ಬಿಗ್‌ಬಾಸ್ ಕನ್ನಡ ಸೀಸನ್ 11 ಕಲ್ಕಿ ಕಾಪಿನಾ? ಸಿಕ್ತು ಬಿಗ್ ಹಿಂಟ್!

Published : Sep 28, 2024, 03:15 PM IST
ಬಿಗ್‌ಬಾಸ್ ಕನ್ನಡ ಸೀಸನ್ 11 ಕಲ್ಕಿ ಕಾಪಿನಾ? ಸಿಕ್ತು ಬಿಗ್ ಹಿಂಟ್!

ಸಾರಾಂಶ

ವೀಕ್ಷಕರು ಕುತೂಹಲದಿಂದ ಕಾಯುವ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಈ ಸಲ ಏನೇನಿರಬಹುದು ಎಂಬ ಕುತೂಹಲಕ್ಕೆ ಕೆಲವು ಹಿಂಟ್ಸ್ ಸಿಗುತ್ತಿವೆ. ಈ ಸಾರಿ 2 ಮನೆಗಳಾ?

-ವಿನುತಾ ಪರಮೇಶ್

ಬಿಗ್ಬಾಸ್ ಕನ್ನಡ ಸೀಸನ್ 11ಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾತ್ರಿ ಕಳೆದು ಬೆಳಗಾಗವುದರೊಳಗೆ ಮೋಸ್ಟ್ ಅವೈಟೆಡ್ ಬಿಗ್ ಶೋ ಶುರುವಾಗಲಿದೆ. ಈಗಾಗ್ಲೇ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ಕಲರ್ಸ್ ಕನ್ನಡ ಸಹ ಬ್ಲರ್ ಆದ ಪೋಟೋವೊಂದನ್ನು ಶೇರ್ ಮಾಡಿಕೊಂಡು, ಬಿಗ್ ಬಾಸ್ ಸ್ಪರ್ಧಿಗಳಬಗ್ಗೆ ಸ್ಟ್ರಾಂಗ್ ಹಿಂಟ್ ಕೊಟ್ಟಿದೆ. ಕನ್ನಡತಿ ಸೀರಿಯಲ್‌ನ ಹರ್ಷ ಖ್ಯಾತ ಕಿರಣ್ ರಾಜ್‌ರಿಂದ ಹಿಡಿದು, ಬಹುಭಾಷಾ ನಟಿ ಭಾವನಾವರೆಗೂ ದೊಡ್ಮನೆಗೆ ಎಂಟ್ರಿ ಕೊಡ್ತಾರೆ ಅನ್ನೊ ಗಾಸಿಪ್ ಇದೆ. ಸ್ಪರ್ಧಿಗಳ ಬಗ್ಗೆ ಅದೆಷ್ಟು ಕ್ಯೂರಿಯಾಸಿಟಿ ಹುಟ್ಕೊಂಡಿದಿಯೋ, ಅಷ್ಟೇ ಕುತೂಹಲಕ್ಕೆ ಕಾರಣವಾಗಿರೋದು ಈ ಬಾರಿಯ ಸ್ವರ್ಗ ನರಕ ಥೀಮ್.  ಆದ್ರೆ ಈ ಥೀಮ್ ಕಾಪಿ ಮಾಡಲಾಗಿದ್ಯಂತೆ ಅಂತಾನೂ ಹೇಳಲಾಗುತ್ತಿದೆ. 

