ನಿಮ್​ ಕಡೆ ಸೊಳ್ಳೆಗೆ ಏನಂತ ಕರೀತಾರೆ? ಅಂಜಲಿ ಪ್ರಶ್ನೆ ಕೇಳಿದ್ರೆ ಸಿಹಿ ಹೀಗೆಲ್ಲಾ ಹೇಳೋದಾ?

Published : Aug 06, 2024, 03:24 PM IST
ನಿಮ್​ ಕಡೆ ಸೊಳ್ಳೆಗೆ ಏನಂತ ಕರೀತಾರೆ? ಅಂಜಲಿ ಪ್ರಶ್ನೆ ಕೇಳಿದ್ರೆ ಸಿಹಿ ಹೀಗೆಲ್ಲಾ ಹೇಳೋದಾ?

ಸಾರಾಂಶ

ಸೀತಾರಾಮ ಸೀರಿಯಲ್​ ಅಂಜಲಿ ಮತ್ತು ಸಿಹಿ ಸೊಳ್ಳೆ ರೀಲ್ಸ್​ ಮಾಡಿದ್ದು, ನೆಟ್ಟಿಗರಿಂದ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ.   

ಅಂಜಲಿ ಥರದವರು ಇದ್ದರೆ ಸವಾಲು ಸಿಕ್ಕಾಪಟ್ಟೆ ಎದುರಿಸಬೇಕಾಗುತ್ತದೆ.  ಸಾಫ್ಟ್ ಸ್ವಭಾವ ಒಳ್ಳೆಯದ್ದೇ, ಆದರೆ ಪೆದ್ದು ಆಗಬಾರದು. ತುಂಬಾ ಸಾಫ್ಟ್​ ಆದ್ರೆ ಹೇಗೆ ಮೋಸ ಹೋಗ್ತೀವಿ ಎನ್ನೋದನ್ನು ಅಂಜಲಿಯ ನೋಡಿ ಕಲೀಬೇಕು.  ಸ್ವಲ್ಪ ಬೋಲ್ಡ್ ಆಗಿದ್ದರೆ ಒಳ್ಳೆಯದು. ಇಂದಿನ ಹುಡುಗಿಯರು ಬಹುತೇಕರು ಬೋಲ್ಡ್​ ಆಗಿರ್ತಾರೆ ನಿಜ. ಆದರೂ ಅಂಜಲಿ ನೋಡಿ ಕಲಿಯೋದು ತುಂಬಾ ಇದೆ... ಹೀಗಂತೆ ಹೇಳುತ್ತಲೇ ಹುಡುಗಿಯರು ಹೇಗೆ ಇರ್ಬೇಕು ಎಂದು ಹೇಳುವವರು ಸೀತಾರಾಮ ಸೀರಿಯಲ್​ ಅಂಜಲಿ ಉರ್ಫ್​ ಅನುಷಾ ಪರಮೇಶ್ವರಪ್ಪ. ರುದ್ರಪ್ರತಾಪನಿಂದ ವೈದ್ಯೆಯಾದವಳು ಹೇಗೆ ಮೋಸ ಹೋಗುತ್ತಿದ್ದಾಳೆ ಎನ್ನುವ ಅಂಜಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನುಷಾ. ಅನುಷಾ ಅವರು ಸೋಷಿಯಲ್​  ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದು, ಇದೇ ಸೀರಿಯಲ್​ ಸಿಹಿಯ ಜೊತೆ ರೀಲ್ಸ್​ ಮಾಡಿದ್ದಾರೆ.

ಅಷ್ಟಕ್ಕೂ ಸಿಹಿಯ ಬಗ್ಗೆ ಸೀರಿಯಲ್​ ಪ್ರೇಮಿಗಳಿಗೆ ಹೇಳುವುದೇ ಬೇಡ ಬಿಡಿ. ನೇಪಾಳದ ಪುಟಾಣಿ ರೀತು ಸಿಂಗ್​ ಸಿಹಿಯ ಮೂಲಕ ಇದಾಗಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ಇದೀಗ ಅನುಷಾ ಅವರು ರೀತು ಜೊತೆ ರೀಲ್ಸ್​ ಮಾಡಿದ್ದಾರೆ. ಇದರಲ್ಲಿ ಅನುಷಾ ನಿಮ್ಮ ಕಡೆ ಸೊಳ್ಳೆಗೆ ಏನಂತಾ ಕರೀತಾರೆ ಎಂದು ಕೇಳಿದಾಗ, ರೀತು, ನಮ್​  ಕಡೆ ಸೊಳ್ಳೆಯನ್ನು ನಾವು ಕರೆಯೋದಿಲ್ಲ, ಅವೇ ಬಂದು ಕಚ್ಚಿ ಹೋಗ್ತಾವೆ ಎಂದಿದ್ದಾರೆ. ಈ ಜೋಕ್​ ಸ್ವಲ್ಪ ಹಳೆಯದಾದ್ದರೂ, ನಟಿಯರು ಇವುಗಳನ್ನು ಮತ್ತೆ ಮಾಡಿದರೂ ಅದನ್ನು ನೋಡುವ ದೊಡ್ಡ ವೀಕ್ಷಕರೇ ಇದ್ದಾರೆ. ಇಲ್ಲಿಯೂ ಇವರಿಬ್ಬರ ನಟನೆಗೆ ಭೇಷ್​ ಭೇಷ್​ ಎನ್ನುತ್ತಿದ್ದಾರೆ ಅಭಿಮಾನಿಗಳು. 

