New Kannada Serial: ಮಾ.14ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ 'ರಾಧಿಕಾ'

By Suvarna News  |  First Published Mar 13, 2022, 6:28 PM IST

ಮಾರ್ಚ್ 14ರಿಂದ ಸೋಮವಾರದಿಂದ ಶನಿವಾರ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ 'ರಾಧಿಕಾ' ಪ್ರಸಾರವಾಗಲಿದೆ. ರಾಧಿಕಾ ಮಧ್ಯಮ ವರ್ಗದ ಅವಿವಾಹಿತ ಮಹಿಳೆ ಕುಟುಂಬದ ಏಕೈಕ ಆಧಾರಸ್ತಂಭ. 


ಮಾರ್ಚ್ 14ರಿಂದ ಸೋಮವಾರದಿಂದ ಶನಿವಾರ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ (Udaya TV) ಹೊಸ ಧಾರಾವಾಹಿ 'ರಾಧಿಕಾ' (Radhika) ಪ್ರಸಾರವಾಗಲಿದೆ. ರಾಧಿಕಾ ಮಧ್ಯಮ ವರ್ಗದ ಅವಿವಾಹಿತ ಮಹಿಳೆ ಕುಟುಂಬದ ಏಕೈಕ ಆಧಾರಸ್ತಂಭ. ತನ್ನ ಒಡಹುಟ್ಟಿದವರ ಭವಿಷ್ಯ ರೂಪಿಸಲು ತಾನು ಹಗಲು ರಾತ್ರಿ ದುಡಿಯುತ್ತಿದ್ದಾಳೆ. ತನ್ನ ಸೋದರ ಸೋದರಿ ನೆಲೆಕಂಡುಕೊಳ್ಳವವರೆಗೂ ಅವಳು ಉಪ್ಪಿರುವ ಆಹಾರವನ್ನು ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವಳು. ಸಹೋದರ ಪೊಲೀಸ್ ಆಗಲಿ, ಒಬ್ಬ ಸಹೋದರಿ ಡಾಕ್ಟರ್ (Doctor) ಆಗಲಿ ಮತ್ತು ಇನ್ನೊಬ್ಬಳು ಕಾರ್ಪೊರೇಟ್ ಉದ್ಯೋಗ (Corporate Job) ಪಡೆಯಲಿ ಎಂದು ಹಾರೈಸುತ್ತಾಳೆ.

ರಾಧಿಕಾ ತನ್ನ ಜೀವನದ ಪ್ರತಿಯೊಂದು ಸವಾಲನ್ನು ನಗುಮೊಗದಿಂದ ಸ್ವೀಕರಿಸುತ್ತಾ, ಆರ್ಥಿಕವಾಗಿ ದುರ್ಬಲವಾಗಿರುವ ಹುಡುಗಿಯರ ಜೀವನದಲ್ಲಿ ಯಶಸ್ವಿಯಾಗಲು (Success) ಇರುವ ಏಕೈಕ ಆಸ್ತಿ ಧೈರ್ಯ ಎಂದು ನಂಬಿದ್ದಾಳೆ. ರಾಧಿಕಾ ಖಾಸಗಿ ಆಸ್ಪತ್ರೆಯಲ್ಲಿ ಹೆಡ್ ನರ್ಸ್ (Head Nurse) ಆಗಿ ಕೆಲಸ ಮಾಡುತ್ತಿದ್ದಾಳೆ. ಇಡೀ ಆಸ್ಪತ್ರೆಯಲ್ಲಿ ಅವಳು ಅತ್ಯಂತ ಕಾಳಜಿಯುಳ್ಳ, ಎಲ್ಲರೂ ಇಷ್ಟಪಡುವ ನರ್ಸ್. ಎಲ್ಲ ರೋಗಿಗಳು ರಾಧಿಕಾಳ ಸ್ನೇಹ ಸ್ವಭಾವವನ್ನು ಮೆಚ್ಚುವ ಕಾರಣದಿಂದ ಈಕೆ ಎಲ್ಲರಿಗೂ ಅಚ್ಚುಮೆಚ್ಚು. ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಆತ್ಮವಿಶ್ವಾಸದಿಂದ ನಿಭಾಯಿಸುತ್ತಿರುವವಳು ರಾಧಿಕಾ.

