
ಬಿಗ್ಬಾಸ್ ಎಂದರೇನೇ ಅದೊಂದು ರೀತಿಯಲ್ಲಿ ವಿವಾದದ ತಾಣ ಎನ್ನುವ ಆರೋಪ ಬಹಳ ಹಿಂದಿನಿಂದಲೂ ಇದೆ. ಖುಲ್ಲಂಖುಲ್ಲಾ ಆಗಿ ರೊಮಾನ್ಸ್ ಮಾಡುವುದು ಇಲ್ಲಿ ಮಾಮೂಲು. ಇಂಥ ದೃಶ್ಯಗಳನ್ನೂ ಷೋನಲ್ಲಿ ಧಾರಾಳವಾಗಿ ತೋರಿಸುವ ಮೂಲಕ ಟಿಆರ್ಪಿ ಹೆಚ್ಚಿಸಿಕೊಳ್ಳಲಾಗುತ್ತದೆ. ಇದೇ ಕಾರಣಕ್ಕೆ ಇಲ್ಲಿ ಬರುವ ಬಹುತೇಕ ಸ್ಪರ್ಧಿಗಳು ಕಾಂಟ್ರವರ್ಸಿ ಮೂಲಕ ಕುಖ್ಯಾತಿ ಪಡೆದವರೇ ಆಗಿರುತ್ತಾರೆ ಎಂಬ ಗಂಭೀರ ಆರೋಪಗಳು ಬರುತ್ತಲೇ ಇವೆ. ಈ ಕಾಂಟ್ರವರ್ಸಿ ಮಾಡಿಕೊಂಡವರ ನಡುವೆ ಯಾವುದೇ ವಿವಾದಗಳಿಗೆ ಹೋಗದ ಒಂದಿಷ್ಟು ಮಂದಿ ಪ್ರಸಿದ್ಧರನ್ನು ಕರೆಯಲಾಗುತ್ತದೆ. ಇದು ನಾಮ್ ಕೇ ವಾಸ್ತೆ ಮಾತ್ರ. ಅವರು ಬಂದ ಮೊದಲು ಮೂರ್ನಾಲ್ಕು ವಾರಗಳಲ್ಲಿಯೇ ಎಲಿಮಿನೇಟ್ ಆಗಿ ಹೊರಹಾಕಲಾಗುತ್ತದೆ. ಕಾಂಟ್ರವರ್ಸಿ ಹೆಚ್ಚಿದ್ದಷ್ಟೂ ಟಿಆರ್ಪಿ ರೇಟೂ ಜಾಸ್ತಿ ಬರುತ್ತದೆ... ಹೀಗೆ ಬಿಗ್ಬಾಸ್ ಕುರಿತು ಹಲವಾರು ಮಂದಿ ತಲೆಗೊಂದರಂತೆ ಮಾತನಾಡುವುದು ನಡೆದೇ ಇದೆ. ಅದಕ್ಕಾಗಿಯೇ ಫೈಟಿಂಗ್, ಕಿಸ್ಸಿಂಗ್, ರೊಮಾನ್ಸ್ ಇಂಥ ಸನ್ನಿವೇಶಗಳು ಬಂದರೆ ಅದನ್ನು ಕಟ್ ಮಾಡದೇ ವೀಕ್ಷಕರ ಮುಂದೆ ಇಡುವುದೇ ಸಾಕ್ಷಿ ಎನ್ನಲಾಗುತ್ತದೆ. ಅದಕ್ಕೆ ತಕ್ಕಂತೆ ವೀಕ್ಷಕರ ಮನಸ್ಥಿತಿಯೂ ಇರುವ ಕಾರಣ, ಎಲ್ಲಾ ಸೀರಿಯಲ್, ರಿಯಾಲಿಟಿ ಷೋಗಳನ್ನು ಮೀರಿ ಬಿಗ್ಬಾಸ್ ಸದಾ ನಂಬರ್ 1 ಸ್ಥಾನದಲ್ಲಿ ಇರುವುದು ಗುಟ್ಟಾಗಿ ಉಳಿದದ್ದೇನಲ್ಲ.
