ವಿದ್ಯಾಭೂಷಣರ ಮಗಳು ಟಿಎನ್ ಸೀತಾರಾಂ ಅವರ ಹೊಸ ಸೀರಿಯಲ್ 'ಮತ್ತೆ ಮನ್ವಂತರ'ಕ್ಕೆ ನಾಯಕಿಯಾಗುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಆಕೆಯ ಬಗ್ಗೆ ಇಂಟೆರೆಸ್ಟಿಂಗ್ ಡೀಟೇಲ್‌ಗಳು ಇಲ್ಲಿವೆ.
ವಿದ್ಯಾಭೂಷಣರು ಅಂದಾಗ ಹಿರಿಯ ತಲೆಮಾರು ಇವತ್ತಿಗೂ ಹೇಳೋದು ಸುಬ್ರಹ್ಮಣ್ಯ ಸ್ವಾಮಿಗಳು ಅಂತಲೇ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೀಠಾಧಿಪತಿಗಳಾಗಿದ್ದವರು ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ. ನಲವತ್ತನೇ ವಯಸ್ಸಲ್ಲಿ ರಮಾ ಎಂಬವರ ಜೊತೆಗಿನ ಪ್ರೇಮ ಅವರನ್ನು ಸನ್ಯಾಸದಿಂದ ಸಂಸಾರದತ್ತ ಕರೆದೊಯ್ಯಿತು. ಸುಮಾರು ಇಪ್ಪತ್ತ ನಾಲ್ಕು ವರ್ಷಗಳ ಅವರು ಪೀಠ ತ್ಯಾಗ ಮಾಡಿ ಗ್ರಹಸ್ಥಾಶ್ರಮ ಸ್ವೀಕರಿಸಿದಾಗ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ತೀವ್ರತರ ಚರ್ಚೆಗಳೂ ನಡೆದಿದ್ದವು. ಸಂಸಾರ ಆರಂಭಿಸಿದ ಬಳಿಕವೂ ಅವರ ಆಧ್ಯಾತ್ಮಿಕ ಸೆಳೆತ ಕಡಿಮೆಯಾಗಲಿಲ್ಲ. ಸಂಸಾರವನ್ನೂ ಆಧ್ಯಾತ್ಮವನ್ನೂ ಜೊತೆ ಜೊತೆಗೆ ಬದುಕಿದವರು ಅವರು. ಕೆಲವು ವರ್ಷಗಳ ಹಿಂದೆ ಅವರ ಆತ್ಮಕಥೆ 'ಒಲಿದಂತೆ ಹಾಡುವೆ' ಬಿಡುಗಡೆಯಾಯ್ತು. ಅದರಲ್ಲಿ ಅವರು ತಮ್ಮ ಇಡೀ ಬದುಕಿನ ವಿವರಗಳನ್ನು ದಾಖಲಿಸಿದ್ದಾರೆ. ವಿದ್ಯಾಭೂಷಣರಿಗೆ ಇಬ್ಬರು ಮಕ್ಕಳು ಮಗಳು ಮೇಧಾ ಹಿರಣ್ಮಯಿ. ಮಗ ಅನಿರುದ್ಧ್. ಮೇಧಾ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡರೆ ಅನಿರುದ್ಧ್ ವಿದ್ಯಾಭೂಷಣ ಕ್ರಿಕೆಟ್, ಫ್ರೊಟೋಗ್ರಫಿಯಂಥ ಹವ್ಯಾಸಗಳಿಂದ ಗಮನ ಸೆಳೆಯುತ್ತಾರೆ.
undefined
ಮೇಧಾ ಹಿರಣ್ಮಯಿ ಅಥವಾ ಮೇಧಾ ವಿದ್ಯಾಭೂಷಣ ಟಿ ಎನ್ ಸೀತಾರಾಂ ಕಣ್ಣಿಗೆ ಬಿದ್ದದ್ದು ಆಕಸ್ಮಿಕವಾಗಿ. ಒಬ್ಬ ಕಾಮನ್ ಫ್ರೆಂಡ್ ಮೂಲಕ. ಟಿ ಎನ್ ಸೀತಾರಾಮ್ ಅವರ ವಿಶೇಷ ಗುಣ ಅಂದರೆ ಅವರ ಅಬ್ಸರ್ವೇಶನ್. ಎದುರಿಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸೂಕ್ಷ್ಮವಾಗಿ ನೋಡಿ ಅವರಿಂದ ಪಾತ್ರ ತೆಗೆಸಬಹುದಾ ಅಂತ ಅವರು ಗಮನಿಸುತ್ತಲೇ ಇರುತ್ತಾರಂತೆ. ಮತ್ತೆ ಮನ್ವಂತರ ಎಂಬ ಹೊಸ ಸೀರಿಯಲ್ ಮಾಡುವ ಹೊತ್ತಿಗೆ ಅವರಿಗೆ ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ವಿದ್ಯಾಭೂಷಣ ಹಾಗೂ ರಮಾ ಅವರ ಮಗಳು ಮೇಧಾ ನೆನಪಾಗುತ್ತಾರೆ. ಈ ಸೀರಿಯಲ್ ಸಂಗೀತ ಹಾಗೂ ಸ್ಪೋರ್ಟ್ಸ್ ಮೇಲೆ ಕೇಂದ್ರೀಕೃತವಾಗಿರುವ ಕಾರಣ ಈ ಎರಡು ಫೀಲ್ಡ್ ಬಗ್ಗೆ ತಿಳುವಳಿಕೆಯುಳ್ಳ ಮೇಧಾನೇ ನಾಯಕಿ ಪಾತ್ರಕ್ಕೆ ಬೆಸ್ಟ್ ಅನ್ನೋ ಅಭಿಪ್ರಾಯಕ್ಕೆ ಸೀತಾರಾಂ ಬರುತ್ತಾರೆ. ಅಚಾನಕ್ ಆಗಿ ಬಂದಿರೋ ಈ ಅವಕಾಶ ಕಂಡು ಮೇಧಾಗೆ ಆರಂಭದಲ್ಲಿ ಕೊಂಚ ಭಯ ಗೊಂದಲ ಉಂಟಾಗುತ್ತೆ. ಏಕೆಂದರೆ ಮೇಧಾ ಚಿಕ್ಕ ವಯಸ್ಸಿಂದಲೇ ಟಿಎನ್ ಎಸ್ ಅವರ ಮುಕ್ತದಂಥಾ ಸೀರಿಯಲ್ ನೋಡಿ ಬೆಳದವರು. ಅಂಥಾ ದೊಡ್ಡ ನಿರ್ದೇಶಕರ ಸೀರಿಯಲ್‌ನಲ್ಲಿ ಅಭಿನಯಿಸೋದು ತನ್ನಿಂದ ಸಾಧ್ಯವಾ ಎಂಬ ಗೊಂದಲವದು. ಆದರೆ ತಂದೆ ವಿದ್ಯಾಭೂಷಣ ಅವರು ಮಗಳ ಗೊಂದಲ ಬಗೆಹರಿಸುತ್ತಾರೆ. ಮಗಳು ಟಿ ಎನ್ ಎಸ್ ಸೀರಿಯಲ್‌ಗೆ ನಾಯಕಿಯಾಗುತ್ತಿರುವುದವರ ಬಗ್ಗೆ ಬಹಳ ಖುಷಿ ಪಡುತ್ತಾರೆ.
ಸೈಲೆಂಟ್ ಆಗಿ ಸದ್ದು ಮಾಡುತ್ತಿರುವ ನಟ ಯಶ್; ಎಲ್ಲಿ ನೋಡಿದರೂ ರಾಖಿ ಹವಾ! ...
ಇನ್ನು ಮೇಧಾ ವಿಚಾರಕ್ಕೆ ಬಂದರೆ ಈಕೆ ತಂದೆಯಂತೆ ಬಾಲ್ಯದಿಂದಲೇ ಸಂಗೀತದತ್ತ ಆಕರ್ಷಿತರಾದವರು. ಈಗ ಸಂಗೀತದ ವಿದುಷಿ ಆಗಿದ್ದಾರೆ. ಅನೇಕ ಕಡೆ ಸಂಗೀತ ಕಛೇರಿಯನ್ನೂ ನೀಡಿದ್ದಾರೆ. ಇವರು ಹಾಡಿರುವ ದಾಸರ ಪದಗಳು ಸಿಡಿಯಾಗಿ ಹೊರಬಂದು ಸಾಕಷ್ಟು ಮಾರಾಟ ಕಂಡಿವೆ. ಇದರ ಜೊತೆಗೆ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ನಾಟಕವೊಂದರಲ್ಲಿ ಇವರ ದ್ರೌಪದಿ ಪಾತ್ರ ಬಹಳ ಗಮನ ಸೆಳೆದಿತ್ತು. ಪ್ರಸ್ತುತ ಪಿಇಎಸ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಇದರ ಜೊತೆಗೆ ಡ್ಯಾನ್ಸ್ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅಣ್ಣ ಅನಿರುದ್ಧ್ ಕ್ಯಾಮರಾಗೆ ಈಕೆಯೇ ಮಾಡೆಲ್. ತಂದೆ ಅಪ್ಪಟ ಸಂಪ್ರದಾಯಸ್ಥರಾಗಿದ್ದರೆ, ಮಗಳು ಈ ಕಾಲದ ಹುಡುಗಿಯಾಗಿ ಬೆಳೆದಿದ್ದಾರೆ.
ಬೋಲ್ಡ್ ಲುಕ್‌ನಲ್ಲಿ ಪ್ರಿಯಾಂಕಾ: ಸೋಷಿಯಲ್ ಮೀಡಿಯಾದಲ್ಲಿ ಫೋಟೊ ವೈರಲ್! ...
ಇದೀಗ ಕಿರುತೆರೆಯಲ್ಲಿ ಅದರಲ್ಲೂ ಟಿ ಎನ್ ಸೀತಾರಾಂ ಅವರಂಥ ಪ್ರತಿಭಾವಂತ ನಿರ್ದೇಶಕರ ಜೊತೆಗೆ ನಟಿಸಲು ಮೇಧಾಗೆ ಖುಷಿ ಇದೆ. ತಂದೆ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಂತೆ ಮಗಳು ನಟನಾ ಕ್ಷೇತ್ರದಲ್ಲಿ ಹೆಸರು ಮಾಡಲಿ ಅಂತ ಜನ ಹಾರೈಯಿಸುತ್ತಿದ್ದಾರೆ. ಆದರೆ ಸೀರಿಯಲ್‌ನಲ್ಲಿ ಗುರುತಿಸಿಕೊಂಡರೂ ಸಂಗೀತ ಮತ್ತು ಓದನ್ನು ನಿಲ್ಲಿಸೋದಿಲ್ಲ ಅಂದಿದ್ದಾರೆ ಮೇಧಾ. ಅವರ ಫ್ಯೂಚರ್ ಗೆ ಆಲ್ ದಿ ವೆರಿ ಬೆಸ್ಟ್
ಶಾಹಿದ್ ಕಪೂರ್ ಜೊತೆ ನಟಿಸಲು ಒಲ್ಲೆ ಅಂದ್ರಾ ರಶ್ಮಿಕಾ ಮಂದಣ್ಣ! .