'ಸೀತಾ ರಾಮ' ತಂಡದ ಕಲಾವಿದರು ತಮ್ಮ ಕಂಠಸಿರಿಯಲ್ಲಿ ಸಪ್ತಸಾಗರದಾಚೆಯಲ್ಲೋ ಹಾಡು ಹೇಳಿದ್ದು, ಅದರ ವಿಡಿಯೋ ಇಲ್ಲಿದೆ ಕೇಳಿ
ಈಗ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಇದೊಂದು ಮಧ್ಯಮ ಕುಟುಂಬದ ಪ್ರೇಮಿಗಳ ನೋವಿನ ಲವ್ ಸ್ಟೋರಿ ಕಥೆ. ಪ್ರೀತಿಯಲ್ಲಿ ಮುಳಗಿರುವ ಪ್ರಿಯಾ ಮತ್ತು ಮನು ಪ್ರೇಮಿಗಳು ಬದುಕಿನ ಮೇಲೆ ಬೆಟ್ಟದಷ್ಟು ಕನಸಿಟ್ಟುಕೊಂಡವರು. ಸಣ್ಣ ಪುಟ್ಟ ವಿಷಯದಲ್ಲೇ ಇವರ ಖುಷಿ. ಬದುಕನ್ನು ಆಗಾಗ ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ಸಂಭ್ರಮಿಸುತ್ತಾರೆ, ತಮ್ಮದೇ ಮನೆ ಹೊಂದುವ, ಕುಟುಂಬ ಹೊಂದುವ ಕನಸು ಕಾಣುತ್ತಿರುತ್ತಾರೆ. ಪ್ರಿಯಾ, ತುಂಬ ಜಾಣೆ, ಬದುಕನ್ನು ಪ್ರಾಕ್ಟಿಕಲ್ ಆಗಿ ನೋಡುವ ಹೆಣ್ಣು ಮಗಳು. ಆದರೆ ಮನು, ಪ್ರಿಯಾಳನ್ನೇ ಬದುಕು ಎಂದುಕೊಂಡಿರುವವನು. ಇಂತಹ ಪ್ರೇಮಿಗಳು ಪರಿಸ್ಥಿತಿಯ ತಿರುವುಗಳಿಗೆ ಸಿಲುಕಿ ನಲುಗಬೇಕಾಗುತ್ತದೆ. ಮನು ಉದ್ದೇಶಪೂರ್ವಕವಾಗಿ ಜೈಲಿಗೆ ಹೋಗಿ ನೋವು ಅನುಭವಿಸುತ್ತಾನೆ. ಆಗ ಇವರಿಬ್ಬರ ಬದುಕು ಅಲ್ಲೋಲ ಕಲ್ಲೋಲವಾಗುತ್ತದೆ.
ಈ ಕಥೆಯನ್ನು ಇಟ್ಟುಕೊಂಡು ಸಾಗುವ ಸಪ್ತಸಾಗರದಾಚೆ ಎಲ್ಲೋ ಚಿತ್ರವು, ನಿರ್ದೇಶಕ ಹೇಮಂತ್ ಎಂ ರಾವ್ ಅವರ ಮೂರನೇ ಸಿನಿಮಾ. ರಕ್ಷಿತ್ ಶೆಟ್ಟಿ ಜೊತೆಗೆ ತಂದೆ-ಮಗನ ಕಥೆಯನ್ನು ಹೇಳುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಮಾಡಿದ್ದ ಹೇಮಂತ್ ಅವರು ಈಗ ಲವ್ ಸ್ಟೋರಿ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ. ಇದು ಇದಾಗಲೇ ಎಲ್ಲರ ಹೃದಯ ತಟ್ಟಿದೆ. ಸಮುದ್ರ ದಡದಲ್ಲಿ ಸದಾ ಕೇಳಿಸುವ ಅಲೆಗಳ ಸದ್ದಿನಂತೆ, ಈ ಸಿನಿಮಾದಲ್ಲೂ ಒಂದು ನಾದವಿದೆ. ಅದು ಪ್ರೀತಿಯ, ನೋವಿನ, ಅಳುವಿನ ರೂಪದಲ್ಲಿ ಸಿನಿಮಾದ ತುಂಬ ಕೇಳಿಸುತ್ತಲೇ ಇರುತ್ತದೆ. ಇದೀಗ ಚಿತ್ರದ ಬಿ ಸೈಡ್ ಹಾಡಿನ ರಿಲೀಸ್ ಕೂಡ ಆಗಿದೆ. ಹೌದು. ಕಳೆದ ಸೆಪ್ಟೆಂಬರ್ 1 ರಂದು ಬಿಡುಗಡೆಯಾದ ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಿತು. ಇದನ್ನು ತೆಲುಗಿನಲ್ಲಿ ಸಪ್ತ ಸಾಗರಾಲು ದಾಟಿ ಎಂಬ ಹೆಸರಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಈಮಧ್ಯೆ, ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಸೆಪ್ಟೆಂಬರ್ 29ರಂದು ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಿದ್ದು, ಭಾರಿ ಹಿಟ್ ಆಗಿದ್ದು ಬಿ ಸೈಡ್ ಹಾಡು ಕೂಡ ರಿಲೀಸ್ ಆಗಿದೆ.
