
‘ಅಮೃತಧಾರೆʼ ಧಾರಾವಾಹಿಯಲ್ಲಿ ( Amruthadhaare Serial ) ನಟರಾಜ್ ಜೊತೆ ಬದುಕ್ತೀನಿ ಅಂತ ಸುಧಾ ಹೇಳಿದ್ದಳು, ತನ್ನಿಂದ ಸುಧಾ ದೂರ ಆಗುತ್ತಿದ್ದಾಳೆ ಅಂತ ಸೃಜನ್ ಕೂಡ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಗಡೆ ಹೋಗಲು ರೆಡಿಯಾಗಿದ್ದನು. ಆದರೆ ಕೊನೇ ಕ್ಷಣದಲ್ಲಿ ಗೌತಮ್ ಈ ಕಹಾನಿಗೆ ಟ್ವಿಸ್ಟ್ ಕೊಟ್ಟಿದ್ದಾನೆ.
ನಟರಾಜ್ ನಾಟಕ ಬಯಲು!
'ಅಮೃತಧಾರೆ' ಧಾರಾವಾಹಿಯಲ್ಲಿ ಸುಧಾ ಗಂಡ ನಟರಾಜ್ ದೊಡ್ಡ ಕುಡುಕನಂತೆ. ಹೀಗಾಗಿ ಸುಧಾ ತನ್ನ ತಾಯಿ, ಮಗಳನ್ನು ಸಾಕುವುದಲ್ಲದೆ ಗಂಡನಿಗೂ ಕುಡಿಯೋಕೆ ಕೂಡ ಹಣ ಕೊಡಬೇಕಿತ್ತು. ಮಗಳು ಹುಟ್ಟಿದಾಗಲೂ ಕೂಡ ಅವನು ನೋಡಲು ಬಂದಿರಲಿಲ್ಲ. ಏಕಾಂಗಿಯಾಗಿ ಸುಧಾ ಹೋರಾಡಿದ್ದಳು. ಹೀಗಾಗಿ ಅವಳು ಗಂಡನ ಹಣೆಬರಹ ಏನು ಅಂತ ಸುಧಾ ತನ್ನ ತವರು ಮನೆಯಲ್ಲಿ ಹೇಳಿಕೊಂಡಿದ್ದಾಳೆ. ಸೃಜನ್ ಕೂಡ ಸುಧಾಳನ್ನು ಮದುವೆಯಾಗಲು ರೆಡಿಯಾಗಿದ್ದನು. ನಟರಾಜ್ ಹಣಕ್ಕಾಗಿ ನಾಟಕ ಮಾಡಿಕೊಂಡು ತನ್ನ ಮನೆಗೆ ಬಂದಿರೋದು, ಅವನಿಗೆ ಇನ್ನೊಂದು ಮದುವೆ ಆಗಿರೋದು ಕೂಡ ಗೌತಮ್‌ಗೆ ಗೊತ್ತಾಗಿತ್ತು, ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ. ಆಮೇಲೆ ತನ್ನ ಮನೆಯಲ್ಲಿಯೇ ಸೃಜನ್, ಸುಧಾ ಮದುವೆ ನೆರವೇರಿಸಿದ್ದಾನೆ. ಮಗಳ ಜೀವನ ಸರಿಯಾಯ್ತು ಅಂತ ಭಾಗ್ಯಮ್ಮ ಖುಷಿಯಿಂದಿದ್ದಾಳೆ. ಇನ್ನು ಲಕ್ಷ್ಮೀಗೂ ಕೂಡ ಅಪ್ಪ ಸಿಕ್ಕಿದ್ದಾನೆ.
ಸೃಜನ್ ಒಳ್ಳೆಯ ಹುಡುಗ!
