ಮೊಟ್ಟೆ, ಮಾಂಸ ಪ್ರಿಯ ಪತಿಗೆ ಸಸ್ಯಾಹಾರಿ ಹೆಂಡತಿ ಮೊಟ್ಟೆಯ ಕರಿ ಮಾಡಿಕೊಟ್ಟಿದ್ದಾಳೆ. ಅಮೃತಧಾರೆ ಸೀರಿಯಲ್ ಪ್ರೇಮಿಗಳು ಏನೆಲ್ಲಾ ಹೇಳಿದ್ದಾರೆ ನೋಡಿ...
ಗಂಡ ಗೌತಮ್ ಏನು ತಿಂದರೂ ಅರಗಿಸಿಕೊಳ್ಳಬಲ್ಲ. ಅದರಲ್ಲಿಲಯೂ ಮಾಂಸಾಹಾರ ಎಂದರೆ ಪಂಚಪ್ರಾಣ. ಅದೇ ಪತ್ನಿ ಭೂಮಿಕಾ ಅಪ್ಪಟ ಸಸ್ಯಾಹಾರಿ. ಮೀನು, ಚಿಕನ್, ಮಟನ್ ಮಾಂಸ ದೂರದ ಮಾತು... ಮೊಟ್ಟೆಯನ್ನೂ ತಿನ್ನದಾಕೆ. ಹಾವು-ಮುಂಗುಸಿಯಂತಿದ್ದ ಇಬ್ಬರೂ ಒಲ್ಲದ ಮನಸ್ಸಿನಿಂದಲೇ ಅನಿವಾರ್ಯವಾಗಿ ಮದ್ವೆಯಾಗಿದ್ದಾಗಿದೆ. ಗೌತಮ್ನ ಚಿನ್ನದಂಥ ಮನಸ್ಸಿಗೆ ಭೂಮಿಕಾ ಮನಸೋತಿದ್ದಾಳೆ. ಆತನ ಮೇಲೆ ಲವ್ ಶುರುವಾಗಿದೆ. ಆದರೆ ಗೌತಮ್ಗೋ ಲವ್-ಗಿವ್ ಹೇಳಿಬರುವಂಥದ್ದಲ್ಲ. ಪತ್ನಿಯ ಪ್ರೀತಿ ಆತನಿಗೆ ಅರ್ಥವೇ ಆಗ್ತಿಲ್ಲ. ಅದನ್ನು ಹೇಗೆ ಹೇಳೋದು ಅಂತ ಭೂಮಿಕಾಗೂ ಗೊತ್ತಾಗ್ತಿಲ್ಲ. ಇದೇ ಕಾರಣಕ್ಕೆ ಪತಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾಳೆ. ನೇರಾನೇರ ಪ್ರೀತಿ ಹೇಳಿಕೊಳ್ಳಲು ಆಗದೇ ಚಡಪಡಿಸುತ್ತಿದ್ದಾಳೆ.
ಇದೀಗ ಮನೆಯಲ್ಲಿ ಎಲ್ಲರೂ ಹೊರಗೆ ಹೋಗಿದ್ದಾರೆ. ಮನೆಯಲ್ಲಿ ಇರೋದು ಗೌತಮ್ ಮತ್ತು ಭೂಮಿಕಾ ಮಾತ್ರ. ಗೌತಮ್ಗೆ ಮೊಟ್ಟೆ-ಮಾಂಸ ಎಲ್ಲವೂ ಇಷ್ಟ ಎನ್ನುವುದನ್ನು ತಿಳಿದ ಭೂಮಿಕಾ ಈಗ ಮೊಟ್ಟೆಯ ಕರಿ ಮಾಡಿಕೊಡಲು ಮುಂದಾಗಿದ್ದಾಳೆ. ಮೊಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು, ನೀನು ಮರಿಯಾಗ್ತಿಯಾ ಅಂತ ಗೊತ್ತು ಆದರೂ ಗೌತಮ್ಗಾಗಿ ಕರಿ ಮಾಡ್ತಿದ್ದೇನೆ ಎನ್ನುತ್ತಲೇ ಮೊಟ್ಟೆಯಿಂದ ಕರಿ ಮಾಡಿಕೊಟ್ಟಿದ್ದಾಳೆ. ಗಂಡ ಗೌತಮ್ಗೆ ಸರ್ಪ್ರೈಸ್ ನೀಡಲು ಆತನ ಕಣ್ಣುಮುಚ್ಚಿ ಮನೆಯಾಚೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಬಗೆಬಗೆ ಭಕ್ಷ್ಯಗಳನ್ನು ಮಾಡಲಾಗಿದೆ. ಇದನ್ನು ಯಾರು ಮಾಡಿದ್ದು ಎಂದು ಕೇಳಿದಾಗ, ಹೀಗಾದರೂ ಗಂಡನಿಗೆ ತನ್ನ ಪ್ರೀತಿಯ ಬಗ್ಗೆ ಅರಿವಾಗುತ್ತದೆ ಎಂದುಕೊಂಡು ಎಲ್ಲವನ್ನೂ ತಾನೇ ಮಾಡಿದ್ದು ಎಂದಿದ್ದಾಳೆ. ಆದರೆ ಗೌತಮ್ಗೆ ಅರ್ಥ ಆಗ್ಬೇಕಲ್ಲಾ? ಬಡಿಸಲು ಯಾರನ್ನಾದರೂ ಕರಿ ಎಂದಿದ್ದಾನೆ. ಆದರೆ ಇಬ್ಬರ ಮಧ್ಯೆ ಯಾರೂ ಬೇಡ ಎಂದುಕೊಂಡೇ ಹೀಗೆಲ್ಲಾ ಅರೇಂಜ್ ಮಾಡಿರುವ ಭೂಮಿಕಾ ತಾನೇ ಬಡಿಸಿದ್ದಾಳೆ.
