ಇವನೇ ಸರ್ವಸ್ವ, ನನ್ನ ಜೀವದ ಗೆಳೆಯ ಎಂದು ಫ್ರೆಂಡ್​ಷಿಪ್​ ಡೇಗೆ ಸ್ನೇಹಿತನ ಹೀಗೆ ಪರಿಚಯಿಸಿದ ಅನುಪಮಾ ಗೌಡ

By Suchethana D  |  First Published Aug 3, 2024, 5:23 PM IST

ನಟಿ, ಆ್ಯಂಕರ್​ ಅನುಪಮಾ ಗೌಡ ಅವರ ತಮ್ಮ ಜೀವದ ಗೆಳೆಯನನ್ನು ಗಿಚ್ಚಿ ಗಿಲಿಗಿಲಿ ವೇದಿಕೆಯ ಮೇಲೆ ಪರಿಚಯಿಸಿದ್ದಾರೆ. ಯಾರು ಈ ಗೆಳೆಯ?
 


ಹಿರಿತೆರೆ, ಕಿರುತೆರೆ ಎರಡರಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರುವ ನಟಿ ಅನುಪಮಾ ಗೌಡ. ನಟನೆಗೂ ಸೈ, ನಿರೂಪಣೆಗೂ ಸೈ ಎನ್ನುವುದನ್ನು ನಟಿ ಇದಾಗಲೇ ತೋರಿಸಿಕೊಡುತ್ತಿದ್ದಾರೆ.  ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಈ ಮೂಲಕ  ನಟಿ ಕಮ್ ನಿರೂಪಕಿ ಎಂದೇ ಫೇಮಸ್​ ಆಗಿದ್ದಾರೆ.   ಲೋಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ನಟಿ, ಕೊನೆಗೆ ಮನೆ ಮನೆ ಮಾತಾಗಿದ್ದು,  ಅಕ್ಕ ಸೀರಿಯಲ್​ ಮೂಲಕ. ಈ ಸೀರಿಯಲ್​ನಲ್ಲಿ ಎರಡು ಪಾತ್ರ ನಿರ್ವಹಿಸಿ, ನಾಯಕಿ, ವಿಲನ್​ ಯಾವುದಕ್ಕೂ ಸೈ ಎನಿಸಿಕೊಂಡರು.  ಭೂಮಿಕಾ ಹಾಗೂ ದೇವಿಕಾ ಎಂಬ ಎರಡು ಬಗೆಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದರು. ಇದಕ್ಕೂ ಮುನ್ನ ಅವರು  ಚಿ ಸೌ ಸಾವಿತ್ರಿ ಎಂಬ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದಾರೆ. ನಂತರ ಸಕತ್​ ಫೇಮಸ್​ ಆಗಿದ್ದು,  ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ  ಭಾಗವಹಿಸಿದ ನಂತರ.  

ಅಂದಹಾಗೆ ನಾಳೆ ಅಂದರೆ ಆಗಸ್ಟ್​ 4 ಫ್ರೆಂಡ್​ಷಿಪ್​ ಡೇ. ಈ ಸಂದರ್ಭದಲ್ಲಿ ತಮ್ಮ ಆಪ್ತ ಸ್ನೇಹಿತ, ಪ್ರಾಣ ಗೆಳೆಯ ಜೊತೆಗೆ ನನ್ನ ಮಗು ಕೂಡ ಆತನೇ ಎಂದು ಬೆಸ್ಟ್​ ಫ್ರೆಂಡ್​ ಎಂದು ಪರಿಚಯ ಮಾಡಿಸಿದ್ದಾರೆ ಅನುಪಮಾ.  ‘ಗಿಚ್ಚಿ ಗಿಲಿಗಿಲಿ 3’ ವೇದಿಕೆ ಮೇಲೆ ಬೆಸ್ಟ್​ ಫ್ರೆಂಡ್​ನ ಪರಿಚಯಿಸಿದ್ದಾರೆ. ಅದು ಅವರ ಮುದ್ದು ನಾಯಿ. ‘ಇವನೇ ನನ್ನ ಪ್ರಪಂಚ. ತಂದೆ ತೀರಿಕೊಂಡಾಗ ಮಗು ರೂಪದಲ್ಲಿ ಬರ್ತಾರೆ ಎಂಬ ಮಾತಿದೆ. ನನ್ನ ಜೀವನದಲ್ಲಿ ಇವನು ಬಂದಿದ್ದಾನೆ. ನಾನು ಈತನಿಗೆ ತಾಯಿ ಆಗಿದೀನಿ. ನನಗೆ ಈತನೇ ಎಲ್ಲವೂ’ ಎಂದು ಅನುಪಮಾ ಗೌಡ ನಾಯಿ ಮರಿಯನ್ನು ಅಪ್ಪಿ ಮುದ್ದಾಡಿದ್ದಾರೆ.  

Tap to resize

Latest Videos

ಪಾಪ ಪಾಂಡುನಲ್ಲಿ ನಟಿಸಿದ್ದೆ ಎಂಬ ಒಂದೇ ಕಾರಣಕ್ಕೆ ಆಫರೇ ಸಿಗ್ಲಿಲ್ಲ.. ಆದ್ರೆ... ಶಾಲಿನಿ ನೋವಿನ ಮಾತು

