತಿಗೂ ಅಕ್ಕನನ್ನು ಚುಚ್ಚುತ್ತಿದ್ದಾಳೆ. ವಿಲನ್ ರೀತಿ ಸಂಪೂರ್ಣ ಬದಲಾಗಿದ್ದಾಳೆ. ಶ್ರೀಮಂತ ಮನೆಯ ದೌಲತ್ತು ತೋರಿಸುತ್ತಿದ್ದಾಳೆ. ಆದ್ದರಿಂದ ಈಗಿನ ಅಪೇಕ್ಷಾ ಕಂಡರೆ ಸೀರಿಯಲ್ ಪ್ರೇಮಿಗಳಿಗೆ ಇಷ್ಟ ಆಗ್ತಿಲ್ಲ.
ಅಷ್ಟಕ್ಕೂ ಸೀರಿಯಲ್ಗಳು ಎಂದರೆ ಈಗ ಹಲವರಿಗೆ ಕೇವಲ ಧಾರಾವಾಹಿ ಅಲ್ವಲ್ಲಾ? ಅಲ್ಲಿನ ಪಾತ್ರಗಳು ನಿಜವೇ ಎಂಬ ಅರ್ಥದಲ್ಲಿ ನೋಡುತ್ತಾರೆ. ಅದರಲ್ಲಿಯೂ ವಿಲನ್ಗಳ ಪಾಡು ಹೊರಗೆ ಹೋದರೂ ಬೇಡವೇ ಬೇಡ. ಎಷ್ಟೋ ಮಂದಿ ಇವರು ರಿಯಲ್ ಲೈಫ್ನಲ್ಲಿಯೂ ವಿಲನ್ಗಳೇ ಅನ್ನುವ ರೀತಿಯಲ್ಲಿ ಹೊರಗಡೆ ಕಂಡಾಗಲೂ ವರ್ತಿಸುವುದು ಇದೆ. ಅದೇ ಕಾರಣಕ್ಕೆ ಅಮೃತಾ ನಾಯಕ್ ಮೇಲೂ ಅಭಿಮಾನಿಗಳು ಹರಿಹಾಯುತ್ತಿದ್ದಾರೆ. ನಿಮ್ಮ ನೆಗೆಟಿವ್ ರೋಲ್ ಚೆನ್ನಾಗಿಲ್ಲ, ಬೇಗ ಬದಲಾಗಿ. ಅಕ್ಕನ ರೀತಿ ಒಳ್ಳೆಯವಾಗಿ ಎನ್ನುತ್ತಿದ್ದಾರೆ. ಅಂದಹಾಗೆ, ಅಮೃತಾ ನಾಯಕ್ ಒಂದು ಮೊಟ್ಟೆ ಕಥೆ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಟೀಚರ್ ಪಾತ್ರ ಮಾಡಿದ್ದಾರೆ. ಅಲ್ಲದೇ ಇವು ಶಿವರಾಜ್‌ಕುಮಾರ್ ಅವರ ಕವಚ ಸಿನಿಮಾದಲ್ಲಿ ತಂಗಿ ಪಾತ್ರ ಮಾಡಿದ್ದಾರೆ. ಅಮೃತಧಾರೆಗೂ ಮೊದಲು ಇವರು ರಾಜಿ ಸೇರಿ ಕೆಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಮತ್ತೊಂದು ಮದುವೆಗೆ ಮುರಳಿ ರೆಡಿ! ಗಂಡಸರ ಹಣೆಬರಹನೇ ಇಷ್ಟು ಅಂತೆಲ್ಲಾ ಹೇಳೋದಾ ನೆಟ್ಟಿಗರು?