ಗಾಸಿಪ್ಪೋ ಗಾಸಿಪ್:
ಬಿಗ್ ಬಾಸ್ 11 ನಿರೂಪಣೆಯನ್ನ ಸುದೀಪ್ ಮಾಡ್ತಿಲ್ವಂತೆ, ರಿಷಬ್ ಶೆಟ್ಟಿ ಮಾಡ್ತಾರಂತೆ ಅನ್ನೋ ವಿಚಾರ ಕಿಚ್ಚನ ಫ್ಯಾನ್ಸ್ ನಿದ್ದೆಗೆಡಿಸಿತ್ತು. ಆದ್ರೆ ಈ ಎಲ್ಲ ಗೊಂದಲಕ್ಕೆ ಬ್ರೇಕ್  ಬಿದ್ದಿದೆ.  ಈ ಸಾರಿಯೂ ಕಳೆದ 10 ಸೀಸನ್‌ಗಳಂತೆ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋಗೆ ಕಿಚ್ಚನೇ ಸಾರಥಿ ಅನ್ನೋದು ಕನ್ಫರ್ಮ್ ಆಗಿದೆ. ಆದ್ರೆ ಈಗಾಗ್ಲೇ ರಿವಿಲ್ ಮಾಡಿರೋ ಹಾಗೆ  ಸ್ವರ್ಗ-. ನರಕ ಅನ್ನೋ ಥೀಮಿನಲ್ಲಿ ಈ ಬಾರಿಯ ಬಿಗ್‌ಬಾಸ್ ನಡೆಯುತ್ತಂತೆ. ಹೀಗಾಗಿ ಈ ಥೀಮ್ ಹೇಗಿರಲಿದೆ, ಯಾವೆಲ್ಲಾ ಟಾಸ್ಕ್ ಇರಲಿದೆ ಅನ್ನೋ ಕೂತೂಹಲ ಬಿಗ್ ಬಾಸ್ ಪ್ರೇಮಿಗಳಲ್ಲಿ ಮತ್ತಷ್ಟು ಹೆಚ್ಚಿದೆ.

BBK 11: ಅವನಾ, ಇವಳಾ? ಬ್ಲರ್​ ಫೋಟೋಸ್​ ನೋಡಿ ತಲೆ ಕೆಡಿಸಿಕೊಂಡ ಫ್ಯಾನ್ಸ್​! ಇವ್ರನ್ನ ಎಲ್ಲಿಗೆ ಕಳಿಸ್ತೀರಿ ಕೇಳಿದ ಸುದೀಪ್​!
 
ಕಳೆದ ಸಲ ಸಮರ್ಥರು ಅಸಮರ್ಥರು ಅನ್ನೋ ಕಾನ್ಸೆಪ್ಟ್ನಲ್ಲಿ ದೊಡ್ಮನೆ ಆಟ ಶುರುವಾಗಿತ್ತು. ವೋಟಿಂಗ್ ಮೂಲಕ ಅಸಮರ್ಥರೆನಿಸಿಕೊಂಡವರು ಒಂದಿಷ್ಟು ಟಾಸ್ಕ್‌ಗಳನ್ನಾಡಿ ಆ ಬಳಿಕ ಸಮರ್ಥರೆನಿಸಿಕೊಂಡಿದ್ರು. ಈ ಬಾರಿ ಸ್ವರ್ಗ, ನರಕ ಅನ್ನೋ ಕಾನ್ಸೆಪ್ಟ್ ಪರಿಚಯಿಸಲಾಗಿದ್ದು, ಈ ಸ್ವರ್ಗ ನರಕ ಥೀಮ್ ನೋಡ್ತಾ ಇದ್ರೆ ಅದ್ಯಾಕೋ ಈ ವರ್ಷ ತೆರೆ ಕಂಡ ಡಾರ್ಲಿಂಗ್ ಪ್ರಭಾಸ್ ನಟನೆಯ ಕಲ್ಕಿ ಕಾಪಿನಾ? ಅನ್ನೋ ಪ್ರಶ್ನೆ ಮೂಡುವಂತೆ ಮಾಡಿದೆ.  ಕಲ್ಕಿ 2898 ಎಡಿ ಸಿನಿಮಾದಲ್ಲೂ ಕೂಡ ನಿಮ್ಗೆಲ್ಲಾ ಗೊತ್ತಿರೋ ಹಾಗೆ ಕಾಂಪ್ಲೆಕ್ಸ್ ಅನ್ನೋ ಕಾನ್ಸೆಪ್ಟ್ ಇತ್ತು. 

