ʼಮಗು ನೀ ನಗುʼ; ಕವಿತಾ ಗೌಡ, ಚಂದನ್‌ ಕುಮಾರ್‌ ಕ್ಯೂಟ್‌ ಫ್ಯಾಮಿಲಿಗೆ ಯಾರೂ ದೃಷ್ಟಿ ಹಾಕ್ಬೇಡ್ರಪ್ಪಾ..!

Published : Mar 18, 2025, 03:21 PM ISTUpdated : Mar 18, 2025, 04:31 PM IST
ʼಮಗು ನೀ ನಗುʼ; ಕವಿತಾ ಗೌಡ, ಚಂದನ್‌ ಕುಮಾರ್‌ ಕ್ಯೂಟ್‌ ಫ್ಯಾಮಿಲಿಗೆ ಯಾರೂ ದೃಷ್ಟಿ ಹಾಕ್ಬೇಡ್ರಪ್ಪಾ..!

ಸಾರಾಂಶ

ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಚಂದನ್‌ ಕುಮಾರ್‌, ಕವಿತಾ ಗೌಡ ಅವರ ಮಗನ ಸುಂದರವಾದ ಫೋಟೋ ನೋಡಿ! 

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ನಟಿ ಕವಿತಾ ಗೌಡ, ಚಂದನ್‌ ಕುಮಾರ್‌ ಜೋಡಿ ಒಂದು ಸುಂದರ ಫೋಟೋ ಹಂಚಿಕೊಂಡು ಸೋಶಿಯಲ್‌ ಮೀಡಿಯಾ ಬಳಕೆದಾರರಿಗೆ ಕ್ಯೂಟ್‌ ಸರ್ಪ್ರೈಸ್‌ ನೀಡಿದ್ದಾರೆ. ಹೌದು, ಪರ್ಫೆಕ್ಟ್‌ ಫ್ಯಾಮಿಲಿ ಹಂಚಿಕೊಂಡು ಮಗ ಹುಟ್ಟಿ ಆರು ತಿಂಗಳು ಕಳೆದ ಬಗ್ಗೆ ಇವರಿಬ್ಬರು ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ.

ವಿಶೇಷ ಪೋಸ್ಟ್‌ ಹಂಚಿಕೊಂಡ ಜೋಡಿ! 
ಕವಿತಾ ಗೌಡ ಹಾಗೂ ಚಂದನ್‌ ಕುಮಾರ್‌ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಿ ಆರು ತಿಂಗಳು ಕಳೆದಿದೆ. ಹೀಗಾಗಿ ಈ ಜೋಡಿ ವಿಶೇಷ ಪೋಸ್ಟ್‌ ಹಂಚಿಕೊಂಡಿದೆ. ಇನ್ನು ಮಗನಿಗೆ ಆರು ತಿಂಗಳಾಗಿದ್ದಕ್ಕೆ ವಿಶೇಷ ಪೋಸ್ಟ್‌ ಕೂಡ ಹಂಚಿಕೊಂಡಿದ್ದಾರೆ. “ಹೊಸ ಜೀವನದ 6 ತಿಂಗಳುಗಳು. ಗುಂಡಪ್ಪ. ಆರು ತಿಂಗಳ ಹಿಂದೆ ನೀನು ಬಂದೆ. ಇಂದು ನೀನು ಹುಟ್ಟಿದ ಆರು ತಿಂಗಳ ಸಮಯವನ್ನು ನಾವು ಆಚರಿಸುತ್ತಿದ್ದೇವೆ. ನಿನ್ನ ಪಾಲಕರಾಗೋದಕ್ಕೆ ನಾವೆಷ್ಟು ಅದೃಷ್ಟವಂತರು ಎಂದು ನೆನಪಿಸಿಕೊಳ್ಳುವ ಸಮಯವಿದು. ನಮ್ಮ ಬದುಕು ಸದಾ ನಗುವಿನಿಂದ ತುಂಬಿರುವಂತೆ ಮಾಡಿದ ನೀನೇ ನಮಗೆ ಸಿಹಿಯಾದ ಉಡುಗೊರೆ” ಎಂದು ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಜನರ ಅನುಕಂಪ ದೂರ ಕರ್ಕೊಂಡು ಹೋಗಲ್ಲ, ಆ ಘಟನೆ ನಂತರ ನಗುವುದಕ್ಕೆ ಭಯ ಆಗುತ್ತಿತ್ತು: ಮೇಘನಾ ರಾಜ್

