
ಧಾರಾವಾಹಿ ಹೆಸರು ‘ಆಕೃತಿ’. ಇದೇ ತಿಂಗಳು ಆ.24ರಿಂದ ಉದಯವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9.30ಕ್ಕೆ ಈ ಧಾರಾವಾಹಿ ಪ್ರಸಾರ ಆಗುತ್ತಿದೆ.
ಕೌಟಂಬಿಕದ ಜತೆಗೆ ಹಾರಾರ್ ನೆರಳು ಇರುವ ಈ ಧಾರಾವಾಹಿಯಲ್ಲಿ ತನ್ವಿರಾವ್, ನೇತ್ರಾವತಿ ಜಾದವ್, ಬಾಬಿ, ಪವನ್, ಪ್ರಖ್ಯಾತ್, ತನುಜ, ಶ್ರೀಧರ್, ಉಷಾ ಭಂಡಾರಿ ಮುಂತಾದವರು ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಕೆ ಎಂ ಚೈತನ್ಯ ಅವರು ಈ ಧಾರಾವಾಹಿ ಮೂಲಕ ನಿರ್ಮಾಪಕರಾಗಿದ್ದು, ಇವರಿಗೆ ಹರಿದಾಸ್ ಪಿ ಕೆಜಿಎಫ್ ಅವರು ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ.
'ಆಕೃತಿ' ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಚೈತನ್ಯ!
ಛಾಯಾಗ್ರಹಣ ಹಾಗೂ ನಿರ್ದೇಶನ ಎಂ ಕುಮಾರ್ ಅವರು. ಕತೆ ಹಾಗೂ ಚಿತ್ರಕತೆ ಸಿದ್ದಾರ್ಥ ಅವರದ್ದು. ಮೃಗಶಿರ ಶ್ರೀಕಾಂತ್ ಸಂಭಾಷಣೆ ಬರೆದಿದ್ದು, ಶೀರ್ಷಿಕೆ ಗೀತೆಗೆ ಗುರುಕಿರಣ್ ಸಂಗೀತ, ಕವಿರಾಜ್ ಸಾಹಿತ್ಯ ನೀಡಿದ್ದಾರೆ.
ಮಹಾತ್ವಾಕಾಂಕ್ಷಿ ಹೆಣ್ಣು ಮಗಳು ದಿವ್ಯಾ. ಅವಳ ತಂದೆ ಪ್ರಜ್ವಲ್, ತಾಯಿ ಚೈತ್ರ ಮತ್ತು ತಮ್ಮ ಸುಜಯ್. ಇವರ ಕುಟುಂಬ ಚಿಕ್ಕದಾಗಿದ್ದು, ಇವರ ಮನೆಯಲ್ಲಿ ಸಂತೋಷ ಮನೆಮಾಡಿದೆ. ದಿವ್ಯಾಳ ಕುಟುಂಬ ಸಕಲೇಶಪುರದಲ್ಲಿ ಒಂದು ಹಳೆ ಫಾಮ್‌ರ್ ಹೌಸ್ ಕೊಂಡುಕೊಳ್ಳುತ್ತದೆ. ಆ ಮನೆಯ ಅಂಗಳದಲ್ಲಿ ಒಂದು ಮರ, ಆ ಮರದಲ್ಲಿ ಒಂದು ಆಕೃತಿ, ಅದಕ್ಕೆ ಒಂದು ಹಿನ್ನಲೆ ಇದೆ. ಆ ಆಕೃತಿಯಿಂದ ಮುಂದೆ ಇವರ ಕುಟುಂಬದಲ್ಲಿ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ. ಅದು ಹೇಗೆ ಎಂಬುದು ಧಾರಾವಾಹಿಯ ಕತೆ. ಸಕಲೇಶಪುರ ಸುತ್ತಮುತ್ತ ಪ್ರದೇಶಗಳಲ್ಲಿ ಅದ್ಭುತವಾಗಿ ಚಿತ್ರೀಕರಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.