ರಾಮನ ಮದುಮಗಳಾಗಿ ಸೀತಾ ರೆಡಿಯಾಗಿದ್ದು ಹೇಗೆ? ವಿಡಿಯೋದೊಂದಿಗೆ ಮಾಹಿತಿ ನೀಡಿದ ವೈಷ್ಣವಿ

Published : Jul 08, 2024, 08:45 PM IST
ರಾಮನ ಮದುಮಗಳಾಗಿ ಸೀತಾ ರೆಡಿಯಾಗಿದ್ದು ಹೇಗೆ? ವಿಡಿಯೋದೊಂದಿಗೆ ಮಾಹಿತಿ ನೀಡಿದ ವೈಷ್ಣವಿ

ಸಾರಾಂಶ

 ರಾಮನ ಮದುಮಗಳಾಗಿ ಕಂಗೊಳಿಸಲು ತಾವು ಹೇಗೆ ಸಿದ್ಧತೆ ನಡೆಸಿದ್ದೆ ಎಂಬ ಬಗ್ಗೆ ನಟಿ ವೈಷ್ಣವಿ ಗೌಡ ವಿಡಿಯೋದೊಂದಿಗೆ ಮಾಹಿತಿ ನೀಡಿದ್ದಾರೆ.   

ಸೀತಾರಾಮರ ಕಲ್ಯಾಣ ನಡೆಯುತ್ತಿದೆ. ರಿಯಲ್‌ ಮದುವೆಯ ರೀತಿಯಲ್ಲಿಯೇ ಅದ್ಧೂರಿಯಾಗಿ ಈ ರೀಲ್‌ ಮದುವೆ ನಡೆಯುತ್ತಿದೆ. ಮದುವೆಯ ಇನ್ವಿಟೇಷನ್‌ನಿಂದ ಹಿಡಿದು ಎಲ್ಲವನ್ನೂ ರಿಯಲ್‌ ಮದ್ವೆಯಂತೆಯೇ ರೆಡಿ ಮಾಡಲಾಗಿದೆ. ಆರು ದಿನಗಳು ಈ ಮದುವೆ ನಡೆಯಲಿದೆ ಎಂದು ನಟಿ ಹೇಳಿದ್ದಾರೆ. ಇದಕ್ಕಾಗಿಯೇ ಶೂಟಿಂಗ್‌ ಮನೆಯನ್ನು ತೆಗೆದುಕೊಳ್ಳಲಾಗಿದ್ದು, ಅದಕ್ಕೆ ಅದ್ಧೂರಿಯಾಗಿ ಸಿಂಗಾರ ಮಾಡಲಾಗಿದೆ. ರಿಯಲ್‌ ಮದುವೆ ಮನೆಯ ಓಡಾಟದಂತೆಯೇ ನೆಂಟರಿಷ್ಟರು ಓಡಾಟ ನಡೆಸುತ್ತಿದ್ದಾರೆ. ಭರ್ಜರಿ ಅಲಂಕಾರ ಮಾಡಲಾಗಿದೆ. ಹೂವಿನ ಅಲಂಕಾರದ ಜೊತೆಜೊತೆಗೆ ವಿದ್ಯುದ್ದೀಪಗಳಿಂದ ಮನೆ ಕಂಗೊಳಿಸುತ್ತಿದೆ. ಮದುವೆಯ ಸಂಪೂರ್ಣ ಶೂಟಿಂಗ್‌ ಇದಾಗಲೇ ಮುಗಿದಿದೆ. ಆದರೆ ಅದರ ಪ್ರಸಾರ ಆಗಬೇಕಿದೆಯಷ್ಟೇ. ಸದ್ಯ ಕೆಲವೊಂದು ಶಾಸ್ತ್ರಗಳ ಕಂತುಗಳನ್ನು ತೋರಿಸಲಾಗಿದ್ದು, ಇನ್ನು ಮುಖ್ಯ ಘಟ್ಟಗಳು ಬಾಕಿ ಇವೆ.