ʼಲಕ್ಷ್ಮೀ ಬಾರಮ್ಮʼದ ನಂಟು! 
ಆರಂಭದಲ್ಲಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಚಂದನ್‌ ಕುಮಾರ್ ಅವರು ಹೀರೋ ಆಗಿದ್ದರು. ಮೊದಲು ಲಚ್ಚಿ ಪಾತ್ರದಲ್ಲಿ ಇನ್ನೋರ್ವ ನಟಿ ಅಭಿನಯಿಸುತ್ತಿದ್ದರು. ಆಮೇಲೆ ಲಚ್ಚಿ ಪಾತ್ರಕ್ಕೆ ಕವಿತಾ ಗೌಡ ಆಗಮನವಾಯ್ತು. ಆಗ ಕವಿತಾ ಗೌಡ, ಚಂದನ್‌ ನಡುವೆ ಸ್ನೇಹ ಬೆಳೆದಿದೆ. ಚಂದನ್‌ ಅವರು ವರ್ಷಗಳಾಗುತ್ತಿದ್ದಂತೆ ಈ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಆದರೆ ಕವಿತಾ ಮಾತ್ರ ಅದೇ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಚಂದನ್‌ ಅವರು ಕನ್ನಡ, ತೆಲುಗು ಎಂದು ಬೇರೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅತ್ತ ಕವಿತಾ ಗೌಡ ಧಾರಾವಾಹಿ, ಸಿನಿಮಾ ಎಂದು ಬ್ಯುಸಿಯಾಗಿದ್ದಾರೆ. ಕೊರೊನಾ ವೈರಸ್‌ ಬಂದು ಲಾಕ್‌ಡೌನ್‌ ಆದ ಸಮಯದಲ್ಲಿ ಚಂದನ್‌ ಕುಮಾರ್‌, ಕವಿತಾ ಗೌಡ ನಡುವೆ ಇನ್ನಷ್ಟು ಸ್ನೇಹ ಜಾಸ್ತಿ ಪ್ರೀತಿಗೆ ತಿರುಗಿದೆ. ಕುಟುಂಬದವರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿತ್ತು. ಆಮೇಲೆ ಕೊರೊನಾ ನೀತಿ-ನಿಯಮ ಇದ್ದಿದ್ದಕ್ಕೆ ಸರಳವಾಗಿ ಮದುವೆಯಾಗಿದೆ. 

ಏ.10 ರಾತ್ರಿ 8.30ಕ್ಕೆ ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ 'ಕುಕ್ಕು ವಿತ್‌ ಕಿರಿಕ್ಕು'!

2021 ಮೇ 14ರಂದು ಖಾಸಗಿ ರೆಸಾರ್ಟ್‌ನಲ್ಲಿ ಮದುವೆ ನಡೆದಿತ್ತು. ಕೆಲವೇ ಜನರ ಸಾಕ್ಷಿಯಾಗಿ ಈ ಮದುವೆ ನಡೆದಿದೆ. ಆ ನಂತರ ವಿಶೇಷ ಫೋಟೋಶೂಟ್‌ ಮೂಲಕ ಇವರಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ವಿಷಯವನ್ನು ಹೇಳಿಕೊಂಡಿತ್ತು. ಆ ಬಳಿಕ ಚಂದನ್‌ ಅವರು ಗ್ರ್ಯಾಂಡ್‌ ಆಗಿ ಕವಿತಾ ಗೌಡ ಸೀಮಂತ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ಕವಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಜೋಡಿ ಆಗಾಗ ಮಗನ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ತಿದೆ. ಮೂರು ತಿಂಗಳಿರುವಾಗಲೇ ಚಂದನ್‌ ಅವರ ಮಗ ಅಪ್ಪ ಹೇಳಿದಂತೆ ಐಲವ್‌ಯು ಎಂದು ಹೇಳಿದ ವಿಡಿಯೋ ಭಾರೀ ವೈರಲ್‌ ಆಗಿತ್ತು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?