ಕಬಾಬ್ ಚಂದ್ರು ಬಿಟ್ಟು ಸಿಹಿ ಕಹಿ ಚಂದ್ರು ಹತ್ರ ಬೆಳ್ಳುಳ್ಳಿ ಕಬಾಬ್ ಕೇಳಿದ ಸಾರಾ ಅಣ್ಣಯ್ಯ!

By Suvarna News  |  First Published Mar 1, 2024, 11:25 AM IST

ಅಮೃತಧಾರೆ ಸೀರಿಯಲ್ ನಟಿ ಸಾರಾ ಅಣ್ಣಯ್ಯಂಗೆ ಬೆಳ್ಳುಳ್ಳಿ ಕಬಾಬ್ ಬೇಕಂತೆ. ಅದನ್ನು ಕಬಾಬ್ ಚಂದ್ರು ಬಿಟ್ಟು ಸಿಹಿ ಕಹಿ ಚಂದ್ರು ಹತ್ರ ಕೇಳಿ ಕನ್‌ಫ್ಯೂಸ್ ಮಾಡಿದ್ದಾರೆ.


ಒಂದಿಷ್ಟು ದಿನಗಳ ಕೆಳಗೆ ಸಾರಾ ಅಣ್ಣಯ್ಯ ಸಖತ್ ಸುದ್ದಿಯಲ್ಲಿದ್ದರು. ಅದಕ್ಕೆ ಕಾರಣ ಅವರ ಡ್ರೆಸ್ಸು ಅಂತ ಬೇರೆ ಹೇಳಬೇಕಿಲ್ಲ. ಗೋವಾದ ಸುಂದರ ಕಡಲ ಕಿನಾರೆಯಲ್ಲಿ ಟೂ ಪೀಸ್‌ನಲ್ಲಿ ಬಳಕುತ್ತಾ ನಿಂತಾಗ ಅಲ್ಲಿದ್ದ ಜನರಿಗೆ ಕನ್‌ಫ್ಯೂಶನ್ನು. ಬೀಚ್ ನೋಡೋದೋ, ಸುಂದರಿಯನ್ನು ಕಣ್ತುಂಬಿಸಿಕೊಳ್ಳೋದೋ ಅಂತ. ಒಂದು ಹಂತದಲ್ಲಿ ಜನ ಬೀಚನ್ನೂ ಮರೆತು ಸಾರಾ ಎಂಬ ಸುಂದರಿಯಲ್ಲಿ ಕಣ್ಣು ನೆಟ್ಟರು. ಈಗ ಈ ಸುಂದರಿಗೆ ಕಬಾಬ್ ಬೇಕಂತೆ. ಅದೂ ಬೆಳ್ಳುಳ್ಳಿ ಕಬಾಬ್‌! ಇದನ್ನು ನೋಡಿ ನಿಮ್ಗೂ ಕನ್‌ಫ್ಯೂಶನ್ ಆಗಿರಬಹುದು. 'ಅಮೃತಧಾರೆ' ಸೀರಿಯಲ್‌ನ ಹಳೇ ಎಪಿಸೋಡ್ ನೋಡಿ ಏನೋ ಮಿಸ್ ಆಗಿ ಮೇಲಿನ ಮಾತನ್ನು ಬರೆದಿರಬಹುದಾ ಅಂತ.

ಆದರೆ ಬರೆದಿರೋ ಮ್ಯಾಟರಂತೂ ಸುಳ್ಳಲ್ಲ. 'ಅಮೃತಧಾರೆ' ಸೀರಿಯಲ್‌ನಲ್ಲಿ ಗೌತಮ್ ತಂಗಿ ಮಹಿಮಾ ಪಾತ್ರದಲ್ಲಿ ಸಾರಾ ಅಣ್ಣಯ್ಯ ಕಾಣಿಸಿಕೊಂಡಿದ್ದಾರೆ. ಈ ಸೀರಿಯಲ್ ನಾಯಕ ಗೌತಮ್ ದಿವಾನ್ ತಂಗಿಯಾಗಿ ನಾಯಕಿ ಭೂಮಿಕಾ ತಮ್ಮನ ಹೆಂಡತಿಯಾಗಿ ನಟಿಸಿದ್ದರು. ಅವರ ಪಾತ್ರಕ್ಕೆ ಸ್ವಲ್ಪ ಗ್ರೇ ಶೇಡ್ ಇದೆ. ಅಮ್ಮ ವಿಲನ್, ಅಣ್ಣ ದೇವತಾ ಪುರುಷ ನಡುವೆ ಈ ಮಹಿಮಾ ಅತ್ತ ದೇವತೆಯೂ ಅಲ್ಲದ ಇತ್ತ ತನ್ನ ಅಮ್ಮನಂತೆ ರಾಕ್ಷಸಿಯೂ ಅಲ್ಲದ ಸಾಮಾನ್ಯ ಮನುಷ್ಯರ ಸಣ್ಣತನದ ಜೊತೆಗೆ ಸಹಾಯ ಮಾಡುವ ಗುಣವೂ ಇರುವ ಹುಡುಗಿಯ ಪಾತ್ರ ಇವರದು. ಇವರ ಪಾತ್ರಕ್ಕೆ ಒಂಥರ ಸಾಮಾನ್ಯ ಮನುಷ್ಯರ ಶೇಡ್ ಇದೆ ಅನ್ನಬಹುದು.

Tap to resize

Latest Videos

undefined

ಆ್ಯಂಕರ್ ಅನುಶ್ರೀ ಪಕ್ಕದಲ್ಲಿ ಕುಳಿತ ಮಂಗಳೂರು ಹುಡುಗ ಯಾರು?; ಮದ್ವೆ ಬಗ್ಗೆ ಕೇಳಬೇಡಿ ಅಂದಿದ್ಯಾಕೆ?

