ಶ್ರೇಷ್ಠಾ ನೇರವಾಗಿ ಭಾಗ್ಯಳ ಮನೆಗೆ ಬಂದಿದ್ದಾಳೆ. ತಾಂಡವ್ಗೆ ಚಡಪಡಿಕೆ ಶುರುವಾಗಿದೆ. ನಾನು ಮದ್ವೆಯಾಗಿಯೇ ಆಗ್ತೇನೆ ಅಂತಿದ್ದಾಳೆ ಶ್ರೇಷ್ಠಾ, ನಾನು ಅದಕ್ಕೆ ಬಿಡಲ್ಲ ಅಂತಿದ್ದಾಳೆ ಭಾಗ್ಯ. ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ...
ಪೂಜಾ ಮತ್ತು ಹಿತಾ ಮಂತ್ರವಾದಿ ಪ್ಲ್ಯಾನ್ ಮಾಡಿ, ಭಾಗ್ಯಳಿಗೆ ಶ್ರೇಷ್ಠಾಳ ಅಸಲಿಯತ್ತು ಗೊತ್ತು ಮಾಡಿದ್ದಾರೆ. ಶ್ರೇಷ್ಠಾ ಇಬ್ಬರು ಮಕ್ಕಳ ತಂದೆಯನ್ನು ಮದುವೆಯಾಗುತ್ತಿರುವ ವಿಷಯ ಭಾಗ್ಯಳಿಗೆ ತಿಳಿದಿದೆ. ಆದರೆ ಅದು ತನ್ನದೇ ಗಂಡ ಎಂದು ಗೊತ್ತಾಗಿಲ್ಲ. ಆಗಿದ್ದು ಆಗಿ ಹೋಗಲಿ ಎಂದು ಶ್ರೇಷ್ಠಾ ಭಾಗ್ಯಳ ಮನೆಗೇ ಬಂದು ಎಲ್ಲಾ ವಿಷಯ ಹೇಳುವ ತಯಾರಿ ನಡೆಸಿದ್ದಾಳೆ. ನೇರವಾಗಿ ಮನೆಗೇ ಬಂದಿದ್ದಾರೆ. ಇದೀಗ ತಾಂಡವ್ ಮತ್ತು ಶ್ರೇಷ್ಠಾಳ ಅಕ್ರಮ ಸಂಬಂಧ ಬಯಲಾಗುವ ಕಾಲ ಬಂದಾಗಿದೆ. ಈಗ ಏನಿದ್ದರೂ ಸೀರಿಯಲ್ನಲ್ಲಿ ಭಾಗ್ಯಳದ್ದೇ ಹವಾ. ಅಳುಮುಂಜಿ ಭಾಗ್ಯ ಬದಲಾಗಿದ್ದಾಳೆ. ಲವರ್ ಶ್ರೇಷ್ಠಾಳಿಗೂ ಕುತ್ತು ಬಂದಿದೆ. ಸ್ಟಾರ್ ಹೋಟೆಲ್ನಲ್ಲಿ ಕೆಲಸ ಗಿಟ್ಟಿಸಿಕೊಂಡಿರೋ ಭಾಗ್ಯ ಸಂಪೂರ್ಣ ಬದಲಾಗಿದ್ದಾಳೆ. ಅವಳ ವರಸೆಯೇ ಬದಲಾಗಿದೆ. ಈಗ ಏನಿದ್ರೂ ಅವಳು ಸ್ಟಾರ್ ಹೋಟೆಲ್ನ ಚೀಫ್ ಶೆಫ್. ಓಡಾಡಲು ಕಾರು ಇದೆ. ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ. ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಿದ್ದಾಳೆ. ಸರಿಯಾಗಿ ಇಂಗ್ಲಿಷ್ ಮಾತನಾಡಲೂ ಬರದಿದ್ದ ಭಾಗ್ಯ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವ ಮೂಲಕ ಹಲವರಿಗೆ ಮಾದರಿಯಾಗಿದ್ದಾಳೆ. ಈಕೆ ಹತ್ತನೇ ಕ್ಲಾಸ್ ಪರೀಕ್ಷೆ ಬರೆದದ್ದರಿಂದ ಸ್ಫೂರ್ತಿಗೊಂಡು, ನಿಜ ಜೀವನದಲ್ಲಿಯೂ ಮಹಿಳೆಯರು ಮಕ್ಕಳ ಜೊತೆ ಪರೀಕ್ಷೆ ಬರೆದಿದ್ದಾಳೆ. ಹೆಣ್ಣು ಅದರಲ್ಲಿಯೂ ಗೃಹಿಣಿ ಎಂದರೆ ತೀರಾ ಕಡೆಗಣನೆಯಿಂದ ನೋಡುತ್ತಿದ್ದವರಿಗೆಲ್ಲರಿಗೂ ಭಾಗ್ಯ ಬದುಕಿನ ಹೊಸ ದಿಸೆ ತೋರಿಸುತ್ತಿದ್ದಾಳೆ.