ಇದೀಗ ನಟಿ ವೈಷ್ಣವಿ ಗೌಡ ಅಂದ್ರೆ ಸೀತಾ ಪಾತ್ರಧಾರಿ ತಾವು ಮದುಮಗಳಾಗಿ ಮಿಂಚಲು ಹೇಗೆ ಸನ್ನದ್ಧರಾಗಿದ್ದು ಎಂಬ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ತಮ್ಮ ಕೆಲವು ಫೋಟೋಗಳನ್ನು ಶೇರ್‌ ಮಾಡಿಕೊಂಡಿರುವ ನಟಿ, ಅದರಲ್ಲಿ ಮದುಮಗಳಾಗಿ ತಾವು ರೆಡಿಯಾಗುತ್ತಿರುವ ಬಗೆಯನ್ನು ತೋರಿಸಿದ್ದಾರೆ. ಅಷ್ಟಕ್ಕೂ ಇಂದು ಸೀರಿಯಲ್​ಗಳು ಎಂದರೆ ಅವು ಕೇವಲ ಸೀರಿಯಲ್​ಗಳಾಗಿರಲ್ಲ. ಬದಲಿಗೆ ಅದು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಅದರಲ್ಲಿರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್​ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಹಾಗೆಯೇ ಸೀತಾ ಮತ್ತು ರಾಮ್​ ಮದುವೆ ಸಂಭ್ರಮ ಜೋರಾಗಿ ನಡೆದಿದೆ.  

ಮದ್ವೆ ಆಗೋತನ್ಕ ತಡ್ಕೊಳ್ರಪ್ಪಾ... ಇಲ್ಲೇ ಎಲ್ಲಾ ಮುಗಿಸಬೇಡ್ರಪ್ಪಾ ... ಸೀತಾರಾಮರ ಕಾಲೆಳಿತಿರೋ ಫ್ಯಾನ್ಸ್​

ಸೀರಿಯಲ್​ಗಳ ಮದುವೆ ಎಂದರೆ ಅದು ಒಂದೆರಡು ದಿನಗಳ ಮದ್ವೆಯಲ್ಲ. ಇದೀಗ ನಿಜ ಜೀವನದಲ್ಲಿಯೂ ಸೆಲೆಬ್ರಿಟಿ ಮದ್ವೆಗಳು ತಿಂಗಳುಗಳ ಕಾಲ ನಡೆಯುವುದು ಇದೆ. ಇನ್ನು ಧಾರಾವಾಹಿಗಳು ಎಂದ ಮೇಲೆ ಕೇಳಬೇಕೆ. ಒಂದು ಮದುವೆಯ ಸೀನ್​ ವರ್ಷಗಟ್ಟಲೆ ಹೋದರೂ ಅಚ್ಚರಿಯಿಲ್ಲ. ಆದರೆ ಕೆಲವೇ ದಿನಗಳಲ್ಲಿ ಸೀತಾರಾಮರ ಕಲ್ಯಾಣದ ಶೂಟಿಂಗ್‌ ಮುಗಿದಿದ್ದು, ಅದಕ್ಕೆ ಹೇಗೆಲ್ಲಾ ತಯಾರಿ ಮಾಡಿದ್ದರು ಎನ್ನುವುದನ್ನು ಸೀತಾ ಪಾತ್ರಧಾರಿ ನಟಿ ವೈಷ್ಣವಿ ಗೌಡ ಇಂಚಿಂಚು ಮಾಹಿತಿ ನೀಡಿದ್ದಾರೆ. 

ಅಷ್ಟಕ್ಕೂ, ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್​ ಸ್ಪಾಟ್​ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್​ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಒಂದೇ ಕಡೆ ಸೆಟ್​ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್​ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್​ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ  ಶೂಟಿಂಗ್​ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ.

ರಿಯಲ್‌ ಮದ್ವೆಯಂತೆ ನಡೆಯುತ್ತಿದೆ ಸೀತಾ-ರಾಮ ಕಲ್ಯಾಣ: ಇಂಚಿಂಚು ಮಾಹಿತಿ ನೀಡಿದ ನಟಿ ವೈಷ್ಣವಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!