Latest Videos

ಸೀತಾಳ ಮನೆಯಲ್ಲಿ ಕೊನೆಯ ದಿನದ ಶೂಟಿಂಗ್​ ಹೀಗಿತ್ತು ನೋಡಿ... ಸೀತಾರಾಮ ವೈಷ್ಣವಿ ಗೌಡ ಮಾಹಿತಿ

By Suchethana DFirst Published Jun 26, 2024, 1:03 PM IST
Highlights

ಸೀತಾಳ ಮನೆಯಲ್ಲಿ  ಕೊನೆಯ ದಿನದ ಶೂಟಿಂಗ್​ ಹೀಗಿತ್ತು ನೋಡಿ... ಸೀತಾರಾಮ ವೈಷ್ಣವಿ ಗೌಡ ಮಾಹಿತಿ
 

ಸೀತಾ ರಾಮ ಸೀರಿಯಲ್​  ಇದೀಗ ಕುತೂಹಲ ಘಟ್ಟಕ್ಕೆ ತಲುಪಿದೆ. ಇದೀಗ ಪ್ರೇಕ್ಷಕರು ಬಹು ನಿರೀಕ್ಷೆ ಹೊಂದಿರುವ ಸೀತಾ-ರಾಮ ಮದುವೆಯ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದೆ.   ಎಲ್ಲಾ ಅಡೆತಡೆಗಳನ್ನು ಮೀರಿ ಸೀತಾರಾಮರ ಕಲ್ಯಾಣ ಕಾರ್ಯಕ್ರಮ ನಡೆಯುತ್ತಿದೆ.  ಅದ್ಧೂರಿ ನಿಶ್ಚಿತಾರ್ಥದ ಬಳಿಕ, ಈಗ ಮದುವೆಯ ಶಾಸ್ತ್ರಗಳೂ ನಡೆಯುತ್ತಿದೆ. ಎಲ್ಲಾ ಶಾಪಿಂಗ್​ ಮಾಡಿಯಾಗಿದೆ. ಸೀತಾ ಮತ್ತು ರಾಮರ ಲವ್​ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಭಾವಿ ಪತಿ-ಪತ್ನಿಯ ರೊಮ್ಯಾನ್ಸ್​ ಕೂಡ ಜೋರಾಗಿಯೇ ಇದೆ. ಇನ್ನೇನು ಮದುವೆಯಾದ ಮೇಲೆ ಸೀತಾ ತನ್ನ ಮನೆ ಬಿಟ್ಟು ರಾಮ್​ ಮನೆ ಸೇರುತ್ತಾಳೆ. ಹೆಣ್ಣಿನ ಜನ್ಮ ಅಷ್ಟೇ ಅಲ್ಲವೇ? ಮದುವೆಯಾಗುವವರೆಗೆ ಅಮ್ಮನ ಮನೆ, ನಂತರ ಜೀವನವೆಲ್ಲವೂ ಗಂಡನ ಮನೆ. 

ಇದೀಗ ಸೀತಾರಾಮ ನಾಯಕಿ ಸೀತಾ  ಮದ್ವೆಯಾಗಿ ರಾಮ್​  ಮನೆ ಸೇರುತ್ತಿದ್ದಾಳೆ. ಇದೇ ಕಾರಣಕ್ಕೆ ಸೀತಾಳಿಗೆ ಅವಳ ಅಮ್ಮನ ಮನೆಯಲ್ಲಿ ಇದೀಗ ಕೊನೆಯ ದಿನ. ಇದೇ ಕಾರಣಕ್ಕೆ, ಸೀತಾಳ ಮನೆ ಹೇಗಿದೆ? ಇಷ್ಟು ವರ್ಷ ಅವಳು ಇದ್ದ ಮನೆ ಹೇಗಿತ್ತು ಎಂಬ ಬಗ್ಗೆ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಮಾಹಿತಿ ನೀಡಿದ್ದಾರೆ. ಇನ್ನು ಸೀತಾ ರಾಮ್​ ಮನೆ ಸೇರುತ್ತಿದ್ದಾಳೆ. ಆದ್ದರಿಂದ ಸೀತಾಳ ಮನೆಯಲ್ಲಿ ಇಂದು ಕೊನೆಯ ದಿನ ಶೂಟಿಂಗ್​. ಇನ್ಮುಂದೆ ಇಲ್ಲಿ ಶೂಟಿಂಗ್​ ಇರುವುದಿಲ್ಲ ಎನ್ನುತ್ತಲೇ ವೈಷ್ಣವಿ ಅವರು, ಸೀತಾಳ ಮನೆಯ ಸಂಪೂರ್ಣ ಪರಿಚಯ ಮಾಡಿಸಿದ್ದಾರೆ. 

