ಬಿಗ್ಬಾಸ್ 5ರ ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್ ಅವರು ಮುಂದಿನ ವಾರ ಮದುವೆಯಾಗುತ್ತಿದ್ದು, ಅವರ ಮದುವೆಯ ಕರೆಯೋಲೆ ವೈರಲ್ ಆಗಿದೆ.
ಬಿಗ್ ಬಾಸ್ ಹಲವಾರು ಪ್ರತಿಭೆಗಳಿಗೆ ವೇದಿಕೆಯಾಗಿದ್ದು ನಿಜ. ಇದರಲ್ಲಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯರಾಗಿದ್ದರೂ ಸಹ ಬಿಗ್ ಬಾಸ್ ಬಂದ ಮೇಲೆ ಕನ್ನಡ ಮನರಂಜನಾ ಜಗತ್ತಿನಲ್ಲಿ ದೊಡ್ಡ ಸ್ಥಾನವನ್ನೇ ಪಡೆದರು. ಅಂಥವರಲ್ಲಿ ಒಬ್ಬರು ಪ್ರಥಮ್. ಒಳ್ಳೆ ಹುಡುಗ ಪ್ರಥಮ್ ಎಂದೇ ಖ್ಯಾತಿ ಪಡೆದಿದ್ದಾರೆ ಇವರು. ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಹೀಗೆಯೇ ಬರೆದುಕೊಳ್ಳುತ್ತಾರೆ. ಮೈಸೂರು ಸಮೀಪದ ಸಣ್ಣ ಹಳ್ಳಿಯಿಂದ ಬಂದ ಪ್ರಥಮ್ 'ಬಿಗ್ ಬಾಸ್ ಕನ್ನಡ ಸೀಸನ್ 4' ಗೆಲ್ಲುವ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿದರು. ಅವರ ಸ್ಪರ್ಧಾತ್ಮಕ ಮನೋಭಾವ ಮತ್ತು ಮಾತು, ಟಾಸ್ಕ್ ಎಲ್ಲವೂ ಜನರಿಗೆ ಅಪಾರ ಮೆಚ್ಚುಗೆಯನ್ನು ಗಳಿಸಿತು. ಇತ್ತೀಚೆಗೆ, ಅವರು ಬಿಗ್ ಬಾಸ್ ಶೋನ ಪ್ರಸ್ತುತ ಸೀಸನ್ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು. ಬಿಗ್ ಬಾಸ್ ಬಳಿಕ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಇವರು ಈಗ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ.
ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಮದುವೆಯ ಕರೆಯೋಲೆ ಸಕತ್ ಸದ್ದು ಮಾಡುತ್ತಿದೆ. ಇದಕ್ಕೆ ಹಲವರು ಭೇಷ್ ಭೇಷ್ ಎನ್ನುತ್ತಿದ್ದರೂ, ಕೆಲವರು ಅಪಸ್ವರ ತೆಗೆದಿದ್ದಾರೆ. ಅಷ್ಟಕ್ಕೂ ಪ್ರಥಮ್ ಅವರು ಈ ಹಿಂದೆಯೇ ತಾವು ಸರಳವಾಗಿ ಮದುವೆಯಾಗುವ ಬಗ್ಗೆ ಹಿಂಟ್ ನೀಡಿದ್ದರು. ಮದುವೆಗೆ 200 ಜನರಿಗೆ ನಮ್ಮೂರು ಕೊಳ್ಳೇಗಾಲ, ಹನೂರಲ್ಲಿ ಬೀಗರ ಊಟ ಹಾಕಿಸ್ತೀವಿ. ಇಷ್ಟೇ ನನ್ನ ಮದುವೆಯ ಮೆನು ಎಂದು ಹೇಳಿದ್ದರು. ಇದೀಗ ಅವರ ಇನ್ವಿಟೇಷನ್ ಕಾರ್ಡ್ ಕೂಡ ವೈರಲ್ ಆಗಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಮದುವೆಯ ಕುರಿತು ಹೇಳಿದ್ದೇನೆಂದರೆ, ಮುಂದಿನ ವಾರ ಮದುವೆ; ಅಲ್ಲೇ ಬಂದು ಆಶೀರ್ವಾದ ಮಾಡ್ಬೇಕು ಅಂತೇನೂ ಇಲ್ಲ. ಕರೆಯೋಕೆ ನನಗೂ ಅತೀಯಾದ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ; ಹಾಗಂತ ಸುಮ್ಮನೆ forward msg ಹಾಕಿ ನಿಮ್ಮನ್ನು ಮದುವೆಗೆ ಕಾಟಾಚಾರಕ್ಕೆ ಕರೆಯೋದೂ ಇಲ್ಲ. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್ ಆಗಿ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ.. ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲಿಯೇ ಹಾರೈಸಿ. ಒಳ್ಳೇ ಮನಸ್ಸಿನಿಂದ ಆಶೀರ್ವದಿಸಿ" ಎಂದಿದ್ದಾರೆ.