ಅದರಲ್ಲಿಯೂ ಹಿಂದಿ ಬಿಗ್ಬಾಸ್ ಅಂತೂ ಮೊದಲಿನಿಂದಲೂ ಅತ್ಯಂತ ಅಶ್ಲೀಲತೆಯ ತಾಣ ಎಂದೇ ಕುಖ್ಯಾತಿ ಪಡೆದಿದೆ. ಇದಕ್ಕಾಗಿ ಇದನ್ನು ನೋಡುವ ದೊಡ್ಡ ವರ್ಗವಿದ್ದು, ಟಿಆರ್ಪಿಯಲ್ಲಿಯೂ ಸದಾ ಮುಂದೆ ಇದೆ. ಇಲ್ಲಿ ಹೋಗುವ ಸ್ಪರ್ಧಿಗಳು ಹಲವಾರು ರೀತಿಯಲ್ಲಿ ವಿವಾದಕ್ಕೆ ಸಿಲುಕಿದವರೇ ಆಗಿರುತ್ತಾರೆ. ಅಂಥವರಲ್ಲಿ ಒಬ್ಬರು, ಜನಪ್ರಿಯ ಯೂಟ್ಯೂಬರ್ ಅರ್ಮಾನ್ ಮಲಿಕ್. ಇಬ್ಬರು ಪತ್ನಿಯರನ್ನು ಹೊಂದಿರುವ ಅರ್ಮಾನ್, ಪತ್ನಿಯರ ಜೊತೆಗೇ ಹೊಡೆದಾಡುವಂತೆ ಮಾಡಿ, ಇಬ್ಬರು ಪತ್ನಿಯರ ನಡುವೆ ಜಗಳವಾಡಿಸಿ ಅದನ್ನು ನಿಜ ಎಂಬಂತೆ ಬಿಂಬಿಸಿ... ಹೀಗೆ ಥಹರೇವಾರಿ ರೀತಿಯಲ್ಲಿ ವೀಕ್ಷಕರನ್ನು ಮೂರ್ಖರನ್ನಾಗಿಸುವಲ್ಲಿ ನಿಸ್ಸೀಮರು. ಅವರ ಪತ್ನಿಯರು ಕೂಡ ಜುಟ್ಟು ಜುಟ್ಟು ಹಿಡಿದು ಹೊಡೆದಾಡುವುದು ಇದೆ. ಅಸಲಿಗೆ ಇದು ಯೂಟ್ಯೂಬ್ ವಿಡಿಯೋಗಾಗಿ ನಡೆಸುವ ಕಾದಾಟ ಎನ್ನುವುದು ಹಲವರಿಗೆ ತಿಳಿಯುವುದೇ ಇಲ್ಲ. ಇದೇ ಕಾರಣಕ್ಕೆ, ಅರ್ಮಾನ್ ಫೇಮಸ್ ಕೂಡ ಆಗಿದ್ದು, ಪತ್ನಿಯರ ಜೊತೆ ಹಿಂದಿಯ ಬಿಗ್ಬಾಸ್ ಓಟಿಟಿ-03ಗೆ ಎಂಟ್ರಿ ಪಡೆದುಕೊಂಡಿದ್ದಾರೆ.
ನಟಿ ಐಶ್ವರ್ಯ ರೈ ಕ್ಷಮೆ ಕೋರಿದ ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ: ಏನಿದು ವಿವಾದ?
ಇಬ್ಬರೂ ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡುವ ಮೂಲಕವೂ ಫೇಮಸ್ ಆಗಿದ್ದರು ಅರ್ಮಾನ್. ಅಂದಹಾಗೆ ಇವರ ಪತ್ನಿಯರ ಹೆಸರು ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್. ಖ್ಯಾತ ಗಾಯಕ ಅರ್ಮಾನ್ ಮಲಿಕ್ ಅವರ ಹೆಸರನ್ನೇ ಇಟ್ಟುಕೊಂಡು ಸಾಕಷ್ಟು ಹಲ್ಚಲ್ ಕೂಡ ಸೃಷ್ಟಿಸಿದ್ದಾರೆ ಈ ಅರ್ಮಾನ್. ಇದೇ ಕಾರಣಕ್ಕೆ ಗಾಯಕ ಅರ್ಮಾನ್ ಒಮ್ಮೆ ಸಕತ್ ಗರಂ ಆಗಿ ಬಾಯಿಗೆ ಬಂದ ಹಾಗೆ ಬೈದದ್ದೂ ಉಂಟು. ಒಟ್ಟಿನಲ್ಲಿ ಕಾಂಟ್ರವರ್ಸಿ ಮಾಡುತ್ತಲೇ ಬಿಗ್ಬಾಸ್ನಿಂದ ಫೇಮಸ್ ಆಗ್ತಿದ್ದಾರೆ ಯೂಟ್ಯೂಬರ್ ಅರ್ಮಾನ್.
