ಹೂವು-ಹಾರ ಹಾಕಿ ಬನ್ನಿ ಅನ್ನಲ್ಲ... ಕನ್ನಡಿ ಮುಂದೆ ನಿಂತುಕೊಳ್ಳಿ... ಹೊಸಬರಿಗೆ ನಟಿ ಶಾಲಿನಿ 3 ಟಿಪ್ಸ್​

Published : Aug 04, 2024, 06:15 PM IST
 ಹೂವು-ಹಾರ ಹಾಕಿ ಬನ್ನಿ ಅನ್ನಲ್ಲ... ಕನ್ನಡಿ ಮುಂದೆ ನಿಂತುಕೊಳ್ಳಿ... ಹೊಸಬರಿಗೆ ನಟಿ ಶಾಲಿನಿ 3 ಟಿಪ್ಸ್​

ಸಾರಾಂಶ

ಉತ್ತಮ ನಿರೂಪಕರು, ನಟರು ಆಗಬೇಕಾದರೆ ಇರಲೇಬೇಕಾದ ಮೂರು ಅರ್ಹತೆಗಳೇನು? ನಟಿ, ಆ್ಯಂಕರ್​ ಶಾಲಿನಿ ಕೊಟ್ಟಿದ್ದಾರೆ ಮೂರು ಟಿಪ್ಸ್​...  

ಕಿರುತೆರೆ ಮತ್ತು ಹಿರಿ ತೆರೆಯ ಕಲಾವಿದರನ್ನು ನೋಡಿದಾಗ ತಾವೂ ನಟರಾಗಬೇಕು ವಎಂದು ಬಯಸುವ ದೊಡ್ಡ ವರ್ಗವೇ ಇದೆ. ಅದೇ ರೀತಿ ಇಂದು ರಿಯಾಲಿಟಿ ಷೋಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರ ಆ್ಯಂಕರಿಂಗ್​ ನೋಡಿದಾಗ ತಾವೂ ದೊಡ್ಡ ಮಟ್ಟದಲ್ಲಿ ನಿರೂಪಕಿಯಾಗಬೇಕು, ವೇದಿಕೆಗಳ ಮೇಲೆ ಮಿಂಚಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಲ್ಲಾ ಟ್ಯಾಲೆಂಟ್​ ಇದ್ದರೂ ಎಷ್ಟೋ ಮಂದಿಗೆ ಅವಕಾಶಗಳು ಸಿಗುವುದಿಲ್ಲ ಎನ್ನುವುದು ನಿಜವಾದರೂ, ಕೆಲವರಿಗೆ ಅವಕಾಶ ಸಿಕ್ಕರೂ ಅವರು ಒಳ್ಳೆಯ ನಿರೂಪಕರು ಎನಿಸಿಕೊಳ್ಳುವುದೇ ಇಲ್ಲ. ಅದಕ್ಕಾಗಿ ಪಾಪ ಪಾಂಡು ಶ್ರೀಮತಿ ಖ್ಯಾತಿಯ ನಟಿ, ನಿರೂಪಕಿ ಶಾಲಿನಿ ಅವರು ಉತ್ತಮ ಆ್ಯಂಕರ್​ ಮತ್ತು ನಟರಾಗಲು ಯಾವ ರೀತಿಯ ಅರ್ಹತೆ ಇರಬೇಕು ಎನ್ನುವ ಬಗ್ಗೆ ರ್ಯಾಪಿಡ್​ ರಶ್ಮಿ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

 ಮೊದಲನೆಯದ್ದಾಗಿ ಭಾಷೆ ಮೇಲೆ ಹಿಡಿತ ಇರಬೇಕು, ಭಾಷೆ ಶುದ್ಧ ಇರಬೇಕು. ಮಾತನಾಡಿದಾಗ ಕೇಳುವ ಹಾಗೆ ಇರಬೇಕು. ಡೈಲಾಗ್​ ಕೊಟ್ಟಾಗ ಹೇಳುವ ತಾಕತ್​ ಇರಬೇಕು. ಇದು ಆ್ಯಂಕರಿಂಗ್​ ಮತ್ತು ನಟರಾಗಲು ಇರುವ ದೊಡ್ಡ ಅರ್ಹತೆ. ಎಷ್ಟೋ ಮಂದಿಗೆ ಭಾಷೆಯ ಮೇಲೆ ಹಿಡಿತವೇ ಇರುವುದಿಲ್ಲ. ಇನ್ನು ಕೆಲವರಿಗೆ ಉಚ್ಚಾರಣೆ ಸರಿಯಾಗಿ ಬರುವುದಿಲ್ಲ. ಇದು ಅವರಿಗೆ ಕೊಡುವ ದೊಡ್ಡ ಹೊಡೆತ ಎಂದಿದ್ದಾರೆ.  ದೊಡ್ಡ ಕಲಾವಿದೆ ಅಥವಾ ನಿರೂಪಕರು ಎನಿಸಿಕೊಳ್ಳಲು ಇನ್ನೊಂದು ದೊಡ್ಡ ಪಾಠ ಎಂದರೆ ಪ್ರತಿದಿನ ಕಲಿಬೇಕು, ಎಲ್ಲೆಡೆಯಿಂದಲೂ ಕಲಿಯಬೇಕು, ಜನರನ್ನು ನೋಡಿ ಕಲಿಯಬೇಕು, ಕೆಲಸ ಮಾಡುವ ಸ್ಥಳದಲ್ಲಿ ಇರುವವರನ್ನು ನೋಡಿ ಕಲಿಯಬೇಕು,  ಸ್ಪಾಂಜ್​ ರೀತಿ ಆ್ಯಕ್ಟೀವ್​ ಆಗಿರಬೇಕು ಎಂದಿದ್ದಾರೆ.