ವಿರಹ... ಹುಲಿಯ ಉಗುರು ತರಹ... ಡ್ಯಾನ್ಸ್ ಮೂಲಕ ನೋವು ತೋಡಿಕೊಂಡ ಆ್ಯಂಕರ್ ಅನುಶ್ರೀ!
ಅಷ್ಟಕ್ಕೂ ಇವರ ಎಂಗೇಜ್ಮೆಂಟ್ ಕೂಡ ವಿಶೇಷವಾಗಿಯೇ ನಡೆದಿತ್ತು. ಕಳೆದ ಜೂನ್ ತಿಂಗಳಿನಲ್ಲಿ ಮಂಡ್ಯದ ಭಾನುಶ್ರೀ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥಕ್ಕೆ ಕೆಲವರನ್ನಾದರೂ ಕರೆದು ಊಟ ಹಾಕಿಸಬೇಕಿತ್ತು ಅಂತ ಕೆಲವರು ಪ್ರಥಮ್ ಅವರಿಗೆ ಸಜೆಷನ್ ಕೊಟ್ಟಿದ್ರು. ಆಗ ಅವರಿಗೆ ಪ್ರಥಮ್, ವೃದ್ಧಾಶ್ರಮವೊಂದರ 138 ಜನರಿಗೆ ಸಿಹಿ ಊಟ ಹಾಕಿಸ್ತೀವಿ. ಚಳಿಗಾಲದ ಆಸರೆಗಾಗಿ ಒಂದು ಶಾಲು ಕೊಡ್ತೀವಿ ಎಂದಿದ್ದರು.
ನೇರಾನೇರ ಮಾತನಾಡುವುದರಲ್ಲಿ ಪ್ರಥಮ್ ಫೇಮಸ್ಸು. ಇತ್ತೀಚಿನ ದಿನಗಳಲ್ಲಿ ಜಿಮ್ಗೆ ಹೋಗುವ ಸಮಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಕುರಿತು ಮಾತನಾಡಿದ್ದ ಪ್ರಥಮ್ ಅವರು, 'ಬೇಗ ಸ್ಲಿಮ್ ಆಗ್ಬೇಕು ಅಂತ ಅತಿಯಾಗಿ ಜಿಮ್ ಹೋದ್ರೆ ಹೃದಯ ಢಂ ಅನ್ನಬಹುದು. ಚೆನ್ನಾಗಿ ವಾಕ್ ಮಾಡಿ. ವ್ಯಾಯಾಮ ಮಾಡಿ. ನಿದ್ರೆ ಸರಿಯಾಗಿ ಮಾಡಿ. ಸಾಧ್ಯವಾದಷ್ಟು(ಮನೆ ಊಟ ಸೇವಿಸಿ 10 ಗಂಟೆ ನಿದ್ರೆ ಮಾಡಿ; ಮನಸಿನ ಆರೋಗ್ಯಕ್ಕೆ ಧ್ಯಾನ ಮಾಡಿ. ಸುಮ್ನೆ ಅತಿಯಾದ ಡಯಟ್ ಬೇಡ. ಇದ್ಯಾವುದು ಮಾಡದೇ ನಿಮ್ಮಪ್ಪ ತಾತ ಚೆನ್ನಾಗಿದ್ರು ಅನ್ನೋದ ಮರೀಬೇಡಿ. ಒಳ್ಳೇದನ್ನ ಕೇಳಿ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅದರ ಬೆನ್ನಲ್ಲಿಯೇ ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ಅವರು, 