
ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಹಿರಿಯ ನಟ ಶಂಕರ್ ಅಶ್ವಥ್ (Shankar Ashwath) ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಒಂದು ಬೇಸರದ ಸಂಗತಿ ಹೊರಹಾಕಿದ್ದಾರೆ. 'ಇದೇನು ಪ್ರೀತಿ ತೋರಿಸೋ ಅವತಾರವೋ ಅವಮಾನವೋ ಗೊತ್ತಿಲ್ಲ.. ಇವತ್ತು ಬೆಳಿಗ್ಗೆ ಹೊಟೆಲ್‌ನಲ್ಲಿ ತಿಂಡಿ ತಿಂತಾ ಇರಬೇಕಾದ್ರೆ ಬಹಳ ವರ್ಷಗಳ ಬಳಿಕ ನನ್ನ ಸ್ನೇಹಿತ ಸಿಕ್ಕಿದಾನೆ. ಜನರಿಗೆ ನಾನೀನ ಟಿವಿ, ಸಿನಿಮಾ, ಸೋಷಿಯಲ್ ಮೀಡಿಯಾಗಳಿಂದ ಪರಿಚಯ ಆಗಿರೋದ್ರಿಂದ ಅವನು ಅವನು ಅಭಿಮಾನದಿಂದ ಬಂದು ಮಾತನಾಡಿಸಿದ.
ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಪಾಲಾದ ಸೀಕ್ರೆಟ್ ಬಿಚ್ಚಿಟ್ಟರು ಸ್ನೇಹಿತ ಅಣಜಿ ನಾಗರಾಜ್!
ಒಂದ್ ಫೋಟೋ ತಗೊಳ್ಳೋಕೆ ಆಸೆ ಅವ್ನಿಗೆ ಇತ್ತೇನೋ ಗೊತ್ತಿಲ್ಲ. ಅವನ ಮಗನ ಕರೆದ್ಬಿಟ್ಟು 'ಬಾರೋ, ಒಂದ್ ಫೋಟೋ ತಗೊಳ್ಳೋಣ, ಇವ್ರು ಯಾರು ಗೊತ್ತಾ?' ಅಂದ. ಪಾಪ, ಅವ್ನ ಮಗ ಈಗಿನ ಜನರೇಷನ್ನಿನವ್ನು, ನನ್ ಬಗ್ಗೆ ಅವ್ನಿಗೆ ಗೊತ್ತಿರ್ಲೇಬೇಕು ಅಂತೇನೂ ಇಲ್ವಲ್ಲ, ಆತ ಗೊತ್ತಿಲ್ಲ ಅಂದ. ಒಂದ್ ಫೋಟೋ ತಗೊಳ್ಳೋ, ತಗೊಳ್ಳೋ ಅಂದಾಗ ಅವ್ನ ಮಗ, ಏ ಏನಪ್ಪಾ, ಲೇಟ್ ಆಗುತ್ತೆ ನಾನ್ ಹೋಗ್ಬೇಕು..ಅಂದ್ಬಿಟ್ಟು ಎಲ್ಲರೆದುರು ಒಂಥರಾ ಗಡಸಾಗಿ ಮಾತನ್ನಾಡಿದ.
ಬರ್ಲಿನ್-ಲಾಸ್ ಎಂಜಲೀಸ್‌ಗೆ ಪ್ರಿಯಾಂಕಾ ಚೋಪ್ರಾ ಒಂದೇ ದಿನದಲ್ಲಿ ಹೋಗಿ ಬಂದಿದ್ದು ಹೇಗೆ?
ಇದೇನು ಪ್ರೀತಿ ತೋರಿಸೋ ಅವತಾರವೋ ಅವಮಾನವೋ ಗೊತ್ತಿಲ್ಲ. ನಿಮ್ಗೆ ಇಷ್ಟ ಇದ್ರೆ ನೀವು ಫೋಟೋ ತೆಗಿಸಿಕೊಳ್ಳಿ. ಇಷ್ಟ ಇಲ್ಲದೇ ಇದ್ದವರನ್ನೆಲ್ಲ ಕರೆದು ಒಬ್ಬ ವ್ಯಕ್ತಿಗೆ ಅವಮಾನ ಯಾವತ್ತೂ ಮಾಡ್ಬೇಡಿ. ಇದು ಎಲ್ರೂ ತಿಳ್ಕೊಳ್ಲೇಬೇಕಾಗಿರೋ ವಿಷ್ಯ..' ಎಂದಿದ್ದಾರೆ ತಮ್ಮದೊಂದು ವೀಡಿಯೋ ಪೋಸ್ಟ್ ಮೂಲಕ ಹಿರಿಯ ನಟ ಶಂಕರ್ ಅಶ್ವಥ್.
ಯಾಕಂದ್ರು ಕಿಚ್ಚ ಸುದೀಪ್: ನಾವು ರಿಯಾಕ್ಟ್ ಮಾಡೋಕೆ ಹೋದ್ರೆ ಅದು ದೀಪಕ್ಕೆ ಎಣ್ಣೆ ಹಾಕಿದ ಹಾಗೆ!
