ಬೆಚ್ಚಿಬಿದ್ದ ಕಿರುತೆರೆ; ಆ ಐವರ ಕೆಲಸಕ್ಕೆ ಯಾಮಾರಿದ ಸೀರಿಯಲ್‌ ನಟ, ನಟಿಯರು!

ಸಾಮಾನ್ಯ ಜನರು ಒಂದೇ ಅಲ್ಲ, ಕಲಾವಿದರು ಕೂಡ ಸಾಕಷ್ಟು ಬಾರಿ ಮೋಸ ಹೋಗುತ್ತಾರೆ. ಅಂತೆಯೇ ಈಗ ಕಿರುತೆರೆಯ ಸ್ಟಾರ್‌ ನಟ, ನಟಿಯರು ಮೋಸ ಹೋಗಿದ್ದಾರೆ. 
 

tv industry is shock for scam by an energy drink brand

ಮುಂಬೈ ಕಿರುತೆರೆ ರಂಗ ಅಕ್ಷರಶಃ ಬೆಚ್ಚಿಬಿದ್ದಿದೆ. ತಾರೆಯರಾದ ಅಂಕಿತಾ ಲೋಖಂಡೆ, ಆಯುಷ್‌ಶರ್ಮಾ, ತೇಜಸ್ವಿ ಪ್ರಕಾಶ್‌, ಆದಿತ್ಯ ರಾಯ್‌ ಮುಂತಾದವರಿಗೆ 1.5 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ತಾರೆಯರ ಮ್ಯಾನೇಜರ್‌ಛೆಂಬುರ್‌ಪೊಲೀಸ್‌ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. 

25 ಕಲಾವಿದರು ಬೇಕು
ಎನರ್ಜಿ ಡ್ರಿಂಕ್‌ ಪ್ರಚಾರಕ್ಕೆ ಭಾರೀ ಪ್ರಮಾಣದ ಹಣ ಕೊಡೋದಾಗಿ ಒಂದು ಟೀಂ ಹೇಳಿದೆ. ಅಷ್ಟೇ ಅಲ್ಲದೆ ಬ್ರ್ಯಾಂಡ್‌ಗಳ ಜೊತೆ ಕೊಲೇಬರೇಶನ್‌ ಮಾಡಿಕೊಳ್ಳೋದಾಗಿ ಹೇಳಿಕೊಳ್ಳಿದೆ. ಆದರೆ ಹಣವೇ ಬಂದಿಲ್ಲ. ಪೊಲೀಸರು ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ತನಿಖೆಯನ್ನು ಚುರುಕು ಮಾಡಿದ್ದಾರೆ. ಇನ್ನು ಸಾಕ್ಷಿಗಳನ್ನು ಕೂಡ ಕಲೆಹಾಕಲಾಗುತ್ತಿದೆ. 2024  ಜುಲೈನಲ್ಲಿ ಎನರ್ಜಿ ಡ್ರಿಂಕ್ಸ್‌ ಪ್ರಚಾರ ಮಾಡಲು 25 ಕಲಾವಿದರು ಬೇಕು ಎಂದು ಬೇಡಿಕೆ ಇಡಲಾಗುತ್ತದೆ. ಉದ್ಯಮಿ ಅಂಧೇರ್‌ ರೋಶನ್‌ ಬಿಂದರ್‌ ಎನ್ನುವವರಿಗೆ ಇದೆಲ್ಲ ಸತ್ಯ ಅಂತ ಅನಿಸಿ ಡೀಲ್‌ ಮುಂದುವರೆಸುತ್ತಾರೆ. 