ಎಷ್ಟು ಸಲ ಸಿಹಿಯನ್ನು ಕಿಡ್ನಾಪ್​ ಮಾಡಿಸ್ತೀರಾ? ಸೀತಾರಾಮ ವಿರುದ್ಧ ರೊಚ್ಚಿಗೆದ್ದ ಸೀರಿಯಲ್​ ಪ್ರೇಮಿಗಳು

ಇನ್ನು ಅನುಷಾ ಕುರಿತು ಹೇಳುವುದಾದರೆ, ಇವರು ಸೀರಿಯಲ್​ಗೂ ಬರುವುದಕ್ಕೆ ಮುನ್ನ ಕಂಪೆನಿಯೊಂದರಲ್ಲಿ ಉದ್ಯೋಗಿ ಆಗಿದ್ದರು. ಆಗಲೇ ಆಡಿಷನ್​ ಕೊಡಲು ಶುರು ಮಾಡಿದ್ದರು. ಆರಂಭದಲ್ಲಿ ಗೀತಾ ಸೀರಿಯಲ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಂಭಾವನೆ ವಿಚಾರದಲ್ಲಿ ಅಸಮಾಧಾನವಾಗಿ ಇವರು ಸೀರಿಯಲ್​ ಬಿಟ್ಟಿದ್ದರು. ಇದೀಗ ಸೀತಾರಾಮ ಧಾರಾವಾಹಿಯಲ್ಲಿ ಅಂಜಲಿ ಪಾತ್ರದಲ್ಲಿ ಜೀವ ತುಂಬುತ್ತಿದ್ದಾರೆ. ಈ ಪಾತ್ರದ ಕುರಿತು ಹೇಳಿರುವ ನಟಿ, ಅಂಜಲಿ ಪಾತ್ರ ತುಂಬ ಟ್ರೆಡಿಷನಲ್ ಆಗಿದೆ. ನಾನು ರಿಯಲ್ ಲೈಫ್‌ನಲ್ಲಿ ಅಷ್ಟು ಟ್ರೆಡಿಷನಲ್ ಅಲ್ಲ, ಮಾಡರ್ನ್ ಕೂಡ ಅಲ್ಲ. ಅಂಜಲಿ ಪಾತ್ರಕ್ಕೂ ನನಗೂ ಶೇಕಡಾ 50ರಷ್ಟು ಹೋಲಿಕೆ ಇದೆ. ಧಾರಾವಾಹಿಯಲ್ಲಿ ಈ ಪಾತ್ರ ಮಾಡಲು ಅಷ್ಟು ಕಷ್ಟ ಆಗಲಿಲ್ಲ ಎಂದಿದ್ದಾರೆ.  ಇವರಿಗೆ ಆರಂಭದಿಂದಲೂ ನಟನೆ ಇಷ್ಟವಾಗಿದ್ದರೂ, ಮನೆಯಲ್ಲಿ ಸಿನಿಮಾಕ್ಕೆ ಹೋಗುವುದು ಇಷ್ಟವಿರಲಿಲ್ಲ. ನಂತರ ಬೆಂಗಳೂರಿಗೆ ಉದ್ಯೋಗ ಅರಸಿ ಬಂದಾಗ ಆಡಿಷನ್​ ಕೊಡಲು ಶುರು ಮಾಡಿದರು. ಇಂದು ಜನಪ್ರಿಯತೆ ಸಿಕ್ಕಿದೆ. ಸುತ್ತಮುತ್ತಲಿನ ವಾತಾವರಣವಂತೂ ತುಂಬ ಬದಲಾವಣೆ ಆಗಿದೆ. ಈ ಹಿಂದೆ ನಮ್ಮ ಸಂಬಂಧಿಕರು ನಮ್ಮನ್ನು ಮಾತಾಡಿಸುತ್ತಿರಲಿಲ್ಲ. ನಾನು ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ ಮೇಲೆ ನಮ್ಮಿಂದ ದೂರ ಹೋದವರು ಮಾತನಾಡಲು ಶುರು ಮಾಡಿದ್ದಾರೆ, ಅಪ್ಪ -ಅಮ್ಮನಿಗೆ ಗೌರವ ಕೊಡಲು ಶುರು ಮಾಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ನಟಿ ಹೇಳಿದ್ದಾರೆ. 


ಇನ್ನು ರೀತು ಸಿಂಗ್​ ಕುರಿತು ಹೇಳುವುದಾದರೆ, ರೀತು ಸಿಂಗ್​ ನೇಪಾಳ ಮೂಲದವಳು. ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. 


  ಅಮ್ಮನನ್ನೇ ಧಾರೆ ಎರೆದುಕೊಟ್ಟ ಮಗ! ಬದಲಾದ ಮನಸ್ಥಿತಿಗೆ ನೆಟ್ಟಿಗರ ಕಮೆಂಟ್​ಗಳೇ ಸಾಕ್ಷಿ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!