ಅಮೃತಧಾರೆ ಧಾರಾವಾಹಿಯಲ್ಲಿ ಬಹುದಿನಗಳ ಬಳಿಕ ಗೌತಮ್ ಮತ್ತು ಭೂಮಿಕಾ ನಡುವಿನ ಮುದ್ದಾದ ರಸ ನಿಮಿಷಗಳ ಎಪಿಸೋದ್ ಪ್ರಸಾರವಾಗಿದ್ದು, ವಿಡೀಯೋ ನೋಡಿದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಅಮೃತಧಾರೆ ಧಾರಾವಾಹಿಯಲ್ಲಿ ಝೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಹೆಚ್ಚಿನ ಜನರು ಇಷ್ಟಪಟ್ಟು ನೋಡುವಂತಹ ಸೀರಿಯಲ್ ಇದು. ಪ್ರತಿಯೊಬ್ಬರ ನಟನೆಗೂ ಜನ ಇಲ್ಲಿ ಫುಲ್ ಮಾರ್ಕ್ ಕೊಟ್ಟಿದ್ದಾರೆ. ಅದರಲ್ಲೂ ಡುಮ್ಮ ಗೌತಮ್ ಸರ್ ಹಾಗೂ ಭೂಮಿಕಾ ಜೋಡಿಯಂತೂ ಸಿಕ್ಕಾಪಟ್ಟೆ ಕ್ಯೂಟ್. ಮೆಚ್ಯೂರಿಟಿ ಮತ್ತು ಕ್ಯೂಟ್ ನೆಸ್ ಒಟ್ಟೊಟ್ಟಿಗೆ ಇದ್ರೆ ನೋಡೋದಕ್ಕೂ ತುಂಬಾನೆ ಚೆನ್ನಾಗಿ ಕಾಣಿಸುತ್ತೆ. ಅದಕ್ಕೆ ಉದಾಹರಣೆ ಈ ಜೋಡಿ.
ಅಮೃತಧಾರೆ ಸೀರಿಯಲ್ (Amruthadhare serial) ನಲ್ಲಿ ಕಳೆದ ಹಲವು ದಿನಗಳಿಂದ ಕಥೆ ತುಂಬಾನೆ ಸೀರಿಯಲ್ ಹಾದಿಯಲ್ಲಿ ಸಾಗುತ್ತಿತ್ತು. ಒಂದೆಡೆ ಮನೆಯಲ್ಲಿ ಬಾಂಬ್ ಪತ್ತೆಯಾಗೋದು, ನಂತರ ಗೌತಮ್ ಗೆ ತನ್ನ ಅಮ್ಮ ಬದುಕಿರೋದು ತಿಳಿಯೋದು. ಅದಾದ ನಂತರ ಅಮ್ಮನಿಗಾಗಿ ಹುಡುಕಾಟ, ಅಮ್ಮ ಇನ್ನೇನು ಸಿಕ್ಕಿ ಬಿಟ್ರು ಅನ್ನುವಷ್ಟರಲ್ಲಿ ಆಕೆಯ ಸಾವಿನ ಸುದ್ದಿಯಿಂದ ಗೌತಮ್ ಮನಸ್ಥಿತಿ ತೀರಾ ಹದಗೆಟ್ಟು ಹೋಗಿದೆ. ಒಂದು ತಿಂಗಳಿಂದ ಇದೇ ಸೀರಿಯಸ್ ಕಥೆ ನೋಡಿ ನೋಡಿ ವೀಕ್ಷಕರಿಗೂ ಬೋರ್ ಆಗಿತ್ತು. ಇದೀಗ ಗೌತಮ್ ಮತ್ತು ಭೂಮಿಕಾ ವಿವಾಹ ವಾರ್ಷಿಕೋತ್ಸವ(wedding anniversary) ಆಚರಿಸಿಕೊಳ್ಳುತ್ತಿದ್ದು, ಈ ಶುಭ ಸಂದರ್ಭದಲ್ಲಿ ಜೋಡಿಯ ನವಿರಾದ ವಿಡೀಯೋ ಪ್ರೋಮೊ ಬಿಡುಗಡೆಯಾಗಿದ್ದು, ಇದನ್ನ ನೋಡಿ ವೀಕ್ಷಕರು ಥ್ರಿಲ್ ಆಗಿದ್ದಾರೆ.