ಸದ್ಯ ಇವರು ಬಿಗ್ಬಾಸ್ ಮನೆಯಲ್ಲಿ ರೊಮಾನ್ಸ್ ಮಾಡುತ್ತಾ ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಅವರು ರೊಮಾನ್ಸ್ ಮಾಡಿರುವುದು ಪತ್ನಿಯ ಜೊತೆಗೆನೇ. ಏಕೆಂದರೆ ಇಬ್ಬರು ಪತ್ನಿಯರ ಜೊತೆಗೆ ಇವರಿಗೆ ಬಿಗ್ಬಾಸ್ಗೆ ಎಂಟ್ರಿ ಕೊಡಲಾಗಿತ್ತು. ಆದರೆ ಇದಾಗಲೇ ಪಾಯಲ್ ಎಲಿಮಿನೇಟ್ ಆಗಿದ್ದು, ಕೃತಿಕಾ ಮತ್ತು ಅರ್ಮಾನ್ ಬಿಗ್ಬಾಸ್ ಮನೆಯಲ್ಲಿ ಇದ್ದಾರೆ. ಅತ್ತ ಲೈಟ್ ಆಫ್ ಆಗುತ್ತಿದ್ದಂತೆಯೇ ಮಂಚದ ಮೇಲೆ ಪತ್ನಿ ಜೊತೆ ರೊಮಾನ್ಸ್ನಲ್ಲಿ ತೊಡಗಿದ್ದಾರೆ. ಇದು ಬಿಗ್ಬಾಸ್ನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟಕ್ಕೂ ಇದೇನೂ ಅರ್ಮಾನ್ ಅವರಿಗೆ ತಿಳಿಯದ ವಿಷಯವಲ್ಲ. ಬಿಗ್ಬಾಸ್ನಲ್ಲಿ ಎಲ್ಲಾ ಕಡೆ ಕ್ಯಾಮೆರಾ ಇರುವುದು ಅವರಿಗೂ ಗೊತ್ತು. ಟಿಆರ್ಪಿಗೋಸ್ಕರ ಇವೆಲ್ಲಾ ಮಾಮೂಲಾಗಿದ್ದು, ಈ ರೊಮಾನ್ಸ್ ವಿಡಿಯೋ ವೈರಲ್ ಆಗ್ತಿದೆಯಷ್ಟೇ. ಬೆಡ್ಷೀಟ್ ಹೊದ್ದುಕೊಂಡು ರೊಮಾನ್ಸ್ನಲ್ಲಿ ತೊಡಗಿರುವುದು ಅವರ ಚಟುವಟಿಕೆಯಲ್ಲಿಯೇ ತಿಳಿಯುತ್ತಿದೆ. ಇದನ್ನು ಉದ್ದೇಶಪೂರ್ವಕವಾಗಿ ವೈರಲ್ ಮಾಡಿದ್ದರೂ, ನೆಟ್ಟಿಗರು ಇದರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಮರ್ಮ ಅರಿತ ಕೆಲವರು ಇವೆಲ್ಲಾ ಮಾಮೂಲು ಬಿಡಿ ಎನ್ನುತ್ತಿದ್ದಾರೆ.
ವಜ್ರಾಭರಣಗಳ ಭಾರದ ಜೊತೆ ಪ್ಲಾಸ್ಟಿಕ್ ದೇಹ ಹೊತ್ತು ಅಂಬಾನಿ ಮದ್ವೆಗೆ ಓಲಾಡುತ್ತಾ ಬಂದ ನಟಿ ಕಿಮ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.