ಪ್ರತಿಭಾವಂತ ಗಾಯಕ, ಟೈಮ್ಲೀ ಕಾಮಿಡಿ ಮೂಲಕ ಕಚಗುಳಿ ಇಡೋ ಗಣೇಶ್ ಕಾರಂತ್ ತನ್ನ ಹೆಂಡತಿ ರೀಲ್ಸ್‌ನಲ್ಲಿ ಕಾಣೋ ಹಾಗೆ ಜೋರಲ್ಲ ಅಂತ ಹೇಳಿದ್ದಾರೆ!
ಗಣೇಶ್ ಕಾರಂತ್ ಹಾಗೂ ವಿದ್ಯಾ ಜೋಡಿ ಕಿರುತೆರೆಯಲ್ಲಿ ಟೈಮ್ಲೀ ಕಾಮಿಡಿಗಳಿಂದ ಸಖತ್ ಫೇಮಸ್ ಆಗ್ತಿದ್ದಾರೆ. ಇದೀಗ ಜನಪ್ರಿಯ ರಿಯಾಲಿಟಿ ಶೋ ಜೋಡಿ ನಂ.೧ ಮೂಲಕ ಮತ್ತಷ್ಟು ಜನರಿಗೆ ಹತ್ತಿರ ಆಗ್ತಿದ್ದಾರೆ. ಇದೀಗ ಗಣೇಶ್ ಅವರಿಗೆ ಏಕ್‌ದಂ ಹೆಂಡ್ತಿ ಮೇಲೆ ಪ್ರೀತಿ ಹೆಚ್ಚಾದಂಗಿದೆ. ಜೋಡಿ ನಂ 1 ನ ಎಮೋಶನಲ್ ಎಪಿಸೋಡ್ ಒಂದನ್ನು ಇನ್‌ಸ್ಟಾದಲ್ಲಿ ಶೇರ್ ಮಾಡೋ ಮೂಲಕ ಮತ್ತೊಮ್ಮೆ ನನ್ನ ಹೆಂಡ್ತಿ ಜೋರಲ್ವೇ ಅಲ್ಲ ಅನ್ನೋದನ್ನು ಒತ್ತಿ ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ. ಗಣೇಶ್ ಅವರ ರೀಲ್ಸ್ ಸಖತ್ ಫೇಮಸ್. ಇದರಲ್ಲಿ ಕೊಂಚ ಜೋರಿನ ಆಟಿಟ್ಯೂಡ್ ಇರೋ ಹೆಂಡತಿ, ಅವಳ ಬದಲಾಗೋ ಮೂಡ್‌ನಲ್ಲಿ ಅಸಹಾಯಕನಾಗಿರೋ ಗಂಡನ ಚಿತ್ರಣ ಇದೆ. ಗಣೇಶ್ ಹಾಗೂ ವಿದ್ಯಾ ಜೋಡಿ ಈ ರೀಲ್ಸ್ ಮೂಲಕ ಮನೆ ಮಾತಾಗಿದ್ದಾರೆ ಅಂತಲೇ ಹೇಳಬಹುದು. ಬಹುಶಃ ಇದನ್ನು ನೋಡಿ ರಿಯಲ್‌ನಲ್ಲೂ ಗಣೇಶ್ ಹಾಗೂ ವಿದ್ಯಾ ಜೋಡಿ ಹೀಗೇ ಇರ್ತಾರೆ ಅಂತ ಜನ ಊಹಿಸಿರಬಹುದು.
ಆದರೆ ಆ ಅಭಿಪ್ರಾಯ ತಪ್ಪು. ರಿಯಲ್‌ನಲ್ಲಿ ವಿದ್ಯಾ ಸಿಕ್ಕಾಪಟ್ಟೆ ಪಾಪದ ಹೆಣ್ಣುಮಗಳು ಅನ್ನೋದನ್ನು 'ಜೋಡಿ ನಂ.೧' ನ ಈ ಎಪಿಸೋಡ್ ಸಾರಿ ಹೇಳುತ್ತೆ. 'ವಿಡಿಯೋದಲ್ಲಷ್ಟೇ ನಾನು ಪಾಪ, ವಿದ್ಯಾ ವಿಲನ್ ಥರ ಕಾಣಿಸ್ತೀವಿ. ಆದರೆ ನಿಜ ಜೀವನದಲ್ಲಿ ಹಾಗೆ ಇಲ್ಲ. ಇಂಥಾ ವೀಡಿಯೋ ಮಾಡುವಾಗ ಆಫ್ಟರ್ ಸಮ್ ಟೈಮ್ ಯಾವುದೇ ಹೆಂಗಸರಿಗೂ ಅನಿಸಬಹುದು, ಅದ್ಯಾಕೆ ನನ್ನನ್ನು ವಿಲನ್ ತರನೇ ತೋರಿಸ್ತಿರಿ ಎನಿಸಬಹುದು. ಆದರೆ, ಇವಳು ಹಾಗೆ ಅಲ್ಲ. ರಿಯಲ್ ಲೈಫ್‌ನಲ್ಲಿ ನಾನು ಜೋರು ಇವಳು ಪಾಪ. ನಿಜ ಜೀವನದಲ್ಲಿ ಇವಳು ತುಂಬಾ ಪಾಪ. ನಾನು ಜೋರು. ಇವಳು ನನ್ನ ಸಿಕ್ಕಾಪಟ್ಟೆ ಪ್ರೀತಿ ಮಾಡ್ತಾಳೆ. ನನಗೆ ಅದು ಗೊತ್ತಾಗ್ತ ಇರುತ್ತದೆ. ಗೊತ್ತಾಯ್ತೆಂದು ಅದನ್ನು ನಾನು ಎಕ್ಸ್‌ಪ್ರೆಸ್ ಮಾಡುವುದಿಲ್ಲ. ಸುಮ್ಮನೆ ಕಾಲು ಎಳೆಯುತ್ತ ಇರುತ್ತೇನೆ' ಎಂದು ಗಣೇಶ್ ಕಾರಂತ್ ಹೇಳಿದ್ದಾರೆ.