ಮನೆಗೆ ಬಂದಿರೋ ಶ್ರೇಷ್ಠಾ ನೇರವಾಗಿ ತಾಂಡವ್ ಬಗ್ಗೆ ಭಾಗ್ಯಳಿಗೆ ಹೇಳಿದ್ದಾಳೆ. ಆದರೆ ತಾಂಡವ್ ಹೆಸರು ಎತ್ತಲಿಲ್ಲ. ಅತ್ತ ತಾಂಡವ್ಗೆ ತನ್ನ ಹೆಸರನ್ನು ಎಲ್ಲಿ ಅವಳು ಹೇಳುತ್ತಾಳೋ ಎನ್ನುವ ಭಯ. ಇನ್ನು ವಿಚಿತ್ರ ಎಂದರೆ ಇಷ್ಟೆಲ್ಲಾ ಆದ್ರೂ ಅವಳು ಮದ್ವೆ ಆಗ್ತಿರೋ ಹುಡುಗ ತಾಂಡವ್ ಎಂದು ಮನೆಯಲ್ಲಿ ಯಾರಿಗೂ ಗೊತ್ತಾಗಿಲ್ಲ. ತಾಂಡವ್ನ ಚಡಪಡಿಕೆ, ಪದೇ ಪದೇ ಶ್ರೇಷ್ಠಾ ತಾಂಡವ್ ಹತ್ರ ನೋಡುತ್ತಿದ್ದರೂ ಯಾರಿಗೂ ಅನುಮಾನ ಬರಲಿಲ್ಲ. ಆದರೆ ಶ್ರೇಷ್ಠಾ ನಾನು ಮದ್ವೆ ಆಗಿಯೇ ಆಗುತ್ತೇನೆ ಎಂದು ಚಾಲೆಂಜ್ ಹಾಕಿದ್ದಾಳೆ, ನೀನು ಹೇಗೆ ಮದ್ವೆಯಾಗುತ್ತಿ ಎಂದು ನಾನು ನೋಡ್ತೇನೆ ಎಂದು ಭಾಗ್ಯ ತಿರುಗೇಟು ನೀಡಿದ್ದಾಳೆ. ಆಕೆಗೆ ಇವಳು ಮದ್ವೆಯಾಗ್ತಿರೋನಿಗೆ ಮದ್ವೆ ಆಗಿದೆ ಎಂದಷ್ಟೇ ಗೊತ್ತು ವಿನಾ ಅದು ತನ್ನದೇ ಗಂಡ ಎಂದು ತಿಳಿದಿಲ್ಲ.
ಮುಂಗಾರು ಮಳೆ ಶೂಟಿಂಗ್ನಲ್ಲೇ ಸತ್ತೋಗಿಬಿಟ್ರೆ ಅಂತ ಭಯ ಆಗೋಗಿತ್ತು.. ಜಿಗಣೆ ಕಾಟ ಬೇರೆ.. ಆ ದಿನ ನೆನೆದ ಪೂಜಾ ಗಾಂಧಿ
ಆದರೂ ಬೇರೆಯವರ ಸಂಸಾರ ಹಾಳಾಗಬಾರದು ಎಂದು ಭಾಗ್ಯ ಚಾಲೆಂಜ್ ಹಾಕಿದ್ದಾಳೆ. ಶ್ರೇಷ್ಠಾ ವಿರುದ್ಧ ನೇರವಾಗಿ ವಾರ್ ಡಿಕ್ಲೇರ್ ಮಾಡಿದ ಭಾಗ್ಯಾ ಎನ್ನುವ ಶೀರ್ಷಿಕೆಯಡಿ ಈ ಪ್ರೊಮೋ ರಿಲೀಸ್ ಮಾಡಲಾಗಿದೆ. ಇದನ್ನು ನೋಡಿ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಶೀಘ್ರದಲ್ಲಿ ಮೂರನೆಯ ವಿಶ್ವ ಯುದ್ಧ ಶುರುವಾಗುತ್ತದೆ ಎನ್ನುತ್ತಿದ್ದಾರೆ. ತಾಂಡವ್ ಮತ್ತು ಶ್ರೇಷ್ಠಾ ಮದುವೆಯವರೆಗೂ ಬಂದಿದ್ದಾರೆ. ನಿಶ್ಚಿತಾರ್ಥವೂ ಆಗಿದೆ, ಪ್ರೀ ವೆಡ್ಡಿಂಗ್ ಶೂಟ್ ಕೂಡ ಆಗಿದೆ. ಅದೇ ಇನ್ನೊಂದೆಡೆ ಪದೇ ಪದೇ ಭಾಗ್ಯಳಿಗೆ ಡಿವೋರ್ಸ್ ಕೊಡು ಎಂದು ಪೀಡಿಸುತ್ತಿದ್ದಾನೆ ತಾಂಡವ್. ಭಾಗ್ಯ ತನಗೆ ವಿಚ್ಛೇದನ ಕೊಡಲಿ ಎನ್ನುವ ಕಾರಣಕ್ಕೆ ಇಲ್ಲಸಲ್ಲದ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾನೆ. ಆಕೆಗೆ ಕೋಪ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಆಕೆಯನ್ನು ಪ್ರವೋಕ್ ಮಾಡುತ್ತಿದ್ದಾನೆ. ಆದರೆ ಭಾಗ್ಯ ವಿಚ್ಛೇದನಕ್ಕೆ ಸುತರಾಂ ಒಪ್ಪುತ್ತಿಲ್ಲ.ತನ್ನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಾವು ಡಿವೋರ್ಸ್ ಕೊಡುವುದೇ ಇಲ್ಲ ಎಂದು ಕಡ್ಡಿ ತುಂಡು ಮಾಡಿ ಹೇಳಿದ್ದಾಳೆ. ಕುಸುಮಾ ಕೂಡ ಭಾಗ್ಯಳಿಗೆ ಸಪೋರ್ಟ್ ಮಾಡುತ್ತಿದ್ದಾಳೆ. ಇಷ್ಟಾದರೂ ಶ್ರೇಷ್ಠಾ ಮದ್ವೆಯಾಗ್ತಿರೋ ಹುಡುಗ ಯಾರಿಗೂ ತಿಳಿಯಲಿಲ್ಲ ಎನ್ನೋದೇ ವಿಚಿತ್ರ.
ಅದೇ ಇನ್ನೊಂದೆಡೆ, ಪೂಜಾ ಮತ್ತು ಹಿತಾ ಇಬ್ಬರೂ ಶ್ರೇಷ್ಠಾಳ ಗುಟ್ಟನ್ನು ಭಾಗ್ಯಳ ಎದುರು ರಟ್ಟು ಮಾಡಿದ್ದಾರೆ. ನೀನು ಮದುವೆಯಾಗ್ತಿರೋ ಹುಡುಗನಿಗೆ ಇದಾಗಲೇ ಮದ್ವೆಯಾಗಿದೆ. ಇಬ್ಬರು ಮಕ್ಕಳು ಇದ್ದಾರೆ ಎಂದು ಭಾಗ್ಯನ ಎದುರೇ ಹೇಳಿದ್ದಾರೆ. ಆದರೆ ಭಾಗ್ಯಳಿಗೆ ಶಾಕ್ ಆಗಿದ್ದರೂ ಅದು ತನ್ನ ಗಂಡನೇ ಎನ್ನುವುದು ತಲೆಗೇ ಹೊಳಿಯಲಿಲ್ಲ. ಬೇರೆಯವರ ಮನೆಯನ್ನು ಹಾಳು ಮಾಡುತ್ತಿರುವ ಶ್ರೇಷ್ಠಾಳನ್ನು ಚೆನ್ನಾಗಿ ಉಗಿದಿದ್ದಾಳೆ. ಆದರೆ ತನ್ನ ಗಂಡನೇ ಈಕೆಯ ಭಾವಿ ಪತಿ ಎನ್ನುವುದು ಗೊತ್ತಾಗಲಿಲ್ಲ. ಅದಕ್ಕಾಗಿಯೇ ನೆಟ್ಟಿಗರು ಭಾಗ್ಯಳ ಪೆದ್ದುತನಕ್ಕೆ ಟೀಕೆ ಮಾಡುತ್ತಿದ್ದಾರೆ. ಪೆದ್ದು ಭಾಗ್ಯ, ನಿನಗೂ ಇಬ್ಬರು ಮಕ್ಕಳು ಎನ್ನೋದು ಮರೆತು ಹೋಯ್ತಾ. ನಿನ್ನ ಗಂಡ ಶ್ರೇಷ್ಠಾಳ ಹಿಂದೆ ಮುಂದೆ ಓಡಾಡ್ತಿರೋದು ಗೊತ್ತಾದ್ರೂ ಈ ಮಂತ್ರವಾದಿ ಮಾತು ಅರ್ಥವಾಗ್ತಿಲ್ವಲ್ಲಾ ಛೇ... ಇಷ್ಟು ಪೆದ್ದುನಾ ನೀನು ಎಂದು ಬೈಯುತ್ತಿದ್ದಾರೆ.
ಶಾರುಖ್ ಜೊತೆ ನಟಿಸುವಾಗ್ಲೇ ಕಾಜೋಲ್ಗೆ ಗರ್ಭಪಾತ! ಭಯಾನಕ ಘಟನೆ ನೆನಪಿಸಿಕೊಂಡ ನಟಿ