ಬೈಕ್‌ ರೈಡ್‌ ವೇಳೆ ಓವರ್‌ ಟೇಕ್ ಮಾಡಿದ ಗೂಡ್ಸ್‌ ಡ್ರೈವರ್‌; ಬಾತ್‌ರೂಮ್‌ ಸಿಗಲ್ಲ ಎಂದು ಗರಂ ಆದ ಬಿಗ್ ಬಾಸ್‌ ಭೂಮಿ ಶೆಟ್ಟಿ

By Vaishnavi ChandrashekarFirst Published Mar 13, 2023, 4:25 PM IST
Highlights

ಮಹಿಳೆಯರು ಮಾತ್ರವಲ್ಲ ಬೈಕ್‌ ರೈಡ್‌ನಲ್ಲಿ ಗಂಡಸರಿಗೂ ಚಾಲೆಂಜ್‌ ದೊಡ್ಡದಾಗಿದೆ. ಹೈವೇಗಳಲ್ಲಿ ಬಾತ್‌ರೂಮ್‌ ಹುಡುಕುವುದು ಕಷ್ಟ ಎಂದ ನಟಿ....
 

ಕೆಲವು ದಿನಗಳ ಹಿಂದೆ ನೈಸ್ ರಸ್ತೆಯಲ್ಲಿ ಇಬ್ಬರು ಮಹಿಳಾ ಬೈಕರ್‌ಗಳು ಕೆಲವು ನಿಮಿಷಗಳ ಕಾಲ ಬನ್ನೇರುಘಟ್ಟ ನಿರ್ಗಮನದ ಬಳಿ ನಿಂತುಕೊಂಡು ವಿಶ್ರಾಂತಿ ಪಡೆಯುವಾಗ ವಕೀಲರ ವೃತ್ತಿಯಲ್ಲಿರುವ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಘಟನೆ ದೊಡ್ಡ ಸುದ್ದಿಯಾಗಿತ್ತು. ಕಿರುತೆರೆ ನಟಿ ಕಮ್ ಬಿಗ್ ಬಾಸ್ ಸ್ಪರ್ಧಿ ಆಗಿರುವ ಭೂಮಿ ಶೆಟ್ಟಿ ಕೂಡ ಬೈಕರ್ ಆಗಿದ್ದು ಯಾವ ರೀತಿಯ ಚಾಲೆಂಜ್‌ಗಳನ್ನು ಎದುರಿಸುತ್ತಾರೆಂದು ಹಂಚಿಕೊಂಡಿದ್ದಾರೆ.

'ಮಹಿಳಾ ಬೈಕರ್ ಅಗಿ ನಾನು ಕೂಡ ಕೆಲವೊಂದು ಚಾಲೆಂಜ್‌ಗಳನ್ನು ಎದುರಿಸಿರುವೆ. ಅದರಲ್ಲೂ ನನ್ನ ಹುಟ್ಟೂರಿಗೆ ಬೈಕ್‌ನಲ್ಲಿ ಪ್ರಯಾಣ ಮಾಡುವಾಗ ಒಂದು ಮಾರ್ಗದಲ್ಲಿ ಎಳ್ಳೆನೀರು ಕುಡಿಯಲು ನಿಲ್ಲಿಸಿದೆ. ಅಲ್ಲೇ ಪಕ್ಕದಲ್ಲಿದ್ದ ಗೂಡ್ಸ್‌ ಗಾಡಿ ಡ್ರೈವರ್‌ ನಾನು ಬೈಕ್ ಸ್ಟಾರ್ಟ್‌ ಮಾಡಲು ಕಾಯುತ್ತಿದ್ದರು ನಾನು ಮುಂದೆ ಸಾಗಿದ ನಂತರ ನನ್ನನ್ನು ಓವರ್ ಟೇಕ್ ಮಾಡಲು ಆರಂಭಿಸಿದ್ದರು. ಬೈಕ್‌ನಿಂದ ನನ್ನನ್ನು ಬೀಳಿಸಲು ಏನ್ ಏನೋ ಪ್ರಯತ್ನ ಪಟ್ಟರು ಆದರೆ ನಾನು ಒಂದು ನಿಮಿಷ ಪಕ್ಕದಲ್ಲಿ ಬೈಕ್ ನಿಲ್ಲಿಸಿಕೊಂಡು ಆನಂತರ ಜರ್ನಿ ಶುರು ಮಾಡಿದೆ' ಎಂದು ಭೂಮಿ ಶೆಟ್ಟಿ ಇಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Latest Videos

