Amruthadhaare Serial: ಕರ್ಮ ರಿಟರ್ನ್ಸ್‌; ಇಂಗ್ಲಿಷ್‌ನಲ್ಲಿ ಮಾತಾಡಿ ಜಯದೇವ್-ದಿಯಾ ಚಳಿ ಬಿಡಿಸಿದ ಕನ್ನಡತಿ ಮಲ್ಲಿ!

Published : Jul 18, 2025, 05:26 PM ISTUpdated : Jul 18, 2025, 05:35 PM IST
amruthadhaare serial

ಸಾರಾಂಶ

Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಗೆ ಇಂಗ್ಲಿಷ್‌ ಬರುತ್ತಿರಲಿಲ್ಲ ಎಂದು ತೋರಿಸಲಾಗಿತ್ತು. ಈಗ ಅವಳು ಖಡಕ್‌ ಆಗಿ ಮಾತನಾಡಿ ಎಲ್ಲರಿಗೂ ಶಾಕ್‌ ಆಗುವಂತೆ ಮಾಡಿದ್ದಾಳೆ.

ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಂದ್ರ ಭೂಪತಿಯ ಏಕೈಕ ಮಗಳು ಮಲ್ಲಿ ಎನ್ನೋದು ಈಗ ಎಲ್ಲರಿಗೂ ಗೊತ್ತಾಗಿದೆ. ಗುಡಿಸಲಿನಲ್ಲಿ ಬೆಳೆದ ಮಲ್ಲಿಗೆ ಸಾವಿರಾರು ಕೋಟಿ ರೂಪಾಯಿ ಆಸ್ತಿ ಸಿಕ್ಕಿದೆ ಅಂತ ಅವಳ ಗಂಡ ಜಯದೇವ್‌ ಹೊಟ್ಟೆ ಉರಿದುಕೊಳ್ತಿದ್ದಾನೆ. ಮಲ್ಲಿ ಕಂಡ್ರೆ ಜಯದೇವ್‌ಗೆ ಆಗೋದೇ ಇಲ್ಲ. ಈಗ ಮಲ್ಲಿಯ ಹೊಟ್ಟೆ ಉರಿಸೋಕೆ ಹೋದ ಜಯದೇವ್‌, ದಿಯಾಗೆ ಸರಿಯಾಗಿ ಮುಖಭಂಗ ಆಗಿದೆ.

ಮನೆಯಿಂದ ಹೊರಬಿದ್ದಿರೋ ಜಯದೇವ್!‌

ಜಯದೇವ್‌ಗೆ ಮಲ್ಲಿ ಕಂಡರೆ ಆಗೋದೇ ಇಲ್ಲ. ಗಂಡ ದಿಯಾ ಎನ್ನುವವಳ ಜೊತೆ ಮದುವೆಯಾಗಿರೋದು ಅವಳಿಗೆ ಬೇಸರ ತಂದಿದೆ. ಸಾಕಷ್ಟು ಬಾರಿ ಅವಳು ಗಂಡನನ್ನು ತಿದ್ದೋಕೆ ಹೋದರೂ ಅವನು ಮಾತ್ರ ನಾಯಿ ಬಾಲ ಡೊಂಕು ಎನ್ನುವಂತೆ ಆಡಿದ. ಇದು ಗೌತಮ್‌ಗೂ ಬೇಸರ ತಂದಿತ್ತು. ಹೀಗಾಗಿ ಗೌತಮ್‌ ಕೂಡ ಜಯದೇವ್‌ಗೆ ಅವನ ಪಾಲಿನ ಆಸ್ತಿ ಕೊಟ್ಟು ಮನೆಯಿಂದ ಹೊರಗಡೆ ಹಾಕಿದ್ದಾನೆ.

ಮಲ್ಲಿ ರೆಸ್ಟೋರೆಂಟ್‌ನಲ್ಲಿ ಜಯದೇವ್-ದಿಯಾ!

ಜಯದೇವ್‌ ಹಾಗೂ ದಿಯಾ ಮದುವೆ ಆಗಿದ್ದಾರೆ. ಆದರೆ ಜಯದೇವ್‌ಗೆ ಮಲ್ಲಿ ಆಸ್ತಿ ಮೇಲೆ ಕಣ್ಣಿದೆ, ಗೌತಮ್‌ ಆಸ್ತಿಯನ್ನು ಕಬಳಿಸುವ ಪ್ಲ್ಯಾನ್‌ ಮಾಡಿದ್ದಾನೆ. ಇದರ ಮಧ್ಯೆ ದಿಯಾ ಅವನನ್ನು ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗ್ತಾಳೆ. ಆ ರೆಸ್ಟೋರೆಂಟ್‌ ಮಲ್ಲಿ ತಂದೆಯದ್ದು. ಮಲ್ಲಿ ಬಂದಳು ಅಂತ ಅಲ್ಲಿದ್ದ ಸಿಬ್ಬಂದಿಗಳು ದಿಯಾ-ಜಯದೇವ್‌ನನ್ನು ದೂರ ಸರಿಯಿರಿ ಅಂತ ಹೇಳ್ತಾರೆ. ಆಗ ಇಬ್ಬರಿಗೂ ಅವಮಾನ ಆಗುವುದು.

ಮಲ್ಲಿಗೆ ಇಂಗ್ಲಿಷ್‌ ಬರಲ್ಲ!