ನಟ ಶಂಕರ್ ಅಶ್ವಥ್ ಅವರು ಪೋಸ್ಟ್ ಮಾಡಿರುವ ವೀಡಿಯೋಗೆ ಹಲವು ವಿಭಿನ್ನ ಕಾಮೆಮಟ್‌ಗಳು ಬಂದಿವೆ. ಅವುಗಳಲಲ್ಇ ಕೆಲವನ್ನು ಇಲ್ಲಿ ಬರೆಯಲಾಗಿದೆ. ಒಬ್ಬರು 'ಎಲ್ಲಿ ಹೇಗೆ ನಡೆದುಕೊಳ್ಳಬೇಕು ಇದನ್ನು ಕಲಿಯಿರಿ ಯಾವ ಕಾಲೇಜನಲ್ಲೂ ಇದನ್ನು ಕಲಿಸುವುದಿಲ್ಲ ಬರೀ ಪರದೇಶಕ್ಕೆ ಹೋಗೋ ವಿದ್ಯೆ ಕಲಿಸುತ್ತಾರೆ ಅಷ್ಟೆ!!' ಎಂದಿದ್ದಾರೆ. ಇನ್ನೊಬ್ಬರು 'ಸಂಸ್ಕಾರ ಕಲಿಯದೆ ಇರುವ ಮಕ್ಕಳ ಈ ರೀತಿ ವರ್ತನೆ ಮಾಡುತ್ತಾರೆ' ಎಂದು ಬರೆದಿದ್ದಾರೆ.
ಆನ್‌ಲೈನ್ ರೇಪ್, ಎಲ್ಲಿಂದಲೋ ಮಾಡುವ ಮಾನಸಿಕ ಹಿಂಸೆ ಅಂದ್ರೇನೇ ಅಶ್ಲೀಲ ಮೆಸೇಜ್; ನಟಿ ಚಿತ್ರಾಲ್!
ಮತ್ತೊಬ್ಬರು 'ಈಗಿನ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಗೊತ್ತಿಲ್ಲ.. ಅದು ನಿಮಗೂ ಗೊತ್ತು.. ನೀವೇ ಅರ್ಥ ಮಾಡ್ಕೊಂಡು ಸುಮ್ನೆ ಆಗಿ ಅಷ್ಟೇ..'ಎಂದಿದ್ದಾರೆ. ಇನ್ನೊಬ್ಬರು 'ಅದು ಹಾಗಲ್ಲ ದೊಡ್ಡವರೇ ಅಣ್ಣಾ, ಅದು ಆ ಹುಡುಗನಿಗೆ ನಿಮ್ಮ ಜೊತೆ ನಿಂತು ಫೋಟೋ ತೆಗೆಸಿಕೊಳ್ಳಲು ಅವನ ಮನಸ್ಸಿನಲ್ಲಿ ಒಂದು ರೀತಿ ಭಯಪೂರಿತ ನಾಚಿಕೆ ಇದ್ದುದರಿಂದಲೇ ಆತನು (ತುಂಬಾ ಸಣ್ಣವನು, ಅಂದರೆ ಸಣ್ಣ ಅಥವಾ ಪ್ರೌಢನಲ್ಲದ ವಯಸ್ಸಿನವನು ಸ್ವಾಮಿ, ಆದ್ದರಿಂದಲೇ ಆತನು ಹಾಗೆ ಮಾಡಿದ್ದು ಎಂದು ಅನಿಸುತ್ತಿದೆ ಸ್ವಾಮೀ, ಪಾಪ ಸ್ವಾಮೀ ಅವರುಗಳು, ಭಯದಿಂದ ಅವರು ಅರಿವಿಲ್ಲದೇ ಹಾಗೆ ಗೊತ್ತಿಲ್ಲದೇ (ಅವರು ಪ್ರೌಢರಲ್ಲದ್ದರಿಂದ ವರ್ತಿಸಿದ್ದಾರೆ' ಎಂದಿದ್ದಾರೆ ಮಗದೊಬ್ಬರು.
ಸಡನ್ನಾಗಿ ಹಾಗೆ ಬರೋಕಾಗಲ್ಲ, ಅಲ್ಲಿ ಬಂದು ನಾನು ಏನ್ ಮಾಡೋದು ಅಂದೆ; ಅಶ್ವಿನಿ ಪುನೀತ್ ರಾಜ್‌ಕುಮಾರ್
ಇದೇನು ಪ್ರೀತಿ ತೋರಿಸೋ ಅವತಾರವೋ ಅವಮಾನವೋ ಗೊತ್ತಿಲ್ಲ; ನಟ ಶಂಕರ್ ಅಶ್ವಥ್ ಬೇಸರ! #shankarashwath #sandalwoodactor #smallscreen #ramachariserial #actorashwath #socialmediapost #sandalwoodnews #viralnews #smallscreen #sadalwoodgossip #sandalwood https://kannada.asianetnews.com/tv-talk/actor-shankar-ashwath-post-about-his-one-recent-experience-from-his-friend-son-srb-sfoem1
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.