ಅಷ್ಟಕ್ಕೂ ನಿರುಪಮಾ ಅವರು ಪ್ರೀತಿಯ ವಿಷಯದಲ್ಲಿ  ತುಂಬಾ ನೋವನ್ನುಂಡವರು. ನನ್ನ ಲವ್ ಬ್ರೇಕಪ್ ಆಗಿದ್ದು ಬಹುತೇಕ ಎಲ್ಲರಿಗೂ ಗೊತ್ತು. ಅಷ್ಟು ವರುಷಗಳ ಕಾಲ ಪ್ರೀತಿಸಿ, ಇನ್ನು ಮದುವೆಯಾಗಿ ಲೈಫ್‌ನಲ್ಲಿ ಸೆಟ್ಲ್ ಆಗುತ್ತೇನೆ ಎನ್ನುವಾಗ ನನ್ನ ಲವ್ ಮುರಿದುಬಿತ್ತು ಎಂದು ಹಿಂದೊಮ್ಮೆ ಹೇಳುತ್ತಲೇ ಅದರ ಬಗ್ಗೆ ಮಾತನಾಡಿದ್ದರು. ಅದನ್ನು ಎದುರಿಸಲು ನನಗೆ ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ. ತಕ್ಷಣಕ್ಕೆ ನನಗೆ ತೋಚಿದ್ದು ಸಾವೇ ಇಲ್ಲದಕ್ಕೂ ಪರಿಹಾರ ಎಂದು ಮಾತ್ರ. ಅದಕ್ಕೇ ಆತ್ಮಹತ್ಯೆಗೆ ಪ್ರಯತ್ನಿಸಿ ಸೋತೆ. ಅದನ್ನು ಸೋಲು ಎನ್ನುವುದಕ್ಕಿಂತ ಗೆಲುವು ಎನ್ನಬೇಕು. ನಾನು ಸಾವನ್ನು ಗೆದ್ದೆ ಎಂದೇ ಹೇಳಲು ಇಷ್ಟಪಡುತ್ತೇನೆ. ಆ ಸಮಯದಲ್ಲಿ, ಅಂದರೆ ನಾನು ಅಕ್ಷರಶಃ ಖಿನ್ನತೆಗೆ ಜಾರಿದ್ದ ವೇಳೆಯಲ್ಲಿ ನನ್ನನ್ನು ಕಾಪಾಡಿದ್ದು ನನ್ನ ಆತ್ಮೀಯ ಸ್ನೇಹಿತೆ ಹಾಗೂ ನನ್ನ ಗ್ರೇಟ್ ಫ್ರೆಂಡ್ಸ್ ಸರ್ಕಲ್ ಮಾತ್ರ. ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಲವ್ ಮಾಡುತ್ತಿದ್ದೆ ನಾನು. ಆದರೆ ಕಷ್ಟದ ಸಮಸಯದಲ್ಲಿ ಕೈ ಹಿಡಿದಿದ್ದು ಲವರ್ ಅಲ್ಲ, ಬದಲಿಗೆ ಫ್ರೆಂಡ್ಸ್. 'ಪ್ರೇಮಕ್ಕಿಂತ ಸ್ನೇಹ ದೊಡ್ಡದು' ಎಂಬ ಸತ್ಯವನ್ನು ನಾನು ಜೀವನದಲ್ಲಿ ಮೊದಲ ಬಾರಿಗೆ ಕಂಡುಕೊಂಡೆ. 'ಪ್ರೀತಿ ಕೆಲವೊಮ್ಮೆ ಸಾವಿಗೆ ಕಾರಣವಾದರೆ ಸ್ನೇಹ ಬದುಕಿಸಲು ಬಯಸುತ್ತದೆ'. ಈ 'ಲೈಫ್‌ ಟ್ರುಥ್‌' ಅನ್ನು ನಾನೆಂದಿಗೂ ಮರೆಯಲಾರೆ' ಎಂದಿದ್ದಾರೆ ನಟಿ ಅನುಪಮಾ ಗೌಡ. 


ಅಂದಹಾಗೆ, ಅನುಪಮಾ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಇದರಲ್ಲಿ  ತಮ್ಮ ಪರ್ಸನಲ್ ಲೈಫ್‌, ಸಿನಿಮಾ, ಸೀರಿಯಲ್, ಶೂಟಿಂಗ್, ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜನರಿಗೆ ತಿಳಿಸುತ್ತಾರೆ. ನಿರೂಪಕಿಯಾಗಿಯೂ ಸಾಕಷ್ಟು ಹೆಸರು ಮಾಡಿದ್ದಾರೆ.  ಮಜಾ ಭಾರತ, ರಾಜ-ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ   ಗಮನ ಸೆಳೆದಿದ್ದಾರೆ.  ನಟ ವಿಜಯ್ ರಾಘವೇಂದ್ರ ಅವರೊಂದಿಗೆ 8ನೇ ದಕ್ಷಿಣ ಭಾರತದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದರು.  ಸ್ಯಾಂಡಲ್​ವುಡ್​ನಲ್ಲಿಯೂ ಛಾಪು ಮೂಡಿಸಿರುವ ಅನುಪಮಾ ಅವರು,  ಜಯರಾಮ್ ಕಾರ್ತಿಕ್ ಅಭಿನಯದ  ಆ ಕರಾಳ ರಾತ್ರಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. 2019ರಲ್ಲಿ ಬಿಡುಗಡೆಗೊಂಡ, ರಾಘವೇಂದ್ರ ರಾಜ್‌ಕುಮಾರ್ ಮತ್ತು ಆರ್‌ಜೆ ರೋಹಿತ್ ಅಭಿನಯದ ತ್ರಯಂಬಕಂ  ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದರು. 
 

ವೀಳ್ಯದೆಲೆ ವ್ಯಾಪಾರಕ್ಕಿಳಿದುಬಿಟ್ಟಳಾ ಭಾಗ್ಯ? ಕಮೆಂಟ್ಸ್​ಗೆಲ್ಲಾ ಉತ್ತರ ಕೊಡುತ್ತಲೇ ಹೃದಯ ಕದ್ದ ನಟಿ...
 

click me!