ಉಡುಪಿ: ಸ್ವಚ್ಛತೆಯ ಅರಿವು ಮೂಡಿಸಲು ಬೈಕ್ ಏರಿ ಕಡಲೂರಿಗೆ ಬಂದ ಬೆಂಗಳೂರಿನ ಯುವತಿಯರು

'ಹೈವೇಗಳಲ್ಲಿ ಪ್ರಯಾಣ ಮಾಡುವಾಗ ಈ ರೀತಿ ಘಟನೆಗಳು ನಡೆದಾಗ ಏನು ಮಾಡಬೇಕು ಗೊತ್ತಾಗುವುದಿಲ್ಲ. ಒಬ್ಬರೇ ಇದ್ದಾಗ ಈ ಸಂದರ್ಭವನ್ನು ಮ್ಯಾನೇಜ್ ಮಾಡುವುದು ತುಂಬಾನೇ ಕಷ್ಟವಾಗುತ್ತದೆ. ಹೀಗಾಗಿ ಅನೇಕ ಬೈಕರ್‌ಗಳು ತಮ್ಮ ಹೆಲ್ಮೆಟ್‌ಗಳಿಗೆ Go Pro ಹಾಕಿಸಿಕೊಂಡಿರುತ್ತಾರೆ. ಈ ರೀತಿ ಏನೇ ಘಟನೆ ನಡೆದರೂ ಅದರಲ್ಲಿ ರೆಕಾರ್ಡ್‌ ಆಗುತ್ತದೆ ಎಂದು. ಇದು ಸೋಷಿಯಲ್ ಮೀಡಿಯಾ ಕಾಲ ನೆಟ್‌ವರ್ಕ್‌ ಇದ್ದರೆ ಲೈವ್‌ ಮಾಡುವ ಮೂಲಕ ಘಟನೆಯನ್ನು ತಿಳಿಸಬಹುದು' ಎಂದು ಭೂಮಿ ಹೇಳಿದ್ದಾರೆ.

'ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ಬೇಗ ಸಂಪರ್ಕಿಸ ಬಹುದು. ಹೀಗಾಗಿ ಸೋಷಿಲ್ ಮೀಡಿಯಾ ಮೂಲಕ ಜನರ ಸಹಾಯ ಪಡೆಯಬಹುದು. ನೆಟ್‌ವರ್ಕ್‌ ಇಲ್ಲದಿದ್ದರೆ ಏನು ಮಾಡಲಾಗದು. ಪೊಲೀಸರಿಗೆ ದೂರು ನೀಡಿ ಅವರು ಬರುವಷ್ಟರಲ್ಲಿ ನಾವು ಮಾಡಿಕೊಳ್ಳುವ ವಿಡಿಯೋನೇ ಸಾಕ್ಷಿ. ಇಲ್ಲದಿದ್ದರೆ ಸತ್ಯ ತಿಳಿದುಕೊಂಡ ನ್ಯಾಯ ಕೊಡಿಸುವುದು ಕಷ್ಟವಾಗುತ್ತದೆ' ಎಂದಿದ್ದಾರೆ ಭೂಮಿ.

Ladakh ಬೈಕ್‌ ಟ್ರಿಪ್‌, ಕಿರುತೆರೆಯಿಂದ ಬ್ರೇಕ್; ನಟಿ ಭೂಮಿ ಶೆಟ್ಟಿ ಲೈಫಲ್ಲಿ ಏನಾಗುತ್ತಿದೆ!

'ಮಹಿಳೆಯರು ಮಾತ್ರ ಜಾಲೆಂಜ್‌ಗಳನ್ನು ಎದುರಿಸುವುದು ಎಂದು ಅನೇಕರು ಹೇಳುತ್ತಾರೆ ಆದರೆ ಗಂಡಸರು ಕೂಡ ಚಾಲೆಂಜ್‌ ಎದುರಿಸುತ್ತಾರೆ. ಬೈಕ್ ರೈಡ್ ಮಾಡುವಾಗ ನಾವು ಬಾತ್‌ರೂಮ್‌ನ ಹುಡುಕುವುದೇ ದೊಡ್ಡ ಸಮಸ್ಯೆ ಆಗುತ್ತದೆ. ಜರ್ನಿ ಅರಂಭಿಸುವ ಮುನ್ನ ನಾವು ನಮ್ಮ ಜರ್ನಿ ಹೇಗಿದೆ? ಎಲ್ಲಿ ಸ್ಟಾಪ್ ಕೊಡಬೇಕು ಎಲ್ಲಿ ಊಟ ಸಿಗುತ್ತದೆ ಎಲ್ಲಿ ಬ್ರೇಕ್ ತೆಗೆದುಕೊಳ್ಳಬೇಕು ಎಂದು ಪ್ಲ್ಯಾನ್ ಮಾಡುತ್ತೀವಿ. ಲಾಂಗ್‌ ಜರ್ನಿ ಮಾಡುವಾಗ ಮಹಿಳೆಯರಿಗೆ ತುಂಬಾ ಚಾಲೆಂಜ್‌ಗಳಿರುತ್ತದೆ. ಮಹಿಳೆಯರು ಬೈಕ್ ಖರೀದಿ ಮಾಡುತ್ತಾರೆ ಅಂದ್ರೆ ಜನರು ನೋಡುವ ರೀತಿ ಬೇರೆ ಆಗಿರುತ್ತದೆ. ಕೆಲವರು ಮಾತ್ರ ಸರಿ ಮಾಡು ಓಕೆ ಹುಷಾರು ಎಂದು ಧೈರ್ಯ ಕೊಡುತ್ತಾರೆ ಆದರೆ ಎಲ್ಲರೂ ಅಷ್ಟೇ ಪಾಸಿಟಿವ್ ಆಗಿರುವುದಿಲ್ಲ. ಸೇಫ್ಟ್‌ ತುಂಬಾ ಮುಖ್ಯವಾಗುತ್ತದೆ. ಮುನ್ನೆಚ್ಚರಿಗೆ ಕ್ರಮಗಳನ್ನು ತೆಗೆದುಕೊಂಡು ಪ್ರಯಾಣ ಮಾಡುವುದು. ಆರಂಭದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ ಆದರೆ ಜರ್ನಿ ಸಾಗುತ್ತಿದ್ದಂತೆ ಕಲಿಯುತ್ತಾರೆ' ಎಂದು ಭೂಮಿ ಶೆಟ್ಟಿ ಹೇಳಿದ್ದಾರೆ. 

click me!