
ಆಗಸ್ಟ್ 31ರಿಂದ ಪ್ರತಿ ಸೊಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರ ಆಗಲಿದೆ. ಶ್ರೀಮಂತ ಮನೆತನಕ್ಕೆ ಸೇರಿದ ಮಗು, ಹೆತ್ತವರ ಪ್ರೀತಿಯಿಂದ ವಂಚಿತರಾಗಿರುತ್ತಾರೆ. ಇದರ ಜತೆಗೆ ಆಸ್ತಿ ಗಲಾಟೆ, ಈ ಮಗುವಿಗೆ ಬೆನ್ನೆಲುಬಾಗಿ ನಿಲ್ಲುವ ಮಂಗಳಮುಖಿ ಇವರ ಸುತ್ತ ಕತೆ ಸಾಗುತ್ತದೆ.
ಹೊಸ ರೀತಿಯ ತಿರುವುಗಳಿಂದ ಕೂಡಿದ ಈ ಧಾವಾರಾಹಿ ನಾಯಕಿ ಮಾಯಾ, ಅಂಜನೇಯನ ಪರಮ ಭಕ್ತೆ ಎಂಬುದು ಮತ್ತೊಂದು ಹೈಲೈಟ್. ಆರ್ಕಾ ಮಿಡಿಯಾ ಈ ಧಾವಾಹಿಯನ್ನು ನಿರ್ಮಿಸುತ್ತಿದ್ದು, ದರ್ಶಿತ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. ಮಂಡ್ಯ ಮಂಜು ಕ್ಯಾಮೆರಾ ಇದೆ.
‘ಬ್ಯೂಟಿಫುಲ್ ಮನಸುಗಳು’, ‘ಕಮರೊಟ್ಟು ಚೆಕ್‌ಪೋಸ್ಟ್’, ‘ವೆನಿಲ್ಲಾ’, ‘ಕಟ್ಟುಕಥೆ’ ಮುಂತಾದ ಚಿತ್ರದಲ್ಲಿ ನಟಿಸಿದ್ದ ಸ್ವಾತಿ ಕೊಂಡೆ ಈ ಧಾರಾವಾಹಿಯಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದಾರೆ. ಉಳಿದಂತೆ ಆರವ್ ಸೂರ್ಯ, ಅಂಬರೀಶ್ ಸಾರಂಗಿ, ಅಶೋಕ ಹೆಗಡೆ, ಬಾಲರಾಜ್, ವಾಣಿಶ್ರೀ, ದೀಪಾ ಪಾರ್ವತಿ, ನಾಗರಾಜ್ ಭಟ್, ಮಂಗಳಮುಖಿ ಪಾತ್ರಧಾರಿಗಳಾಗಿ ಸನಾ ಸುಮನ್ ಹಾಗೂ ಲೋಹಿತ್ ಪಟೇಲ್ ಮುಂತಾದವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.