Latest Videos

ಜಿಮ್ ಮುಗಿಯುತ್ತಿದ್ದಂತೆ ಭೇಟಿ ಮಾಡಲು ಬರುತ್ತಿದ್ದರು, ಕುಣಿದು ಕುಪ್ಪಳಿಸಿದ್ದೀನಿ; ಅಪ್ಪು ಬಗ್ಗೆ ಜೈ ಜಗದೀಶ್ ಪುತ್ರಿ ಪೋಸ್ಟ್

ದೂರಿನಲ್ಲಿ ಏನಿದೆ? 
ಹತ್ತು ಲಕ್ಷ ರೂಪಾಯಿ ಮುಂಗಡ ಹಣ ನೀಡಲಾಗಿದೆ ಎಂಬ ರಸೀತಿ ಕಳಿಸುತ್ತಾರೆ. ಹಣ ಬಂದಿತು ಎಂದು ಅಂಧೇರ್‌ ಅವರು ಸೆಲೆಬ್ರಿಟಿಗಳನ್ನು ಕರೆದುಕೊಂಡು ಬಂದು ಪ್ರಚಾರ ಮಾಡುತ್ತಾರೆ. ಆ ಇವೆಂಟ್‌ನಲ್ಲಿ ನೂರು ಸೆಲೆಬ್ರಿಟಿಗಳು ಇರುತ್ತಾರೆ. ಅರ್ಜುನ್‌ ಬಿಜ್ಲಾನಿ, ಅಭಿಷಢಕ್‌ ಬಜಾಜ್‌, ಹರ್ಷ್‌ ರಜಪೂತ್‌ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರೇ ಇರುತ್ತಾರೆ. ಈ ಸೆಲೆಬ್ರಿಟಿಗಳಲ್ಲಿ 25 ಸೆಲೆಬ್ರಿಟಿಗಳನ್ನು ಜಾಹೀರಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಒಟ್ಟಾರೆಯಾಗಿ 1.32 ಕೋಟಿ ರೂಪಾಯಿ ಎಂದು ಒಪ್ಪಂದ ಕೂಡ ಆಗುವುದು. ಆಮೇಲೆ ಮತ್ತೆ ಹದಿನೈದು ಲಕ್ಷ ರೂಪಾಯಿ ಚೆಕ್‌ ಕೊಡಲಾಗುವುದು, ಉಳಿದ ಮೊತ್ತವನ್ನು ಅಂಧೇರ್‌ ಖಾತೆಗೆ ಹಾಕಲಾಗುವುದು ಎಂದು ನಂಬಿಸಲಾಗುತ್ತದೆ. 

ಬಾಡಿ ಶೇವಿಂಗ್​ ಹೇಗೆ ಮಾಡ್ಬೇಕು? ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ ನಟಿ ಅದಿತಿ ಪ್ರಭುದೇವ

ಅಂಧೇರ್‌ ಅವರು ಮತ್ತೆ ಜಾಹೀರಾತು ಶೂಟ್‌ ಮಾಡುತ್ತಾರೆ, ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ಮೂವತ್ತೈದು ದಿನಗಳಲ್ಲಿ ಉಳಿದ ಹಣ ಪೇ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಎರಡು ಲಕ್ಷ ರೂಪಾಯಿ ಚೆಕ್‌, ಹಾಗೂ ಇನ್ನೊಂದು ಪ್ರಚಾರದ ಸಮಯದಲ್ಲಿ, ಕಲಾವಿದರಿಗೆ ನೀಡಲಾದ 2 ಲಕ್ಷ ರೂಪಾಯಿ, 90,000 ರೂಪಾಯಿ ಮೌಲ್ಯದ ಎರಡು ಚೆಕ್‌ಗಳನ್ನು ವಂಚಿಸಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ. ಈ ಬಗ್ಗೆ ಆರೋಪಿಗಳ ಜೊತೆ ಮಾತನಾಡಿದಾಗ ಅವರೇ  ಒಂದಷ್ಟು ಕಥೆ ಹೇಳಿ ಸಮರ್ಥಿಸಿಕೊಂಡರು. ದುಬೈನಿಂದ 22.5 ರೂಪಾಯಿ ಹಣವನ್ನು ವರ್ಗಾಯಿಸಲಾಗಿದೆ ಎಂದು ಆರೋಪಿಗಳು ಹೇಳಿದ್ದರು.  
 

 

click me!