ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಹಾಗೂ ತನಿಷಾ ಸ್ಟಾರ್ ಸುವರ್ಣ ವೇದಿಕೆ ಮೇಲೆ ಮಿಂಚಿದ್ದಾರೆ. ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ನುಗ್ಗೆಕಾಯಿ ನೋಡ್ತಿದ್ದಂತೆ ವರ್ತೂರು ಹೇಳಿದ ಮಾತು ಕೇಳಿ ವೀಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ.
ಬಿಗ್ ಬಾಸ್ ಸೀಸನ್ 10 (bigg boss season 10) ರಲ್ಲಿ ಪ್ರಸಿದ್ಧಿ ಪಡೆದಿದ್ದ ಜೋಡಿ, ವರ್ತೂರು ಸಂತೋಷ್ (Varthur Santhosh) ಹಾಗೂ ನಟಿ ತನಿಷಾ ಕುಪ್ಪಂಡ (actress Tanisha Kuppanda). ಇವರು ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ ಹೊರಗೆ ಬಂದ್ಮೇಲೂ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. ಇಬ್ಬರೂ ಕೆಲ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ಸ್ಟಾರ್ ಸುವರ್ಣ ಚಾನೆಲ್ ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜೋಡಿ, ವೇದಿಕೆ ಮೇಲೆ ಕಿಚ್ಚು ಹಚ್ಚಿದೆ. ಸುವರ್ಣ ಸೂಪರ್ ಸ್ಟಾರ್ ಖ್ಯಾತಿಯ ಶಾಲಿನಿ ನಡೆಸಿಕೊಡುವ ಈ ಪ್ರೋಗ್ರಾಂನಲ್ಲಿ ವರ್ತೂರ್ ಹಾಗೂ ತನಿಷಾ ಕುಪ್ಪಂಡ ಮಿಂಚಿದ್ದಾರೆ.
ಅಮ್ಮಂದಿರ ಜೊತೆ ತಾರೆಗಳ ಸಂಭ್ರಮ ಜೋರು, ನಿಮ್ಮ ಮನೆಗೆ ಬರ್ತಿದೆ ಸ್ಟಾರ್ ಸುವರ್ಣ ದಸರಾ ದರ್ಬಾರ್ ಶೀರ್ಷಿಕೆಯಲ್ಲಿ ಪ್ರೋಗ್ರಾಂ ಪ್ರೋಮೋವನ್ನು ಸ್ಟಾರ್ ಸುವರ್ಣ ಇನ್ಸ್ಟಾದಲ್ಲಿ ಹಂಚಿಕೊಂಡಿದೆ. ವೇದಿಕೆ ಮೇಲೆ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ರೋಮ್ಯಾಂಟಿಕ್ ಡಾನ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದೇ ವೇಳೆ ನಿರೂಪಕಿ ಶಾಲಿನಿ ಕೆಲ ಆಟವನ್ನು ಆಡಿಸ್ತಾರೆ. ಅದ್ರಲ್ಲಿ ಪಾಲ್ಗೊಳ್ಳುವ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ, ಆಟವನ್ನು ಎಂಜಾಯ್ ಮಾಡಿದ್ದಾರೆ. ಕಣ್ಣು ಮುಚ್ಚಿಕೊಂಡು ವಸ್ತುಗಳನ್ನು ಪತ್ತೆ ಮಾಡುವ ಟಾಸ್ಕ್ ನಲ್ಲಿ ವರ್ತೂರು ಸಂತೋಷ್ ಕೈಗೆ ನುಗ್ಗೆ ಕಾಯಿಯನ್ನು ನೀಡಲಾಗುತ್ತದೆ. ನುಗ್ಗೆ ಕಾಯಿ ಗುರುತಿಸುವ ಸಂತೋಷ್, ಇದ್ರ ಮೇಲೆ ಒಂದು ಸಾಂಗ್ ಇದೆ. ಜಾಸ್ತಿ ತಿಂದ್ರೆ ಮೂಡ್ ಎನ್ನುವ ವರ್ತೂರು ಮಾತು ಕೇಳಿ ಎಲ್ಲರೂ ಬಿದ್ದು ಬಿದ್ದು ನಗ್ತಾರೆ.
undefined
ಸಂಜಾನಾ ಆನಂದ್ ಜೊತೆ ಚಂದನ್ ಶೆಟ್ಟಿ ಮದ್ವೆ: ನಟಿ ಹೇಳಿದ್ದಾಯ್ತು, ಶೆಟ್ರು ಹೇಳ್ತಿರುವುದೇನು?