ಸಾರಾ ಈ ಮೊದಲು 'ಕನ್ನಡತಿ' ಸೀರಿಯಲ್‌ನಲ್ಲೂ ಒಂಥರ ಇದೇ ಬಗೆಯ ಪಾತ್ರದಲ್ಲಿ ನಟಿಸಿದ್ದರು. ಆ ಕಡೆ ಸ್ನೇಹಿತೆ ಮೇಲೆ ಪ್ರೀತಿ, ಈ ಕಡೆ ಪ್ರೀತಿಸುವ ಹುಡುಗನ ಬಗ್ಗೆ ಅತೀ ವ್ಯಾಮೋಹ ಇರುವ ಪಾತ್ರದಲ್ಲಿ ಸಾರಾ ನಟನೆಗೆ ಸಾಕಷ್ಟು ಪ್ರಶಂಸೆ ಸಿಕ್ಕಿತ್ತು. ಸದ್ಯ ಸೀರಿಯಲ್‌ನಲ್ಲಿ ನಟಿಸುತ್ತಾ ಊರೂರು ಸುತ್ತುತ್ತಾ ಟೈಮಿದ್ರೆ ರೀಲ್ಸ್ ಮಾಡ್ತಾ ಕಳೀತಿರೋ ಈ ಹುಡುಗಿಗೆ ಇದೀಗ ಕಬಾಬ್ ಆಸೆಯಾಗಿದೆ. ಇದು ಅಮೃತಧಾರೆ ಸೀರಿಯಲ್‌ನ ಇವರ ಪಾತ್ರದ ಕಥೆಯಾ ಅಂದರೆ ಈ ಹಿಂದೆ ಇವರು ಮಾಡುತ್ತಿದ್ದ ಮಹಿಮಾ ಪಾತ್ರ ಮದುವೆಗೂ ಮೊದಲೇ ಪ್ರೆಗ್ನೆಂಟ್ ಆಗಿದ್ಲು.

ಆ ಕಾರಣಕ್ಕೇ ಈಕೆ ಪ್ರೇಮಿಸುತ್ತಿದ್ದ ಜೀವನ್ ಅನ್ನೋ ನಾಯಕಿ ಭೂಮಿಕಾ ತಮ್ಮನ ಜೊತೆ ಮದುವೆ ಮಾಡಲಾಗಿತ್ತು. ಆದರೆ ಇದರಿಂದ ತನ್ನ ಸೌಂದರ್ಯ ಹಾಳಾಗುತ್ತೆ ಅನ್ನೋ ಗೆಳತಿಯ ಮಾತು ಕೇಳಿ ಇವಳು ಅಬಾರ್ಶನ್ ಮಾಡಿಸಿಕೊಳ್ತಾಳೆ. ಆಮೇಲೆ ಬೈಕ್ ಆಕ್ಸಿಡೆಂಟ್ ನಾಟಕ ಆಡ್ತಾಳೆ. ತಂಗಿ ಹೊಟ್ಟೆಯಲ್ಲಿ ತನ್ನ ತಂದೆಯೇ ಬರ್ತಾರೆ ಅಂದುಕೊಂಡಿದ್ದ ಗೌತಮ್ ಗೆ ಇದು ಸಿಕ್ಕಾಪಟ್ಟೆ ಶಾಕಿಂಗ್ ಆಗುತ್ತೆ.

ಸತ್ಯದ ದಾರಿಯಲ್ಲಿ ಮುಳ್ಳುಗಳೇ ಜಾಸ್ತಿ! ಮಲ್ಲಿಗೆ ನ್ಯಾಯ ಒದಗಿಸಿದ ಭೂಮಿಯ ಬದುಕಲ್ಲೀಗ ಸಂಕಷ್ಟ....

ಸೋ ಇದು ಸಾರಾ ಮಾಡ್ತಿರೋ ಪಾತ್ರದ ಗರ್ಭಿಣಿ ಬಯಕೆಯಂತೂ ಅಲ್ಲ.

ಬದಲಿಗೆ ಫನ್ನಿ ರೀಲ್ಸ್‌ ಅಷ್ಟೇ. ಇದರಲ್ಲಿ ಸಾರಾ ಸಿಹಿಕಹಿ ಚಂದ್ರು ಜೊತೆಗೆ ಬೆಳ್ಳುಳ್ಳಿ ಕಬಾಬ್ ಕೇಳ್ತಾರೆ. ಅವರ ಈ ಇಮಿಟೇಶನ್ ರೀಲ್ಸ್ ಸಖತ್ ಫನ್ನಿ ಆಗಿದೆ. ಬಹಳಷ್ಟು ಜನ ಇದನ್ನು ಲೈಕ್ ಮಾಡಿದ್ದಾರೆ. ಚಂದ್ರು ಅವರು 'ಏನೋ ಬೇಕು ನಿಂಗೆ.. ಏನೋ ಬೇಕು..' ಅನ್ನೋ ಫೇಮಸ್ ಡೈಲಾಗ್ ಹೇಳಿದ್ರೆ, ಸಾರಾ ಚೂರೂ ಟೆನ್ಶನ್ ಮಾಡ್ಕೊಳ್ದೇ, 'ಬೆಳ್ಳುಳ್ಳಿ ಕಬಾಬ್' ಅಂತಾರೆ. ಇದನ್ನು ನೋಡಿದ ಫ್ಯಾನ್ಸ್ ಕಬಾಬ್ ಚಂದ್ರು ಸ್ಟೈಲಲ್ಲಿ, 'ಒನ್ ಮೋರ್ ಒನ್‌ ಮೋರ್' ಅಂತಿದ್ದಾರೆ.

 

click me!