ಶಾಲಿನಿ ಅವರು ಕೊಟ್ಟಿರುವ ಇನ್ನೊಂದು ಟಿಪ್ಸ್​ ಎಂದರೆ ಅದು ಅಪ್​ಡೇಟ್​ ಆಗುವುದು.   ಆ್ಯಂಕರಿಂಗ್​ ಎನ್ನುವುದು ಈಗ ಮೊದಲಿನ ಹಾಗೆ ಇಲ್ಲ. ನಾನು ಆ್ಯಂಕರಿಂಗ್​ ಶುರು ಮಾಡಿದಾಗ ಫಾರ್ಮಲ್​ ಆ್ಯಂಕರಿಂದ ಇತ್ತು. ಒಂದು ಕಡೆ ಅಚ್ಚುಕಟ್ಟಾಗಿ ನಿಂತು ನಿರೂಪಣೆ ಮಾಡುವುದು ಇತ್ತು. ಆದರೆ ಈಗ ಇನ್​ಫಾರ್ಮಲ್​ ಆ್ಯಂಕರಿಂಗ್​ ಆಗಿದೆ. ಅಂದರೆ ಅತ್ತ ಇತ್ತ ಓಡಾಡಬೇಕು, ಆ್ಯಕ್ಟಿಂಗ್​ ಮಾಡುತ್ತಾ ಮಾತನಾಡಬೇಕು. ಈಗಿನ ಜನರು ಬಯಸುವುದು ಇದನ್ನೇ ಅದಕ್ಕಾಗಿ ಪ್ರತಿನಿತ್ಯ ಅಪ್​ಡೇಟ್​ ಆಗಬೇಕು. ನಾನು ಮಾಡುವುದು ಹೀಗೆಯೇ, ನನ್ನ ಸ್ಟೈಲು ಇದೆನೇ ಎಂದರೆ ಉತ್ತಮ ನಿರೂಪಕರು ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ​

ಪಾಪ ಪಾಂಡುನಲ್ಲಿ ನಟಿಸಿದ್ದೆ ಎಂಬ ಒಂದೇ ಕಾರಣಕ್ಕೆ ಆಫರೇ ಸಿಗ್ಲಿಲ್ಲ.. ಆದ್ರೆ... ಶಾಲಿನಿ ನೋವಿನ ಮಾತು
 
 ಮೂರನೆಯ ಟಿಪ್ಸ್​ ಶಾಲಿನಿ ಅವರು ಹೇಳಿರುವಂತೆ, ಯಾರೂ ನಿಮಗೆ ಬಾರಮ್ಮಾ, ಬಾರಪ್ಪಾ ಆ್ಯಂಕರಿಂಗ್​ ಕೆಲಸ ಕೊಡುತ್ತೇವೆ, ನಟನೆ ಕೆಲಸ ಕೊಡುತ್ತೇವೆ ಎಂದು ಹೇಳುವುದಿಲ್ಲ. ಕೆಲವರಿಗೆ ಈ ಅದೃಷ್ಟ ಇರಬಹುದು.  ಆದ್ದರಿಂದ ಆ ರೀತಿ ನೀವು ಅಂದುಕೊಳ್ಳಲೇಬೇಡಿ. ಟ್ರೈ ಮಾಡಬೇಕು. ಎಷ್ಟೋ ಬಾರಿ ಆಡಿಷನ್​ಗೆ ಹೋದಾಗ ರಿಜೆಕ್ಟ್​ ಆಗಬಹುದು. ಅದೇ ಕೊನೆ ಎಂದು ಡಿಪ್ರೆಸ್​ ಆಗಬೇಡಿ. ನಾನು ಯಾಕೆ ರಿಜೆಕ್ಟ್​ ಆದೆ ಎನ್ನುವುದನ್ನು ಅವರಿಂದ ಕೇಳಿಕೊಳ್ಳಿ. ಆಗ ನಿಮಗೆ ಮುಂದಿನ ಸಲ ಇನ್ನಷ್ಟು ಅಪ್​ಡೇಟ್​ ಆಗಲು, ತಯಾರಿ ನಡೆಸಲು ಅನುಕೂಲ ಆಗುತ್ತದೆ. ರಿಜೆಕ್ಟ್​ ಆದಾಗ ನೋವು ಆಗುವುದು ಸಹಜ. ಹಾಗೆಂದು ಅದೇ ಕೊನೆಯಲ್ಲ, ಡಿಪ್ರೆಷನ್​ಗೆ ಹೋಗುವುದು ಎಲ್ಲಾ ಸರಿಯಲ್ಲ ಎಂದಿದ್ದಾರೆ  ಶಾಲಿನಿ. 
 