ಹಂದಿ, ಕುತಂತ್ರಿ, ಚೀಪ್, ಈಡಿಯೆಟ್ .. ಬಿಗ್‌ಬಾಸ್ ಮನೆಯಲ್ಲಿ ಇನ್ನೇನೆಲ್ಲಾ ಕೇಳ್ಬೇಕಪ್ಪಾ!
'ಅರೇಂಜ್ ಮ್ಯಾರೇಜ್‌ನಲ್ಲಿ ಯಾವುದೋ ಭಯ ಇರುತ್ತದೆ. ಲವ್ ಮ್ಯಾರೇಜ್‌ನಲ್ಲಿ ಏನೋ ಅಡ್ವಾಂಟೇಜ್ ಇರುತ್ತದೆ. ಸಾಕಷ್ಟು ಸಮಯದ ಪರಿಚಯ ಇರುತ್ತದೆ. ಅರೇಂಜ್ಡ್ ಮ್ಯಾರೇಜ್‌ನಲ್ಲಿ ಮೊದಲ ಬಾರಿಗೆ ಪರಿಚಯ ಆಗುತ್ತದೆ. ಮದುವೆಯಾದ ಮೇಲೆ ಪ್ರೀತಿ ಹುಟ್ಟಬೇಕು. ಲವ್ ಮ್ಯಾರೇಜ್‌ನಲ್ಲಿ ಎಷ್ಟೋ ವರ್ಷದ ಪರಿಚಯ ಇರುತ್ತದೆ. ಅರೇಂಜ್ ಮ್ಯಾರೇಜ್‌ನಲ್ಲಿ ಇಬ್ಬರು ಪರಿಚಯ ಆಗಬೇಕು, ಅಪ್ಪ ಅಮ್ಮನ ಬಿಟ್ಟು ಬಂದಿರ್ತಾರೆ. ಲವ್ ಮ್ಯಾರೇಜ್‌ನಲ್ಲಿ ತುಂಬಾ ಅಡ್ವಾಂಟೇಜ್ ಇರುತ್ತದೆ. ಜೆನ್ಯೂನ್ ಆಗಿ ಹೇಳ್ತಿನಿ ನನಗೆ ಇವಳು ದೊರಕಿರುವುದು ನಿಜಕ್ಕೂ ಲಕ್ಕಿ' ಎಂದು ಹೇಳಿರುವ ವಿಡಿಯೋವನ್ನು ಗಣೇಶ್ ಕಾರಂತ್ ಹಂಚಿಕೊಂಡಿದ್ದಾರೆ.
ಈ ವಿಡಿಯೋಗೆ ಗಣೇಶ್ ಕಾರಂತ್ ಫ್ಯಾನ್ಸ್ ಖುಷಿಯಿಂದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. "ನಿಮ್ಮ ಜೋಡಿನ ನೋಡಿ ತುಂಬಾ ಖುಷಿಯಾಯ್ತು. ತುಂಬಾ ಒಳ್ಳೆ ಜೋಡಿ ನಿಮ್ದು" "ಲವ್ ಮ್ಯಾರೇಜ್‌ಗಿಂತ ಅರೇಂಜ್ಡ್ ಮ್ಯಾರೇಜ್ ಬೆಸ್ಟ್ ಸರ್" ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಗಣೇಶ್ ಕಾರಂತ್ ಅವರು ಈ ಹಿಂದೆಯೂ ಹಲವು ಬಾರಿ ತನ್ನ ಪತ್ನಿ ಕುರಿತು ಮುಕ್ತವಾಗಿ ಮಾತನಾಡಿದ್ದರು. ಶ್ರೀವಿದ್ಯಾ ದೊರಕಿರುವುದು ನನ್ನ ಅದೃಷ್ಟ ಎಂದಿದ್ದರು.
ಐಟಿ ಉದ್ಯೋಗಿಯಾಗಿರುವ ಗಣೇಶ್ ಕಾರಂತ್ ಸಮಯ ಸಿಕ್ಕಾಗ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಕನ್ನಡ ಕೋಗಿಲೆ ಕಾರ್ಯಕ್ರಮದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದರು. ಒಳ್ಳೆಯ ಗಾಯಕ ಎಂದು ಖ್ಯಾತಿ ಪಡೆದಿದ್ದಾರೆ. ಗುರುಕಿರಣ್ ನೈಟ್ಸ್ ಮುಂತಾದ ಸಂಗೀತ ಕಾರ್ಯಕ್ರಮಗಳ ಮೂಲಕವೂ ಇವರು ಸಂಗೀತ ಪ್ರೇಮಿಗಳಿಗೆ ಹತ್ತಿರವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಬಿಯರ್ಡ್ ಬಾಲಕ ಕಾಮಿಡಿ ರೀಲ್ಸ್ ಅಂತೂ ವೈರಲ್ ಆಗ್ತನೇ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ.
ಅತ್ತ ಅಪ್ಪನ ಮದ್ವೆ- ಇತ್ತ ಸಾವಿನ ದವಡೆಯಲ್ಲಿ ಮಗಳು: ದೇವರಿದ್ದಾನೆ ಎನ್ನುತ್ತಲೇ ನಿರ್ದೇಶಕರಿಗೆ ನೆಟ್ಟಿಗರ ಕ್ಲಾಸ್!