ಸುಳ್ಳಿನ ಬುನಾದಿಯ ಮೇಲೆ ನಿಂತಿರುವ ವರು-ಸ್ಕಂದರ ಮದುವೆ ಯಾವುದೇ ವಿಘ್ನಗಳಿಲ್ಲದೆ ನಡೆಯುತ್ತಾ? ವರಲಕ್ಷ್ಮಿ ತನ್ನ ಐಎಎಸ್ ಕನಸನ್ನು ನನಸಾಗಿಸುತ್ತಾಳಾ ? ಈ ಮೂರುಗಂಟಿನ ಬಂಧ, ವರು ಕನಸುಗಳನ್ನು ಕಟ್ಟಿಹಾಕುತ್ತಾ?. ..
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು (Star Suvarna)ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫಿನ್ ರೂಮ್' ಧಾರಾವಾಹಿಯು ತನ್ನ ವಿಭಿನ್ನ ಕಥಾ ಹಂದರದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಲಕ್ಷ್ಮಿ ಟಿಫನ್ ರೂಮ್" ಧಾರಾವಾಹಿಯಲ್ಲಿ 'ವರಲಕ್ಷ್ಮಿ ಕಲ್ಯಾಣ' .. ಮಹಾ ತಿರುವುಗಳುಳ್ಳ ಸಂಚಿಕೆಗಳು ಇದೇ ಸೋಮ-ಶನಿ ಸಂಜೆ 6.30 ಕ್ಕೆ ಪ್ರಸಾರ ಕಾಣುತ್ತಿವೆ.
ಕಾಲೇಜ್ ಗರ್ಲ್ಸ್‌ಗೆ ಸಮಂತಾ ಹೇಳಿದ ಟಿಪ್ಸ್ ಕೇಳಿ 'ಬಾಯ್ಸ್' ಕಂಗಾಲು; ನಾವೇನು ಮಾಡ್ಲಿ ಅಂತಿದಾರಲ್ರೀ!
ನೇರ ನುಡಿಯನ್ನು ಹೊಂದಿರೋ ಕಥಾನಾಯಕಿ ವರಲಕ್ಷ್ಮಿ ಐಎಎಸ್ ಮಾಡಬೇಕೆಂಬ ಕನಸನ್ನು ಕಂಡಿರುತ್ತಾಳೆ. ಆದರೆ ಕಥಾನಾಯಕ ಸ್ಕಂದನಿಗೆ ವರಲಕ್ಷ್ಮಿಯ ಮೇಲೆ ಮೊದಲ ನೋಟದಲ್ಲೇ ಪ್ರೇಮಾಂಕುರವಾಗುತ್ತದೆ. ಮದುವೆ ಆದ್ರೆ ಆಕೆಯನ್ನೇ ಮದುವೆಯಾಗ್ಬೇಕು ಅನ್ನೋ ಸ್ಕಂದನ ಆಸೆಗೆ ಅಜ್ಜಯ್ಯ ಸಮ್ಮತಿ ನೀಡುವುದಿಲ್ಲ. ಹೆಚ್ಚು ಓದದೇ ಇರೋ ಹುಡುಗಿಯೇ ಈ ಮನೆಗೆ ಸೊಸೆಯಾಗಿ ಬರಬೇಕು ಎಂದು ಆದೇಶಿಸ್ತಾರೆ.
ಯಂಗ್‌ಸ್ಟರ್ಸ್‌ಗೆ ದೀಪಿಕಾ ಪಡುಕೋಣೆ ಲೈಫ್ ಟಿಪ್ಸ್; ಕೇಳಿ ತಲೆದೂಗಿದ ಯುವಜನರು ಹೇಳಿದ್ದೇನು?
ಮುಂದೆ ಮನೆಯವರೆಲ್ಲಾ ಸೇರಿ ಸ್ಕಂದನ ಪ್ರೀತಿಯನ್ನ ಉಳಿಸಲು ಅವನು ಇಷ್ಟ ಪಟ್ಟಿರೋ ಹುಡುಗಿ ಜೊತೆಗೆ ಮದುವೆ ಮಾಡಿಸೋ ಪ್ಲಾನ್ ಮಾಡುತ್ತಾರೆ. ಇತ್ತ ವರಲಕ್ಷ್ಮಿ ತನ್ನ ಬಾವನ ಮಾತಿನಂತೆ ತಾನು ಮದುವೆಯಾಗಿ ಹೋಗೋ ಮನೆಯವರು ತನ್ನ ಐಎಎಸ್ ಕನಸಿಗೆ ಬೆಂಬಲ ನೀಡ್ತಾರೆ ಎಂದು ನಂಬಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾಳೆ.
ಲವ್ ಸ್ಟೋರಿ ನನಗಿಷ್ಟ ಎಂದಿರುವ ಸಾಯಿ ಪಲ್ಲವಿ ರಿಯಲ್ ಲೈಫ್‌ನಲ್ಲಿ 'ಲವರ್' ರಿಜೆಕ್ಟ್ ಮಾಡಿದ್ದು ಯಾಕೆ?
ಆದರೆ ಸುಳ್ಳಿನ ಬುನಾದಿಯ ಮೇಲೆ ನಿಂತಿರುವ ವರು-ಸ್ಕಂದರ ಮದುವೆ ಯಾವುದೇ ವಿಘ್ನಗಳಿಲ್ಲದೆ ನಡೆಯುತ್ತಾ? ವರಲಕ್ಷ್ಮಿ ತನ್ನ ಐಎಎಸ್ ಕನಸನ್ನು ನನಸಾಗಿಸುತ್ತಾಳಾ ? ಈ ಮೂರುಗಂಟಿನ ಬಂಧ, ವರು ಕನಸುಗಳನ್ನು ಕಟ್ಟಿಹಾಕುತ್ತಾ? ಈ ಎಲ್ಲಾ ಪ್ರಶ್ನೆಗಳ ಉತ್ತರಕ್ಕೆ ರೋಚಕ ಸಂಚಿಕೆಗಳನ್ನೊಳಗೊಂಡ 'ಲಕ್ಷ್ಮಿ ಟಿಫನ್ ರೂಮ್' ಸೀರಿಯಲ್‌ನಲ್ಲಿ 'ವರಲಕ್ಷ್ಮಿ ಕಲ್ಯಾಣ'ವನ್ನು ಇದೇ ಸೋಮ-ಶನಿವಾರ ಸಂಜೆ 6.30 ಕ್ಕೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕ್ಷಿಸಬಹುದು.