'ನಾನು ಜನರಿಗೆ ಒಳ್ಳೇದನ್ನೇ ಹೇಳೋದು. ಜಾಸ್ತಿ ನೀರು ಕುಡಿಯಿರಿ. ನಿದ್ರೆ ಮಾಡಿ. ಮದುವೆಯಾಗಿದ್ರೆ ಆರೋಗ್ಯಕರ ಸೆಕ್ಸ್ ಮಾಡಿ. ಎಣ್ಣೆ ಪದಾರ್ಥ ಹೆಚ್ಚಾಗಿ ತಿನ್ನಬೇಡಿ. ನಿದ್ರೆ ಮಾಡಿ. ಇದಿಷ್ಟು ಮಾಡಿದ್ರೆ ಆರೋಗ್ಯವಂತರಾಗಿ ಚೆನ್ನಾಗಿರ್ತೀರಾ. ಫಿಟ್ ಆಗಿ ಇರ್ಬೇಕು ಅಂತ ಪ್ರೋಟೀನ್ಸ್ ಅದು ಇದು ಯಾವುದು ಬೇಡ...ಸುಮ್ನೆ ಯಾರದೋ ಬಾಡಿ ನೋಡ್ಕೊಂಡು ನಾನು ಅಂಗೆ ಆಗೋಗ್ತೀನಿ ಅಂತ ನಿಮ್ಮ ಆಹಾರ ಪ್ರಕ್ರಿಯೆ ಬದಲಿಸಿಕೊಳ್ಳಬೇಡಿ...ನನ್ನ ಮಾತನ್ನ ಕೇಳಿ...; ಆರೋಗ್ಯವಂತರಾಗಿ ಬಾಳ್ತೀರಾ.. ಅತೀಯಾದ ಎನರ್ಜಿ ಡ್ರಿಂಕ್, ಪ್ರೋಟೀನ್ಸ್ ಅಂತ ಹೋದ್ರೆ ದೇವ್ರಾಣೆ ಕಷ್ಟ' ಎಂದು ಬರೆದುಕೊಂಡಿದ್ದರು. ಇದು ಕೂಡ ಸಕತ್ ವೈರಲ್ ಆಗಿತ್ತು.
ನನ್ನನ್ನು ಸ್ಕೂಲ್ನಿಂದ ಓಡಿಸಿಬಿಟ್ರು! ಬಾಲ್ಯದ ಗೆಳೆಯ ರವಿಚಂದ್ರನ್ ಜತೆ ಡಿ.ಕೆ.ಶಿವಕುಮಾರ್ ಸವಿ ನೆನಪು
Next weekಮದುವೆ;ಅಲ್ಲೇ ಬಂದು ಆಶೀರ್ವಾದ ಮಾಡ್ಬೇಕಂತೇನೂ ಇಲ್ಲ.ಕರೆಯೋಕೆ ಸಂಭ್ರಮವೂ ಇಲ್ಲ.invitationತಲುಪಿಸೋದೇ ಹರಸಾಹಸ;ಹಾಗಂತ ಸುಮ್ಮನೆfrwrd msgಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ.ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ.grandಆಗಿ ಆಗಬಹುದಿತ್ತು.ನನಗೆ ಆಸಕ್ತಿ ಇಲ್ಲ,ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲಿಯೇ ಹಾರೈಸಿ
— Olle Hudga Pratham (@OPratham)