
ಅಮ್ಮನ ಹಳೆಯ ಸೀರೆಗಳನ್ನು ಉಡುವ ಖುಷಿಯೇ ಬೇರೆ. ಇದೀಗ ಸೆಲೆಬ್ರಿಟಿಗಳಲ್ಲಿಯೂ ಈ ರೀತಿಯ ಒಂದು ಟ್ರೆಂಡ್ ಶುರುವಾಗಿದೆ. ವಾರ್ಡ್ರೋಬ್ಗಳಿಂದ ಅಮ್ಮನ ಹಳೆಯ ರೇಷ್ಮೆ ಸೀರೆಗಳನ್ನುಂಟು ಹಲವು ನಟಿಯರು ಇಂದು ಮಿಂಚುತ್ತಿರುವುದು ಇದೆ. ಅದೇ ರೀತಿ ಇದೀಗ ಶ್ರೀರಸ್ತು, ಶುಭಮಸ್ತು ಸೀರಿಯಲ್ ಪೂರ್ಣಿ ಕೂಡ ತಮ್ಮ ಅಮ್ಮನ 25 ವರ್ಷಗಳ ಹಳೆಯ ಸೀರೆಯನ್ನುಟ್ಟು ವಿಡಿಯೋಶೂಟ್ ಮಾಡಿಸಿದ್ದಾರೆ. ಅಂದಹಾಗೆ, ಪೂರ್ಣಿ ಅವರ ನಿಜವಾದ ಹೆಸರು ಲಾವಣ್ಯ ಭಾರದ್ವಾಜ್. ರೇಷ್ಮೆ ಸೀರೆಯಲ್ಲಿ ಮಿಂಚುತ್ತಿರುವ ನಟಿಯನ್ನು ನೋಡಿ ಹಾರ್ಟ್ ಇಮೋಜಿಗಳ ಸುರಿಮಳೆಯಾಗಿದೆ.
ಅಂದಹಾಗೆ ಶ್ರೀರಸ್ತು, ಶುಭಮಸ್ತುವಿನಲ್ಲಿ ಲಾವಣ್ಯ ಅವರದ್ದು ತುಳಸಿ ಮಾಧವ್ ಅವರ ಸೊಸೆಯ ಪಾತ್ರ. ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರಧಾರಿಯ ನಟನೆ ಹಾಗೂ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಹೊಸದಾಗಿ ಮದುವೆಯಾಗಿ ಬಂದ ಅತ್ತೆ ತುಳಸಿಗೆ ಪೂರ್ಣಿ ತೋರುವ ಪ್ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇದ್ದರೆ ಇಂಥ ಸೊಸೆ ಇರಬೇಕು ಎನ್ನುತ್ತಿದ್ದಾರೆ. ಇದರಲ್ಲಿ ಈಕೆ ಅಭಿಯ ಪತ್ನಿ. ಆದರೆ ರಿಯಲ್ ಲೈಫ್ನಲ್ಲಿ ಲಾವಣ್ಯ ಅವರ ಅಮೃತಧಾರೆ ಸೀರಿಯಲ್ ಜೀವನ್ ಪಾತ್ರಧಾರಿಯ ಪತ್ನಿ. ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಅದನ್ನು ವಿನ್ ಕೂಡ ಆಗಿದ್ದಾರೆ.
69ನೇ ಫಿಲಂ ಫೇರ್ ಅವಾರ್ಡ್ ಬಿಡುಗಡೆ: ಹಲವು ಪ್ರಶಸ್ತಿ ಬಾಚಿಕೊಂಡ ಕಾಂತಾರ- ಫುಲ್ ಡಿಟೇಲ್ಸ್ ಇಲ್ಲಿದೆ...
ಅಷ್ಟಕ್ಕೂ ಸೀರಿಯಲ್ ಪ್ರೇಮಿಗಳಿಗೆ ತಿಳಿದಿರುವಂತೆ, ಅಮೃತಧಾರೆಯ ನಾಯಕಿ ಭೂಮಿಕಾಳ ಸಹೋದರ ಜೀವನ್ ಆಗಿ ಶಶಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಇವರು ಮಹಿಮಾ ಪತಿ. ಆದರೆ ಅಸಲಿಗೆ ಇವರು ಲಾವಣ್ಯ ಅವರ ಪತಿ. ಅಂದಹಾಗೆ, ಲಾವಣ್ಯ ಅವರು ಶ್ರೀರಸ್ತು ಶುಭಮಸ್ತುವಿನಲ್ಲಿ ಅವಿಯ ಪತ್ನಿ ಪೂರ್ಣಿಯಾಗಿ ನಟಿಸುತ್ತಿದ್ದಾರೆ. ಈ ಜೋಡಿ ಇದಾಗಲೇ ಹಲವಾರು ರೀಲ್ಸ್ಗಳನ್ನು ಮಾಡುವ ಮೂಲಕ ಅಭಿಮಾನಿಗಳಿಗೆ ರಂಜಿಸುತ್ತಲೇ ಇರುತ್ತದೆ. ಇನ್ನು ಈ ಜೋಡಿಯ ಕುರಿತು ಇಂಟರೆಸ್ಟಿಂಗ್ ವಿಷ್ಯವೂ ಇದೆ. ಕೆಲ ದಿನಗಳ ಹಿಂದಷ್ಟೇ ಶಶಿ ಮತ್ತು ಲಾವಣ್ಯ ಅವರು ತಮ್ಮ ಎರಡನೆಯ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಮದುವೆಯಾದ ಮೇಲೆ ಹನಿಮೂನ್ಗೆ ಹೋಗಲು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಇದೀಗ ಆ ಆಸೆಯನ್ನು ಜೋಡಿ ಮನಾಲಿಗೆ ಹೋಗಿ ತೀರಿಸಿಕೊಂಡಿದೆ. ಇದಾಗಲೇ ದಂಪತಿ ಮನಾಲಿಯ ಹಲವಾರು ಸ್ಥಳಗಳ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ.
ಮಹಾನಟಿ ರಿಯಾಲಿಟಿ ಷೋ ಶೂಟಿಂಗ್ ಹೇಗೆಲ್ಲಾ ನಡೆದಿದೆ? ರೋಚಕ ಪಯಣದ ವಿಡಿಯೋ ರಿಲೀಸ್...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.