Tap to resize

Latest Videos

undefined

ಮಾ.7ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ Madumagalu

ತನ್ನ ಒಡಹುಟ್ಟಿದವರ ಜೀವನವನ್ನು ದಡಮುಟ್ಟಿಸುವಲ್ಲಿ ರಾಧಿಕಾ ಗೆಲ್ಲುತ್ತಾಳಾ? ರಾಧಿಕಾ ತನ್ನ ಸ್ವಾತಂತ್ರ್ಯ ಜೀವನವನ್ನು ಅನುಭವಿಸಲು ಮುಂದೆಂದಾದರೂ ಸಾಧ್ಯವೇ? ಇಷ್ಟೆಲ್ಲ ಕುತೂಹಲಗಳ ಜೊತೆಗೆ 'ರಾಧಿಕಾ' ಈ ಹಿಂದೆಂದೂ ಚಿಕ್ಕ ಪರದೆಯನ್ನೇ ಕಂಡಿರದ, ಭಾವನಾತ್ಮಕವಾಗಿ ಬೆರಗುಗೊಳಿಸುವ ಚಿತ್ರಕಥೆಯೊಂದಿಗೆ ಪ್ರೇಕ್ಷಕರಿಗೆ ತಾಜಾತನವನ್ನು ತರುವುದರಲ್ಲಿ ಸಂಶಯವಿಲ್ಲ. ಶ್ರೀ ದುರ್ಗಾ ಕ್ರಿಯೇಷನ್ಸ್ (Sri Durga Creations) ಬ್ಯಾನರ್ ಅಡಿಯಲ್ಲಿ ಬರಲಿರುವ 'ರಾಧಿಕಾ' ನಿರ್ಮಾಪಕರು ಗಣಪತಿ ಭಟ್ (Ganapati Bhat). ಭರವಸೆಯ ನಿರ್ದೇಶಕ ದರ್ಶಿತ್ ಭಟ್ (Darshit Bhat) ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಗಣೇಶ್ ಹೆಗಡೆ (Ganesh Hegde) ಮತ್ತು ಕೃಷ್ಣ ಕಂಚನಹಳ್ಳಿ (Krishna Kanchanahalli) ತಮ್ಮ ಛಾಯಾಗ್ರಹಣ ಕೌಶಲ್ಯವನ್ನು ತೋರಿಸಿದ್ದಾರೆ. 

ಸುನಾದ್ ಗೌತಮ್ (Sunad Gowtham) ಅವರು ಶೀರ್ಷಿಕೆ ಗೀತೆ ಸಂಯೋಜನೆ ಮಾಡಿದ್ದಾರೆ. ತುರುವೇಕೆರೆ ಪ್ರಸಾದ್ (Turuvekere Prasad) ಸಂಭಾಷಣೆ ಬರೆದಿದ್ದು, ರಾಘವೇಂದ್ರ (Raghavendra) ಸಂಕಲನದ ಹೊಣೆ ಹೊತ್ತಿದ್ದಾರೆ. ಧಾರಾವಾಹಿಯ ವಿಶೇಷತೆ ಎಂದರೆ ಕಾಸ್ಟಿಂಗ್. ರಾಧಿಕಾ ಪಾತ್ರವನ್ನು ಜನಪ್ರಿಯ ಮತ್ತು ಭರವಸೆಯ ಕಾವ್ಯಾ ಶಾಸ್ತ್ರಿ (Kavya Shastry) ನಿರ್ವಹಿಸಿದ್ದಾರೆ, ನಂದಿನಿಯಲ್ಲಿ 'ತ್ರಿಶಲಾ' ಪಾತ್ರವನ್ನು ನಿರ್ವಹಿಸಿದ್ದರು, ಅದು ಸಹ ಆತ್ಮವಿಶ್ವಾಸ ಹೊತ್ತ ತುಂಬಾ ಶಕ್ತಿಯುತವಾದ ಕಾಲ್ಪನಿಕ ಪಾತ್ರವಾಗಿತ್ತು, ಅವರು ಉದಯ ಟಿವಿಯಲ್ಲಿ ಅಂತಹ ಪಾತ್ರಗಳನ್ನು ಪಡೆಯಲು ಅದೃಷ್ಟಶಾಲಿ ಎಂದು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

New Kannada Serial: ಸ್ಟಾರ್ ಸುವರ್ಣದಲ್ಲಿ 'ಜೇನುಗೂಡು' ಪ್ರೇಮಕಾವ್ಯ

ನಾಯಕ ಆಕರ್ಷಕ ಮತ್ತು ಸ್ಪುರದ್ರೂಪಿಯಾದ ಶರತ್ ಕ್ಷತ್ರಿಯ (Sharat Kshatriya). ಉಳಿದ ತಾರಾಗಣದಲ್ಲಿ ಹಿರಿಯ ನಟರಾದ ಗಾಯತ್ರಿ ಪ್ರಭಾಕರ್, ರವಿ ಕಲಾಬ್ರಹ್ಮ, ಮಾಲತಿ ಸಿರ್ದೇಶಪಾಂಡೆ, ಸುರೇಶ್ ರೈ ಮತ್ತು ಸವಿತಾ ಕೃಷ್ಣಮೂರ್ತಿ, ಅನುಭವಿ ನಟರಾದ ಶ್ವೇತಾ ರಾವ್, ಸುನಿಲ್, ಜೀವನ್, ರೇಖಾ ಸಾಗರ್ ಮತ್ತು ನವನಟರಾದ ಮುದ್ದಾಗಿ ಕಾಣುವ ಇಂಚರ ಶೆಟ್ಟಿ, ಪ್ರಿಯಾ ದರ್ಶಿನಿ ಮತ್ತು ಬೇಬಿ ದೃಯಾ ಆದಿತ್ಯ ಇದ್ದಾರೆ.

click me!