ಆ್ಯಂಕರಿಂಗ್​ ಮತ್ತು ನಟನೆಗೆ ಅವರು ಕೊಟ್ಟಿರುವ ಇನ್ನೊಂದು ಪ್ರಮುಖ ಟಿಪ್ಸ್ ಎಂದರೆ, ಕನ್ನಡಿ ಮುಂದೆ ನಿಂತು ನಟನೆ ಮಾಡುವುದು. ಮೊದಲು ನೀವು ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಕನ್ನಡಿ ನಿಮಗೆ ಎಲ್ಲವನ್ನೂ ಹೇಳುತ್ತದೆ. ನಿಮ್ಮ ಯೋಗ್ಯತೆ ಏನು ಅಂತ ಗೊತ್ತಿದ್ದರೆ ಬೇರೆಯವರು ಹೇಳಿದಾಗ ಶಾಕ್​ ಆಗಲ್ಲ. ಫಿಸಿಕಲ್​, ಮೆಂಟಲ್​ ಅಪಿಯರೆನ್ಸ್​ ನನ್ನದು ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ನಾನು ಇಷ್ಟೆ ಎಂದು ಗೊತ್ತಿದ್ರೆ, ಯಾರಾದ್ರೂ ಅದನ್ನೇ ಹೇಳಿದಾಗ  ಹರ್ಟ್​ ಆಗುವುದಿಲ್ಲ.  ನಿಮ್ಮಲ್ಲಿ ಅರ್ಹತೆ ಇಲ್ಲ ಎಂದು ಗೊತ್ತಿದ್ದರೂ, ನಾನು ಸೆಲೆಕ್ಟ್​ ಆಗಲೇಬೇಕು ಎನ್ನುವ ಗುರಿ  ಇಟ್ಟುಕೊಳ್ಳಬೇಡಿ, ನಿಮ್ಮ ಲಿಮಿಟೇಷನ್​ ಏನು ಎಂದು ತಿಳಿದುಕೊಂಡರೆ ತುಂಬಾ ಉತ್ತಮ. ಅದನ್ನು ತಿದ್ದಿಕೊಂಡು ಆಡಿಷನ್​ಗೆ ಹೋದರೆ ಅಲ್ಲಿ ಖಂಡಿತ ನಿಮ್ಮ ಚಾನ್ಸ್​ ಸಿಗುತ್ತದೆ ಎಂದಿದ್ದಾರೆ ನಟಿ ಶಾಲಿನಿ. ಇದೇ ವೇಳೆ  ಸೋಷಿಯಲ್​  ಮೀಡಿಯಾ ಟ್ರೆಂಡ್​ ಹೇಗೆ ಚೇಂಜ್​  ಆಗಿದೆ ಎನ್ನುವ ಬಗ್ಗೆ ಮಾತನಾಡಿರುವ ಅವರು, ಇವತ್ತು ಇದ್ದಿದ್ದು ನಾಳೆ ಇರಲ್ಲ ಟ್ರೆಂಡ್​. ಇದೊಂದು ರೀತಿ ಬಿಸಿಲು ಕುದುರೆ ಇದ್ದಂತೆ. ಎಷ್ಟು ಹತ್ತಿರ ಅಂದುಕೊಂಡರೂ ಹತ್ತಿರ ಹೋಗೇ ಇರಲ್ಲ. ಆದ್ದರಿಂದ ಅಲ್ಲಿ ವಿಫಲವಾದರೆ ನೋವು ಪಡುವ ಅಗತ್ಯವಿಲ್ಲ ಎಂದೂ ಕಿವಿಮಾತು ಹೇಳಿದ್ದಾರೆ. 

ಹುಟ್ಟುತ್ತ ಎಲ್ಲರೂ ಶೂದ್ರರೇ, ಬ್ರಾಹ್ಮಣರೂ ಮಾಂಸಾಹಾರ ತಿಂತಿದ್ರು... ಆದ್ರೆ... ವಿದ್ವಾನ್​ ರಾಜೇಂದ್ರ ಭಟ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