undefined
JODI NO. 1 ವೇದಿಕೆಯಲ್ಲಿ ಹರಿದಾಡ್ತಿವೆ ಭಯಾನಕ ಹಾವುಗಳು! ಸರ ಸರ ನಾಗಪ್ಪ ಹೇಗಿದೆ ನೋಡಿಬಿಡಿ...
ಇದರ ಮಧ್ಯೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್ ತಂಡದ ಸದಸ್ಯರು ತಮ್ಮದೇ ಕಂಠದಲ್ಲಿ ಸಪ್ತಸಾಗರದಾಚೆ ಎಲ್ಲೋ ಎಂದು ಹಾಡು ಹಾಡಿದ್ದಾರೆ. ಎಲ್ಲರ ಬಾಯಲ್ಲಿ ಈ ಹಾಡನ್ನು ಕೇಳಿ ಸಾಕಪ್ಪಾ ಸಾಕೋ ಅಂತಿದ್ದಾರೆ ನೆಟ್ಟಿಗರು. ಈ ಧಾರಾವಾಹಿ ಕಲಾವಿದರ ಕಾಲೆಳೆಯುತ್ತಿದ್ದಾರೆ. ಎಲ್ಲರೂ ತಮ್ಮದೇ ಸ್ವರದಲ್ಲಿ, ಒಬ್ಬೊಬ್ಬರು ಒಂದು ತೆರನಾಗಿ ಹಾಡುವುದನ್ನು ಕೇಳಿದ ನೆಟ್ಟಿಗರು, ಅಬ್ಬಾ ಎಲ್ಲರೂ ನಟನೆ ಮಾಡಿ ಸಾಕು, ಪ್ಲೀಸ್ ಹಾಡು ಮಾತ್ರ ಹೇಳ್ಬೇಡಿ ಎಂದಿದ್ದರೆ ಇನ್ನು ಕೆಲವರು ಎಲ್ಲರಿಗಿಂತಲೂ ಸಿಹಿನೇ ಸೂಪರ್ ಎಂದಿದ್ದಾರೆ. ಅಷ್ಟಕ್ಕೂ ಸಿಹಿ ಪಾತ್ರದಲ್ಲಿ ನಟಿಸ್ತಿರೋ ಪುಟಾಣಿಗೆ ಇದಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಹಾಡನ್ನು ಹಾಡಲು ಈಕೆಗೆ ಬರಲಿಲ್ಲ. ತನ್ನ ಮುದ್ದಾದ ದನಿಯಲ್ಲಿ ಅರ್ಧ ಅಷ್ಟೇ ಹಾಡಿದ್ದಾಳೆ. ಆದರೂ ಬಹುತೇಕ ಮಂದಿ ಈಕೆಯ ಫ್ಯಾನ್ಸೇ ಆಗಿರುವ ಕಾರಣ, ಸೋ ಸ್ವೀಟ್ ಎನ್ನುತ್ತಿದ್ದಾರೆ.
ಅಂದಹಾಗೆ ಹಾಗೆ, ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ತಯಾರಾದ ಚಿತ್ರದಲ್ಲಿ ರುಕ್ಮಿಣಿ ವಸಂತ್, ಚೈತ್ರ ಜೆ. ಆಚಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ, ರಮೇಶ್ ಇಂದಿರಾ, ಗೋಪಾಲ್ ಕೃಷ್ಣ ದೇಶಪಾಂಡೆ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತವಿರುವ ಈ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿದೆ.
ಸರಿಗಮಪ ವಿಶೇಷ ಸಂಚಿಕೆ: ಜನ್ಮ ಕೊಟ್ಟೋಳು ನಮ್ಮಮ್ಮ... ಜೀವಕೊಟ್ಟೋಳು ಕನ್ನಡಮ್ಮ...