ಡ್ರೋನ್ ಪ್ರತಾಪ್ಗೆ ಹುಷಾರು ತಪ್ಪಿದ್ದೇಕೆ? ಬಿಗ್ಬಾಸ್ ಮನೆಯಲ್ಲಿ ಹೇಳಿದ್ದೇನು, ಈಗ ಹೇಳ್ತಿರೋದೇನು?
ಅಂದಹಾಗೆ ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್ ಎಂದು ಬೇರೆ ಹೇಳಬೇಕಾಗಿಲ್ಲ. ಮಧ್ಯ ವಯಸ್ಕರು ಮದ್ವೆಯಾದರೆ ಅದೂ ಒಲ್ಲದ ಮನಸ್ಸಿನಿಂದ ಮದುವೆಯಾದರೆ ಏನೆಲ್ಲಾ ಆಗಬಹುದು ಎನ್ನುವುದನ್ನು ತುಂಬಾ ಸೂಕ್ಷ್ಮವಾಗಿ, ಪ್ರೇಕ್ಷಕರ ಮನಸ್ಸು ತಟ್ಟುವಂತೆ, ಅವರನ್ನು ಸದಾ ಹಿಡಿದಿಟ್ಟುಕೊಳ್ಳುವಂತೆ ರೂಪಿಸಲಾಗಿದೆ ಈ ಸೀರಿಯಲ್.
ಇದರಲ್ಲಿ ಭೂಮಿಕಾ ಗಂಡನಿಗಾಗಿ ಮೊಟ್ಟೆ ಕರಿ ತಯಾರಿಸಿರುವ ಬಗ್ಗೆ ಸಕತ್ ಕಮೆಂಟ್ಗಳು ಬರುತ್ತಿವೆ. ಕೆಲವರು ಅಪ್ಪಟ ಸಸ್ಯಾಹಾರಿಯಾಗಿರುವ, ಮೊಟ್ಟೆಯನ್ನೂ ತಿನ್ನದ ಭೂಮಿಕಾ ಹೇಗೆ ಮೊಟ್ಟೆಯ ಕರಿ ಮಾಡುವುದನ್ನು ಹೇಗೆ ಕಲಿತಳು ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಸೀರಿಯಲ್ನಲ್ಲಿ ಎಲ್ಲವೂ ಸಾಧ್ಯ ಎನ್ನುತ್ತಿದ್ದಾರೆ ಇನ್ನು ಕೆಲವರು. ಈ ಮುಂಚಿನ ಕಂತಿನಲ್ಲಿ ಕೂಡ ಮನೆಯ ಕರೆಂಟ್ ಹೋದ ಸಂದರ್ಭದಲ್ಲಿ ಕತ್ತಲೆಗೆ ಹೆದರುವ ಗೌತಮ್, ಭೂಮಿಕಾಳನ್ನು ಸಮೀಪ ಕರೆಯುವ ದೃಶ್ಯವಿತ್ತು. ಈ ದೃಶ್ಯವನ್ನು ಹಲವರು ಟ್ರೋಲ್ ಮಾಡಿದ್ದರು. ಮಿಲೇನಿಯರ್ ಮನೆಯಲ್ಲಿ ಜನರೇಟರ್, ಯುಪಿಎಸ್ ಇಲ್ವಾ ಅಂತ ಪ್ರಶ್ನಿಸಿದ್ದರು. ಇದೀಗ ಮೊಟ್ಟೆ ವಿಷಯದಲ್ಲಿಯೂ ಹಾಗೆಯೇ ಹೇಳುತ್ತಿದ್ದಾರೆ. ಆದರೆ ಪತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಭೂಮಿಕಾ ಮೊಟ್ಟೆ ಮಾಡಿದ್ದನ್ನು ನೋಡಿರುವ ಕೆಲವರು, ಬಿಡಿ ಪತಿಗಾಗಿ ಚಿಕನ್, ಮಟನ್ ಅನ್ನೂ ಕಲಿಯುತ್ತಾಳೆ ಎಂದಿರುವ ನೆಟ್ಟಿಗರು ಮಾಂಸಾಹಾರಿ-ಸಸ್ಯಾಹಾರಿಗಳು ಮದ್ವೆಯಾದ್ರೆ ಹೀಗೆಯೇ ಆಗುವುದು ಎಂದು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ಈಗಲಾದ್ರೂ ಗೌತಮ್ಗೆ ಪ್ರೀತಿ ಹುಟ್ಟಲಪ್ಪಾ ಅಂತಿದ್ದಾರೆ ಸೀರಿಯಲ್ ಪ್ರೇಮಿಗಳು.
ರಜನೀಕಾಂತ್ ‘ಸಂಘಿ‘ ವಿವಾದ: ಅಪ್ಪ-ಅಮ್ಮಗಳ ಮಾತಿನ ಮಧ್ಯೆ ಬಂದ ನಟ ಅಹಿಂಸಾ ಚೇತನ್!