ಬಾಣಂತಿಯರಿಗೆ ನುಗ್ಗೆ ಸೊಪ್ಪಿನ ಚಟ್ನಿ ಪೌಡರ್​ ಮಾಡುವುದು ಹೇಗೆ? ನಟಿ ಅದಿತಿ ಪ್ರಭುದೇವ ಟಿಪ್ಸ್​ ಕೇಳಿ...

ಅಷ್ಟಕ್ಕೂ, ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್​ ಸ್ಪಾಟ್​ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್​ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಒಂದೇ ಕಡೆ ಸೆಟ್​ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್​ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್​ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ  ಶೂಟಿಂಗ್​ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ. ಇನ್ನು ಕೆಲವು ಸೀರಿಯಲ್​ಗಳಲ್ಲಿ ತಮಗೆ ಬೇಕಾದಂತೆ ಹಳ್ಳಿಯ ವಾತಾವರಣ ನಿರ್ಮಾಣ ಮಾಡಿಕೊಂಡೋ ಅಥವಾ ಓಣಿ, ವಠಾರದ ರೀತಿಯಲ್ಲಿ ನೈಜ ಚಿತ್ರಣ ಬರುವಂತೆ ಶೂಟಿಂಗ್​  ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ.

ಅದೇ ಒಂದು ಶೂಟಿಂಗ್​ ಮನೆಯ ಚಿತ್ರಣವನ್ನು ತೋರಿಸಿದ್ದಾರೆ ನಟಿ ವೈಷ್ಣವಿ. ವೈಷ್ಣವಿ ಅವರು ಇದಾಗಲೇ ತಮ್ಮ ಸೋಷಿಯಲ್​ ಮೀಡಿಯಾಗಳಲ್ಲಿ ಹಲವಾರು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಎರಡನೆಯ ಮನೆ ಎಂದೇ ಖ್ಯಾತಿ ಪಡೆದಿರುವ ಸೀತಾರಾಮ ಸೀರಿಯಲ್​ ಸೆಟ್ ಸೀತಾಳ ಮನೆಯಲ್ಲಿನ ಕೊನೆಯ ದಿನದ ಶೂಟಿಂಗ್​  ಕುರಿತು ಮಾಹಿತಿ ನೀಡಿದ್ದಾರೆ. ಮನೆಗಿಂತ ಸೆಟ್​ನಲ್ಲಿ ಹೆಚ್ಚು ಹೊತ್ತು ಶೂಟಿಂಗ್​ ಸೆಟ್​ನಲ್ಲಿ ಇರುವುದರಿಂದ ಇದು ನಮ್ಮ ಸೆಕೆಂಡ್​ ಮನೆ ಆಗಿದೆ. ಶೂಟಿಂಗ್​ ಸಮಯದಲ್ಲಿ ಥೇಟ್​ ವಠಾರ ಹಾಗೂ ಮನೆಯ ಚಿತ್ರವಣವನ್ನು ಇಲ್ಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹಳೆಯ ಮನೆಗಳಲ್ಲಿ ಇರುವ ಟೇಪ್ ರೆಕಾರ್ಡರ್​, ರೆಡಿಯೋ, ಅಂದು ಬಳಸುತ್ತಿದ್ದ ವಸ್ತುಗಳು ಎಲ್ಲವೂ ಈ ಮನೆಯಲ್ಲಿ ಇವೆ. ಅದರ ಸಂಪೂರ್ಣ ಪರಿಚಯ ಮಾಡಿಸಿದ್ದಾರೆ ನಟಿ.  ಮಿಡ್ಲ್​ ಕ್ಲಾಸ್​   ಮನೆಯ ಸಂಪೂರ್ಣ ಚಿತ್ರಣ ಈ ಸೆಟ್​ನಲ್ಲಿ ತೋರಿಸಲಾಗಿದೆ.  

ಅಂತರ್​ಧರ್ಮೀಯ ಪ್ರೇಮಿಗಳ ಕೌತುಕದ ಕಥೆ: ಗಂಟೆಗೊಮ್ಮೆ ಸ್ಮಾರಕಗಳ ಸಮಾಗಮ! ಡಾ.ಬ್ರೋ ಬಾಯಲ್ಲಿ ಕೇಳಿ...

click me!