
ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡು, ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿರುವ ರಾಜ ರಾಣಿ ರಿಯಾಲಿಟಿ ಶೋ ಮೂರು ವಾರಗಳು ಪೂರೈಸಿದ ನಂತರ ಒಂದು ಜೋಡಿ ಎಲಿಮನೇಟ್ ಆಗಿದೆ. ಕಿರುತೆರೆ ಸೆಲೆಬ್ರಿಟಿ ಕಪಲ್ ದೀಪಿಕಾ ಮತ್ತು ಆಕರ್ಶ್.
ತೀರ್ಪುಗಾರರಾದ ನಟಿ ತಾರಾ ಅನುರಾಧ ಹಾಗೂ ನಟ ಸೃಜನ್ ಲೋಕೇಶ್ ಎರಡು-ಮೂರು ವಾರಗಳಲ್ಲಿ ನಡೆದ ಕಾರ್ಯಕ್ರಮದ ಮೇಲೆ ಅಂಕ ನೀಡಿದ್ದಾರೆ. ಯಾರು ಅತಿ ಕಡಿಮೆ ಅಂಕ ಗಳಿಸಿರುತ್ತಾರೋ ಅವರು ಈ ಶೋನಿಂದ ಎಲಿಮನೇಟ್ ಆಗುತ್ತಾರೆ. 'ರೊಮ್ಯಾಂಟಿಕ್ ಕುಕ್ಕಿಂಕ್' ಎಪಿಸೋಡ್‌ಗೆ ದೀಪಿಕಾ ಮತ್ತು ಆಕರ್ಶ್ ಬಾರದ ಕಾರಣ ಅವರಿಗೆ ಎಲ್ಲರಿಗಿಂತ ಅತಿ ಕಡಿಮೆ ಅಂಕ ಸಿಕ್ಕಿದೆ. ಎಲಿಮನೇಟ್ ಆಗುವ ಸಂದರ್ಭದಲ್ಲಿ ಇಬ್ಬರೂ ಕಾರ್ಯಕ್ರಮದ ಬಗ್ಗೆ ಹಾಗೂ ಮದುವೆ ಆದ ನಂತರ ಮೊದಲ ಬಾರಿ ಆನ್ ಸ್ಕ್ರೀನ್ ಎಷ್ಟು ಎಂಜಾಯ್ ಮಾಡಿದ್ದರು ಎಂಬುದನ್ನು ಹಂಚಿಕೊಂಡಿದ್ದಾರೆ.
12 ಸೆಲೆಬ್ರಿಟಿ ಕಪಲ್‌ಗಳ ಜೀವನ ಕಂಡು ಸೃಜನ್ ಲೋಕೇಶ್ 'A perfect marriage is just two imperfect people who refuse to give up on each other' ಎಂದು ಹೇಳುತ್ತಾರೆ. ವರ್ಷಗಳ ಕಾಲ ಹಿರಿಯ ನಟ ರಾಜು ತಾಳಿಕೋಟಿ ಅವರು ತಮ್ಮ ಮಗನ ಜೊತೆ ಮಾತು ಬಿಟ್ಟಿದ್ದರು. ಈ ವಿಚಾರ ತಿಳಿದು ತಾರಾ ಅವರ ಪುತ್ರನನ್ನು ಸಂಪರ್ಕಿಸಿ, ವೇದಿಕೆ ಮೇಲೆ ಕರೆತಂದು ಕುಟುಂಬದ ಜೊತೆ ಒಂದು ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.