ಸುಧಾ ಎಲ್ಲಿ ನಟರಾಜ್ ಜೊತೆ ಹೋಗ್ತಾಳೋ ಅಂತ ವೀಕ್ಷಕರು ಭಯಪಟ್ಟಿದ್ದರು. ಆದರೆ ಆ ರೀತಿ ಆಗಿಲ್ಲ. ಸೃಜನ್ ಹಾಗೂ ಸುಧಾ ಆರಂಭದಲ್ಲಿ ಜಗಳ ಆಡಿಕೊಳ್ಳುತ್ತಿದ್ದರು. ಇವರಿಬ್ಬರ ಕೋಳಿ ಜಗಳ ವೀಕ್ಷಕರಿಗೆ ಖುಷಿ ಕೊಡುತ್ತಿತ್ತು. ಇನ್ನೊಂದು ಕಡೆ ಸೃಜನ್, ಸುಧಾ ಕ್ಲಾಸ್‌ಮೇಟ್ಸ್ ಎನ್ನೋದು ಕೂಡ ರಿವೀಲ್ ಆಗಿತ್ತು. ಸೃಜನ್ ತುಂಬ ಒಳ್ಳೆಯ ಹುಡುಗ, ಪ್ರಾಮಾಣಿಕ ಎನ್ನೋದು ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಗೌತಮ್ ತನ್ನ ತಂಗಿಗೆ ಅವಳ ಜೊತೆ ಮದುವೆ ಮಾಡಿಸಿದ್ದಾನೆ.
ಧಾರಾವಾಹಿ ಕಥೆ ಏನು?
ವಯಸ್ಸು 45 ಆದ್ಮೇಲೆ ಮನೆಯವರ ಖುಷಿಗೋಸ್ಕರ ಗೌತಮ್ ಹಾಗೂ ಭೂಮಿಕಾ ಸದಾಶಿವ ಮದುವೆಯಾಗಿದ್ದರು. ಗೌತಮ್ ಮದುವೆ ಆಗೋದು, ಮಕ್ಕಳಾಗೋದು ಮಲತಾಯಿಗೆ ಶಕುಂತಲಾಗೆ ಇಷ್ಟವೇ ಇರಲಿಲ್ಲ. ವಿಧಿಯಿಂದಾಗಿ ಗೌತಮ್ ಹಾಗೂ ಭೂಮಿಗೆ ಮದುವೆಯಾಗಿದೆ. ಏನೇ ಪ್ಲ್ಯಾನ್ ಮಾಡಿದರೂ, ಕುತಂತ್ರ ಮಾಡಿದರೂ ಕೂಡ ಗೌತಮ್-ಭೂಮಿಗೆ ಮಗು ಹುಟ್ಟಿದೆ. ಶಕುಂತಲಾ ಹಾಗು ಅವನ ಮಗ ಜಯದೇವ್‌ಗೆ ಇಡೀ ಆಸ್ತಿ ಹೊಡೆಯುವ ಆಸೆ ಇದೆ. ಹೀಗಾಗಿ ಅವರಿಬ್ಬರು ಸೇರಿಕೊಂಡು ದಿನಕ್ಕೊಂದು ಕುತಂತ್ರ ಕೊಡುತ್ತಿರುತ್ತಾರೆ.
ಗೌತಮ್‌ಗೆ ಅವಳಿ ಮಕ್ಕಳು ಹುಟ್ಟಿದ್ದಾರೆ, ಅದರಲ್ಲಿ ಮಗಳನ್ನು ಜಯದೇವ್ ಹೊತ್ತೊಯ್ದಿದ್ದಾನೆ, ಅಷ್ಟೇ ಅಲ್ಲದೆ ಪೇಪರ್ ಎಸೆದ ಹಾಗೆ ಎಸೆದಿದ್ದಾನೆ. ಈಗ ಗೌತಮ್ ಎಷ್ಟೇ ಹುಡುಕಿದರೂ ಕೂಡ, ಮಗಳು ಕಾಣುತ್ತಿಲ್ಲ. ಮಗಳು ಹುಡುಕಿದರೂ ಕೂಡ ಸಿಗುತ್ತಿಲ್ಲ. ಮಗಳು ಹುಟ್ಟಿರುವ ವಿಷಯ ಮನೆಯವರಿಗೆ ಗೊತ್ತೇ ಇಲ್ಲ. ಮುಂದೆ ಗೌತಮ್ ಏನ್ ಮಾಡ್ತಾನೆ ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಭೂಮಿ - ನಟಿ ಛಾಯಾ ಸಿಂಗ್
ಗೌತಮ್ ದಿವಾನ್ - ನಟ ರಾಜೇಶ್ ನಟರಂಗ
ಜಯದೇವ್ - ರಾಣವ್
ಮಲ್ಲಿ - ನಟಿ ಅನ್ವಿತಾ ಸಾಗರ್
ಸುಧಾ-ಮೇಘನಾ ಶೆಣೈ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.