ಭೂಮಿ ಶೆಟ್ಟಿ ಮನೆಗೆ ಕಳ್ಳ ಬಂದಿದ್ನಂತೆ; ಆಕೆ ಏನ್ ಮಾಡಿದ್ರು ನೋಡಿ..

Published : Feb 18, 2024, 11:26 AM IST
ಭೂಮಿ ಶೆಟ್ಟಿ ಮನೆಗೆ ಕಳ್ಳ ಬಂದಿದ್ನಂತೆ; ಆಕೆ ಏನ್ ಮಾಡಿದ್ರು ನೋಡಿ..

ಸಾರಾಂಶ

ನಟಿ ಭೂಮಿ ಶೆಟ್ಟಿ ಮನೆಗೆ ಕಳ್ಳ ಬಂದಿದ್ದಾಗ ಆಕೆ ಏನು ಮಾಡಿದ್ರು ಎಂಬುದನ್ನು ಅವರೇ ಹೇಳ್ತಾರೆ, ಇಲ್ಲಿದೆ ವಿಡಿಯೋ ನೋಡಿ..

ಕನ್ನಡದ ಕೃಷ್ಣ ಸುಂದರಿ ಭೂಮಿ ಶೆಟ್ಟಿ ಉತ್ತಮ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. 'ಕಿನ್ನರಿ' ಧಾರಾವಾಹಿ ಮೂಲಕ ಮನೆಮನೆಯನ್ನು ತಲುಪಿದ ಭೂಮಿ ಜನರಿಗೆ ಹೆಚ್ಚು ಹತ್ತಿರಾದದ್ದು ಬಿಗ್‌ಬಾಸ್‌ನಿಂದ. ಎಲ್ಲರಿಗೂ ಘಟಾನುಘಟಿ ಸ್ಪರ್ಧೆ ನೀಡಿ ಉತ್ತಮ ಪ್ರದರ್ಶನದ ಬಳಿಕ ಹೊರ ಬಂದ ಭೂಮಿ ನಂತರ ಇಕ್ಕಟ್ ಸಿನಿಮಾದಲ್ಲಿ ನಾಗಭೂಷಣ್ ಜೊತೆ ಕಾಣಿಸಿಕೊಂಡರು. ಆ ನಂತರದಲ್ಲಿ ಫೋಟೋಶೂಟ್, ಬೈಕಿಂಗ್ ಇತ್ಯಾದಿ ಇನ್ಸ್ಟಾ ಪೋಸ್ಟ್‌ಗಳ ಮೂಲಕವೇ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ ಭೂಮಿ. 

ಈ ನಟಿಯಿಂದ ಈಗ ಹೊಸ ವಿಡಿಯೋ ಹೊರ ಬಿದ್ದಿದೆ. ಅವರೇ ಹೇಳುವಂತೆ ನಿನ್ನೆ ರಾತ್ರಿ ಅವರ ಮನೆಗೊಬ್ಬ ಕಳ್ಳ ಬಂದಿದ್ದನಂತೆ. ನಿನ್ನ ಹತ್ತಿರವಿರೋದೆಲ್ಲ ಕೊಡು ಅಂದನಂತೆ. ಆಗ ಭೂಮಿ ಮಾಡಿದ್ದೇನು ಗೊತ್ತಾ? ಇದನ್ನು ಅವರ ವಿಡಿಯೋದಲ್ಲಿ ತಿಳಿದರೆ ಚೆನ್ನ. ಏಕೆಂದರೆ, ಅಷ್ಟು ಮುದ್ದಾಗಿ ಅಭಿನಯಿಸಿ ಆಕೆ 'ಕಲ್ ರಾತ್ ಆಯಾ ಮೇರೇ ಘರ್ ಏಕ್ ಚೋರ್' ಎಂದಿದ್ದಾರೆ. 

ಪೋಲ್ ಡ್ಯಾನ್ಸ್ ಮಾಡಿ ಆತ್ಮವಿಶ್ವಾಸ ಬಂತು ಭೂಮಿ ಶೆಟ್ಟಿ! ಬಿಂದಾಸ್ ಬ್ಯೂಟಿ ಎಂದ ನೆಟ್ಟಿಗರು

ಭೂಮಿಯ ಈ ಪುಟ್ಟ ಗೀತಾಭಿನಯಕ್ಕೆ ಜನ ಫಿದಾ ಆಗುತ್ತಿದ್ದಾರೆ. ಎಂಥಾ ನಟನೆ ಎಂದು ಶಹಬ್ಬಾಸ್‌ಗಿರಿ ಕೊಡುತ್ತಿದ್ದಾರೆ. ಕಪ್ಪು ಕುರ್ತಾ ಹಾಗೂ ಮೂಗುತಿ ಧರಿಸಿ ಕುಳಿತಲ್ಲೇ ಭೂಮಿ ಅಭಿನಯಿಸಿದ ಈ ಗೀತೆಯಲ್ಲಿ ಒಂದೇ ನಿಮಿಷದಲ್ಲಿ ಭೂಮಿಯ ಹಲವು ಭಾವನೆಗಳನ್ನು ಕಾಣಬಹುದು. 

 

ಇನ್ನು, ಅಭಿನಯದ ವಿಷಯಕ್ಕೆ ಬಂದರೆ, ಭೂಮಿ ಶೆಟ್ಟಿ ಅಭಿನಯದ ಕೆಂಡದ ಸೆರಗು ಚಿತ್ರ ಸಿದ್ಧವಾಗಿದೆ. ಇದರಲ್ಲಿ ಕುಸ್ತಿಪಟು ಪಾತ್ರವನ್ನ ನಿರ್ವಹಿಸಿದ್ದು, ಇದಕ್ಕಾಗಿ ಆಕೆ ನಿಜವಾಗಿ ಕುಸ್ತಿ ಕಲಿತಿದ್ದಾರೆ. ಇನ್ನು ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಭೂಮಿ, 'ಶರತಲು ವರ್ತಿಸ್ತಾಯಿ' ಅನ್ನೋ ಚಿತ್ರದಲ್ಲಿ ನಟಿಸಿದ್ದು, ಇದು ಬಿಡುಗಡೆಗೆ ಸಿದ್ಧವಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!