undefined
ಅಮೃತಧಾರೆಯ ಸುಧಾ ರಿಯಲ್‌ನಲ್ಲಿ ಎಷ್ಟು ಗ್ಲಾಮರಸ್ ಆಗಿದ್ದಾರೆ ಗೊತ್ತಾ? ಬೆಂಕಿ ಅಂತಿದ್ದಾರೆ ನೆಟ್ಟಿಗರು
ವಿಡೀಯೋದಲ್ಲಿ ಗೌತಮ್ ಗೆ ಭೂಮಿಕಾ (Gowtham and Bhoomika) ಕೋಟ್ ತೊಡಿಸುತ್ತಿದ್ದು, ಆವಾಗ ಗೌತಮ್ ನನಗೆ ಮೊದಲಿನಿಂದಲೂ ಕೋಟ್ ಹಾಕೋದು ಅಂದ್ರೆ ತುಂಬಾನೆ ಇಷ್ಟ, ಬೇಸಿಗೆ, ಚಳಿಗಾಲ, ಮಳೆಗಾಲದಲ್ಲೂ ಕೋಟ್ ಹಾಕೊತ್ತಿದ್ದೆ, ಆದರೆ ಈವಾಗ ಕೋಟ್ ಹಾಕೋದಕ್ಕೂ, ಅದನ್ನ ಇಷ್ಟ ಪಡೋದಕ್ಕೂ ಒಂದು ಬಲವಾದ ಕಾರಣ ಸಿಕ್ಕಿದೆ ಅದು ನೀವು ಎನ್ನುತ್ತಾ, ನೀವು ನನಗೆ ಕೋಟ್ ಹಾಕೋದು ಅಂದ್ರೆ ಮಗುವಿಗೆ ಅಮ್ಮ ಹೊರಡಿಸಿದಂತೆ ಅನುಭವ ಆಗುತ್ತೆ. ಗೌರವ ಅಂತಸ್ತು, ಸ್ಟೇಟಸ್‌ಕ್ಕಿಂತ ನೀವೇ ಒಂದು ತೂಕ ಅಂತ ಭೂಮಿಗೆ ಹೇಳುತ್ತಿದ್ದಾನೆ ಗೌತಮ್.ನನ್ನ ಪಾಲಿಗೆ ನೀವು ಏನು ಅಂತ ನನಗೆ ಮಾತ್ರ ಗೊತ್ತು. ನೀವು ಹೆಂಡತಿ ಮಾತ್ರ ಅಲ್ಲ. ಅದಕ್ಕೂ ಮೀರಿದ್ದು, ನನ್ನ ಆತ್ಮ ಸಖಿ ಎಂದಿದ್ದಾರೆ. ಜೊತೆಗೆ ನೀವು ಬರುವ ಮುನ್ನ ಪ್ರೀತಿಸುವವರೆಲ್ಲ ಫೂಲ್ಸ್ ಅಂದುಕೊಂಡಿದ್ದೆ. ಈಗ ಪ್ರೀತಿಸದೆ ಇರುವವರು ಫೂಲ್ಸ್ ಎನಿಸುತ್ತಿದೆ ಅಂತಾನೂ ಹೇಳಿದ್ದಾರೆ.
ಹೆತ್ತತಾಯಿಗೇ ಭಿಕ್ಷೆ ಹಾಕಿದ ಗೌತಮ್ ದಿವಾನ್! ವಿಲನ್ ಲಕ್ಷ್ಮೀಕಾಂತ್ ಭಾಗ್ಯನ್ನ ನೋಡೇ ಬಿಟ್ಟ.. ಮುಂದೈತೆ ಮಾರಿಹಬ್ಬ
ಭೂಮಿಕಾ ಮತ್ತು ಗೌತಮ್ ನಡುವಿನ ಈ ರೋಮ್ಯಾಂಟಿಕ್ ಮಾತುಕತೆ (Romantic talk) ಹಾಗೂ ಅವರಿಬ್ಬರ ಬಾಂಧವ್ಯ ನೋಡಿ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಕಾಮೆಂಟ್ ಮಾಡುತ್ತಾ ಒಬ್ಬರು ನನಗೆ ಬಹಳ ಮನಸಿಗೆ ನೆಮ್ಮದಿ ಕೊಡುವಂತಹ ಸೀರಿಯಲ್ ಇದು. ಎಷ್ಟು ಸರಳತೆ ಮತ್ತೆ ನೈಜತೆಯಿಂದ ಸೀರಿಯಲ್ ಅದ್ಭುತವಾಗಿ ಮೂಡಿ ಬರುತ್ತಿದೆ. ಇನ್ನೂ 10000 ಎಪಿಸೋಡ್ ಬರಲಿ ಅಂತ ಹಾರೈಸುತ್ತೇನೆ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನಮ್ಮ ಗೌತಮ್ ಮತ್ತೆ ಭೂಮಿಕ್ ಅವರಿಗೆ ಅಂತಾನೂ ವಿಶ್ ಮಾಡಿದ್ದಾರೆ. ಭೂಮಿಕಾ ಮತ್ತು ಗೌತಮ್ ರನ್ನು ಮೆಜಿಶಿಯನ್ ಅಂತಾನೂ ಕರೆದಿದ್ದಾರೆ ಜನ. ಅವರಿಬ್ಬರು ತಮ್ಮ ನೈಜ್ಯ ಅಭಿನಯದಿಂದ ವೀಕ್ಷಕರ ಮನಸನ್ನು ಸೂರೆಗೊಂಡಿದ್ದಾರೆ.