ಇನ್ನೊಂದು ಕಡೆ ಮಲ್ಲಿಯ ಹೊಟ್ಟೆ ಉರಿಸಬೇಕು ಅಂತ ಇವರಿಬ್ಬರು ಪ್ರಯತ್ನಪಡ್ತಾರೆ. ನಾನು, ದಿಯಾ ಖುಷಿಯಾಗಿದ್ದೀವಿ ಅಂತ ಮಲ್ಲಿಗೆ ತೋರಿಸಬೇಕು ಅಂತ ಜಯದೇವ್‌ ಅಂದುಕೊಂಡಿದ್ದನು. ರೆಸ್ಟೋರೆಂಟ್‌ ಮಾಲೀಕ ಫುಡ್‌ ಮೆನು ಹೇಳುತ್ತಾನೆ, ಆಗ ಮಲ್ಲಿ ಸೈಲೆಂಟ್‌ ಆಗಿರುತ್ತಾಳೆ. ಮಲ್ಲಿಗೆ ಇಂಗ್ಲಿಷ್‌ ಬರಲ್ಲ ಅಂತ ಜಯದೇವ್‌, ದಿಯಾ ನಗುತ್ತಾರೆ. ಆಗಲೂ ಮಲ್ಲಿ ಮೌನವಾಗಿರುತ್ತಾಳೆ.

ಇಂಗ್ಲಿಷ್‌ನಲ್ಲಿ ಮಲ್ಲಿ ಮಾತು!

“ನನಗೆ ಇಂಗ್ಲಿಷ್‌ ಬರೋದಿಲ್ಲ ಅಂತ ನಗ್ತೀರಾ? ಎಕ್ಸ್‌ಕ್ಯೂಸ್‌ ಮೀ. ಕಮ್‌ ಹಿಯರ್‌, ಇವನ್‌ ಐ ನೋ ಹೌ ಟು ಸ್ಪೀಕ್‌ ಇನ್‌ ಇಂಗ್ಲಿಷ್.‌ ಬಟ್‌ ಐ ಡೋಂಟ್‌ ವಾಂಟ್‌ ಟು ಸ್ಪೀಕ್‌ ಇನ್‌ ಇಂಗ್ಲಿಷ್.‌ ಬಿಕಾಸ್‌ ಐ ಆಮ್‌ ಕನ್ನಡತಿ. ಬೇರೆ ಭಾಷೆಯಂತೆ ಇಂಗ್ಲಿಷ್‌ ಕೂಡ ಒಂದು ಭಾಷೆ. ಭಾಷೆಯಿಂದ ನಮ್ಮ ಅರ್ಹತೆಯನ್ನು ಅಳೆಯಲಾಗೋದಿಲ್ಲ” ಎಂದು ಮಲ್ಲಿ ಹೇಳುತ್ತಾಳೆ. ಅದನ್ನು ಕೇಳಿ ಜಯದೇವ್-ದಿಯಾ ಕೂಡ ತತ್ತರಿಸಿದ್ದಾರೆ.

ಮೊನ್ನೆ ಮೊನ್ನೆ ಭೂಮಿ ಸ್ಟಮಕ್‌ ಬರ್ನ್‌ ಎಂದಾಗ ಮಲ್ಲಿಗೆ ಅರ್ಥ ಆಗಿಲ್ಲ ಎನ್ನೋ ರೀತಿ ಎಪಿಸೋಡ್‌ ಪ್ರಸಾರ ಮಾಡಲಾಗಿತ್ತು. ಈಗ ಯಾವ ಗ್ಯಾಪ್‌ನಲ್ಲಿ ಮಲ್ಲಿ ಇಂಗ್ಲಿಷ್‌ ಕಲಿತಳು ಎನ್ನೋದು ಅರ್ಥವಾಗದ ವಿಷಯ.

ಹೊಟ್ಟೆ ಉರಿಸಿದ ಮಲ್ಲಿ!

ಇವರಿಬ್ಬರು ಖುಷಿಯಿಂದ ಊಟ ಮಾಡಿದ್ಮೇಲೆ ಹಣವನ್ನು ತಗೊಂಡಿರಲಿಲ್ಲ. ಇದು ಜಯದೇವ್‌ಗೆ ಸಿಟ್ಟು ತಂದಿದೆ. ಬಿಟ್ಟಿ ತಿನ್ನೋಕೆ ನಾವು ಗತಿಗೆಟ್ಟಿದ್ದೀವಾ ಎಂದು ಜಯದೇವ್‌ ಕೂಗಾಡಿದ್ದಾನೆ. ಆಗ ಮಲ್ಲಿ “ನನ್ನ ತಂದೆಯ ಹುಟ್ಟಿದಹಬ್ಬದ ಪ್ರಯುಕ್ತ ಎಲ್ಲರಿಗೂ ಫ್ರೀ ಆಗಿ ಊಟ ಹಾಕಿಸುತ್ತಿದ್ದೇವೆ” ಎಂದು ಹೇಳುತ್ತಾಳೆ. ಇದು ಜಯದೇವ್‌ಗೆ ಇನ್ನಷ್ಟು ಸಿಟ್ಟು ಬರುವ ಹಾಗೆ ಮಾಡುವುದು.

ಕರ್ಮ್‌ ರಿಟರ್ನ್ಸ್‌ ಅಂತಾರಲ್ಲ.. ಹಾಗೆ ಉರಿಸಲು ಬಂದ ಜಯದೇವ್‌, ದಿಯಾಗೆ ಸರಿಯಾಗಿ ಅವಮಾನ ಆಗಿದೆ.

ಪಾತ್ರಧಾರಿಗಳು

ಜಯದೇವ್-‌ ರಾಣವ್‌ ಗೌಡ

ಮಲ್ಲಿ- ಅನ್ವಿತಾ ಸಾಗರ್‌

ದಿಯಾ- ಶ್ವೇತಾ ಗೌಡ

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!