ಈ ವಿಡಿಯೋ ನೋಡಿದ ವೀಕ್ಷಕರು, ವರ್ತೂರು ಸಂತೋಷ್ ಹಾಗೂ ತನಿಷಾ ನೋಡಿ, ಸೂಪರ್ ಜೋಡಿ ಎನ್ನುತ್ತಿದ್ದಾರೆ. ಈ ಎಪಿಸೋಡು ಇದೇ ಭಾನುವಾರ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಕಿರಿಕ್ ಕೀರ್ತಿ ಸೇರಿದಂತೆ ಕೆಲ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದಾರೆ.
ತನಿಷಾ ಹಾಗೂ ವರ್ತೂರು ಸಂತೋಷ್ ಇಬ್ಬರೂ ಬಿಗ್ ಬಾಸ್ ನಂತ್ರ ಹೆಚ್ಚು ಪ್ರಸಿದ್ಧಿಗೆ ಬಂದವರು. ತನಿಷಾ ಸದ್ಯ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಮಂಗಳಗೌರಿ ಮದುವೆ, ಇಂತಿ ನಿಮ್ಮ ಆಶಾ ಸೇರಿದಂತೆ ಕೆಲ ಧಾರಾವಾಹಿಯಲ್ಲಿ ಅಧ್ಬುತವಾಗಿ ನಟಿಸಿ ಸೈ ಎನ್ನಿಸಿಕೊಂಡಿದ್ದ ತನಿಷಾ, ಪೆಂಟಗನ್ ಸಿನಿಮಾದಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡು, ಎಲ್ಲದಕ್ಕೂ ಸೈ ಎಂಬುದನ್ನು ಸ್ಪಷ್ಟಪಡಿಸಿದ್ದರು. ಈಗ ತನಿಷಾ ಕೈನಲ್ಲಿ ಪೆನ್ ಡ್ರೈವ್ ಸಿನಿಮಾ ಇದೆ. ಈ ಮಧ್ಯೆ ಮದುವೆ, ಸಂಸಾರದ ಕನಸನ್ನೂ ತನಿಷಾ ಕಾಣ್ತಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದ ತನಿಷಾ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಾರ್ತಿಕ್ ಹುಟ್ಟುಹಬ್ಬದ ಸಮಯದಲ್ಲೂ ತನಿಷಾ ಮಿಂಚಿದ್ದರು.
ಪುನೀತ್ ರಾಜ್ರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ ನೋವಿನ ನುಡಿ... ಕೈ ಮೇಲೆ ಅಪ್ಪು ಹಚ್ಚೆ...
ಇನ್ನು ಬಿಗ್ ಬಾಸ್ ಮನೆಗೆ ಬಂದ್ಮೇಲೆ ಹುಲಿ ಉಗುರಿನ ವಿಚಾರಕ್ಕೆ ಜೈಲು ಸೇರಿದ್ದ ವರ್ತೂರ್ರು ಸಂತೋಷ್ ನಂತ್ರ ಸ್ವಲ್ಪ ತಣ್ಣಗಾಗಿದ್ದರು, ಮನೆಯಲ್ಲಿ ಅವರು ಮಾಡಿದ ಕೆಲ ತಂತ್ರ ವರ್ಕ್ ಆಗಿತ್ತು. ಹಳ್ಳಿಕಾರ್ ಒಡೆಯರ್ ಎಂದೇ ಪ್ರಸಿದ್ಧಿಯಾಗಿರುವ ವರ್ತೂರು ಸಂತೋಷ್, ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಇದೆ. ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕುವ ಸುಳಿವನ್ನು ಈ ಹಿಂದೆ ನೀಡಿದ್ದರು. ಸುದೀಪ್ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು.
ಆಗಾಗ ವರ್ತೂರು ಸಂತೋಷ್ ಹಾಗೂ ತನಿಷಾ ಅವರನ್ನು ಒಟ್ಟಿಗೆ ನೋಡುವ ಜನರು, ಇವರಿಬ್ಬರೂ ಮದುವೆ ಆಗ್ಲಿ ಎನ್ನುತ್ತಲೇ ಇದ್ದಾರೆ. ಆದ್ರೆ ಈ ಹಿಂದೆಯೇ ವರ್ತೂರು ಸಂತೋಷ್ ಇದನ್ನು ತಳ್ಳಿಹಾಕಿದ್ದಾರೆ, ತನಿಷಾ ನನ್ನ ಫ್ರೆಂಡ್. ಆದ್ರೆ ಅವರನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.