ಉರ್ಫಿ ಜಾವೇದ್‌ ಏನಾಯ್ತು? ಬ್ಯೂಟಿ ಕಾಳಜಿಯಿಂದ ಊದಿಕೊಂಡ ಮುಖ, ಫ್ಯಾನ್ಸ್‌ಗೆ ಮಹತ್ವದ ಸಲಹೆ

Published : Jul 20, 2025, 04:05 PM ISTUpdated : Jul 20, 2025, 04:13 PM IST
Urfi Javed

ಸಾರಾಂಶ

ಮಾಡೆಲ್ ಕಮ್ ನಟಿ ಉರ್ಫಿ ಜಾವೆದ್ ಮುಖ ಊದಿಕೊಂಡಿದೆ. ದಿಢೀರ್ ಉರ್ಫಿ ಮುಖಕ್ಕೆ ಏನಾಗಿದೆ? ಊದಿಕೊಂಡ ಮುಖದಲ್ಲೇ ಉರ್ಫಿ ಮಹತ್ವದ ಸಲಹೆ ನೀಡಿದ್ದಾರೆ.

ಮುಂಬೈ (ಜು.20) ಮಾಡೆಲ್ ಉರ್ಫಿ ಜಾವೇದ್ ತಮ್ಮ ಫ್ಯಾಶನ್ ಮೂಲಕವೇ ಭಾರಿ ಸದ್ದು ಮಾಡಿದ್ದಾರೆ. ಚಿತ್ರ ವಿಚಿತ್ರ ಫ್ಯಾಶನ್, ಭಿನ್ನ ಡ್ರೆಸ್ ಮೂಲಕ ಬಾಲಿವುಡ್ ಸೆಲೆಬ್ರೆಟಿಗಳು ಒಂದು ಕ್ಷಣ ದಂಗಾಗಿದ್ದಾರೆ. ಬ್ಯೂಟಿ ಬಗ್ಗೆ ಅತೀವ ಕಾಳಜಿವಹಿಸುವ ಉರ್ಫಿ ಜಾವೇದ್ ಮುಖ ಇದೀಗ ಊದಿಕೊಂಡಿದೆ. ಇದಕ್ಕೆ ಕಾರಣವನ್ನು ಉರ್ಫಿ ಬಹಿರಂಗಪಡಿಸಿದಾರೆ. ಉರ್ಫಿ 18ನೇ ವಯಸ್ಸಿನಿಂದ ತುಟಿಗಳಿಗೆ ಫಿಲ್ಲರ್ಸ್ ಬಳಸುತ್ತಿದ್ದಾರೆ. ಆದರೆ ಸರಿಯಾದ ವೈದ್ಯರಿಂದ ಫಿಲ್ಲರ್ಸ್ ಹಾಕಿಸಿಕೊಳ್ಳಬೇಕು. ಹಳೇ ಫಿಲ್ಲಸರ್ಸ್ ತೆಗೆದು ಇದೀಗ ಹೊಸದಾಗಿ ಹಾಕಿಸಿಕೊಂಡಿದ್ದೇನೆ ಎಂದು ಉರ್ಫಿ ಹೇಳಿದ್ದಾರೆ.