ಕಲಿಯುಗದ ಅಂತ್ಯವಾಗುವಾಗ ಮಾನವ ಇಡೀ ಭೂಮಿಯನ್ನ ಬರಡು ಭೂಮಿಯನ್ನಾಗಿಸಿ, ಯಂತ್ರಗಳನ್ನ ಅವಲಂಬಿಸಿ ಜೀವನ ನಡೆಸೋ ಸಮಯದಲ್ಲಿ ನಡೆಯೋ ಕಥೆ ಕಲ್ಕಿ. ಕಾಂಪ್ಲೆಕ್ಸ್ ಅನ್ನೋ ಸ್ಥಳದಲ್ಲಿ ವಾಸಿಸೋಕೆ ಬೇಕಾದ ಎಲ್ಲಾ ಸೌಲಭ್ಯವೂ ಇರತ್ತೆ. ಅದೊಂಥರ ಅರಮನೆ. ಅಲ್ಲಿದ್ದವರ ಪಾಲಿಗೆ ಕಲಿಯುಗದ ಸ್ವರ್ಗ, ಆದ್ರೆ ಕಾಂಪ್ಲೆಕ್ಸ್ ಹೊರಗಿನ ಪ್ರದೇಶ ಸಂಪೂರ್ಣ ಬರಡು ಭೂಮಿ. ಕುಡಿಯೋದಕ್ಕೂ ಹನಿ ನೀರೂ ಇರೋದಿಲ್ಲ.  

ಬಿಗ್​ಬಾಸ್​ಗೆ ಕ್ಷಣಗಣನೆ... ಸೀಸನ್​ 11ರ ಕುರಿತು ನಟ ವಿಜಯ ರಾಘವೇಂದ್ರ ಮನದಾಳದ ಮಾತೇನು?

ಭೂಮಿ ಮೇಲೆ ವಾಸಿಸೋ ಜನ ಕಾಂಪ್ಲೆಕ್ಸ್‌ಗೆ ಹೊಗ್ಬೇಕು ಅಂತ ಒದ್ದಾಡ್ತಿರ್ತಾರೆ. ಅದಕ್ಕೆ ಈ ಜಾಗ ನರಕ, ಕಾಂಪ್ಲೆಕ್ಸ್ ಸ್ವರ್ಗ!  ಸಿನಿಮಾದಲ್ಲಿ ನಟ ಪ್ರಭಾಸ್ ಕೂಡ ಭೂಮಿಯಲ್ಲಿ ಇತರರಂತೆ ವಾಸಿಸ್ತಿದ್ದು, ಕಾಂಪ್ಲೆಕ್ಸ್ ಹೋಗಲು ಅಗತ್ಯ ಹಣ ಸಂಪಾದಿಸುತ್ತಿರುತ್ತಾನೆ. ಹೀಗೆ ಹಲವರು ಸ್ವರ್ಗಕ್ಕೆ ಹೋಗೋದಕ್ಕೆ ಬಯಸ್ಸಿದ್ದಕ್ಕೆ, ಅವರವರಲ್ಲೇ ರೇಸ್ ಶುರುವಾಗುತ್ತೆ. ಗಲಾಟೆಯೂ ಆಗುತ್ತೆ, ಇದೀಗ ಬಿಗ್‌ಬಾಸ್ ಕೂಡ ಇದೇ ರೀತಿ ನರಕ-ಸ್ವರ್ಗ ಅನ್ನೋ ಕಾನ್ಸೆಪ್ಟಿನಲ್ಲಿ ಬರ್ತಿರೋದ್ರಿಂದ ಇಲ್ಲಿಯೂ ರೇಸ್ ಹಾಗೂ ಹಾಗೂ ಗಲಾಟೆ ಆಗೋ ಸಾಧ್ಯತೆ ಹೆಚ್ಚಿರುತ್ತದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