ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಬಿಗ್ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ ಹೇಳಿದ್ದೇನು?
ಪುನೀತ್ ರಾಜ್‌ಕುಮಾರ್ ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಇವರು ಮಾಡಿದ ಸಮಾಜಮುಖಿ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದವರು. ಇವರ ನಿಧನದ ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ಹಲವರು. ಅಪ್ಪು ಅವರ ಹಾದಿಯನ್ನೇ ಹಿಡಿಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇಂಥವರಲ್ಲಿ ಒಬ್ಬರು ಬಿಗ್ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ.
ಸ್ಟಾರ್ ಸುವರ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಮ್ರತಾ ಅವರು, ಪುನೀತ್ ರಾಜ್ರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಾನು ವೇದಿಕೆ ಮೇಲೆ ಅಳಲು ಇಷ್ಟಪಡಲ್ಲ ಎನ್ನುತ್ತಲೇ ಕಣ್ಣೀರಾಗಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾನು ಅವರ ತುಂಬಾ ಅಭಿಮಾನಿ. ಅವರು ನಿಧನದ ಸುದ್ದಿ ಗೊತ್ತಾದಾಗ ದೇವರ ಮುಂದೆ ಕುಳಿತು ನಾನು ಆ ಸುದ್ದಿ ಸುಳ್ಳಾಗಿರಲಿ ಎಂದು ದೇವರಲ್ಲಿ ಬೇಡಿಕೊಂಡೆ. ಯಾವಾಗಲೂ ನನ್ನ ವಿಷಯಕ್ಕೆ ದೇವರನ್ನು ಬೇಡಿಕೊಳ್ಳುವುದಿಲ್ಲ. ಆದರೆ ಅಂದು ಮಾತ್ರ ನನ್ನ ಸ್ಥಿತಿ ಹೇಗಾಗಿತ್ತು ಎಂದರೆ... ಎನ್ನುತ್ತಲೇ ಕಣ್ಣೀರು ಹಾಕಿದ್ದಾರೆ. ಅವರನ್ನು ಇಷ್ಟು ಬೇಗ ಕಳೆದುಕೊಳ್ತೀನಿ ಎಂದು ಗೊತ್ತಿರಲಿಲ್ಲ. ಅವರು ನನಗೆ ಗೊತ್ತಿಲ್ಲ. ಚಿಕ್ಕವಳಿದ್ದಾಗ ಅವರ ಜೊತೆ ಒಮ್ಮೆ ಆ್ಯಕ್ಟ್ ಮಾಡಿದ್ದೆ ಅಷ್ಟೇ. ಆದರೆ ಅವರು ನನಗೆ ದೇವರು ಆಗಿದ್ದರು. ಅವರಂತೆ ಆ್ಯಕ್ಟ್ ಮಾಡಬೇಕು, ಹೆಲ್ಪ್ ಮಾಡಬೇಕು ಅಂದುಕೊಂಡೇ ಬೆಳೆದವಳು ಎಂದ ನಮ್ರತಾ ಅವರು, ಪುನೀತ್ ಯಾವಾಗಲೂ ನನ್ನ ಜೊತೆನೇ ಇರಬೇಕು ಎನ್ನುವ ಕಾರಣಕ್ಕೆ ಅವರ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ಕೈಮೇಲೆ ಹಾಕಿಸಿಕೊಂಡ ಟ್ಯಾಟೂ ತೋರಿಸಿದರು.
ನಾಲ್ವರಿಗೆ ಬೆಳಕು ನೀಡಿದ ಪುನೀತ್ ರಾಜ್: ಅಂದು ನಡೆದ ಘಟನೆ ವಿವರಿಸಿದ ಡಾ.ರೋಹಿತ್ ಶೆಟ್ಟಿ
ಈ ಹಿಂದೆ ಕೂಡ ನಮ್ರತಾ ಅವರು, ಸೋಷಿಯಲ್ ಮೀಡಿಯಾದಲ್ಲಿ ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. 'Forever' ಎಂದು ಬರೆದುಕೊಂಡಿದ್ದರು. ನಾಲ್ಕು ವರ್ಷಗಳ ಹಿಂದೆ ಅದರೆ 2020ರಲ್ಲಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಿಮ್ಮ ಬಾಲ್ಯದ ಕ್ರಶ್ ಯಾರು ಎಂದು ಕೇಳಿದಾಗ, ನಮ್ರತಾ ಪುನೀತ್ ರಾಜ್‌ಕುಮಾರ್ ಹೆಸರು ಹೇಳಿದ್ದರು. ಐದಕ್ಕಿಂತ ಹೆಚ್ಚು ಬಾರಿ ಯಾವುದಾದರೂ ಸಿನಿಮಾ ನೋಡಿದ್ದೀರಾ ಎಂಬ ಪ್ರಶ್ನೆಗೆ ಪುನೀತ್ ರಾಜ್‌ಕುಮಾರ್ ಅವರ ಬಹುತೇಕ ಎಲ್ಲಾ ಸಿನಿಮಾಗಳನ್ನೇ ಹೆಚ್ಚು ನೋಡಿರುವುದಾಗಿ ಹೇಳಿದ್ದ ಅವರು, ವ 'ಪರಮಾತ್ಮ' ನೋಡೋದು ನನಗೆ ತುಂಬ ಇಷ್ಟ ಎಂದೂ ತಿಳಿಸಿದ್ದರು.
undefined
ಅಷ್ಟೇ ಅಲ್ಲದೇ, ಅಪ್ಪು ಅವರ ನಿಧನದ ಬಳಿಕ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಡವರಿಗೆ ಹಾಗೂ ನಿರ್ಗತಿಕರಿಗೆ ಹಾಗೂ ಬೀದಿ ಬದಿ ಸಣ್ಣ ವ್ಯಾಪಾರಿಗಳಿಗೆ ಊಟ ಹಂಚಿ ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದರು.
5 ವರ್ಷದೊಳಗೇ ಚಿಕಿತ್ಸೆ ಕೊಟ್ರೆ ಜಗತ್ತಲ್ಲಿ ಮೂಕರೇ ಇರಲ್ಲ: ಪುನೀತ್ ರಾಜ್ರನ್ನು ನೆನೆದ ಡಾ.ದೀಪಕ್ ಹೇಳಿದ್ದೇನು?