ಉರ್ಫಿ ಜಾವೇದ್ ತುಟಿಗಳಿಗೆ ಫಿಲ್ಲರ್ಸ್

ಉರ್ಫಿ ಜಾವೇದ್ ತನ್ನ ಮುಖದ ಕುರಿತು ಹೇಳಿದ್ದಾರೆ. ಈಗಾಗಲೇ ಹಾಕಿಸಿಕೊಂಡಿದ್ದ ಫಿಲ್ಲರ್ಸ್ ಸರಿಯಾಗಿ ಆಗಿಲ್ಲ. ಎಲ್ಲೆಂದರಲ್ಲಿ ಆಗಿರುವ ಕಾರಣ ಫಿಲ್ಲರ್ಸ್ ತೆಗೆದು, ಹೊಸದಾಗಿ ಹಾಕಿಸಿಕೊಸಿಕೊಂಡಿದ್ದೇನೆ. ಈ ಬಾರಿ ನೈಸರ್ಗಿಕವಾಗಿ ಫಿಲ್ಲರ್ಸ್ ಹಾಕಿಸಿಕೊಂಡಿದ್ದೇನೆ. ಈ ಸಂದರ್ಭದಲ್ಲಿ ನಾನು ಫಿಲ್ಲರ್ಸ್‌ಗೆ ವಿರುದ್ಧವಲ್ಲ, ಸಂಪೂರ್ಣವಾಗಿ ಬೇಡ ಎಂದು ಹೇಳುತ್ತಿಲ್ಲ. ಆದರೆ ಸೂಕ್ತ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.

ಬ್ಯೂಟಿ ಫಿಲ್ಲರ್ಸ್ ಹಾಕಿಸಿಕೊಳ್ಳುವವರಿಗೆ ಸಲಹೆ

ಫಿಲ್ಲರ್ಸ್ ತೆಗೆಯುವುದು ಅತ್ಯಂತ ನೋವಿನ ಸಂಗತಿ ಎಂದು ಉರ್ಫಿ ಹೇಳಿದ್ದಾರೆ. ಇದೇ ವೇಳೆ ಮಹತ್ದ ಸಲಹೆಯೊಂದನ್ನು ನೀಡಿದ್ದಾರೆ. ಫಿಲ್ಲರ್ ಹಾಕಿಸಿಕೊಳ್ಳಲು ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು. ಹಲವು ಕ್ಲಿನಿಕ್‌ನಲ್ಲಿ ಫಿಲ್ಲರ್ಸ್ ಹಾಕಿಸಿಕೊಡುವುದಾಗಿ ಹೇಳುತ್ತಾರೆ. ಅವರಿಗೆ ಏನೂ ತಿಳಿದಿರುವುದಿಲ್ಲ. ನನಗೆ ಕೊನೆಗೂ ಉತ್ತಮ ವೈದ್ಯರು ಸಿಕ್ಕಿದ್ದಾರೆ. ಅವರು ಉತ್ತಮ ವೈದ್ಯರು ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.

 

 

18ನೇ ವಯಸ್ಸಿನಿಂದ ಉರ್ಫಿ ಜಾವೇದ್ ತುಟಿಗಳಿಗೆ ಫಿಲ್ಲರ್ಸ್ ಬಳಸುತ್ತಾರೆ. ಉತ್ತಮ ವೈದ್ಯರು, ನೈಸರ್ಗಿಕ ರೀತಿಯಲ್ಲಿ ಹಾಕಿದರೆ ಮಾತ್ರ ಬ್ಯೂಟಿ ಫಿಲ್ಲರ್ಸ್ ಅಂದ ಹೆಚ್ಚಿಸಲಿದೆ. ಆದರೆ ಎಡವಟ್ಟಾದರೆ ಜೀವನ ಪರ್ಯಂತ ನರಕ ಯಾತನೆ ಅನುಭವಿಸಬೇಕು ಎಂದಿದ್ದಾರೆ.

ವಿಡಿಯೋದಲ್ಲಿ ಉರ್ಫಿ ತುಟಿಗಳಿಗೆ ವೈದ್ಯರು ಇಂಜೆಕ್ಟ್ ಮಾಡುತ್ತಿರುವ ದೃಶ್ಯವಿದೆ. ತುಟಿಗಳಿಂದ ಉರ್ಫಿ ಇಡೀ ಮುಖ ಊದಿಕೊಂಡಿದೆ. ನನ್ನ ಮುಖ ನೋಡಿದಾಗ ನನಗೆ ನಗು ಬರುತ್ತಿತ್ತು. ಆದರೆ ನಿಜಕ್ಕೂ ತೀವ್ರವಾದ ನೋವಿದೆ ಎಂದು ಉರ್ಫಿ ಹೇಳಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!